NEETಪರೀಕ್ಷೆಯಲ್ಲಿ ಎರಡನೇ ಬಾರಿ ಅನುತ್ತೀರ್ಣ: ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ!

By Suvarna NewsFirst Published Nov 7, 2021, 9:40 AM IST
Highlights

*ಎರಡನೇ ಬಾರಿ ನೀಟ್‌ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ
*ಎರಡನೇ ಪ್ರಯತ್ನದಲ್ಲೂ ಅನುತ್ತೀರ್ಣ
*ನವೆಂಬರ 1ರಂದು ಪ್ರಕಟವಾಗಿದ್ದ ನೀಟ್‌ ಫಲಿತಾಂಶ
*ಕೀಟನಾಶಕ ಸೇವಿಸಿ ಸುಭಾಷ್ ಚಂದ್ರ  ಆತ್ಮಹತ್ಯೆ!

ತಮಿಳುನಾಡು (ನ.7) : ಮೆಡಿಕಲ್(Medical), ಡೆಂಟಲ್(Dental) ಪ್ರವೇಶಕ್ಕೆ ನಡೆದಿದ್ದ 2021ನೇ ಸಾಲಿನ ನೀಟ್ ಫಲಿತಾಂಶ(NEET Result) ನವೆಂಬರ 1ರಂದು ಪ್ರಕಟವಾಗಿತ್ತು. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ತನ್ನ ಅಧಿಕೃತ ವೆಬ್‌ಸೈಟ್ neet.nta.nic.in ನಲ್ಲಿ ಫಲಿತಾಂಶಗಳನ್ನು ಬಿಡುಗಡೆ ಮಾಡಿತ್ತು. ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET) ಆಕಾಂಕ್ಷಿಯೊಬ್ಬರು ಎರಡನೇ ಬಾರಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ನಂತರ ಶನಿವಾರ ತಮಿಳುನಾಡಿನ ಸೇಲಂ (Tamil Nadu's Selam) ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೀಟನಾಶಕ ಸೇವಿಸಿ ಸುಭಾಷ್ ಚಂದ್ರ  ಆತ್ಮಹತ್ಯೆ!

ಮೃತರನ್ನು ಸೇಲಂ ಜಿಲ್ಲೆಯ ವಡಕುಮಾರೈ (Vadakumarai) ಗ್ರಾಮದ ದಿನಗೂಲಿ ಕಾರ್ಮಿಕನ ಮಗ ಸುಭಾಷ್ ಚಂದ್ರ ಬೋಸ್ (Subash Chandra Bose) ಎಂದು ಗುರುತಿಸಲಾಗಿದೆ. ಘಟನೆಯ ಬಗ್ಗೆ ತಿಳಿದಿರುವವರ ಪ್ರಕಾರ, ಹುಡುಗನು ತನ್ನ ಎರಡನೇ ಪ್ರಯತ್ನದಲ್ಲಿ ನೀಟ್‌ ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ತನ್ನ ನಿವಾಸದಲ್ಲಿ ಕೀಟನಾಶಕವನ್ನು (pesticide) ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

NEET Result: ಮೇಘನ್, ಜಶನ್ ಕರ್ನಾಟಕಕ್ಕೆ ಟಾಪರ್

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕನನ್ನು ಕುಟುಂಬಸ್ಥರು ಕಂಡ ಕೂಡಲೇ ಸೇಲಂನ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದುದಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸುಭಾಷ್ ಕೊನೆಯುಸಿರೆಳೆದಿದ್ದಾರೆ. ಘಟನೆಯ ಬಗ್ಗೆ ಸೇಲಂ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೇಲಂ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ಸುಭಾಷ ಈ ವರ್ಷದ ಸೆಪ್ಟೆಂಬರ್‌ನಲ್ಲಿ ನೀಟ್‌ ಪರೀಕ್ಷೆಗೆ ಹಾಜರಾಗಿದ್ದರು ಎಂದು ವರದಿಯಾಗಿದೆ.

ನೀಟ್‌ನಲ್ಲಿ ಫೇಲ್ ಆಗುವ ಭಯದಿಂದ ಆತ್ಮಹತ್ಯೆ!

ಕಳೆದ ತಿಂಗಳು, ತಮಿಳುನಾಡಿನ ಪೊಲ್ಲಾಚಿಯ 20 ವರ್ಷದ ಯುವಕ ನೀಟ್‌ನಲ್ಲಿ ಫೇಲ್ ಆಗುವ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದನು. ಕೀರ್ತಿವಾಸನ್ ( Keerthivasan) ಎಂಬ ವಿದ್ಯಾರ್ಥಿಯನ್ನು ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದನು.

