ಡಿಜಿಟಲ್ ಅರೆಸ್ಟ್‌ಗೆ ಕಂಗಾಲಾಗಿ ಬಟ್ಟೆ ಬಿಚ್ಚಿದ ಯುವತಿ, ಕೈಯಲ್ಲಿದ್ದ 5 ಲಕ್ಷ ರೂ ಗುಳುಂ!

By Chethan KumarFirst Published Oct 18, 2024, 10:12 PM IST
Highlights

ಎಚ್ಚರ, ಡಿಜಿಟಲ್ ಅರೆಸ್ಟ್‌ಗೆ ಸಿಲುಕಿ ಎಲ್ಲವನ್ನೂ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ 27ರ ಹರೆಯದ ಯುವತಿಯೊಬ್ಬಳು ಡಿಜಿಟಲ್ ಅರೆಸ್ಟ್‌ನಿಂದ ಕಂಗಾಲಾಗಿದ್ದಾಳೆ.

ಅಹಮ್ಮದಾಬಾದ್(ಆ.18) ಡಿಜಿಟಲ್ ಅರೆಸ್ಟ್ ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿದೆ. ಇದೀಗ 27ರ ಹರೆಯದ ಯುವತಿಯೊಬ್ಬಳು ಇದೇ ಡಿಜಿಟಲ್ ಅರೆಸ್ಟ್ ಜಾಲಕ್ಕೆ ಸಿಲುಕಿ ವಿಡಿಯೋ ಕಾಲ್‌ನಲ್ಲಿ ಬೆಟ್ಟೆ ಬಿಚ್ಚಿದ್ದು ಮಾತ್ರವಲ್ಲ, 5 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾಳೆ. ಈ ಘಟನೆ ಗುಜರಾತ್‌ನ ಅಹಮ್ಮದಾಬಾದ್‌ನಲ್ಲಿ ನಡೆದಿದೆ. ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಯುವತಿಯನ್ನು ಡಿಜಿಟಲ್ ಅರೆಸ್ಟ್ ಜಾಲಕ್ಕೆ ಸಿಲುಕಿಸಿ ಹಣ ವಂಚಿಸಲಾಗಿದೆ. ಮೋಸ ಹೋದ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ

ಅಹಮ್ಮದಾಬಾದ್‌ನ ಸಂಪರನ್ ಟವರ್ ಬಳಿ ನಿವಾಸಿಯಾಗಿರುವ ಹೆಮಾಲಿ ಪಾಂಡ್ಯಗೆ ಅಕ್ಟೋಬರ್ 13ರಂದು ಕೊರಿಯರ್ ಕಂಪನಿಯಿಂದ ಎಂದು ಹೇಳಿ ಕರೆಯೊಂದು ಬಂದಿದೆ. ನಿಮ್ಮ ಹೆಸರಿನಲ್ಲಿ ಥಾಯ್ಲೆಂಡ್‌ಗೆ ಕೊರಿಯರ್ ಕಳುಹಿಸಲಾಗಿದೆ. ಈ ಕೊರಿಯರ್ ಪಾರ್ಸೆಲ್‌ನಲ್ಲಿ 3 ಲ್ಯಾಪ್‌ಟಾಪ್, 2 ಫೋನ್, 150 ಗ್ರಾಂ ಡ್ರಗ್ಸ್, 1.5 ಕೆಜಿ ಬಟ್ಟೆ ಕಳುಹಿಸಲಾಗಿದೆ. ಇದು ಡ್ರಗ್ಸ್ ವ್ಯವಾಹಾರ ದಂಧೆ ಮಾಡುತ್ತಿರುವವರ ಕೆಲಸ. ನೀವು ತಕ್ಷಣ ಸೈಬರ್ ಕ್ರೈಂ ಪೊಲೀಸರಿಗೆ ಕರೆ ಮಾಡಿ ದೂರು ನೀಡಿ ಎಂದು ಫೋನ್‌ನಲ್ಲಿ ಸೂಚಿಸಿದ್ದಾರೆ. ವ್ಯಾಟ್ಸ್ಆ್ಯಪ್ ಕರೆ ಮಾತ್ರ ಸಾಧ್ಯ ಉಳಿದ ಕರೆ ಸಾಧ್ಯವಿಲ್ಲ ಎಂದು ಸೂಚಿಸಿದ್ದಾರೆ. 

