ಕೊಡಗು: ದುರಸ್ತಿ ಮಾಡುವ ವೇಳೆ ವಿದ್ಯುತ್‌ ಆಘಾತ: ಲೈನ್‌ಮನ್ ಸಾವು

By Kannadaprabha News  |  First Published Jul 6, 2023, 9:57 AM IST

ಇಲ್ಲಿನ ಬೊಮ್ಮಾರಬೆಟ್ಟು ಗ್ರಾಮದ ಪೆಲತ್ತೂರು ಎಂಬಲ್ಲಿ ವಿದ್ಯುತ್‌ ಕಂಬ ಹತ್ತಿ ದುರಸ್ತಿ ಮಾಡುತ್ತಿದ್ದ ಲೈನ್‌ಮನ್ ವಿದ್ಯುತ್‌ ಆಘಾತದಿಂದ ಮೃತಪಟ್ಟಘಟನೆ ಮಂಗಳವಾರ ಸಂಜೆ ನಡೆದಿದೆ.


ಹಿರಿಯಡ್ಕ (ಜು.6) :  ಇಲ್ಲಿನ ಬೊಮ್ಮಾರಬೆಟ್ಟು ಗ್ರಾಮದ ಪೆಲತ್ತೂರು ಎಂಬಲ್ಲಿ ವಿದ್ಯುತ್‌ ಕಂಬ ಹತ್ತಿ ದುರಸ್ತಿ ಮಾಡುತ್ತಿದ್ದ ಲೈನ್‌ಮನ್ ವಿದ್ಯುತ್‌ ಆಘಾತದಿಂದ ಮೃತಪಟ್ಟಘಟನೆ ಮಂಗಳವಾರ ಸಂಜೆ ನಡೆದಿದೆ.

ಸುಮಾರು 10 ಮಂದಿ ಲೈನ್‌ಮನ್ ಗಳು ಇಲ್ಲಿ ದುರಸ್ತಿ ಕಾರ್ಯ ನಡೆಸುತ್ತಿದ್ದು, ಅವರಲ್ಲಿ ಅಜೆಕಾರಿನ ಸತೀಶ ಶೆಟ್ಟಿ(43) ಅವರು ಕಂಬ ಹತ್ತಿಲೈನ್ನ ಪಿನ್‌ ಇನ್ಸೆ$್ಲೕಟ್ಗೆ ಸರಿಗೆ ಸುತ್ತುತ್ತಿರುವಾಗ ಅವರ ತಲೆ ಮೇಲೆ ಹಾದು ಹೋಗಿದ್ದ ಹೈ ಟೆನ್ಷನ್‌ ವಯರ್‌ಗೆ ತೀವ್ರ ವಿದ್ಯುತ್‌ ಆಘಾತವಾಗಿ ಕೆಳಗೆ ಬಿದ್ದುಬಿಟ್ಟರು. ಮಾತನಾಡದ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ಮಣಿಪಾಲ ಕೆ,ಎಂ,ಸಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅವರಾಗಲೇ ಮೃತಪಟ್ಟಿದ್ದರು.

Latest Videos

undefined

ಹಾವೇರಿ: ವಿದ್ಯುತ್‌ ಸ್ಪರ್ಶ, ಎತ್ತು ಉಳಿಸಲು ಹೋಗಿ ರೈತ ಸಾವು!

ಈ ಅವಘಡಕ್ಕೆ ಉಪಗುತ್ತಿಗೆದಾರ ಶಂಕರ್‌ ನಾಯ್ಕ, ಮುಖ್ಯ ಗುತ್ತಿಗೆದಾರ ಸದಾಶಿವ ಅವರು ಕೆಲಸಗಾರಿಗೆ ಅಗತ್ಯ ಸುರಕ್ಷಾ ಸಾಧನಗಳನ್ನು ನೀಡದೆ ನಿರ್ಲಕ್ಷ್ಯ ವಹಿಸಿರುವುದೇ ಕಾರಣ ಎಂದು ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ಹೊಳಲ್ಕೆರೆ: ತಾಲೂಕಿನ ತಾಳ್ಯ ಗ್ರಾಮದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೋರ್ವನ ಶವಪತ್ತೆಯಾಗಿದೆ. ಸಾವಿಗೀಡಾದ ಯುವಕನನ್ನು ಮಾರುತಿ(28) ಎಂದು ಗುರುತಿಸಲಾಗಿದ್ದು ಮೃತನ ಪೋಷಕರು ಇದೊಂದು ಹತ್ಯೆ ಎಂದು ಆರೋಪಿಸಿದ್ದಾರೆ. ಗ್ರಾಮದ ಸುರೇಶ್‌ ಮತ್ತಿತರರು ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದರು. ಜಾತಿ ನಿಂದನೆ ಮಾಡಿದ್ದರು. ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ಬೆಳಗಾಗುವುದರೊಳಗೆ ಮನೆಯಲ್ಲೇ ಮಾರುತಿ(28) ಶವವಾಗಿದ್ದಾನೆ. ಹಳೇ ದ್ವೇಷ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಪೋಷಕರು ಆರೋಪಿಸಿದ್ದು, ಚಿತ್ರಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಸನ ಆಸ್ಪತ್ರೆಯ ನವಜಾತ ಶಿಶು ಐಸಿಯು ವಾರ್ಡ್‌ನಲ್ಲಿ ಶಾರ್ಟ್ ಸರ್ಕ್ಯೂಟ್, ತಪ್ಪಿದ ಬಹುದೊಡ್ಡ ದುರಂತ!

click me!