ನಿನಗೆ ಬರುವ 20,000 ಸಂಬಳದಲ್ಲಿ ಪವಿತ್ರಾಗೌಡಳನ್ನ ಮೆಂಟೇನ್ ಮಾಡಲು ಸಾಧ್ಯನಾ?: ರೇಣುಗೆ ಬೈದು ಹಲ್ಲೆ ಮಾಡಿದೆ, ದರ್ಶನ್‌

By Kannadaprabha News  |  First Published Sep 10, 2024, 6:46 AM IST

ನಿನಗೆ ಬರುವ 20 ಸಾವಿರ ರು. ಸಂಬಳದಲ್ಲಿ ಇವಳನ್ನು (ಪವಿತ್ರಾಗೌಡ) ಮೆಂಟೇನ್ ಮಾಡಲು ಸಾಧ್ಯನಾ? ಇದೆಲ್ಲ ನಿನಗೆ ಬೇಕಾ? ಇತರೆ ನಟಿಯರಿಗೂ ಮೆಸೇಜ್ ಮಾಡಿದ್ದೀಯಲ್ಲ' ಎಂದು ಬೈದು ಚಿತ್ರದುರ್ಗದ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾಗಿಯೂ ತಪ್ಪೊಪ್ಪಿಗೆ ಹೇಳಿಕೆ ನೀಡಿದ ನಟ ದರ್ಶನ್‌


ಬೆಂಗಳೂರು(ಸೆ.10):  ಪವಿತ್ರಾಗೌಡಳಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕೆ ಪಟ್ಟಣಗೆರೆ ಯಾರ್ಡ್‌ನಲ್ಲಿ ರೇಣುಕಾಸ್ವಾಮಿಗೆ ಕಾಲಿನಿಂದ ಒದ್ದು, ಕೈಯಿಂದ ಗುದ್ದಿ ಮನೆಗೆ ಮರಳಿದೆ. ಕೆಲ ಹೊತ್ತಿನ ಬಳಿಕ ರೇಣುಕಾಸ್ವಾಮಿ ಮೃತಪಟ್ಟಿದ್ದಾನೆ ಎಂಬುದು ಗೊತ್ತಾಯಿತು. ನಾನು ಯಾರ್ಡ್‌ನಿಂದ ಬರುವಾಗ ಆತ ಚೆನ್ನಾಗಿಯೇ ಇದ್ದ' ಎಂದು ನಟ ದರ್ಶನ್ ತಪ್ರೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಅಲ್ಲದೆ ಪರಿಸ್ಥಿತಿ ನಿಭಾಯಿಸಲು ಪ್ರದೂಷ್ ಕೇಳಿದ್ದಕ್ಕೆ 30 ಲಕ್ಷ ರು. ಹಣ ಹಾಗೂ ವಿನಯ್ ಗೆ 10 ಲಕ ರು. ಹಣವನ್ನು ಮನೆಯಿಂದಲೇ ಕೊಟ್ಟಿದ್ದೇನೆ. ಈ ಹಣ ನನಗೆ ನಿರ್ಮಾಪಕರು ಕೊಟ್ಟಿದ್ದರು ಎಂದು ದರ್ಶನ್ ತಿಳಿಸಿದ್ದಾರೆ. 

'ನಿನಗೆ ಬರುವ 20 ಸಾವಿರ ರು. ಸಂಬಳದಲ್ಲಿ ಇವಳನ್ನು (ಪವಿತ್ರಾಗೌಡ) ಮೆಂಟೇನ್ ಮಾಡಲು ಸಾಧ್ಯನಾ? ಇದೆಲ್ಲ ನಿನಗೆ ಬೇಕಾ? ಇತರೆ ನಟಿಯರಿಗೂ ಮೆಸೇಜ್ ಮಾಡಿದ್ದೀಯಲ್ಲ' ಎಂದು ಬೈದು ಚಿತ್ರದುರ್ಗದ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾಗಿಯೂ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.

Latest Videos

undefined

ಸ್ನೇಹಿತೆಯ ಬರ್ತಡೇ ಪಾರ್ಟಿಯಲ್ಲಿ ವಿಜಯಲಕ್ಷ್ಮೀ ದರ್ಶನ್; ಇಷ್ಟೇ ಕಣ್ರೋ ಜೀವನ ಎಂದ ನೆಟ್ಟಿಗರು!

