
ಬೆಂಗಳೂರು (ಆ.26): ಕೊಲೆ ಆರೋಪಿಯಾಗಿ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿಯಾಗಿರುವ ದರ್ಶನ್ ಗೆ ವಿವಿಐಪಿ ಟ್ರಿಟ್‌ಮೆಂಟ್ ಬೆನ್ನಲ್ಲೇ ಇಡೀ ರಾಜ್ಯ ಸರ್ಕಾರವನ್ನು ಜನತೆ ಪ್ರಶ್ನೆ ಮಾಡುವಂತಾಗಿದೆ. ಇದರ ಬೆನ್ನಲ್ಲೇ ದರ್ಶನ್ ಜೈಲಿನಲ್ಲಿ ಸಿಗರೇಟ್ ಬಿರಿಯಾನಿ ಊಟ ಸಿಗುತ್ತಿರುವುದು ಹೇಗೆ? ಜೈಲಾಧಿಕಾರಿಗಳ ಪಾತ್ರವೇನು ಎಂದೆಲ್ಲ ಪ್ರಶ್ನೆ ಎದ್ದಿದೆ. ಕೆದಕುತ್ತಾ ಹೊಂದಂತೆ ಒಂದೊಂದೇ ವಿಚಾರಗಳು ಹೊರಬರುತ್ತಿದೆ.
ಜೈಲಾಧಿಕಾರಿಗಳು ಎಷ್ಟು ನಿರ್ಲಕ್ಷ್ಯ ತೋರುತ್ತಿದ್ದಾರೆ ಎನ್ನುವುದಕ್ಕಿಂತ ಖೈದಿಗಳಿಗೆ ಎಷ್ಟು ಬೆಂಬಲ ಸೂಚಿಸುತ್ತಿದ್ದಾರೆ ಎಂಬುದೇ ಶಾಕಿಂಗ್ ಸುದ್ದಿ, ಇದಕ್ಕೆ ನಿದರ್ಶನವಿದೆ. ದರ್ಶನ್ ನ ಐಷಾರಾಮಿ ಜೀವನಕ್ಕೆ ಜೈಲು ಅಧಿಕಾರಿಗಳೇ ಸಾಥ್ ನೀಡುತ್ತಿದ್ದಾರಾ? ವಿಲ್ಸನ್ ಗಾರ್ಡನ್ ನಾಗನ ಅಣತಿ ಮೇರೆಗೆ ಜೈಲಾಧಿಕಾರಿಗಳೇ ದರ್ಶನ್ ಗೆ ಸಾಥ್ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಪೆಷಲ್ ಸೆಲ್ ಬ್ಯಾರಕ್ ನಂ10 ನಲ್ಲಿ ದರ್ಶನ್ ನನ್ನು ಇಡಲಾಗಿದೆ. ದರ್ಶನ್ ಗೆ ವಿಶೇಷ ಸೌಲಭ್ಯ ನೀಡುತ್ತಿದ್ದು ಜೈಲು ಅಧಿಕಾರಿಗಳೇ ಎಂಬುದು ಈಗ ಬಲವಾದ ಅನುಮಾನ.
ಜೈಲಿನಲ್ಲಿ ದರ್ಶನ್ ಐಷಾರಾಮಿ ಜೀವನ: ಪತ್ನಿ ವಿಜಯಲಕ್ಷ್ಮಿಗೆ ಶಾಕ್, ಇಂದು ಭೇಟಿ ಇಲ್ಲ
ಎರಡು ದಿನದ ಹಿಂದೆ ಸಿಸಿಬಿ ಅಧಿಕಾರಿಗಳು ಜೈಲಿನಲ್ಲಿ ರೇಡ್ ಮಾಡಿದ್ದರು. ಇಬ್ಬರು ಎಸಿಪಿಗಳಿಂದ ದರ್ಶನ್ ಮತ್ತು ವಿಲ್ಸನ್ ಗಾರ್ಡನ್ ನಾಗನ ಬ್ಯಾರಕ್ ಪರಶೀಲನೆ ಮಾಡಿದ್ದರು. ಆದರೆ ಪರಿಶೀಲನೆ ನಡೆಸಿ ಮರಳಿ ಬರುವಾಗ ಖಾಲಿ ಕೈನಲ್ಲಿ ಸಿಸಿಬಿ ಅಧಿಕಾರಿಗಳು ವಾಪಸ್ ಆಗಿದ್ದರು. ಆದರೆ ಅನುಮಾನ ಬಂದು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಅಸಲಿ ಮಾಹಿತಿ ಪತ್ತೆಯಾಗಿತ್ತು.
