ಹುಬ್ಬಳ್ಳಿ ಗಲಭೆಕೋರರ ಬೆಂಬಲಕ್ಕೆ ನಿಂತ ಅಂಜುಮನ್ ಇಸ್ಲಾಂ ಸಂಸ್ಥೆ

Published : Apr 29, 2022, 02:38 PM ISTUpdated : Apr 29, 2022, 02:40 PM IST
ಹುಬ್ಬಳ್ಳಿ ಗಲಭೆಕೋರರ ಬೆಂಬಲಕ್ಕೆ ನಿಂತ ಅಂಜುಮನ್ ಇಸ್ಲಾಂ ಸಂಸ್ಥೆ

ಸಾರಾಂಶ

* ಹುಬ್ಬಳ್ಳಿ ಗಲಭೆ ಪ್ರಕರಣ * ಗಲಭೆಕೋರರ ಬೆಂಬಲಕ್ಕೆ ನಿಂತ ಅಂಜುಮನ್ ಇಸ್ಲಾಂ ಸಂಸ್ಥೆ * ನಮ್ಮ‌ ಪರಂಪರೆಯೇ ಹೀಗೆ, ಮೊದಲಿನಿಂದಲೂ ಮಾಡಿಕೊಂಡ ಬಂದಿದ್ದೇವೆ ಎಂದ ಯೂಸುಫ್ ಸವಣೂರು  ..!

ವರದಿ: ಗುರುರಾಜ್ ಹೂಗಾರ್
ಹುಬ್ಬಳ್ಳಿ, (ಫೆ.29): ಶಾಂತವಾಗಿದ್ದ ಹುಬ್ಬಳ್ಳಿಯನ್ನು ಧಗಧಗಿಸುವಂತೆ ಮಾಡಿದ್ದ ಮುಸ್ಲಿಂ ಪುಂಡರು, ಏಪ್ರಿಲ್ ೧೬ರ ರಾತ್ರಿ ಸೃಷ್ಟಿಸಿ ಗಲಭೆ, ಒಂದು ವಾರದ ಕಾಲ ಹುಬ್ಬಳ್ಳಿ ಜನರನ್ನು ಭಯದಲ್ಲಿ ಬದುಕುವಂತೆ ಮಾಡಿದ್ರು. ಕಲ್ಲು ತೂರಾಟ ನಡೆಸಿ ಪುಂಡಾಡ ನಡೆಸಿದ್ದ 156 ಜನ ಗಲಭೆಕೋರರನ್ನ  ಬಂಧನ ಮಾಡಲಾಗಿದೆ. ಆದರೆ ಇಲ್ಲೊಂದು ಸಂಸ್ಥೆ ಗಲಭೆಕೋರರ ಬೆನ್ನಿಗೆ ನಿಂತು ರಕ್ಷಣೆ ನೀಡಲು ಮುಂದಾಗಿದೆ. ಅಷ್ಟಕ್ಕೂ ಯಾವುದು ಆ ಪ್ರಕರಣ..? ಗಲಭೆಕೋರರ ರಕ್ಷಣೆಗೆ ನಿಂತಿರುವ ಸಂಸ್ಥೆ ಆದರೂ ಯಾವುದು ಅಂತೀರಾ ಈ ಸ್ಟೋರಿ ನೋಡಿ..

ಹಳೇಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಬಂಧಿತರಾದ 156 ಹೆಚ್ಚು ಆರೋಪಿಗಳಿಗೆ ಜಾಮೀನು ಕೊಡಿಸಿ, ನೀತಿ ಬೋಧನೆ ಮಾಡಲು ಹುಬ್ಬಳ್ಳಿ ಅಂಜುಮನ್‌ ಸಂಸ್ಥೆ ಸಿದ್ಧತೆ ನಡೆಸಿದೆ. ಹೌದು.. ಬಂಧಿತ ಪಾಲಕರ ಜೊತೆ ಸಂಸ್ಥೆ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಚರ್ಚಿಸಿ, ವಕೀಲರ ಮೂಲಕ ಅಗತ್ಯ ಮಾಹಿತಿ ಹಾಗೂ ಕಾಗದ ಪತ್ರ ಸಂಗ್ರಹಿಸಲಾಗುತ್ತಿದೆ. 

ಹುಬ್ಬಳ್ಳಿ ಗಲಭೆಕೋರರಿಗೆ ಜಮೀರ್ ಬಾಸು ಕಾಸು, ರೇಣುಕಾಚಾರ್ಯ ಬುಸ್‌..ಬುಸ್..

