ತನ್ನನ್ನು ತೊರೆಯಲೊಪ್ಪದ ಗರ್ಭಿಣಿ ಪತ್ನಿಗೆ ವ್ಯಕ್ತಿಯೊಬ್ಬ ಕ್ಲಿನಿಕ್‌ಗೆ ಕರೆದೊಯ್ದು ಹೆಚ್‌ಐವಿ ಸೋಂಕಿತ ರಕ್ತವನ್ನು ಇಂಜೆಕ್ಟ್ ಮಾಡಿಸಿದ ಆಘಾತಕಾರಿ ಘಟನೆ ಆಂಧ್ರಪ್ರದೇಶದ ತಡಪಲ್ಲಿಯಲ್ಲಿ ನಡೆದಿದೆ.
ಅಮರಾವತಿ: ತನ್ನನ್ನು ತೊರೆಯಲೊಪ್ಪದ ಗರ್ಭಿಣಿ ಪತ್ನಿಗೆ ವ್ಯಕ್ತಿಯೊಬ್ಬ ಕ್ಲಿನಿಕ್‌ಗೆ ಕರೆದೊಯ್ದು ಹೆಚ್‌ಐವಿ ಸೋಂಕಿತ ರಕ್ತವನ್ನು ಇಂಜೆಕ್ಟ್ ಮಾಡಿಸಿದ ಆಘಾತಕಾರಿ ಘಟನೆ ಆಂಧ್ರಪ್ರದೇಶದ ತಡಪಲ್ಲಿಯಲ್ಲಿ ನಡೆದಿದೆ. ಗರ್ಭಿಣಿ ಪತ್ನಿ ನೀಡಿದ ದೂರಿನ ಮೇರೆಗೆ ಪೊಲೀಸರು ಮಹಿಳೆಯ ಪತಿಯನ್ನು ಬಂಧಿಸಿದ್ದಾರೆ. ಇತ್ತೀಚೆಗೆ ಮಹಿಳೆ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಆಕೆಗೆ ಹೆಚ್‌ಐವಿ ಇರುವುದು ಸಾಬೀತಾಗಿತ್ತು. ಇದಕ್ಕೂ ಮೊದಲು ಆಕೆಯ ಪತಿ ಆಕೆಯನ್ನು ಕ್ಲಿನಿಕ್ ಒಂದಕ್ಕೆ ಕರೆದೊಯ್ದು, ಉತ್ತಮ ಆರೋಗ್ಯಕ್ಕಾಗಿ ಇಂಜೆಕ್ಷನ್ ತೆಗೆದುಕೊ ಎಂದು ಹೇಳಿ ಇಂಜೆಕ್ಷನ್ ನೀಡಿಸಿದ್ದ. ಆದರೆ ಅದು ಹೆಚ್ಐವಿ ಸೋಂಕಿತ ರಕ್ತ ಎಂದು ಪತ್ನಿ ಆರೋಪಿಸಿದ್ದಾಳೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಗಂಡ 40 ವರ್ಷದ ಎಂ ಚರಣ್ (M Charan) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮದುವೆಯ ನಂತರ ಹಲವು ವರ್ಷಗಳ ಕಾಲ ಈ ಜೋಡಿ ತುಂಬಾ ಚೆನ್ನಾಗಿ ಜೀವನ ನಡೆಸಿದ್ದು, ಇಬ್ಬರಿಗೂ ಒಂದು ಹೆಣ್ಣು ಮಗುವಿದೆ. ಜೊತೆಗೆ ಈ ಮಹಿಳೆ ಮತ್ತೆ ಗರ್ಭಿಣಿಯಾಗಿದ್ದು, ಮಗುವಿನ ನಿರೀಕ್ಷೆಯಲ್ಲಿದ್ದಾಳೆ. ಈ ಮಧ್ಯೆ 2018 ರಿಂದಲೂ ಈಕೆಯ ಗಂಡ ಈಕೆಗೆ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಗಂಡು ಮಗು ಬೇಕೆಂದು ಜಗಳ ಶುರು ಮಾಡಿದ ಈತ ನಂತರ ವರದಕ್ಷಿಣೆ (Dowry) ತರುವಂತೆಯೂ ಪತ್ನಿಗೆ ಪೀಡಿಸಲು ಶುರು ಮಾಡಿದ್ದ. ಇದಲ್ಲದೇ ಈತನಿಗೆ ವಿಶಾಖಪಟ್ಟಣದ (Visakhapatnam)21 ವರ್ಷದ ಯುವತಿಯೊಂದಿಗೆ ಅನೈತಿಕ ಸಂಬಂಧವಿದ್ದು, ಇದರ ಪರಿಣಾಮ ಪತ್ನಿಗೆ ತನ್ನನ್ನು ತೊರೆಯುವಂತೆ ಈತ ದಿನೇ ದಿನೇ ಕಿರುಕುಳ ನೀಡಲು ಶುರು ಮಾಡಿದ್ದಾನೆ.
