ಸಂಸ್ಥೆಯ ವಾಟ್ಸಾಪ್ ಗ್ರೂಪ್‌ನಿಂದ ತನ್ನನ್ನು ಕಿತ್ತಾಕಿದ್ದಕ್ಕೆ ಉದ್ಯೋಗಿಯೋರ್ವ ತನ್ನ ಮೇಲಾಧಿಕಾರಿಗೆ ಕಚೇರಿಯಲ್ಲಿ ಎಲ್ಲ ಉದ್ಯೋಗಿಗಳ ಎದುರು ಥಳಿಸಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ.
ಪುಣೆ: ಸಂಸ್ಥೆಯ ವಾಟ್ಸಾಪ್ ಗ್ರೂಪ್‌ನಿಂದ ತನ್ನನ್ನು ಕಿತ್ತಾಕಿದ್ದಕ್ಕೆ ಉದ್ಯೋಗಿಯೋರ್ವ ತನ್ನ ಮೇಲಾಧಿಕಾರಿಗೆ ಕಚೇರಿಯಲ್ಲಿ ಎಲ್ಲ ಉದ್ಯೋಗಿಗಳ ಎದುರು ಥಳಿಸಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ. ಡೆಸೆಂಬರ್ 1 ರಂದು ಚದನ್ ನಗರದ ಮುಂಧ್ವಾ ರಸ್ತೆಯಲ್ಲಿ ಈ ಘಟನೆ ನಡೆದಿದೆ. ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ವಾಟ್ಸಾಪ್ ಗ್ರೂಪ್‌ನಿಂದ (whatsapp Group) ತನ್ನನ್ನು ತೆಗೆದು ಹಾಕಿದ್ದಕ್ಕೆ ಸಿಟ್ಟಿಗೆದ್ದ ಉದ್ಯೋಗಿ ಆತನ ಮೇಲಾಧಿಕಾರಿಗೆ ಉದ್ಯೋಗಿಗಳೆದರುರೇ ಥಳಿಸಿ ಬಾಸ್‌ನ ಐ-ಫೋನ್ ಅನ್ನು ನೆಲಕ್ಕೆಸೆದು ಹಾಳು ಮಾಡಿದ್ದಾನೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಸಂಸ್ಥೆಯೂ ಉದ್ಯೋಗಿ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಮುಂಧ್ವಾ ರಸ್ತೆಯಲ್ಲಿರುವ ಕಚೇರಿಯಲ್ಲೇ ಡಿಸೆಂಬರ್ 1 ರಂದು ಮಧ್ಯಾಹ್ನ 12.30ರ ಸುಮಾರಿಗೆ ಘಟನೆ ನಡೆದಿದೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಪುಣೆಯ (Pune) ಲೋಹೆಗಾಂವ್ ಸಮೀಪದ ಖಂಡ್ವೆ ನಗರದ ನಿವಾಸಿ 31 ವರ್ಷದ ಅಮೊಲ್ ಶೇಶರಾವ್ ಧೋಬ್ಲೆ ಅವರು ಇನ್ಸ್ಟಾ ಗೋ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮಾಲೀಕತ್ವವನ್ನು ಹೊಂದಿದ್ದು, ಚಂದನ್‌ನಗರ (Chandan nagar)ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ, ಇವರು ನೀಡಿದ ದೂರಿನ ಮೇರೆಗೆ ಅವರದ್ದೇ ಸಂಸ್ಥೆಯ ಉದ್ಯೋಗಿ ಸತ್ಯಂ ಸಿಂಘ್ವಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 324, 504, 506, ಹಾಗೂ 427 ರ ಅಡಿ ಹಾಗೂ ಮಹಾರಾಷ್ಟ್ರದ (Maharashtra Police Act) ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
undefined
ವಾಟ್ಸಾಪ್‌ನಲ್ಲಿ ಯಾರಾದ್ರೂ ನಿಮ್ಮನ್ನು ಬ್ಲಾಕ್ ಮಾಡಿದ್ದಾರೆ ಎಂದು ತಿಳ್ಕೊಳ್ಳೋದು ಹೇಗೆ ಗೊತ್ತಾ? ಇಲ್ಲಿದೆ ವಿವರ..
ಪೊಲೀಸರು ನೀಡಿದ ಮಾಹಿತಿ ಪ್ರಕಾರ ಹಲ್ಲೆ ಆರೋಪಿ ಶಿಂಘ್ವಿ ವಿರುದ್ಧ ಅನೇಕ ಗ್ರಾಹಕರು ಸಂಸ್ಥೆಗೆ ದೂರು ನೀಡಿದ್ದರು. ಈ ಬಗ್ಗೆ ಸಂಸ್ಥೆಯ ಮಾಲೀಕ ದೋಬ್ಲೆ ಅವರು ಶಿಂಘ್ವಿ ಅವರಿಗೆ ತಮ್ಮ ನಡವಳಿಕೆಯನ್ನು ತಿದ್ದಿಕೊಳ್ಳುವಂತೆ ಹೇಳಿದ್ದರು ಅವರು ಬದಲಾಗಿರಲಿಲ್ಲ, ಹೀಗಾಗಿ ಧೋಬ್ಲೆ ಅವರು ತಮ್ಮ ಕಂಪನಿಯ ವಾಟ್ಸಾಪ್ ಗ್ರೂಪ್‌ನಿಂದ ಶಿಂಘ್ವಿ ಅವರನ್ನು ತೆಗೆದು ಹಾಕಿದ್ದರು, ಇದರಿಂದ ಸಿಟ್ಟಿಗೆದ್ದ ಶಿಂಘ್ವಿ ಧೋಬ್ಲೆ ಅವರ ಸಂಸ್ಥೆಯಲ್ಲೇ ಅವರ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಲ್ಲದೇ ಅವರ ಐಫೋನ್‌ಗೂ (iphone) ಹಾನಿ ಮಾಡಿದ್ದಾರೆ. ಘಟನೆ ಸಂಬಂಧ ಚಂದನನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಾಟ್ಸಾಪ್ ಬಳಕೆದಾರರಿಗೆ ಗುಡ್ ನ್ಯೂಸ್: ಇನ್ಮುಂದೆ ಒಂದೇ ಫೋನ್‌ನಲ್ಲಿ 2 ಅಕೌಂಟ್ ಬಳಸಲು ಹೀಗೆ ಮಾಡಿ..