ಏಪ್ರಿಲ್.30ಕ್ಕೆ ಜಾಮೀನು ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ. ಗಲಭೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ, ಆ ಸಂದರ್ಭದ ವಿಡಿಯೊ ಹಾಗೂ ಮೊಬೈಲ್‌ ಕರೆ ಆಧರಿಸಿ ಹಳೇಹುಬ್ಬಳ್ಳಿ ಠಾಣೆ ಪೊಲೀಸರು 156 ಮಂದಿ ಬಂಧಿಸಿದ್ದಾರೆ. ಬಂಧಿತರಲ್ಲಿ ಬಹುತೇಕರು ಆನಂದ ನಗರದ, ಟಿಪ್ಪು ನಗರ, ನೂರಾನಿ ಪ್ಲಾಟ್‌, ಅಧ್ಯಾಪಕ ನಗರ, ಮೇದಾರ ಓಣಿ, ಚನ್ನಪೇಟೆ, ಬೀರಬಂದರ ಓಣಿ ಸೇರಿದಂತೆ ಹಳೇ ಹುಬ್ಬಳ್ಳಿಯ ಭಾಗದವರೇ ಆಗಿದ್ದಾರೆ. ಭದ್ರತೆ ಹಿನ್ನೆಲೆಯಲ್ಲಿ ಅವರನ್ನೆಲ್ಲ ಕಲಬುರಗಿ, ಬಳ್ಳಾರಿ ಮತ್ತು ಮೈಸೂರು ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಾಮೀನು ಕೊಡಿಸಲು ಅಂಜುಮನ್ ಇಸ್ಲಾಂ ಸಂಸ್ಥೆ ಮುಂದಾಗಿದೆ.

ಇನ್ನೂ ನೈತಿಕ ಪಾಠ ಹೇಳುವ ಕೆಲಸವನ್ನು ಇಪ್ಪತ್ತು ವರ್ಷಗಳಿಂದ ಮಾಡಲಾಗುತ್ತಿದೆ.  ಧರ್ಮ ಗುರುಗಳ, ಮುಖಂಡರು ಹಾಗೂ ಪಾಲಕರಿಂದ ಬದುಕಿನ ಮೌಲ್ಯದ ತಿಳಿಸಿಕೊಡುವುದಲ್ಲದೇ, ಅಪರಾಧ ಚಟುವಟಿಕೆಗಳಿಂದ ದೂರ ಇರುವಂತೆ ಮನಃ ಪರಿವರ್ತಿಸಲಾಗುತ್ತದೆ. ಅಲ್ಲದೇ ಮೈಸೂರು, ಬಳ್ಳಾರಿ, ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಗಂಭೀರ ಪ್ರಕರಣದ ಆರೋಪಿಗಳನ್ನು ಇರಿಸಲಾಗುತ್ತದೆ. ಅವರಲ್ಲಿ ಕೆಲವರು ನಟೋರಿಯಸ್‌ ರೌಡಿಗಳು ಇರುತ್ತಾರೆ. ಬಂಧಿತ ಬಹುತೇಕ ಆರೋಪಿಗಳು 20 ರಿಂದ 25 ವರ್ಷದ ಒಳಗಿನವರು. ಕಾರಾಗೃಹದ ವಾತಾವರಣ ಅವರ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ. ಆ ಹಿನ್ನೆಲೆಯಲ್ಲಿ ಜಾಮೀನು ಕೊಡಿಸುವ ಯತ್ನ ನಡೆದಿದೆ ಎನ್ನುತ್ತಾರೆ ಅಂಜುಮನ್ ಸಂಸ್ಥೆ ಉಪಾಧ್ಯಕ್ಷ ಅಲ್ತಾಫ್‌ ಕಿತ್ತೂರ.

ಒಟ್ಟಿನಲ್ಲಿ ಹುಬ್ಬಳ್ಳಿಯು ಗಲಭೆಯಿಂದ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಪೊಲೀಸ್ ಕಮೀಷನರೇಟ್ ಕಾರ್ಯದಿಂದ ಆಗಬಹುದಾದ ಬಹುದೊಡ್ಡ ಅನಾಹುತ ತಪ್ಪದಂತಾಗಿದೆ. ಈಗ ಗಲಭೆಕೋರರಿಗೆ ಜಾಮೀನು ಕೋಡಿಸಿ ಹೊರ ಕರೆತರುವ ಅಗತ್ಯ ಏನೀತ್ತು..? ಪುಂಡರಿಗೆ ಕಠಿಣ ಶಿಕ್ಷೆ ಆಗುವಂತೆ ಮಾಡಬೇಕಾದ ಸಮಯದಲ್ಲಿ ಜಾಮೀನು ಕೊಡಿಸಿ ಕರೆತರಲು ಮುಂದಾಗಿದ್ದು ಎಷ್ಟು ಸರಿ. ಹುಬ್ಬಳ್ಳಿಯ ಜನರು ನೆಮ್ಮದಿಯಾಗಿರೋದು ಅಂಜುಮನ್ ಸಂಸ್ಥೆಗೆ ಬೇಡವಾಗಿದೇನಾ? ಎಂಬ ಅನುಮಾನ ಮೂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಥಾಯ್ಲೆಂಡ್‌ನಿಂದ ರಾಜ್ಯಕ್ಕೆ ಹೆಚ್ಚು ಹೈಡ್ರೋ ಗಾಂಜಾ!
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?