ಸಾಲ ತೀರಿಸಲು ನೈಟಿ ಧರಿಸಿ ಕಳ್ಳತನಕ್ಕೆ ಯತ್ನ: ಬಾಯ್ ಫ್ರೆಂಡ್ ಜತೆ ಸೇರಿ ಯುವತಿಯಿಂದ ರಾಬರಿ

Published : Jun 02, 2022, 02:54 PM IST
 ಸಾಲ ತೀರಿಸಲು ನೈಟಿ ಧರಿಸಿ ಕಳ್ಳತನಕ್ಕೆ ಯತ್ನ: ಬಾಯ್ ಫ್ರೆಂಡ್ ಜತೆ ಸೇರಿ ಯುವತಿಯಿಂದ ರಾಬರಿ

ಸಾರಾಂಶ

* ಸಾಲ ತೀರಿಸಲು ನೈಟಿ ಧರಿಸಿ ಕಳ್ಳತನಕ್ಕೆ ಯತ್ನ * ಬಾಯ್ ಫ್ರೆಂಡ್ ಜತೆ ಸೇರಿ ಯುವತಿಯಿಂದ ರಾಬರಿ * ಬೆಂಗಳೂರಿನಲ್ಲಿ ಕಳ್ಳರ ಗ್ಯಾಂಗ್ ಅರೆಸ್ಟ್

ವರದಿ: ಪ್ರದೀಪ್ ಕಗ್ಗೆ

ಬೆಂಗಳೂರು, (ಜೂನ್.02)
: ಸಾಲ ತೀರಿಸಲು ನೈಟಿ ಧರಿಸಿ ಕಳ್ಳತನಕ್ಕೆ ಯತ್ನಿಸಿದ್ದ ಮೂವರು ಖತರ್ನಾಕ್ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಬಾಯ್ ಫ್ರೆಂಡ್ ಜೊತೆ ಸೇರಿ ರಾಬರಿ ಮಾಡುತ್ತಿದ್ದ ಯುವತಿ ಇದೀಗ ಪೊಲೀಸ್ ಅತಿಥಿಯಾಗಿದ್ದಾರೆ. ಪ್ರತ್ಯೇಕ ಘಟನೆಗಳ ವಿವರ ಈ ಕೆಳಗಿನಂತಿದೆ ನೋಡಿ.

ಸಾಲ ತೀರಿಸಲು ನೈಟಿ ಧರಿಸಿ ಕಳ್ಳತನಕ್ಕೆ ಯತ್ನ
ಮಣಪ್ಪುರಂ  ಫೈನಾನ್ಸ್ ಕಂಪನಿ ದೋಚಲು ಯತ್ನಿಸಿದ್ದ ಮೂವರು ಆರೋಪಿಗಳನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ. ನಾಗರಾಜ್, ಆಟೋ ಚಾಲಕ  ಕುಮಾರ್, ಬಸ್ ಚಾಲಕ ಬಹದ್ದೂರ್ ಸಿಂಗ್ ಬಂಧಿತ ಆರೋಪಿಗಳು. ಮೂವರು ಮೈತುಂಬಾ ಸಾಲ‌ ಮಾಡಿಕೊಂಡಿದ್ರು.. ಹೇಗಾದ್ರೂ ಮಾಡಿ ಸಾಲ ತೀರಿಸಬೇಕೆಂದು ನಿರ್ಧರಿಸಿದ್ದರು. ಈ ಹಿನ್ನೆಲೆ ರಾಜಗೋಪಾಲನಗರದಲ್ಲಿರುವ 
ಮಣ್ಣಪುರಂ ಫೈನಾನ್ಸ್  ದೋಚಲು ಪ್ಲಾನ್ ಮಾಡಿಕೊಂಡಿದ್ರು.

ಆಪ್ ಲೋನ್ ಬಡ್ಡಿ ಕಟ್ಟಲಾಗದೇ ರಾಬರಿಗಿಳಿದ ಜೋಡಿ : ಖಾಸಗಿ ಕಾಲೇಜಿನ ಯುವಕ ಯುವತಿಯ ಬಂಧನ

 ಕಳೆದ 25ರ ರಾತ್ರಿ 8 ಗಂಟೆ ಸುಮಾರಿಗೆ ಫೈನಾನ್ಸ್ ಕಂಪನಿ ಒಳನುಗ್ಗಿದ್ರು.  ಆದರೆ ಗ್ಯಾಸ್ ಕಟ್ಟರ್ ನಿಂದ ಲಾಕರ್ ನ ಓಪನ್ ಮಾಡುವಷ್ಟರಲ್ಲಿ ಸೈರನ್ ಮೊಳಗಿತ್ತು. ಈ ಹಿನ್ನೆಲೆ ಮೂವರು ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದರು. ಘಟನೆ ಬೆಳಕಿಗೆ ಬಂದ ತಕ್ಷಣ ಫೈನಾನ್ಸ್ ಕಂಪನಿಯವರು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು. ಸದ್ಯ ಆರೋಪಿಗಳ ಬೆನ್ನು ಹತ್ತಿದ್ದ ಪೊಲೀಸರು ಮೂವರನ್ನು ಬಂಧಿಸಿ ಆರು ಕೆಜಿ ಗ್ಯಾಸ್  ಸಿಲಿಂಡರ್ ,ಆಟೋರಿಕ್ಷಾ , 2 ನೈಟಿ ಹಾಗೂ ಕೃತ್ಯಕ್ಕೆ ಬಳಸಿದ ವಸ್ತುಗಳು ವಶಕ್ಕೆ ಪಡೆದಿದ್ದಾರೆ. ಈ ಹಿಂದೆಯೂ ಆರೋಪಿಗಳು ಕಳೆದ ಎಪ್ರಿಲ್ ನಲ್ಲಿ ಎಟಿಎಂ ಸೆಂಟರ್ ಗೂ ಕನ್ನ ಹಾಕಿ ವಿಫಲರಾಗಿದ್ರೂ. ವಿಚಿತ್ರವೆಂದರೆ ತಮ್ಮ ಚಹರೆ ಗೊತ್ತಾಗಬಾರದು ಅಂತಾ ಆರೋಪಿಗಳು ನೈಟಿ ಧರಿಸಿ ಕೃತ್ಯವೆಸಗುತ್ತಿದ್ದರು ಎಂಬುದು ಗೊತ್ತಾಗಿದೆ.

