ಎರಡು ಬಾರಿ ಅಬಾರ್ಷನ್ ಮಾಡಿಸಿಕೊಂಡಿದ್ದೇನೆ: ಅನಂತರಾಜು ಫ್ರೆಂಡ್ ಆಡಿಯೋ ವೈರಲ್

By Suvarna News  |  First Published Jun 2, 2022, 3:29 PM IST

Anantharaju Suicide Case: ಅನಂತ್ ರಾಜು ಆತ್ಮಹತ್ಯೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು ಅನಂತ್ ರಾಜು ಪತ್ನಿ ಸುಮಾ ವಿರುದ್ಧ ದೂರಿನ ಬಳಿಕ ಮತ್ತೊಂದು ಆಡಿಯೋ ಬಹಿರಂಗೊಂಡಿದೆ


ಬೆಂಗಳೂರು (ಜೂ 02):  ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣದಲ್ಲಿ (Anantharaju Suicide Case) ತನಗೆ ನ್ಯಾಯ ಸಿಗುತ್ತಿಲ್ಲ ಎಂದು ಆರೋಪಿಸಿ ಬ್ಯಾಡರಹಳ್ಳಿ ಪೊಲೀಸ್‌ ಠಾಣೆ ಎದುರೇ ಬುಧವಾರ ಮೃತನ ಗೆಳತಿ ರೇಖಾ ಆತ್ಮಹತ್ಯೆ ಯತ್ನಿಸಿದ ಘಟನೆ ನಡೆದಿತ್ತು. ಅನಂತರಾಜು ಸಾವಿಗೆ ಆತನ ಪತ್ನಿಯೇ ಕಾರಣವಾಗಿದ್ದಾಳೆ ಎಂದು ಆರೋಪಿಸಿ ಠಾಣೆಗೆ ದೂರು ನೀಡಲು ರೇಖಾ ಆಗಮಿಸಿದ್ದರು. ಆ ವೇಳೆ ಪೊಲೀಸರು ತನ್ನ ಮನವಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಕೋಪಗೊಂಡು ಠಾಣೆ ಎದುರು ಬಿಎಂಟಿಸಿ ಬಸ್ಸಿಗೆ ಸಿಲುಕಿ ಆತ್ಮಹತ್ಯೆ ಯತ್ನಿಸಿದ ರೇಖಾಳನ್ನು ಆಕೆಯ ಕುಟುಂಬದವರು ರಕ್ಷಿಸಿದ್ದರು. 

ಈಗ ಅನಂತ್ ರಾಜು ಆತ್ಮಹತ್ಯೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು ಅನಂತ್ ರಾಜು ಪತ್ನಿ ಸುಮಾ ವಿರುದ್ಧ ದೂರಿನ ಬಳಿಕ ಮತ್ತೊಂದು ಆಡಿಯೋ ಬಹಿರಂಗೊಂಡಿದೆ. ಸುಮಾ ಹಾಗೂ ರೇಖಾ ಮಾತುಕತೆ ಎನ್ನಲಾದ ಆಡಿಯೋ ಲಭ್ಯವಾಗಿದ್ದು ಪ್ರಕರಣದಲ್ಲಿ ಮತ್ತೊಂದು ಸ್ಪೋಟಕ ವಿಚಾರ ಬಯಲಿಗೆ ಬಂದಿದೆ. 

Tap to resize

Latest Videos

ಅನಂತ್ ರಾಜು ಅವರಿಂದ ಎರಡು ಬಾರಿ ಗರ್ಭಿಣಿಯಾಗಿ, ಎರಡೂ ಬಾರಿ ಕೂಡ ರೇಖಾ ಅಬಾರ್ಷನ್ ಮಾಡಿಸಿಕೊಂಡಿದ್ದರು ಎಂದು ವೈರಲ್ ಆಡಿಯೋದಲ್ಲಿ ಸ್ವತ: ಹೇಳಿದ್ದಾರೆ.  ಅನಂತ್ ರಾಜು ಮಾತಿಗೆ ಬೆಲೆ ಕೊಟ್ಟು ಎರಡು ಬಾರಿ ಅರ್ಬಾಷನ್ ಮಾಡಿಸಿಕೊಂಡಿರುವುದಾಗಿ ರೇಖಾ ಹೇಳಿದ್ದಾರೆ. 

