ತುಮಕೂರು: ಪದೇ ಪದೇ ಮೂತ್ರ ಮಾಡಿದ ಬಾಲಕನ ಗುಪ್ತಾಂಗ ಸುಟ್ಟ ಶಿಕ್ಷಕಿ

By Suvarna News  |  First Published Sep 2, 2022, 12:08 PM IST

Tumkur Crime News:  ಪದೇ ಪದೇ ಚಡ್ಡಿಯಲ್ಲಿ ಮೂತ್ರ ಮಾಡಿಕೊಳ್ಳುತ್ತಿದ್ದ 3 ವರ್ಷದ ಬಾಲಕನ ಗುಪ್ತಾಂಗವನ್ನೇ ಸುಟ್ಟು ವಿಚಿತ್ರ ಶಿಕ್ಷೆ ವಿಧಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ


ತುಮಕೂರು (ಸೆ. 02):  ಪದೇ ಪದೇ ಚಡ್ಡಿಯಲ್ಲಿ ಮೂತ್ರ ಮಾಡಿಕೊಳ್ಳುತ್ತಿದ್ದ 3 ವರ್ಷದ ಬಾಲಕನ ಗುಪ್ತಾಂಗವನ್ನೇ ಸುಟ್ಟು ವಿಚಿತ್ರ ಶಿಕ್ಷೆ ವಿಧಿಸಿರುವ ಘಟನೆ ತುಮಕೂರು (Tumkur) ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ನಡೆದಿದೆ. ಬಾಲಕನನ್ನು ಹೆದರಿಸಲು ಅವನ ಗುಪ್ತಾಂಗವನ್ನೇ ಬೆಂಕಿ ಕಡ್ಡಿಯಿಂದ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಸುಟ್ಟಿದ್ದು, ಬಾಲಕನ ಗುಪ್ತಾಂಗ ಮತ್ತು ತೊಡೆ ಬಳಿ ಸುಟ್ಟಗಾಯಗಳಾಗಿವೆ. ಜಿಲ್ಲಾ ಮಕ್ಕಳ ಹಕ್ಕು ರಕ್ಷಣಾ ಘಟಕದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಹೇಳಿಕೆ ಪಡೆದಿದ್ದಾರೆ.

ಈ ಸಂಬಂಧ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿಗೆ ನೋಟಿಸ್‌ ನೀಡಲಾಗಿದೆ. ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿಗೆ  ನೋಟಿಸ್ ಜಾರಿ ಮಾಡಲಾಗಿದ್ದು, ಕೂಡಲೇ ಅಮಾನತು ಮಾಡಲಾಗಿದೆ. ಚಿಕ್ಕನಾಯಕನಹಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈ ಘಟನೆ ಗ್ರಾಮದಲ್ಲಿ ಕೋಲಾಹಲ ಸೃಷ್ಟಿಸಿದೆ.  

Tap to resize

Latest Videos

“ಅವನು 3 ವರ್ಷದ ಹುಡುಗ. ನೀವು ಅವನಿಂದ ಏನು ನಿರೀಕ್ಷಿಸುತ್ತೀರಿ? ಕೆಲವು ಮಕ್ಕಳು ಬೇಗನೆ ಕಲಿಯುತ್ತಾರೆ, ಕೆಲವರು ಸ್ವಲ್ಪ ತಡವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಇದಕ್ಕಾಗಿ ಇಂಥಹ ಕಠಿಣ ಕ್ರಮಗಳನ್ನು ನೀಡುವುದು ಸರಿಯೇ? ಶಿಕ್ಷಕಿಗೆ ಮಕ್ಕಳಿಲ್ಲವೇ?" ಎಂದು  ಗ್ರಾಮದ ಹಿರಿಯ ನಾಗರಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ವಿದ್ಯಾರ್ಥಿನಿಗೆ ಬ್ಲ್ಯಾಕ್‌ಮೇಲ್‌, 1.9 ಕೆಜಿ ಚಿನ್ನ ಸುಲಿದ ಲವರ್ ಬಾಯ್!