Latest Videos

ನೀವು ವ್ಯಾಟ್ಸಾಪ್ ಪ್ರೈವೈಸಿ ಕಾಪಾಡಿಕೊಂಡಿದ್ದೀರಾ? ಖಾತೆ ಸುರಕ್ಷಿತವಾಗಿಡಲು ಇಲ್ಲಿದೆ 5 ಟಿಪ್ಸ್!

ಸೈಬರ್ ಕ್ರೈಂಗೆ ಕರೆ ಮಾಡಲು ನಂಬರ್ ಕೂಡ ಕಳುಹಿಸಲಾಗಿದೆ. ಮೊದಲೇ ಗಾಬರಿ ಹಾಗೂ ಆತಂಕಕ್ಕೆ ಒಳಗಾದ ಹೇಮಾಲಿ ಪಾಂಡೆ, ತನಗೆ ಸಿಕ್ಕ ಸೈಬರ್ ಕ್ರೈಂ ನಂಬರ್‌ಗೆ ಕರೆ ಮಾಡಿದ್ದಾಳೆ. ಕರೆ ಸ್ವೀಕರಿಸಿದ ವ್ಯಕ್ತಿ ದೆಹಲಿ ಸೈಬರ್ ಕ್ರೈಂ ಅಧಿಕಾರಿ ಎಂದು ಹೇಳಿಕೊಂಡು ವಿಚಾರಣೆ ಆರಂಭಿಸಿದ್ದಾನೆ. ಈ ವೇಳೆ ಹೇಮಾಲಿ ಪಾಂಡೆ ಈ ರೀತಿ ಕೊರಿಯರ್ ಬಾಯ್ ಕರೆ ಮಾಡಿ ತನ್ನ ಹೆಸರಿನಲ್ಲಿ ಕೋರಿಯರ್ ಹೋಗಿದೆ ಎಂದಿದ್ದಾಳೆ. ಇದಕ್ಕೆ ಇದು ನರ್ಕೋಟಿಕ್ಸ್ ಪೊಲೀಸರ ಅಡಿಯಲ್ಲಿ ಬರಲಿದೆ. ಹೀಗಾಗಿ ಸಿಬಿಐ ಪೊಲೀಸರು ವಿಡಿಯೋ ಕಾಲ್ ಮೂಲಕ ಮಾಹಿತಿ ಪಡೆಯಲಿದ್ದಾರೆ. ವಿಡಿಯೋ ಕಾಲ್ ಸ್ವೀಕರಿಸುವಂತೆ ಸೂಚಿಸಿದ್ದಾರೆ.

ಕೆಲವೇ ಕ್ಷಣದಲ್ಲಿ ಯುವತಿಗೆ ಸಿಬಿಐ ಅಧಿಕಾರಿ ಸೋಗಿನಲ್ಲಿ ವಿಡಿಯೋ ಕಾಲ್ ಮಾಡಲಾಗಿದೆ. ಅಧಿಕಾರಿ ಮುಖಕ್ಕೆ ಮಾಸ್ಕ್ ಧರಿಸಿ ವಿಡಿಯೋ ಕಾಲ್‌ನಲ್ಲಿ ಪ್ರತ್ಯಕ್ಷವಾಗಿದ್ದಾನೆ. ಬಳಿಕ ಬರ್ತ್ ಸರ್ಟಿಫಿಕೇಟ್‌ನಲ್ಲಿ ದೇಹದಲ್ಲಿನ ಮಚ್ಚೆ ಹಾಗೂ ಇತರ ಗುರುತು ಪತ್ತೆ ಹಚ್ಚಲು ಬಟ್ಟೆ ಬಿಚ್ಚಲು ಸೂಚಿಸಿದ್ದಾರೆ. ಇದಕ್ಕೆ ನಿರಾಕರಿಸಿದಾಗ ಕೇಸು, ಜೈಲು ಎಂದು ಬೆದರಿಸಿದ್ದಾರೆ. ಇದೇ ವೇಳೆ ನಕಲಿ ಸಿಬಿಐ ಅಧಿಕಾರಿ ಕರೆಯಲ್ಲಿ ಮಹಿಳಾ ಅಧಿಕಾರಿ ಪ್ರತ್ಯಕ್ಷಗೊಂಡಿದ್ದಾರೆ. ಬೇರೆ ದಾರಿ ಕಾಣದ ಹೇಮಾಲಿ ಪಾಂಡೆ ಬಟ್ಟೆ ಬಿಚ್ಚಿದ್ದಾರೆ.