NEET Resultನಲ್ಲಿ ದೋಷ: ಮರು ಪರೀಕ್ಷೆಗೆ ಆಗ್ರಹ!

ಈ ವರ್ಷದ ಸೆಪ್ಟೆಂಬರ್‌ನಲ್ಲಿ ತಮಿಳುನಾಡು ವಿಧಾನಸಭೆಯು ವೈದ್ಯಕೀಯ ಆಕಾಂಕ್ಷಿಗಳಿಗೆ NEET ಪರೀಕ್ಷೆ ತೆರೆವುಗೊಳಿಸಲು ಮಸೂದೆಯನ್ನು ಅಂಗೀಕರಿಸಿತ್ತು. ಮಸೂದೆಯ ಪ್ರಕಾರ, ರಾಜ್ಯದ ವೈದ್ಯಕೀಯ ಆಕಾಂಕ್ಷಿಗಳು (Medical Aspirants) 12 ನೇ ತರಗತಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ.

ಸೆಪ್ಟೆಂಬರ್ 12 ರಂದು ನಡೆದಿದ್ದ ನೀಟ್‌ ಪರೀಕ್ಷೆ!

ಈ ವರ್ಷ ನೀಟ್‌ ಪರೀಕ್ಷೆಯಲ್ಲಿ ದೇಶಾದ್ಯಂತ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪಡೆಯಲು ಸ್ಕೋರ್ 138 ರಿಂದ 720 ರ ವ್ಯಾಪ್ತಿಯಲ್ಲಿದೆ. ಕೌನ್ಸೆಲಿಂಗ್ ಪ್ರಕ್ರಿಯೆ ವೇಳಾಪಟ್ಟಿಯನ್ನು ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (MCC) ಶೀಘ್ರದಲ್ಲೇ mcc.nic.in ನಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಶೂಟ್ ಮಾಡಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ; ಮಾನಸಿಕ ಒತ್ತಡ ಶಂಕೆ.?

ಎರಡು ಹಂತಗಳಲ್ಲಿ ಕೌನ್ಸೆಲಿಂಗ್ ನಡೆಯಲಿದ್ದು ALL India Quota (AIQ) ಸೀಟುಗಳು ಮತ್ತು ರಾಜ್ಯ ಮಟ್ಟದ Quota ಪರಿಗಣಿಸಲಾಗುತ್ತಿದೆ . ಶೇಕಡಾ 15 ರಷ್ಟು ಸೀಟುಗಳನ್ನು AIQ ಅಡಿಯಲ್ಲಿ ಕಾಯ್ದಿರಿಸಿದ್ದರೆ, 85 ರಷ್ಟು ಸೀಟುಗಳನ್ನು ಆಯಾ ರಾಜ್ಯ ಕೌನ್ಸೆಲಿಂಗ್ ಇಲಾಖೆಗಳು ಭರ್ತಿ ಮಾಡಲಿವೆ. NEET 2021 ಗೆ ನೋಂದಾಯಿಸಿದ ಒಟ್ಟು 16.14 ಲಕ್ಷ ಅಭ್ಯರ್ಥಿಗಳ ಪೈಕಿ 15.44 ಲಕ್ಷ ವಿದ್ಯಾರ್ಥಿಗಳು ಸೆಪ್ಟೆಂಬರ್ 12 ರಂದು ಪರೀಕ್ಷೆಯನ್ನು ಬರೆದಿದ್ದರು. 

ಇತ್ತೀಚೆಗೆ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ(NTA) ನ.1ರಂದು ಬಿಡುಗಡೆ ಮಾಡಿದ ನೀಟ್‌ ಪರೀಕ್ಷೆಯ (NEET) ಫಲಿತಾಂಶದಲ್ಲಿ ಹಲವಾರು ದೋಷಗಳು ಇವೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು. ಜತಗೆ ನೀಟ್‌ ಮರು ಪರೀಕ್ಷೆ ನಡೆಸುವಂತೆ ಆಗ್ರಹಿಸಿದ್ದರು. ಈ ಬಗ್ಗೆ ಟ್ವೀಟರ್‌ನಲ್ಲಿ ಟ್ರೆಂಡ್‌ ಮಾಡುವ ಮೂಲಕ ಆಕಾಂಕ್ಷಿಗಳು ಆಕ್ರೋಶ ಹೊರಹಾಕಿದ್ದರು. 

click me!