Rukmini Vasanth: ನಟಿ ರುಕ್ಮಿಣಿ ಫೇಕ್‌ ಅಶ್ಲೀಲ ವಿಡಿಯೋ ಪ್ರಕರಣ; ಸೈಬರ್ ಪೊಲೀಸರ ತನಿಖೇಲಿ ಶಾಕಿಂಗ್ ಮಾಹಿತಿ ರಿವೀಲ್!

Kannadaprabha News   | Kannada Prabha
Published : Jun 11, 2026, 05:53 AM IST
Actress Rukmini Vasanth DeepFake Obscene Video Shared by Individuals From Other States

ಸಾರಾಂಶ

ನಟಿ ರುಕ್ಮಿಣಿ ವಸಂತ್ ಅವರ ಡೀಪ್ ಫೇಕ್ ವಿಡಿಯೋ ಪ್ರಕರಣದಲ್ಲಿ, ವಿಡಿಯೋ ಹಂಚಿಕೊಂಡಿದ್ದ ಖಾತೆದಾರರು ಬಹುತೇಕ ಹೊರ ರಾಜ್ಯದವರೆಂದು ಸಿಸಿಬಿ ತನಿಖೆಯಲ್ಲಿ ಪತ್ತೆಯಾಗಿದೆ. ಪ್ರಕರಣ ದಾಖಲಾದ ಬಳಿಕ ಆರೋಪಿಗಳು ತಮ್ಮ ಖಾತೆಗಳನ್ನು ಬಂದ್ ಮಾಡಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಬೆಂಗಳೂರು (ಜೂ.11): ಇತ್ತೀಚಿಗೆ ಸಾಮಾಜಿಕ ಜಾಲತಾಣ(Social media)ಗಳಲ್ಲಿ ಚಲನಚಿತ್ರ ನಟಿ ರುಕ್ಮಿಣಿ ವಸಂತ್(Actress Rukmini Vasanth) ಅವರ ಡೀಪ್ ಫೇಕ್ ಅಶ್ಲೀಲ ವಿಡಿಯೋ(DeepFake Obscene Video) ಹಂಚಿಕೊಂಡಿದ್ದ ಖಾತೆದಾರರು ಬಹುತೇಕರು ಹೊರ ರಾಜ್ಯದವರು ಎಂಬ ಸಂಗತಿ ಸಿಸಿಬಿ ಸೈಬರ್ ಕ್ರೈಂ ಠಾಣೆ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.

ರುಕ್ಮಿಣಿ ವಸಂತ್ ವಿಡಿಯೋ ಹಂಚಿಕೊಂಡವರು ಹೊರರಾಜ್ಯದವರು

ತಮ್ಮ ಅಶ್ಲೀಲ ವಿಡಿಯೋ ಹಂಚಿಕೊಂಡಿದ್ದ ಇನ್‌ಸ್ಟಾಗ್ರಾಂ, ಎಕ್ಸ್ ಹಾಗೂ ಫೇಸ್‌ಬುಕ್ ಖಾತೆಗಳ ಬಗ್ಗೆ ನಟಿ ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಖಾತೆಗಳ ವಿವರ ಕಲೆ ಹಾಕಿದಾಗ ಅವರೆಲ್ಲ ಆಂಧ್ರಪ್ರದೇಶ ಹಾಗೂ ತಮಿಳುನಾಡು ಸೇರಿ ಹೊರ ರಾಜ್ಯದ ವ್ಯಕ್ತಿಗಳು ಎಂಬುದು ಗೊತ್ತಾಯಿತು. ಪ್ರಕರಣ ದಾಖಲಾದ ಬಳಿಕ ಖಾತೆ ಬಂದ್ ಮಾಡಿದ್ದಾರೆ. ಈ ಕಿಡಿಗೇಡಿಗಳ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೈಬರ್ ಕ್ರೈಂಗೆ ದೂರು ನೀಡಿದ್ದ ರುಕ್ಮಿಣಿ ವಸಂತ್

ಇತ್ತೀಚೆಗೆ ರುಕ್ಮಿಣಿ ಅವರು ಈಜುಡುಗೆಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡ ಡೀಪ್ ಫೇಕ್ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಸಿಸಿಬಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದರು. ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳಿಗೆ ಬೇಟೆ ಶುರು ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಶ್ಲೀಲ ಕಮೆಂಟಿಗರ ನಿದ್ದೆಗೆಡಿಸಿದ ವಿಜಯಲಕ್ಷ್ಮಿ ದರ್ಶನ್​: ಕಮೆಂಟ್​ ಹಾಕಿದವರಲ್ಲಿ ಶುರುವಾಯ್ತು ನಡುಕ
ಶಿವಂ ಅಸೋಸಿಯೇಟ್ಸ್ ಅಕ್ರಮ ಹಣದಲ್ಲಿ ಸನ್ನಿ ಲಿಯೋನ್‌ ಮಾತ್ರವಲ್ಲ, ಇನ್ನೂ 4 ಕನ್ನಡದ ನಟ-ನಟಿಯರಿಗೆ ಪಾಲು?!