ಕೊಲೆ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ದರ್ಶನ್‌ರವರ 8 ಪುಟಗಳ ತಪೊಪಿಗೆ ಹೇಳಿಕೆ ದಾಖಲಾಗಿದ್ದು, ಈ ಹೇಳಿಕೆ ಸೋಮವಾರ ಬಹಿರಂಗವಾಗಿ, ಚರ್ಚೆಗೆ ಕಾರಣವಾಗಿದೆ. ಅಲ್ಲದೆ, ನಾನು ಹಲ್ಲೆ ನಡೆಸಿ ಶೆಡ್‌ನಿಂದ ತೆರಳಿದೆ. ಮರುದಿನ ಮೈಸೂರಿಗೆ ಹೋದ ಮೇಲೆ ರೇಣುಕಾಸ್ವಾಮಿಗೆ ಪವನ್, ಧನರಾಜ್ ಹಾಗೂ ನಂದೀಶ ಕರೆಂಟ್ ಶಾಕ್ ಕೊಟ್ಟಿದಲ್ಲದೆ ನೆಲಕ್ಕೆ ಕುಕ್ಕಿ ಹಲ್ಲೆ ಮಾಡಿದಸಂಗತಿಗೊತ್ತಾಯಿತು ಎಂದೂ ಅವರು ಹೇಳಿದ್ದಾರೆ. 203 ಕೊಲೆ ಪ್ರಕರಣದಲ್ಲಿ ನೀವು ನಿಶ್ಚಿಂತೆಯಿಂದ ಇರಿ ಎಂದು ನಾಗರಾಜ್ ಹಾಗೂ ಪ್ರದೂಷ್ ಹೇಳಿದ್ದರು. ಅಂದು ಶೆಡ್‌ಗೆ ತೆರಳುವ ಮುನ್ನ ನನ್ನೊಂದಿಗೆ ರೆಸ್ಟೋರೆಂಟ್‌ನಲ್ಲಿದ್ದ ನಟರಾದ ಚಿಕ್ಕಣ್ಣ ಹಾಗೂ ಯಶಸ್ ಸೂರ್ಯನನ್ನು ನಾನು ಮನೆಗೆ ಕಳುಹಿಸಿದ್ದೆ ಎಂದಿದ್ದಾರೆ. ತಪ್ರೊಪ್ಪಿಗೆ ಹೇಳಿಕೆ ವಿವರ ಹೀಗಿದೆ: ಕನ್ನಡ ಚಿತ್ರರಂಗದಲ್ಲಿ ನಟನಾಗಿ ಮತ್ತು ಇತರೆ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದೇನೆ. 2011ರಲ್ಲಿ ನನ್ನ ವಿರುದ್ಧ ಪತ್ನಿ ವಿಜಯಲಕ್ಷ್ಮೀ ನೀಡಿದ್ದ ದೂರಿನ ಮೇರೆಗೆ ದಾಖಲಾಗಿದ್ದ ಪ್ರಕರಣ ಖುಲಾಸೆಯಾಗಿದೆ. ಹೊಸಕೆರೆಯಲ್ಲಿ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿ ವಿಜಯಲಕ್ಷ್ಮೀ ಹಾಗೂ ಮಗ ವಿನೀಶ್ ಜತೆ ವಾಸವಾಗಿದ್ದೇನೆ. ಮದುವೆಯಾಗಿ 22 ವರ್ಷಗಳಾಗಿದ್ದು, ಮೇ 19ಕ್ಕೆ ವಿವಾಹ ವಾರ್ಷಿಕೋತ್ಸವದ ಆಚರಣೆಗೆ ದುಬೈಗೆ ಹೋಗಿದ್ದೆವು. 10 ವರ್ಷಗಳಿಂದ ಪವಿತ್ರಾ ಜತೆ ಲಿವ್ ಇನ್ ರಿಲೇಷನ್ ಇದೆ. 