ಬಾಯ್ ಫ್ರೆಂಡ್ ಜೊತೆ ಸೇರಿ ಯುವತಿಯಿಂದ ರಾಬರಿ
ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಓದುತ್ತಿದ್ದ ಯುವಕ -ಯುವತಿ ಪ್ರೀತಿಸುತ್ತಿದ್ರು. ತನ್ನ ಲವರ್ ಗೆ ಶಾಪಿಂಗ್ ಮಾಡಿಸಲು ಅನ್ ಲೈನ್ ನಲ್ಲಿ ಲೋನ್ ಮಾಡಲು ಯುವಕ ನಿರ್ಧರಿಸಿದ್ದಾನೆ.. ಬಳಿಕ ಅನ್ ಲೈನ್ ನಲ್ಲಿ ಲೋನ್ ಆ್ಯಪ್ ಗಳ ಬಗ್ಗೆ ಸರ್ಚ್ ಮಾಡಿದ್ದಾನೆ..ನಂತರ ಇನ್ಸ್ ಟಾಂಟ್ ಲೋನ್ ಅಪ್ಲಿಕೇಶನ್ ನಲ್ಲಿ ಲೋನ್ ಪಡೆಯಲು ಯುವಕ ನಿರ್ಧಾರ ಮಾಡಿದ್ದ..ಇದೇ ತಿಂಗಳು 15 ಸಾವಿರ ಹಣವನ್ನು ಅನ್ ಲೈನ್ ಮೂಲಕ ಸಾಲ ಪಡೆದಿದ್ದಾನೆ..ಸಾಲ ಪಡೆದ ಬಳಿಕ  ತನ್ನ ಲವರ್ ಗೆ ಶಾಂಪಿಂಗ್ ಖರ್ಚು ಮಾಡಿದ್ದಾನೆ.ನಂತರ ಯುವಕನಿಗೆ ಲೋನ್ ಹಣವನ್ನು ಕಟ್ಟುವಂತೆ ಇನ್ಸ್ ಟಾಂಟ್ ಲೋನ್ ಅಪ್ಲಿಕೇಶನ್ ಸಿಬ್ಬಂದಿ ಕಾಲ್ ಮಾಡಿದ್ದಾರೆ.

ಯುವಕ ಬಳಿ ಲೋನ್ ಕಟ್ಟಲು ಹಣವಿರಲಿಲ್ಲ...ನಂತರ ತ‌ನ್ನ ಲವರ್ ಗೆ ಲೋನ್ ವಿಚಾರದ ಬಗ್ಗೆ ತಿಳಿಸುತ್ತಾನೆ..ನಂತರ ಸಾಲ ತೀರಿಸಲು ಇಬ್ಬರು ಸೇರಿ ರಾಬರಿ ಮಾಡಲು ಪ್ಲಾನ್ ಮಾಡ್ತಾರೆ...ಅದರಂತೆ  ನಂದಿನಿ ಲೇಔಟ್ ನಲ್ಲಿ ಒಂಟಿ ವೃದ್ದೆಯ ಸರ ಕಸಿಯಲು ಪ್ಲಾನ್ ಮಾಡಿದ್ರು..ಮೇ 28 ರ ಬೆಳಗ್ಗೆ  ನಂದಿನಿ ಲೇಔಟ್ ಪಾರ್ಕ್ ಬಳಿ ವಾಕಿಂಗ್ ಮಾಡ್ತಿದ್ದ ಗಾಯತ್ರಿ ಎಂಬಾಕೆಯನ್ನು ಟಾರ್ಗೆಟ್ ಮಾಡ್ತಾರೆ.

ಹಿಂಬದಿಯಿಂದ ಬಂದು ಗಾಯತ್ರಿಯವರ ಮುಖಕ್ಕೆ ಖಾರದಪುಡಿ ಎರಚಿದ್ದಾಳೆ. ಗಾಯತ್ರಿ ಕೆಳಗೆ ಬಿದ್ದು ಚೀರಾಡಿದ ಸದ್ದು ಕೇಳಿ ಸ್ಥಳೀಯರು ಬರ್ತಿದ್ದಂತೆ ಬೈಕ್ ಹತ್ತಿ ಗೆಳೆಯನ ಜೊತೆ ಎಸ್ಕೇಪ್ ಆಗಿದ್ದಳು.

ಘಟನೆ ನಂತರ ಮಹಿಳೆ ಗಾಯತ್ರಿ ಕುಟುಂಬಸ್ಥರು ನಂದಿನಿ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಬಲೆಗೆ ಕೆಡವಿದ್ದಾರೆ. ಲೋನ್ ಕಟ್ಟಲಿಕ್ಕೆ ಹಣವಿರಲಿಲ್ಲ ಹೀಗಾಗಿ ಕೃತ್ಯ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!