ಮತಿಭ್ರಮಣೆ ತಾಯಿಯೊಬ್ಬಳು ತನ್ನ ಒಂದು ವರ್ಷದ ಹೆಣ್ಣು ಮಗುವನ್ನು ಬ್ಲೇಡಿನಿಂದ ಕುಯ್ದು, ಬಳಿಕ, ತಾನು ಕೂಡ ಕುತ್ತಿಗೆ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಧುಗಿರಿ ಪಟ್ಟಣದ ತಿಪ್ಪಾಪುರ ಛತ್ರದ ಬಳಿ ನಡೆದಿದೆ.
ತುಮಕೂರು (ಜೂ.10): ಮತಿಭ್ರಮಣೆ ತಾಯಿಯೊಬ್ಬಳು ತನ್ನ ಒಂದು ವರ್ಷದ ಹೆಣ್ಣು ಮಗುವನ್ನು ಬ್ಲೇಡಿನಿಂದ ಕುಯ್ದು, ಬಳಿಕ, ತಾನು ಕೂಡ ಕುತ್ತಿಗೆ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಧುಗಿರಿ ಪಟ್ಟಣದ ತಿಪ್ಪಾಪುರ ಛತ್ರದ ಬಳಿ ನಡೆದಿದೆ.
ಮಧುಗಿರಿಯ ನಿವಾಸಿ ಶಿವಾನಂದ ಎಂಬುವರ ಪತ್ನಿಯಾಗಿರುವ ಶ್ವೇತಾ (28) ಎಂಬಾಕೆ ಮಾನಸಿಕ ಅಸ್ವಸ್ಥೆ(mental illness)ಯಾಗಿದ್ದು, ನಿಮ್ಹಾನ್ಸ್(NIMHANS)ನಲ್ಲಿ ಚಿಕಿತ್ಸೆ ಪಡೆದು ಬಂದಿದ್ದರು ಎನ್ನಲಾಗಿದೆ. ಶುಕ್ರವಾರ ಮನೆಯಲ್ಲಿ ಆಟವಾಡುತ್ತಿದ್ದ ತನ್ನ ಮಗುವಿನ ಕೈಯನ್ನು ಬ್ಲೇಡಿನಿಂದ ಕುಯ್ದಿದ್ದಾರೆ. ಬಳಿಕ, ತಾನು ಕೂಡ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆ(ateempt Suicide)ಗೆ ಯತ್ನಿಸಿದ್ದಾಳೆ. ಈ ವೇಳೆ, ತೀವ್ರ ರಕ್ತಸ್ರಾವವಾಗಿ ಮಗು ಸಾವನ್ನಪ್ಪಿದೆ.
ಬಳ್ಳಾರಿ: ಮೆಂಥೋಪ್ಲಸ್ ಡಬ್ಬಿ ನುಂಗಿ 9 ತಿಂಗಳ ಮಗು ಸಾವು
ಒಂದು ವರ್ಷದ ಕ್ರಿತೀಶ್, ಮೃತ ಮಗು. ವಿಷಯ ಗಮನಕ್ಕೆ ಬರುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಶ್ವೇತಾಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿರುವ ಶ್ವೇತಾ. ಮಧುಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ.
ರಮ್ಮನಹಳ್ಳಿಯಲ್ಲಿ ಅಪರಿಚಿತ ವ್ಯಕ್ತಿ ಸಾವು
ಮೈಸೂರು : ಮೈಸೂರು ತಾಲೂಕು ರಮ್ಮನಹಳ್ಳಿಯಲ್ಲಿ 40 ವರ್ಷದ ಅಪರಿಚಿತ ವ್ಯಕ್ತಿ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ. ರಮ್ಮವಹಳ್ಳಿಯ ಭಾರತ್‌ನಗರದ ಸನ್‌ಪ್ಯೂರ್ ಗಾರ್ಡನ್ ಬಡಾವಣೆಯ ಮುಂಭಾಗದ ರಸ್ತೆಯಲ್ಲಿ ಅಸ್ವಸ್ಥ ವ್ಯಕ್ತಿಯನ್ನು ಆಂಬ್ಯುಲೆನ್ಸ್ ಮೂಲಕ ಸಾರ್ವಜನಿಕರು ಕೆ.ಆರ್. ಆಸ್ಪತ್ರೆಗೆ ಕಳುಹಿಸಿದ್ದು, ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಮೃತರ ಚಹರೆ- 5.5 ಅಡಿ ಎತ್ತರ, ಕಪ್ಪು ಮೈಬಣ್ಣ, ಕಪ್ಪು ತಲೆ ಕೂದಲು, ಕಪ್ಪು ಬಿಳಿ ಮಿಶ್ರಿತ ಮೀಸೆ, ಗಡ್ಡ ಬಿಟ್ಟಿದ್ದಾರೆ. ಬಲತೋಳಿನ ಮೇಲೆ ಮರಮ್ಮ, ಎಡ ತೋಳಿನ ಮೇಲೆ ಗಣೇಶ ಎಂಬ ಹಸಿರು ಹಚ್ಚೆ ಇದೆ. ಕೊಳಕಾದ ಹರಿದು ಹೋಗಿರುವ ಕಿತ್ತಲೆ ಬಣ್ಣದ ಶರ್ಚ್, ಮಾಸಲು ಕಂದು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಮೃತರ ವಾರಸುದಾರರು ಇದ್ದಲ್ಲಿ ದೂ. 0821- 2444955 ಸಂಪರ್ಕಿಸಲು ಮೈಸೂರು ದಕ್ಷಿಣ ಠಾಣೆಯ ಪೊಲೀಸರು ಕೋರಿದ್ದಾರೆ.