2030ಕ್ಕೆ ರಾಜ್ಯದಲ್ಲಿ ಎಚ್‌ಐವಿ ಶೂನ್ಯಕ್ಕೆ ಇಳಿಸಲು ಪಣ: ಸಚಿವ ಸುಧಾಕರ್
ಈಕೆಯನ್ನು ಹೇಗಾದರೂ ಮಾಡಿ ದೂರ ಮಾಡುವ ಸಲುವಾಗಿಯೇ ಆತ ಯೋಜನೆ ರೂಪಿಸಿ ಹೆಚ್ಐವಿ ಸೋಂಕಿತ ರಕ್ತದ ಚುಚ್ಚುಮದ್ದನ್ನು (Injection) ಕೊಡಿಸಿದ್ದ. ಅಲ್ಲದೇ ತನಗೆ ವಿಚ್ಛೇದನ ನೀಡುವಂತೆ ಆಗ್ರಹಿಸುತ್ತಿದ್ದ. ಇದಲ್ಲದೇ ಇತ್ತೀಚೆಗೆ ಪತ್ನಿಯೊಂದಿಗೆ ಈತ ನಿನಗೆ ಗರ್ಭಿಣಿಯಾದ (Pragnent) ಸಮಯದಲ್ಲಿ ಹೆಚ್‌ಐವಿ (HIV) ಬಂದಿರಬಹುದು ಎಂದು ಹೇಳಿದ್ದ. ಈ ಹಿನ್ನೆಲೆಯಲ್ಲಿ ಮಹಿಳೆ ತಪಾಸಣೆ ಮಾಡಿದಾಗ ಪತಿ ಹೇಳಿದ್ದು ಖಚಿತವಾಗಿದೆ. ಹೀಗಾಗಿ ಇದು ಈತನದ್ದೇ ಕೈವಾಡ ಎಂಬುದು ಮಹಿಳೆಗೆ ತಿಳಿದು ಬಂದಿದ್ದು, ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ವಿಚಾರಣೆ ನಡೆಸಿದ ಪೊಲೀಸರು ಪತಿ ಚರಣ್‌ನನ್ನು ಬಂಧಿಸಿದ್ದಾರೆ. ವಿಚ್ಛೇದನ (Divorce) ನೀಡಲು ಸರಿಯಾದ ಕಾರಣವಿರಬೇಕು ಎಂಬ ಕಾರಣಕ್ಕೆ ಪತ್ನಿ ಗರ್ಭಿಣಿ ಎಂಬುದನ್ನು ಕೂಡ ಲೆಕ್ಕಕ್ಕೆ ತೆಗೆದುಕೊಳ್ಳದೇ ಈತ ಕೃತ್ಯವೆಸಗಿದ್ದಾನೆ.
Aids Day: ಏಡ್ಸ್ ಅಂದ್ರೆ ಸಾವು ಎಂದರ್ಥವಲ್ಲ! ಮಿಥ್ಯ ನಂಬಿಕೆ ದೂರವಿಡಿ
ಹುಚ್ಚು ಪ್ರೀತಿ: HIV ಪಾಸಿಟಿವ್ ರಕ್ತ ಇಂಜೆಕ್ಟ್ ಮಾಡಿಕೊಂಡ ಬಾಲಕಿ