ಎರಡು ಮನೆಗಳಲ್ಲಿ 10 ವರ್ಷಗಳಿಂದ ಪವನ್ ಕೆಲಸ ಮಾಡುತ್ತಿದ್ದ, ನಂದೀಶ್ ನನ್ನ ಅಭಿಮಾನಿಯಾಗಿದ್ದು, 15 ವರ್ಷಗಳಿಂದ ಮೂರ್ನಾಲ್ಕು ವರ್ಷಗಳಿಂದ ಪಟ್ಟಣಗೆರೆ ವಿನಯ್ ಸ್ನೇಹಿತರಾಗಿದ್ದು, ಆಗಾಗ್ಗೆ ನಮ್ಮ ಮನೆಗೆ ಬಂದು ಹೋಗುತ್ತಿದ್ದರು. ಮೈಸೂರಿನ ಲ್ಲಿರುವ ನನ್ನ ಫಾರ್ಮ್ ಹೌಸ್ ಅನ್ನು ನಾಗರಾಜ್ ನೋಡಿಕೊಳ್ಳುತ್ತಿದ್ದ. ದೀಪಕ್ ಎಂಬಾತ ವಿನಯ್‌ಗೆ ಸ್ನೇಹಿತನಾಗಿದ್ದು, ಆತ ಸಹ ನನ್ನ ಅಭಿಮಾನಿಯಾಗಿದ್ದ. ಇನ್ನು ನನಗೆ 16 ವರ್ಷಗಳಿಂದ ಪ್ರದೂಷ್ ಪರಿಚಯವಿದೆ. ರಾಘವೇಂದ್ರ ನನ್ನ ಅಭಿಮಾನಿಗಳ ಸಂಘದ ಚಿತ್ರದುರ್ಗದ ಅಧ್ಯಕ್ಷನಾಗಿದ್ದ. ಔಟ್ ಮುಗಿಸಿ ಮನೆಯಲ್ಲೇ ಇದ್ದೆ. ಆಗ ಮಧ್ಯಾಹ್ನ 12.30ರ ಸುಮಾರಿಗೆ ಪ್ರದೂಷ್ ರೆಸ್ಟೋರೆಂಟ್‌ಗೆ ತೆರಳಿದೆ. ಅಲ್ಲಿಗೆ ವಿನಯ್, ನಟರಾದ ಯಶಸ್ ಸೂರ್ಯ ಹಾಗೂ ಚಿಕ್ಕಣ್ಣ ಬಂದರು. ಹಾಗೂ ನಾಗರಾಜ್ ಜತೆ ಸೋನಿ ಬ್ರೂಕ್ - ಮಧ್ಯಾಹ್ನ ಸುಮಾರು 3 ಗಂಟೆಗೆ ಪವನ್ ನನ್ನ ಬಳಿ ಬಂದು ತನ್ನ ಮೊಬೈಲ್ ತೋರಿಸಿ ಯಾವನೋ ಒಬ್ಬ "Gautham ಹೆಸರಿನ ಇನ್ ಸ್ನಾ ಖಾತೆಯಿಂದ ಪವಿತ್ರಕ್ಕನಿಗೆ ಸುಮಾರು ದಿನಗಳಿಂದ ಖಾಸಗಿ ಅಂಗಾಂಗಗಳ ಚಿತ್ರ ಕಳುಹಿಸುತ್ತಿದ್ದ. ನಿನ್ನ ರೇಟೆಷ್ಟು, ನಾನು ರೂಂ ಮಾಡುತ್ತೇನೆ. ನೀನು ಬಾ. ನಾನು ದರ್ಶನ್ ಗಿಂತ ಚೆನ್ನಾಗಿದ್ದೇನೆ ಇತ್ಯಾದಿಯಾಗಿ ಮೆಸೇಜ್ ಗಳನ್ನು ಮಾಡಿದ್ದ ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬಾತನನ್ನು ರಾಘವೇಂದ್ರ ಮತ್ತು ಆತನ ಸ್ನೇಹಿತರು ಕಿಡ್ತಾಪ್ ಮಾಡಿಕೊಂಡು ಬಂದು ಪಾರ್ಕಿಂಗ್ ಶೆಡ್‌ ನಲ್ಲಿಟ್ಟಿದ್ದಾರೆ ಎಂದು ಆಗ ನಾನು ಪವಿತ್ರಾಗೆ ಕಾಲ್ ಮಾಡಿ ಮಾತನಾಡಿ ಯಾರ್ಡ್‌ಗೆ ಹೋಗಿ ನಿನಗೆ ಮೆಸೇಜ್ ಮಾಡುತ್ತಿದ್ದವನನ್ನು ಸರಿಯಾಗಿ ವಿಚಾರಿಸಿಕೊಂಡು ಬರೋಣ ಎಂದು ಹೇಳಿದೆ. ಆಗ ಜೊತೆಯಲ್ಲಿದ್ದ ಚಿಕ್ಕಣ್ಣ ಮತ್ತು ಯಶಸ್ ಸೂರ್ಯಗೆ ನೀವು ಮನೆಗೆ ಹೊರಡಿ ಎಂದು ಹೇಳಿ ಕಳುಹಿಸಿದೆ. ಬಳಿಕ ಪ್ರದೂಷ್‌ನ ಸ್ಥಾರ್ಪಿಯೋದಲ್ಲಿ ಪವಿತ್ರಾಳನ್ನು ಕರೆದುಕೊಂಡು ತೆರಳಿದೆವು. ನಾನು ಕಾರಿನಿಂದಿಳಿದಾಗ ಪದನ್ ಬಂದು, ವಾಹನದ ಬಂಪರ್ ಮೇಲೆ ಕುಳಿತಿದ್ದ ವ್ಯಕ್ತಿಯನ್ನು ತೋರಿಸಿ ಆತನೇ ಪವಿತ್ರಕ್ಕನಿಗೆ ಮೆಸೇಜ್ ಮಾಡಿದ್ದು ಎಂದನು. ಅಲ್ಲಿ ರಘು, ದೀಪು, ನಂದೀಶ್ ಇದ್ದರು. ಅಷ್ಟರಲ್ಲಾಗಲೇ ಆತ ಆಯಾಸ ಗೊಂಡವನಂತೆ ಕಂಡ ನಾನು ಬರುವ ಮೊದಲು ಆತನಿಗೆ ಹೊಡೆದಂತೆ ಕಂಡುಬಂತು. -ನಾನುಆತನಿಗೆ ಮೆಸೇಜ್ ಕಳುಹಿಸಿರುವುದು ನೀನೇನಾ ಎಂದು ಕೇಳಿದೆ. ಅದಕ್ಕೆ ಹೌದುನಾನೇ ಎಂದ. ಇದು ನಿನಗೆ ಬೇಕಾ? ನಿನ್ನ ಸಂಬಳ ಎಷ್ಟು ಎಂದೆ. 20 ಸಾವಿರ ರು. ಎಂದು ಹೇಳಿದ, ನಿನಗೆ ತಿಂಗಳಿಗೆ 20 ಸಾವಿರ ಸಂಬಳ, ನನ್ನ ಮಗನೇ ನೀನು ಇವಳನ್ನು ಮೆಂಟೇನ್ ಮಾಡಲು ಸಾಧ್ಯನಾ? ಈ ರೀತಿ ಕೆಟ್ಟದಾಗಿ ಮೆಸೇಜ್ ಮಾಡಿದ್ದೀಯಲ್ಲ ಎಂದಿದ್ದಕ್ಕೆ ಆತ ಏನೂ ಮಾತನಾಡಲಿಲ್ಲ. ಆಗ ನಾನು ಆತನಿಗೆ ಕೈಯಿಂದ ಹೊಡೆದು, ಕಾಲಿನಿಂದ ತಲೆ, ಎದೆಗೆ ಒದ್ದೆ. ಅಲ್ಲೇ ಮರದ ಕೊಂಬೆ ಕಿತ್ತು ಹೊಡೆದೆ. ಕೈನಿಂದ ಗುದ್ದಿದೆ. ಕಾರಿನಲ್ಲಿ ಕುಳಿತಿದ್ದ ಪವಿತ್ರಾಳನ್ನು ಕರೆಸಿದೆ. ನೋಡು