ಪ್ರಾಥಮಿಕ ತನಿಖೆ, ಕೋರಿಯರ್ ಎಲ್ಲವನ್ನೂ ಗಮನಿಸಿದರೆ ಡ್ರಗ್ಸ್ ದಂಧೆಯಲ್ಲಿ ನಿಮ್ಮ ಪಾತ್ರವಿರುವುದು ಖಚಿತವಾಗಿದೆ. ಇದು ಅಂತಾರಾಷ್ಟ್ರಯ ಡ್ರಗ್ಸ್ ದಂಧೆಯಾಗಿ ಕೇಸ್ ದಾಖಲಾಗಲಿದೆ. ಹೀಗಾಗಿ ಪ್ರಬಲ ಕೇಸ್ ಆಗಲಿದೆ ಎಂದು ಬೆದರಿಸಿದ್ದಾರೆ. ಇದೇ ವೇಳೆ ಯುವತಿಯಾಗಿರುವ ಕಾರಣ ಒಂದು ಸಹಾಯ ಮಾಡಲು ಸಾಧ್ಯವಿದೆ ಎಂದು ಹೇಳಿ ಒಂದಷ್ಟು ಚಾರ್ಜಿಂಗ್ ಹೆಸರಿನಲ್ಲಿ ಒಟ್ಟು 4.92 ಲಕ್ಷ ರೂಪಾಯಿ ಖಾತೆಗೆ ವರ್ಗಾಯಿಸುವಂತೆ ಸೂಚಿಸಿದ್ದಾರೆ. ಹಣ ವರ್ಗಾವಣೆ ಮಾಡಿದ ಬಳಿಕ ಕರೆ ಮಾಡಿದ ಯಾವುದೇ ನಂಬರ್ ಚಾಲ್ತಿಯಲ್ಲಿಲ್ಲ. ಕೊರಿಯರ್ ಬಾಯ್ ಕರೆಕೂಡ ಕನೆಕ್ಟ್ ಆಗುತ್ತಿಲ್ಲ. ಅಷ್ಟರಲ್ಲಿ ತಾನು ಮೋಸ ಹೋಗಿರುವುದಾಗಿ ಯುವತಿಗೆ ಅರಿವಾಗಿದೆ. ನರನ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. 

.ಮಹಿಳಾ ಕಾಲೇಜಿನ ವಿದ್ಯಾರ್ಥಿಗಳ ಅಶ್ಲೀಲ AI ವಿಡಿಯೋ ಸೃಷ್ಟಿಸಿ ಬ್ಲಾಕ್‌ಮೇಲ್, ತನಿಖೆಗೆ SIT ರಚನೆ!

ಏನಿದು ಡಿಜಿಟಲ್ ಅರೆಸ್ಟ್
ಡಿಜಿಟಲ್ ಅರೆಸ್ಟ್ ಕುರಿತು ಎಚ್ಚರವಾಗಿರಬೇಕು. ಅನಾಮಿಕರು ಅಧಿಕಾರಿಗಳು, ಸೈಬರ್ ಕ್ರೈಂ ಪೊಲೀಸ್ ಸೇರಿದಂತೆ ಹಲವು ಸೋಗಿನಲ್ಲಿ ಕರೆ ಮಾಡಿ, ನಿಮ್ಮ ಹೆಸರಿನಲ್ಲಿ ಪಾರ್ಸೆಲ್ ಹೋಗಿದೆ. ನಿಮಗೆ ಪಾರ್ಸೆಲ್ ಬಂದಿದೆ. ಇದರಲ್ಲಿ ಡ್ರಗ್ಸ್ ಇದೆ, ಅಥವಾ ನಕಲಿ ಮದ್ಯ ಇದೆ ಎಂದೆಲ್ಲಾ ಹೇಳಿ ಬೆದರಿಸುತ್ತಾರೆ. ಈ ಕುಣಿಕೆಯಲ್ಲಿ ಬಿದ್ದ ತಕ್ಷಣ ವಿಚಾರಣೆ ಸೇರಿದಂತೆ ಹಲವು ನಕಲಿ ಕರೆ ಮಾಡಿ ಖಾತೆಯಿಂದ ಹಣ ವರ್ಗಾವಣೆ ಮಾಡಿಸುತ್ತಾರೆ. ಇಷ್ಟೇ ಅಲ್ಲ ವಿಡಿಯೋ ರೆಕಾರ್ಡ್ ಮಾಡಿ ಮತ್ತೆ ಬ್ಲಾಕ್‌ಮೇಲ್ ಮಾಡುತ್ತಾರೆ.
 

click me!