ಜೈಲಿನಲ್ಲಿ ದರ್ಶನ್ ಐಷಾರಾಮಿ ಜೀವನ: ಪತ್ನಿ ವಿಜಯಲಕ್ಷ್ಮಿಗೆ ಶಾಕ್, ಇಂದು ಭೇಟಿ ಇಲ್ಲ

By Suvarna NewsFirst Published Aug 26, 2024, 1:17 PM IST
Highlights

ಕೊಲೆ ಆರೋಪಿ ದರ್ಶನ್ ಜೈಲಿನಲ್ಲಿ ರೌಡಿಗಳ ಜೊತೆ ಐಷಾರಾಮಿ ಜೀವನ ನಡೆಸುತ್ತಿರುವ ಫೋಟೋ ಲೀಕ್ ಆಗಿರುವುದು ಪತ್ನಿ ವಿಜಯಲಕ್ಷ್ಮಿಗೆ ಆಘಾತ ತಂದಿದೆ.

ಬೆಂಗಳೂರು (ಆ.26): ರೇಣುಕಾಸ್ವಾಮಿ ಕೊಲೆ ಆರೋಪಿಯಾಗಿ ಪರಪ್ಪನ ಅಗ್ರಹಾರದಲ್ಲಿ  ವಿಚಾರಣಾಧೀನ ಕೈದಿಯಾಗಿರುವ ದರ್ಶನ್‌ ರಾಜಾತಿಥ್ಯದ ಜೊತೆಗೆ ರೌಡಿಗಳ ಜೊತೆಯಲ್ಲಿರುವ  ಫೋಟೋ ಮತ್ತು ವಿಡಿಯೋ ಲೀಕ್ ಆಗಿ ಮಾಧ್ಯಮಗಳಲ್ಲಿ ಪ್ರಸಾರವಾದ ಬೆನ್ನಲ್ಲೇ  ಪತ್ನಿ ವಿಜಯಲಕ್ಷ್ಮಿಗೆ ಭಾರೀ ಮುಜುಗರ ಜೊತೆಗೆ ಶಾಕ್ ಕೂಡ ಆಗಿದೆ.

ಪರಪ್ಪನ ಅಗ್ರಹಾರ ಜೈಲಿನಿಂದ ಗಂಡನ ಪೋಟೋ ಲೀಕ್ ಹಿನ್ನೆಲೆ ಇಂದು ದರ್ಶನ್ ಭೇಟಿಗೆ ಪತ್ನಿ ಬರಲ್ಲ. ಪ್ರತಿ ಸೋಮವಾರ ಗಂಡನನ್ನು ಭೇಟಿ ಮಾಡಲು ವಿಜಯಲಕ್ಷ್ಮಿ ಜೈಲಿಗೆ ಬರ್ತಿದ್ದರು. ಆದರೆ ಮಾಧ್ಯಮಗಳಲ್ಲಿ ದರ್ಶನ್ ಐಷಾರಾಮಿ ಲೈಫ್ ವರದಿ ಹಿನ್ನೆಲೆ ಇಂದು ಜೈಲಿಗೆ ಬರುವುದು ಬಹುತೇಕ ಡೌಟ್ ಎನ್ನಲಾಗಿದೆ.

Latest Videos

ಜೈಲು ಅವ್ಯವಸ್ಥೆಗೆ ಸಿಎಂ ಕೆಂಡಾಮಂಡಲ, ದರ್ಶನ್ ಗ್ಯಾಂಗ್‌ ಬೇರೆ ಜೈಲಿಗೆ ಶಿಫ್ಟ್‌ ಮಾಡಲು ಸಿದ್ದರಾಮಯ್ಯ ಖಡಕ್‌ ಸೂಚನೆ

ದರ್ಶನ್ ಸರಿ ಹೋಗುತ್ತಾರೆ ನೆಮ್ಮದಿ ಆಗುತ್ತಿದೆ ಅಂದುಕೊಂಡಿದ್ದ ವಿಜಯಲಕ್ಷ್ಮಿಗೆ ಜೈಲಿನಲ್ಲಿ ದರ್ಶನ್‌ ಇರುವ ಫೋಟೋ ಲೀಕ್ ಆಗಿರುವುದು ಶಾಕ್‌ ತಂದಿದೆ. ಪತಿ ಬದಲಾಗುವ ಲಕ್ಷಣಗಳೇ ಇಲ್ಲ ಎನ್ನುವ ಆತಂಕ ವಿಜಯಲಕ್ಷ್ಮಿಗೆ ಕಾಡುತ್ತಿದೆ.

ದರ್ಶನ್ ಜೈಲಿನಿಂದಲೇ ವಿಡಿಯೋ ಕಾಲ್ ಮೂಲಕ ಕುಟುಂಬಸ್ಥರೊಂದಿಗೆ ಮಾತನಾಡುತ್ತಿರುವ, ಆಪ್ತರ ಜೊತೆಯೂ ಮಾತನಾಡುತ್ತಿರುವ ಫೋಟೋ, ವಿಡಿಯೋ ಏಷಿಯಾನೆಟ್ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ.