ಬೆಳಗ್ಗೆ ಸುಮಾರು 11:20 ಕ್ಕೆ ಬ್ಯಾರಕ್ ಗೆ ಸಿಸಿಬಿ ಅಧಿಕಾರಿಗಳು ನುಗ್ಗಿದರು. ಬ್ಯಾರಕ್ ಒಳಗೆ ಕಂಪ್ಲೀಟ್ ಶುಚಿ ಆಗಿತ್ತು. ಎಲ್ಲಿ ಏನೂ ಹುಡುಕಿದರೂ ಖಾಲಿ ಖಾಲಿಯಾಗಿ ಕಾಣಿಸಿತು. ಅನುಮಾನಗೊಂಡ ಅಧಿಕಾರಿಗಳು ಸಿಸಿಟಿವಿ ಪರಿಶೀಲನೆ ನಡೆಸಿದರು. ಈ ವೇಳೆ ವಿಲ್ಸನ್ ಗಾರ್ಡನ್ ನಾಗ ಮತ್ತು ದರ್ಶನ್ ಹಾಗೂ ಜೈಲು ಸಿಬ್ಬಂದಿಗಳ ಕಳ್ಳಾಟ ಬಯಲಾಗಿದೆ.
ಜೈಲು ಅವ್ಯವಸ್ಥೆಗೆ ಸಿಎಂ ಕೆಂಡಾಮಂಡಲ, ದರ್ಶನ್ ಗ್ಯಾಂಗ್ ಬೇರೆ ಜೈಲಿಗೆ ಶಿಫ್ಟ್ ಮಾಡಲು ಸಿದ್ದರಾಮಯ್ಯ ಖಡಕ್ ಸೂಚನೆ
ಅಧಿಕಾರಿಗಳು ಚೆಕ್ಕಿಂಗ್ ಗೆ ಬರುತ್ತಾರೆ ಎಂದು ತಿಳಿದ ಜೈಲು ಅಧಿಕಾರಿಗಳು, ಸಿಬ್ಬಂದಿಗಳಿಂದ 10:40 ಕ್ಕೆ ಬ್ಯಾರಕ್ ಕ್ಲೀನ್ ಮಾಡಿಸಿದ್ದಾರೆ. ದರ್ಶನ್ ಮತ್ತು ನಾಗನ ಬ್ಯಾರಕ್ ನಲ್ಲಿದ್ದ ಎಲ್ಲಾ ವಸ್ತುಗಳನ್ನು ಹೊತ್ತು ಹೋಗಿದ್ದಾರೆ. ಗಾರ್ಬೇಜ್ ನೆಪದಲ್ಲಿ ಸಿಬ್ಬಂದಿಗಳು ಅಲ್ಲಿ ಇದ್ದ ಎಲ್ಲಾ ವಸ್ತುಗಳನ್ನು ಹೊತ್ತು ಹೋಗಿದ್ದಾರೆ. ಈ ವಿಚಾರವನ್ನು ಕೂಡಲೇ ಸಿಸಿಬಿ ಅಧಿಕಾರಿಗಳು
ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ದಾಳಿ ನಡೆಸಲು ಪರ್ಮಿಷನ್ ಕೇಳುತ್ತಿದ್ದಂತೆ ಅಲರ್ಟ್ ಆಗಿ, ಕ್ಲೀನ್ ಮಾಡಿಸಿದ್ದರು.
