ದಾಂಡೇಲಿ: ಗ್ರಾಹಕರ ಸೋಗಿನಲ್ಲಿ ಬಂದು ಅಂಗಡಿಯಲ್ಲಿದ್ದ ವಸ್ತು ಎಗರಿಸಿ ಚಾಲಾಕಿ ಕಳ್ಳಿಯರು ಎಸ್ಕೇಪ್‌!

By Girish Goudar  |  First Published Oct 18, 2024, 7:12 PM IST

ಕಳ್ಳಿಯರ ಕೃತ್ಯದ ಸಿಸಿ ಟಿವಿ ದೃಶ್ಯಾವಳಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಫ್ಯಾನ್ಸಿ ಅಂಗಡಿಯ ಮಾಲೀಕನ ಗಮನವನ್ನು ಬೇರೆಡೆಗೆ ಸೆಳೆದು ಚಾಲಾಕಿ ಕಳ್ಳಿಯರು ತಮ್ಮ ಕೈಚಳಕ ಮೆರೆದಿದ್ದಾರೆ. 


ಕಾರವಾರ(ಅ.18):  ಗ್ರಾಹಕರ ಸೋಗಿನಲ್ಲಿ ಬಂದು ಇಬ್ಬರು ಮಹಿಳೆಯರು ಅಂಗಡಿಯಲ್ಲಿದ್ದ ವಸ್ತುಗಳನ್ನು ಎಗರಿಸಿ ಪರಾರಿಯಾದ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ನಗರದಲ್ಲಿ ಇಂದು(ಶುಕ್ರವಾರ) ನಡೆದಿದೆ. ನಗರದ ಲಿಂಕ್ ರಸ್ತೆಯಲ್ಲಿರುವ ಫ್ಯಾನ್ಸಿ ಅಂಗಡಿ ಮತ್ತು ಸಂಡೆ ಮಾರ್ಕೆಟ್‌ನ ಬಟ್ಟೆ ಅಂಗಡಿಯಲ್ಲಿ ಘಟನೆ ನಡೆದಿದೆ. 

ಕಳ್ಳಿಯರ ಕೃತ್ಯದ ಸಿಸಿ ಟಿವಿ ದೃಶ್ಯಾವಳಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಫ್ಯಾನ್ಸಿ ಅಂಗಡಿಯ ಮಾಲೀಕನ ಗಮನವನ್ನು ಬೇರೆಡೆಗೆ ಸೆಳೆದು ಚಾಲಾಕಿ ಕಳ್ಳಿಯರು ತಮ್ಮ ಕೈಚಳಕ ಮೆರೆದಿದ್ದಾರೆ. 

Tap to resize

Latest Videos

ಕರಾವಳಿಗೆ ಬಿಗ್‌ ನ್ಯೂಸ್‌, ದೀಪಾವಳಿಗೆ ಸ್ಪೆಷಲ್‌ ಟ್ರೇನ್‌ ಘೋಷಿಸಿದ SWR, ಬುಕ್ಕಿಂಗ್‌ ಓಪನ್‌

ಸಂಡೇ ಮಾರ್ಕೆಟಿನ ಬಟ್ಟೆ ಅಂಗಡಿಯಲ್ಲಿಯೂ ಮಾಲೀಕನನ್ನು ಯಾಮಾರಿಸಿ ಕಳ್ಳತನ ಮಾಡಿದ್ದಾರೆ. ಮರುದಿನವೂ ಮತ್ತೇ ಅದೇ ಬಟ್ಟೆ ಅಂಗಡಿಗೆ ಆಗಮಿಸಿದ ಕಳ್ಳಿಯರು ಕಳ್ಳತನ ಮಾಡಿದ್ದಾರೆ. ಆಗ ಎಚ್ಚೆತ್ತ ಅಂಗಡಿಯ ಮಾಲೀಕ ಬೆದರಿಸಿದ್ದು, ಖತರ್ನಾಕ್ ಕಳ್ಳಿಯರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಸದ್ಯಕ್ಕೆ ಈ ಬಗ್ಗೆ ದಾಂಡೇಲಿ ನಗರ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. 

click me!