ಬೆಂಗಳೂರು: ‘ವೋಗೋ’ ಕಂಪನಿ ಬೈಕ್‌ ಕಳವು ಮಾಡುತ್ತಿದ್ದ ಮಾಜಿ ನೌಕರನ ಸೆರೆ

By Kannadaprabha NewsFirst Published Dec 18, 2022, 2:00 PM IST
Highlights

ಆ್ಯಪ್‌ ಆಧಾರಿತ ‘ಬೈಕ್‌ ಟ್ಯಾಕ್ಸಿ’ ಸೇವೆ ಕಲ್ಪಿಸುವ ವೋಗೋ ಕಂಪನಿಯ ಸ್ಕೂಟರ್‌ಗಳನ್ನು ಕಳವು ಮಾಡುತ್ತಿದ್ದ ಆ ಕಂಪನಿಯ ಮಾಜಿ ನೌಕರ ಸೇರಿದಂತೆ ಇಬ್ಬರ ಬಂಧನ  

ಬೆಂಗಳೂರು(ಡಿ.18):  ಆ್ಯಪ್‌ ಆಧಾರಿತ ‘ಬೈಕ್‌ ಟ್ಯಾಕ್ಸಿ’ ಸೇವೆ ಕಲ್ಪಿಸುವ ವೋಗೋ ಕಂಪನಿಯ ಸ್ಕೂಟರ್‌ಗಳನ್ನು ಕಳವು ಮಾಡುತ್ತಿದ್ದ ಆ ಕಂಪನಿಯ ಮಾಜಿ ನೌಕರ ಸೇರಿದಂತೆ ಇಬ್ಬರನ್ನು ಸದ್ದುಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನೆಲಮಂಗಲ ತಾಲೂಕಿನ ಮಾದನಾಯಕನಹಳ್ಳಿಯ ಭೀಮೇಶ್ವರ ಕಾಲೋನಿಯ ಟಿ.ಎಸ್‌.ವಿನಯ್‌ ಹಾಗೂ ತುಮಕೂರಿನ ಹೆಗ್ಗರೆ ನಿವಾಸಿ ಟಿ.ಕೆ.ನಂದನ್‌ ಬಂಧಿತರಾಗಿದ್ದು, ಆರೋಪಿಗಳಿಂದ 55 ಲಕ್ಷ ರು ಮೌಲ್ಯದ 61 ಸ್ಕೂಟರ್‌ಗಳನ್ನು ಜಪ್ತಿ ಮಾಡಲಾಗಿದೆ. ಬಿಟಿಎಂ ಲೇಔಟ್‌ನ 1ನೇ ಹಂತದ ಬಿಬಿಎಂಪಿ ಉದ್ಯಾನ ಬಳಿ ನಿಲ್ಲಿಸಲಾಗಿದ್ದ ವೋಗೋ ಕಂಪನಿಯ ಸ್ಕೂಟರ್‌ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.

ಮನೆ ಕಳ್ಳತನಕ್ಕೆ ಬಂದವನಿಗೆ ಗುಂಡು ಹಾರಿಸಿದ ಮಾಲೀಕ

ಹಣ ಸಂಪಾದನೆಗೆ ಕಳ್ಳರಾದ್ರು !

ವೋಗೋ ಕಂಪನಿಯಲ್ಲಿ ಮೆಕ್ಯಾನಿಕ್‌ ಆಗಿದ್ದ ವಿನಯ್‌, ಎಂಟು ತಿಂಗಳ ಹಿಂದೆ ಅಲ್ಲಿ ಕೆಲಸ ತೊರೆದಿದ್ದ. ಓಗೋ ಕಂಪನಿಯಲ್ಲಿ ಕೆಲಸ ಮಾಡುವಾಗ ಆ ಕಂಪನಿಯ ಸ್ಕೂಟರ್‌ಗಳನ್ನು ನಿಲ್ಲಿಸುವ ಸ್ಥಳಗಳ ಬಗ್ಗೆ ಆತನಿಗೆ ತಿಳಿದಿತ್ತು. ಬಳಿಕ ಸುಲಭವಾಗಿ ಹಣ ಸಂಪಾದನೆಗೆ ವೋಗೋ ಸ್ಕೂಟರ್‌ಗಳನ್ನು ಕಳವು ಮಾಡಲು ವಿನಯ್‌ ಸಂಚು ರೂಪಿಸಿದ್ದ. ಇದಕ್ಕೆ ನಂದನ್‌ ಸಾಥ್‌ ಕೊಟ್ಟಿದ್ದಾನೆ. ಅಂತೆಯೇ ಓಗೋ ಕಂಪನಿಯ ವಾಹನಗಳನ್ನು ನಿಲ್ಲಿಸುವ ಪಾಯಿಂಟ್‌ಗಳಿಗೆ ತೆರಳುತ್ತಿದ್ದ ವಿನಯ್‌, ಆ ವೇಳೆ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡು ವಾಹನಗಳ ಜಿಪಿಎಸ್‌ ಸಂಪರ್ಕವನ್ನು ಕಡಿತಗೊಳಿಸುತ್ತಿದ್ದ. ಬಳಿಕ ಸ್ಕೂಟರ್‌ಗಳನ್ನು ಡೈರೆಕ್ಟ್ ಮಾಡಿಕೊಂಡು ಸ್ಟಾರ್ಟ್‌ ಮಾಡಿ ಓಡಿಸಿಕೊಂಡು ಹೋಗುತ್ತಿದ್ದ. ಈ ಕದ್ದ ಸ್ಕೂಟರ್‌ಗಳನ್ನು ತನ್ನ ಸಹಚರ ನಂದನ್‌ ಮೂಲಕ ವಿಲೇವಾರಿ ಮಾಡಿಸುತ್ತಿದ್ದ. ಓಗೋ ಕಂಪನಿಯ ಹರಾಜಿನಲ್ಲಿ ಸ್ಕೂಟರ್‌ ಖರೀದಿಸಿರುವುದಾಗಿ ಸುಳ್ಳು ಹೇಳಿ ಜನರಿಗೆ ವಾಹನಗಳನ್ನು ಮಾರುತ್ತಿದ್ದರು. ಇದಕ್ಕಾಗಿ ನಕಲಿ ದಾಖಲೆಗಳನ್ನು ಕೂಡಾ ಸೃಷ್ಟಿಸಿದ್ದರು. ಅಲ್ಲದೆ ಆ್ಯಪ್‌ ಆಧಾರಿತ ಬೈಕ್‌ ಟ್ಯಾಕ್ಸಿ ಸೇವೆಗೆ ಇಬ್ಬರು ತಿಳಿದಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
 

click me!