ದರ್ಶನ್‌ಗೆ ದಿನಕ್ಕೊಂದು ಕಡೆಯಿಂದ ಭರ್ಜರಿ ಬಾಡೂಟ:
ಈ ನಡುವೆ ದರ್ಶನ್ ಗೆ ದಿನಕ್ಕೊಂದು ಹೋಟೆಲ್ ಗಳಿಂದ ಬಿರಿಯಾನಿ ಸಪ್ಲೈ ಆಗುತ್ತಿದ್ದು, ಎಂಬ ಮಾಹಿತಿಯೂ ಇದೆ. ವಿಲ್ಸನ್ ಗಾರ್ಡನ್ ನಾಗನಿಂದ ದರ್ಶನ್ ಗೆ ಸಕಲ ಸೌಲಭ್ಯವೂ ಸಿಕ್ಕಿತ್ತು. ಸಿಗರೇಟ್ ಮಾತ್ರವಲ್ಲ ಬಿರಿಯಾನಿ, ಕಬಾಬ್ ಸೇರಿ ದರ್ಶನ್ ಕೇಳಿದ ಊಟವನ್ನು ತರಿಸಿಕೊಡಲಾಗುತ್ತಿತ್ತು.
ವಿಲ್ಸನ್ ಗಾರ್ಡನ್ ನಾಗನಿಗೆ ಪ್ರತಿದಿನ ಆತನ ಸಹಚರರು ಊಟ ಸಪ್ಲೈ ಮಾಡುತ್ತಿದ್ದರು. ತನಗೆಂದು ತರಿಸಿಕೊಳ್ಳುತ್ತಿದ್ದ ನಾನ್ ವೆಜ್ ಊಟವನ್ನು ದರ್ಶನ್ ಗೆ ನಾಗ ನೀಡುತ್ತಿದ್ದ. ದಿನಕ್ಕೊಂದು ಹೋಟೆಲ್ ನಿಂದ ಬೇರೆ ಬೇರೆ ರುಚಿಯ ಊಟ ಸಪ್ಲೈ ಮಾಡಲಾಗುತ್ತಿತ್ತು.
ಬನಶಂಕರಿಯ ಫೇಮಸ್ ಶಿವಾಜಿ ಹೋಟೆಲ್ ಸೇರಿ ಹಲವು ಹೊಟೇಲ್ ನಿಂದ ಸಪ್ಲೈ ಮಾಡಲಾಗುತ್ತಿತ್ತು. ದರ್ಶನ್ ಗೆ ಏನೆಲ್ಲ ಸೌಕರ್ಯ ಸಿಗುತ್ತಿತ್ತು ಎಂಬ ಬಗ್ಗೆ ತನಿಖೆ ಆರಂಭಗೊಂಡಿದೆ. ತನಿಖೆ ವೇಳೆ ದಿನಕ್ಕೊಂದು ಹೊಟೆಲ್ ನಿಂದ ಭರ್ಜರಿ ಊಟದ ವ್ಯವಸ್ಥೆ ಇತ್ತು ಎಂಬುದು ಕೂಡ ಬಯಲಾಗಿದೆ. ಜೈಲು ಸಿಬ್ಬಂದಿಗಳು ಹಣ ಪಡೆದು ವಿಲ್ಸನ್ ಗಾರ್ಡನ್ ನಾಗ, ದರ್ಶನ್ ಸೇರಿ ಹಲವರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದರು ಎನ್ನಲಾಗಿದೆ. ಇದೆಲ್ಲವನ್ನು ಜೈಲು ಅಧಿಕಾರಿಗಳ ಅನುಮತಿ ಇಲ್ಲದೆ ಸಾಧ್ಯವೇ ಇಲ್ಲ.
ಜೈಲು ನಿಯಮಗಳು ಏನ್ ಹೇಳುತ್ತೆ?
ಅಧಿಕಾರಿಗಳ ಕೆಲಸವೇನು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