ಜೈಲಲ್ಲಿ ದರ್ಶನ್‌ಗೆ ವಿಐಪಿ ಟ್ರೀಟ್‌ಮೆಂಟ್: ಮತ್ತೊಂದು ಫೋಟೋ ವೀಡಿಯೋ ವೈರಲ್ 

ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಕಾನೂನು ಸುವ್ಯವಸ್ಥೆ ಸರಿಯಿಲ್ಲ:
ಇನ್ನು ದರ್ಶನ್ ವಿಚಾರದಲ್ಲಿ ಮಾಜಿ‌ ಡಿಸಿಎಂ ಅಶ್ವಥ್ ನಾರಾಯಣ ಹೇಳಿಕೆ ನೀಡಿದ್ದಾರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಕಾನೂನು ಸುವ್ಯವಸ್ಥೆ ಸರಿಯಿಲ್ಲ. ನಾಡಿನ‌ ಕಾನೂನನ್ನು ಕಾಪಾಡಬೇಕಾದ ಮಂತ್ರಿಗಳಿಂದ ಕಾನೂನಿಗೆ ಬೆಲೆಯಿಲ್ಲ. ರಾಜ್ಯದಲ್ಲಿ ಕಾನೂನು ವ್ಯವಸ್ಥೆನೇ ಇಲ್ಲ. ಸರ್ಕಾರ ವಜಾ ಆಗಬೇಕು. ಕಾಂಗ್ರೆಸ್ ನವರು ಭಂಡರು, ಡಿಜಿಪಿಯವರನ್ನು ಕೇಳಬೇಕು ನಿಮ್ಮ ಡಿಪಾರ್ಟ್ಮೆಂಟ್ ಬದುಕಿದೆಯಾ. ಡಿಜಿಪಿಯವರಿಗೆ ಆತ್ಮಸಾಕ್ಷಿ ಇದೆಯಾ. ರಾಷ್ಟ್ರ ಮಟ್ಟದಲ್ಲಿ ಸರ್ಕಾರ ವಜಾ ಮಾಡಲು ಆಗ್ರಹ ಮಾಡ್ತೇವೆ. ರಾಹುಲ್ ಗಾಂಧಿ,ಖರ್ಗೆ ಬದುಕಿದ್ದಾರಾ. ಕಾಂಗ್ರೆಸ್ ಡಿಎನ್ಎ ಯಲ್ಲಿ ಭಂಡತನವಿದೆ. ಮುಖ್ಯಮಂತ್ರಿಗಳೇ ಭ್ರಷ್ಟರು, ನಾಚಿಗೆಟ್ಟ ಸರ್ಕಾರ ಇದು ಎಂದು ಜರಿದಿದ್ದಾರೆ.

ಇನ್ನು ಈಗಾಗಲೇ ಜೈಲಾಧಿಕಾರಿಗಳಲ್ಲಿ ಏಳು ಮಂದಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದ್ದು, ದರ್ಶನ್ ಮತ್ತು ಗ್ಯಾಂಗ್ ಅನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವಂತೆ ಜೊತೆಗೆ ಜೈಲಿನಲ್ಲಿ ದರ್ಶನ್ ಗೆ ಸಹಾಯ ಮಾಡಿರುವ ವಿಲ್ಸನ್ ಗಾರ್ಡನ್  ನಾಗಾ ಸೇರಿ  ರೌಡಿ ಗ್ಯಾಂಗ್ ಅನ್ನು ಬೇರೆ  ಜೈಲಿಗೆ ಸ್ಥಳಾಂತರಿಸುವಂತೆ ಸಿಎಂ ಸಿದ್ದರಾಮಯ್ಯ ಖಡಕ್‌  ಸೂಚನೆ ನೀಡಿದ್ದಾರೆ. ಹೀಗಾಗಿ ಬೇರೆ ಜೈಲು ಎಂದರೆ ಬಳ್ಳಾರಿ ಕೇಂದ್ರ ಕಾರಾಗೃಹ, ಬೆಳಗಾವಿ ಹಿಂಡಲಗಾ  ಜೈಲು ಅಥವಾ ಬೇರೆ ಯಾವ  ಜೈಲಿಗೆ ಶಿಫ್ಟ್ ಮಾಡಬಹುದು ಎಂಬುದನ್ನು ಕಾದು ನೋಡಬೇಕಿದೆ. ಒಂದು ವೇಳೆ ದರ್ಶನ್ ಶಿಪ್ಟ್ ಆದರೆ ಪತ್ನಿಗೆ ಭೇಟಿ ಇನ್ನಷ್ಟು ಕಷ್ಟವಾಗಲಿದೆ.

 

click me!