ಇದನ್ನೂ ಓದಿ: ಹಾಸನ ನಗರಸಭೆ JDS ಸದಸ್ಯ ಪ್ರಶಾಂತ್ ಹತ್ಯೆ, ನಗರದಲ್ಲಿ ಭಯದ ವಾತವಾರಣ

"ನಾನು ಮಗುವನ್ನು ಇಟ್ಟಕೋತ್ತೀನಿ ಅಂತಾ ಹೇಳಿದ್ದೆ, ಅದರೆ ಅನಂತ್ ರಾಜು ಮುಂದೆ ಸಮಸ್ಯೆ ಅಗತ್ತೇ ಬೇಡ ಅಂತಾ ಹೇಳಿದ್ರು. ಸೋ ಅವರ ಮಾತಿಗೆ ಬೆಲೆ ಕೊಟ್ಟು ಎರಡು ಬಾರಿ ಕೂಡ ಅರ್ಬಾಷನ್ ಮಾಡಿಸಿಕೊಂಡಿದ್ದೆ" ಎಂದು ರೇಖಾ ಹೇಳಿದ್ದಾರೆ. 

"

ರೇಖಾ ಹಾಗೂ ಸುಮಾ ನಡುವಿನ ಮಾತುಕತೆ

  • ಸುಮಾ: ನೀನು ಹೇಳಿರಲಿಲ್ವಾ ನಿನ್ ಮಗುವಿಗೆ ಪ್ರಗ್ನೆಟ್ ಆಗಿದೆ ಅಂತಾ
  • ರೇಖಾ: ಧರ್ಮಸ್ಥಳ ಮಂಜುನಾಥನ ಆಣೆ ನಾನು ಹೇಳಿದ್ದೆ
  • ಸುಮಾ: ಎರಡು ಬಾರಿನೂ ಹೇಳಿದ್ಯಾ??
  • ರೇಖಾ: ಹ್ಮ ಎರಡು ಬಾರಿ ಕೂಡ ಹೇಳಿದ್ದೆ ವಾಟ್ಸಾಪ್‌ನಲ್ಲೇ ಹೇಳಿದ್ದೆ ನಾನು 
  • ಸುಮಾ: ಹೌದಾ ಅದಕ್ಕೆ ಅವನು ಎನ್ ಹೇಳದಾ
  • ರೇಖಾ: ನಾನು ಅರ್ಬಾಷನ್ ಅದ್ ಮೇಲೆ ಕೂಡ ಅವರು ಕೇಳಿದ್ರು ಹೇಗೆ ಇದೀರಾ ಅಂತಾ
  • ಸುಮಾ: ಎರಡು ಸರೀನೂ ಅಬಾರ್ಷನ್ ಮಾಡಸಿದ್ಯಾ 
  • ರೇಖಾ: ಹ್ಮು ಎರಡು ಸರಿ ಅಬಾರ್ಷನ್ ಮಾಡಸಿದ್ದು ಅವರಿಗೆ ಗೊತ್ತಿತ್ತು.
  • ಸುಮಾ: ಅವ್ನು ನನ್ನ ಹತ್ರ ಹೇಳಿದ್ದ ನಮಗೂ ಒಂದು ಮಗು ಇರಲೀ ನಮ್ಮ ಸಂಬಂಧ ಇನ್ನೂ ಗಟ್ಟಿ ಅಗತ್ತೇ ಅಂತಾ ಹೇಳಿದ್ದೆ 
  • ರೇಖಾ: ಇದು ಸುಳ್ಳು. ನಾನು ಪ್ರಗ್ನೆಟ್ ಅಂತಾ ಹೇಳದಾಗ..ಅನಂತ್ ಸರ್ ಹೇಳಿದ್ರು ಈಗಲೇ ನಿಮಿಗೆ ಎರಡು ಮಗು ಇದೆ . ಈಗಲೇ ಸಾಕಲಿಕ್ಕೆ ಅಗಲ್ಲ. ಮತ್ತೆ ಒಂದು ಮಗು ಅದರೆ ಸಮಸ್ಯೆ ಅಗತ್ತೆ. ಮುಂದೆ‌ ನಮಗೂ ಸಮಸ್ತೆ ಅಗತ್ತೆ ಅಂತಾ ಹೇಳಿದ್ರು. ಇದೆಲ್ಲ ಜನರಿಗೆ ಗೊತ್ತಾದರೆ ಸಮಸ್ಯೆ ಅಂತಾ ಹೇಳಿದ್ರು. ನನ್ನ ಮೇಲೆ ನಂಬಿಕೆ ಇದ್ದರೆ ತೆಗಸಿಬಿಡು ಅಂತಾ ಹೇಳಿದ್ರು.
  • ಸುಮಾ: ನಿಂಗೆ ಇಟ್ಟಕೊಳ್ಳೋ ಆಸೆ ಇತ್ತು
  • ರೇಖಾ: ಹ್ಮು ನನಗೆ ಆಸೆ ಇತ್ತು 

