Davanagere Horror: ಮಹಿಳೆಗೆ ಮತ್ತು ಬರಿಸುವ ಪಾನೀಯ ನೀಡಿ ಹೊಲಕ್ಕೆ ಹೊತ್ತೊಯ್ದು ಸಾಮೂಹಿಕ ಬಲತ್ಕಾರ: ಬೆತ್ತಲೆ ವಿಡಿಯೋ ಮಾಡಿ ವಿಕೃತಿ

Ravi Janekal   | Kannada Prabha
Published : Jun 10, 2026, 12:02 PM IST
Davnagere Horror

ಸಾರಾಂಶ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಪತಿಯೊಂದಿಗೆ ಜಗಳವಾಡಿ ಮನೆಬಿಟ್ಟ ಮಹಿಳೆಗೆ, ಯುವಕನೊಬ್ಬ ಪಾನೀಯ ನೀಡಿ ಬಳಿಕ ಸಾಮೂಹಿಕ ಅತ್ಯಾ೧ಚಾರ ಎಸಗಲಾಗಿದೆ. ಈ ಘಟನೆಯ ವಿಡಿಯೋಗಳು ಹರಿದಾಡಿದ ನಂತರ ಸಂತ್ರಸ್ತೆ ದೂರು ನೀಡಿದ್ದು, ಪೊಲೀಸರು 10 ಮಂದಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ದಾವಣಗೆರೆ (ಜೂ.10): ಮಹಿಳೆಯನ್ನು ಹೊಲವೊಂದಕ್ಕೆ ಕರೆದೊಯ್ದು ಸಾಮೂಹಿಕವಾಗಿ ಅತ್ಯಾ೧ಚಾರ ಎಸಗಿರುವ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಯಲೋದಹಳ್ಳಿ ಗ್ರಾಮದಲ್ಲಿ ನಡೆದಿದೆ. ಜೂ.3ರ ಸಂಜೆ ಪತಿ ಕುಡಿದು ಬಂದಿದ್ದರಿಂದ ಗಂಡನೊಂದಿಗೆ ಜಗಳವಾಡಿ ರಾತ್ರಿಯೇ ತನ್ನ ಅಣ್ಣನ ಮನೆಗೆ ಹೊರಟಿದ್ದ ವೇಳೆ ಈ ಘಟನೆ ನಡೆದಿದೆ.

ಜೂನ್ 3ರ ಸಂಜೆ ನಡೆದಿದ್ದಾದರೂ ಏನು?

ಜೂನ್ 3ರ ಸಂಜೆ ಸಂತ್ರಸ್ತ ಮಹಿಳೆ ಪತಿ ವಿಪರೀತ ಕುಡಿದು ಬಂದಿದ್ದರಿಂದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಇದರಿಂದ ಮನನೊಂದು ಸಂತ್ರಸ್ತ ಮಹಿಳೆ ಅದೇ ರಾತ್ರಿ ತನ್ನ ಅಣ್ಣನ ಮನೆಗೆ ಹೋಗಲು ಮನೆಯಿಂದ ಹೊರನಡೆದಿದ್ದಾಳೆ. ಈ ವೇಳೆ ಗ್ರಾಮದ ಚಿಕನ್ ಅಂಗಡಿ ಸಮೀಪ ಕುಳಿತು ಅಳುತ್ತಿದ್ದ ಮಹಿಳೆಯನ್ನು ಗಮನಿಸಿದ ಯುವಕನೊಬ್ಬ ಮಾತನಾಡಿಸಿ ಸಮಾಧಾನಪಡಿಸುವ ನೆಪದಲ್ಲಿ ಕುಡಿಯಲು 7ಅಪ್ ನೀಡಿದ್ದಾನೆ. ಆದರೆ ಆ ಪಾನೀಯ ಸೇವಿಸಿದ ಕೆಲವೇ ಕ್ಷಣಗಳಲ್ಲಿ ಮಹಿಳೆಗೆ ತಲೆ ಸುತ್ತಿ ಮತ್ತು ಬಂದಂತಾಗಿದ್ದು, ಬಳಿಕ ಏನಾಯಿತು ಎಂಬುದು ನೆನಪಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಜಮೀನೊಂದಕ್ಕೆ ಹೊತ್ತೊಯ್ದು ಬಲತ್ಕಾರ

ಆ ನಂತರ ಮಹಿಳೆ ಎಚ್ಚರವಿಲ್ಲದಂತಾಗಿದ್ದಾಳೆ. ಇತ್ತ ಕಾಮುಕರು ಇದೇ ಸರಿಯಾದ ಸಮಯವೆಂದು ಬೈಕ್‌ನಲ್ಲಿ ಮಹಿಳೆಯನ್ನ ಕೂರಿಸಿಕೊಂಡು ಜಮೀನೊಂದಕ್ಕೆ ಕರೆದೊಯ್ಯಲಾಗಿದ್ದು, ಹಲವರು ಸೇರಿ ಸಾಮೂಹಿಕ ಬಲತ್ಕಾರ ಮಾಡಿ ಎಸಗಿರುವ ಆರೋಪ ಕೇಳಿಬಂದಿದೆ.

ನಸುಕಿನ ಜಾವ ಎಚ್ಚರವಾದಾಗ ಅರೆಬೆತ್ತಲೆ ಸ್ಥಿತಿಯಲ್ಲಿ ಮಹಿಳೆ

ಮುಂಜಾನೆ ಸುಮಾರು 3.20ರ ವೇಳೆಗೆ ಮಹಿಳೆಗೆ ಎಚ್ಚರವಾಗಿದೆ. ಇಲ್ಲಿ ಹೇಗೆ ಬಂದೆ, ಏನಾಯ್ತು ಎಂದು ತೋಚದೇ ಅಲ್ಲಿಂದ ಮಹಿಳೆ ಅಣ್ಣನ ಮನೆಗೆ ತಲುಪಿದ್ದಾಳೆ. ಆದರೆ ಘಟನೆ ಅಲ್ಲಿಗೇ ಮುಗಿದಿಲ್ಲ. ಜೂನ್ 8ರಂದು ಮಹಿಳೆಯ ಅಣ್ಣನ ಮಗ ಕರೆ ಮಾಡಿ, ಆಕೆಯ ಬೆತ್ತಲೆ ಫೋಟೋ ಹಾಗೂ ವಿಡಿಯೋಗಳು ಮೊಬೈಲ್‌ಗಳಲ್ಲಿ ಹರಿದಾಡುತ್ತಿರುವ ಬಗ್ಗೆ ಮಾಹಿತಿ ನೀಡಿದಾಗಲೇ ಮಹಿಳೆ ಆಘಾತಕ್ಕೊಳಗಾಗಿದ್ದಾಳೆ. ಜೂನ್ 9ರಂದು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು 10 ಮಂದಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Mangaluru HoneyTrap case: ಸಲಿಂಗಕಾಮದ ವಿಡಿಯೋ ಇಟ್ಟುಕೊಂಡು ಮಂಗಳೂರು ಉದ್ಯಮಿಯಿಂದ ₹2.77 ಕೋಟಿ ಸುಲಿದ ಕಾಂಗ್ರೆಸ್ಸಿಗ!
ಕನಕಗಿರಿಯಲ್ಲಿ ಬೆಚ್ಚಿಬೀಳಿಸುವ ಘಟನೆ: ಮಹಿಳೆ ಮೇಲೆ ಸಾಮೂಹಿಕ ಅತ್ಯಾ*ಚಾರ ಶಂಕೆ, ಬೆಂಕಿ ಹಚ್ಚಿ ಹ*ತ್ಯೆ?