"ಅಂಬೆಗಾಲಿಡುವ ಮಕ್ಕಳೊಂದಿಗೆ ಹೇಗೆ ವರ್ತಿಸಬೇಕು ಎಂದು ತಿಳಿದಿಲ್ಲದಿದ್ದರೆ ಆಕೆಗೆ ಅಂಗನವಾಡಿಯಲ್ಲಿ ಕೆಲಸ ಕೊಟ್ಟವರು ಯಾರು? ಆಕೆ ಪೋಷಕರಿಗೆ ಈ ಸಮಸ್ಯೆಯನ್ನು ತಿಳಿಸಬಹುದಿತ್ತು. ಪೋಷಕರು ಹೆಚ್ಚಿನ ಕಾಳಜಿ ವಹಿಸುತ್ತಿದ್ದರು. ಆದರೆ ಈ ಕೃತ್ಯ  ಸ್ವೀಕಾರಾರ್ಹವಲ್ಲ" ಎಂದು ಅವರು ಹೇಳಿದ್ದಾರೆ. 

ಕಳ್ಳತನ ಆರೋಪ, ವಿದ್ಯಾರ್ಥಿಗೆ ಸಿಬ್ಬಂದಿಯಿಂದ ಥಳಿತ:  ಹಣ ಕಳ್ಳತನ ಮಾಡಿದ ಆರೋಪ ಹೊರಿಸಿ ವಿದ್ಯಾರ್ಥಿಯೋರ್ವನಿಗೆ ಸಿಪಾಯಿಯೊಬ್ಬರು ಹಿಗ್ಗಾಮುಗ್ಗಾ ಥಳಿಸಿದ ಅಮಾನವೀಯ ಘಟನೆ  ಬ್ಯಾಡಗಿ ತಾಲೂಕಿನ ಶಿಡೇನೂರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ  ತಡರಾತ್ರಿ ನಡೆದಿದೆ. ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ, ಪಟ್ಟಣದ ಗಾಂಧಿನಗರ ನಿವಾಸಿ ಪ್ರಜ್ವಲ್‌ ಚಂದ್ರಪ್ಪ ಗಂಗಮ್ಮನವರ ಥಳಿತಕ್ಕೊಳಗಾದ ಬಾಲಕ.

ಆರೋಪಿ ಸಿಪಾಯಿ ನಾಗರಾಜ ಸುತ್ತಕೋಟಿ ತಾನಿಟ್ಟಿದ್ದ ಹಣವನ್ನು ಕಳ್ಳತನ ಮಾಡಿದ್ದಾಗಿ ಆರೋಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ, ಕೋಲಿನಿಂದ ಹಿಗ್ಗಾಮುಗ್ಗಾ ಥಳಿಸಿದ್ಧಾನೆ. ಈ ವೇಳೆ ಪ್ರಜ್ವಲ್‌ ನಾನು ಯಾವುದೇ ಹಣ ತೆಗೆದುಕೊಂಡಿಲ್ಲ ಎಂದು ಸಮಜಾಯಿಷಿ ನೀಡಿದರೂ ಸಹ ಕೇಳದೇ ದೇಹದ ವಿವಿಧ ಭಾಗದಲ್ಲಿ ಬಾಸುಂಡೆ ಮೂಡುವಂತೆ ಹೊಡೆದಿದ್ದಾನೆ, ಅಲ್ಲದೇ ವಿಷಯ ಯಾರಿಗೂ ಹೇಳಬೇಡ, ಗೊತ್ತಾದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದಾನೆ.

ಕೆಲಸದಾಕೆಗೆ ಚಿತ್ರಹಿಂಸೆ ನೀಡುತ್ತಿದ್ದ ಜಾರ್ಖಂಡ್‌ ಬಿಜೆಪಿ ನಾಯಕಿ ಬಂಧನ

ತೀವ್ರ ನೋವಿನಿಂದ ಬಳಲಿದ ಬಾಲಕ ಪೋಷಕರಿಗೆ ವಿಷಯ ತಿಳಿಸಿದ್ದು ಇದೀಗ ಪಾಲಕರು ಸಿಪಾಯಿ ನಾಗರಾಜ ವಿರುದ್ಧ ಬ್ಯಾಡಗಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

click me!