ಲಿವಿಂಗ್‌ ರಿಲೇಷನ್‌: ಠಾಣೆಗೆ ದೂರು ನೀಡಲು ರೇಖಾ ಆಗಮಿಸಿದ್ದ ರೇಖಾ ತನಗೆ ಅನಂತರಾಜು ಜತೆ ಆರು ವರ್ಷಗಳಿಂದ ಸಂಬಂಧ ಇದ್ದಿದ್ದು ನಿಜ. ಆದರೆ ಆತ್ಮಹತ್ಯೆ ಪ್ರಕರಣದಲ್ಲಿ ತನ್ನನ್ನು ಸುಳ್ಳು ಆರೋಪ ಮಾಡಿ ಸಿಲುಕಿಸಲಾಗಿದೆ ಎಂದು ರೇಖಾ ಆರೋಪಿಸಿದ್ದರು. 

ಆರು ವರ್ಷದ ಹಿಂದೆ ಫೇಸ್‌ಬುಕ್‌ನಲ್ಲಿ ಅನಂತರಾಜು ಪರಿಚಯವಾಗಿದ್ದರು. ಆನಂತರ ನಮ್ಮಿಬ್ಬರ ಮಧ್ಯೆ ಆತ್ಮೀಯತೆ ಮೂಡಿ ಲಿವಿಂಗ್‌ ಇನ್‌ ರಿಲೇಷನ್ಸ್‌ನಲ್ಲಿದ್ದೇವು. ಈ ವಿಚಾರ ನನ್ನ ಪತಿಗೆ ಗೊತ್ತಿರಲಿಲ್ಲ. ಆದರೆ ನಾನು ಹನಿಟ್ರ್ಯಾಪ್‌ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದೆ ಎಂಬುದು ಸುಳ್ಳು ಆರೋಪವಾಗಿದೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಇನ್ಸ್ಟಾಗ್ರಾಮ್‌ನಲ್ಲಿ ಸಾರಿ ಎಂದು ಬರೆದು 19 ವರ್ಷದ ಯುವಕ ಆತ್ಮಹತ್ಯೆ

ತನಗೆ ಅನಂತರಾಜು ಪತ್ನಿ ಸುಮಾ ಜೀವ ಬೆದರಿಕೆ ಹಾಕುತ್ತಿದ್ದಳು. ಈ ಸಂಬಂಧ ದೂರು ಕೊಡಲು ಬಂದಿದ್ದೆ. ಈ ಪ್ರಕರಣದಲ್ಲಿ ನನಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿಲ್ಲ. ನನಗೆ ಮತ್ತು ಮಕ್ಕಳಿಗೆ ಜೀವ ಬೆದರಿಕೆ ಇದೆ. ಸುಮಾಳ ಕಿರುಕುಳದಿಂದಲೇ ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಈ ಹಿಂದೆಯೂ ಒಂದು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆ ವೇಳೆ ಬಲವಂತವಾಗಿ ಡೆತ್‌ನೋಟ್‌ ಬರೆಸಿಕೊಂಡಿದ್ದಾರೆ. ತಾವು ಆತ್ಮಹತ್ಯೆಗೆ ಪ್ರಚೋದನೆ ನೀಡಲಿಲ್ಲ. ನನ್ನಲ್ಲಿರುವ ಎಲ್ಲ ಆಡಿಯೋಗಳನ್ನು ಪೊಲೀಸರಿಗೆ ಕೊಟ್ಟಿದ್ದೇನೆ ಎಂದು ತಿಳಿಸಿದರು. ಅನಂತರಾಜುಗೆ ಹನಿಟ್ರ್ಯಾಪ್‌ ಮಾಡಿದ ಆರೋಪದಡಿ ಬಂಧಿತರಾಗಿ ಜೈಲು ಸೇರಿದ್ದ ರೇಖಾ, ಬಳಿಕ ಜಾಮೀನು ಪಡೆದು ಹೊರಬಂದಿದ್ದಾರೆ.

click me!