ನೀನು ಮೆಸೇಜ್ ಮಾಡುತ್ತಿದ್ದಿದ್ದು ಇವಳಿಗೇ ಎಂದು ತೋರಿಸಿದೆ. ಆಗ ಚಪ್ಪಲಿಯಿಂದ ಪವಿತ್ರಾ ಹೊಡೆದಳು. ಆಕೆಯ ಕಾಲಿಗೆ ಬಿದ್ದು ಕ್ಷಮೆ ಕೋರುವಂತೆ ಹೇಳಿದೆ. ಆತ ಕಾಲಿಗೆ ಬಿದ್ದಾಗ ಪವಿತ್ರಾ ಹಿಂದೆ ಸರಿದಳು. ನಂತರ ಆಕೆಯನ್ನು ನನ್ನ ಕಾರು ಚಾಲಕ ಲಕ್ಷ್ಮಣ್ ಸಹ ರೇಣುಕಾಸ್ವಾಮಿಗೆ ಹೊಡೆದನು. ಆತನನ್ನು ನಂದೀಶ್ ಕುಕ್ಕಿದ. ನಾನು ಪವನ್‌ಗೆ ಇವನು ಇನ್ನೂ ಯಾರ್ಯಾರಿಗೆ ಈ ರೀತಿ ಕೆಟ್ಟ ಮೆಸೇಜ್ ಗಳನ್ನು ಕಳುಹಿಸಿದ್ದಾನೆಂದು ನೋಡುವಂತೆ ಹೇಳಿದೆ. ಆಗ ಆತನ ಮೊಬೈಲ್ ತೆಗೆದುಕೊಂಡು ಇನ್ನೂ ಅನೇಕ ಚಲನಚಿತ್ರ ನಟಿಯರಿಗೂ ಸಹ ಫೋಟೋ ಕಳುಹಿಸಿ ಮೆಸೇಜ್ ಮಾಡಿರುವ ಬಗ್ಗೆ ಪವನ್ ತೋರಿಸಿದ. ಆಗ ನಾನು ಅವನಿಗೆ ಹಲ್ಲೆ ಬಳಿಕ ಸೆಲ್ಸಿ! ರೇಣುಕಾಸ್ವಾಮಿ ಮೇಲೆ ಶೆಡ್‌ನಲ್ಲಿ ಹಲ್ಲೆ ಬೈದು ಕಾಲಿನಿಂದ ಒಂದೆರಡು ಬಾರಿ ಒದ್ದೆ. - ವಿನಯ್ ಜತೆ ಜೀಪಿನಲ್ಲಿ ಮನೆಗೆ ಮರಳಿದೆ. ರಾತ್ರಿ 7.30ರಲ್ಲಿ ಪ್ರದೂಷ್ ಮನೆಗೆ ಬಂದು ರೇಣುಕಾಸ್ವಾಮಿ ಮೃತಟ್ಟಿರುವ ಸಂಗತಿ ತಿಳಿಸಿದ. ಆಗ ಏನಾಯ್ತು ಎಂದು ಕೇಳಿ, ನಾವು ಬರುವ ಸಮಯದಲ್ಲಿ ಆತ ಚೆನ್ನಾಗಿದ್ದ ಎಂದೆ. ಕೂಡಲೇ ಶೆಡ್‌ಗೆ ಮತ್ತೆ ಪ್ರದೂಷ್, ವಿನಯ್ ಹಾಗೂ ಲಕ್ಷ್ಮಣ್ ಹೋಗಿ ನೋಡಿದರು. ರಾತ್ರಿ 9 ಗಂಟೆಗೆ ಮತ್ತೆ ಪ್ರದೂಷ್ ಮನೆಗೆ ಬಂದು ರೇಣುಕಾಸ್ವಾಮಿ ಸಾವು ಖಚಿತಪಡಿಸಿದ, ಇದನ್ನು ನಾನು ಹ್ಯಾಂಡಲ್ ಮಾಡುತ್ತೇನೆ 30 ಲಕ ರು. ಕೊಡುವಂತೆ ಪ್ರದೂಷ್ ಕೇಳಿದ. ನಾನು ಆತನಿಗೆ ಹಣ ಕೊಟ್ಟೆ, ಇದಾದ ನಂತರ ವಿನಯ್ ಬಂದು 10 ಲಕ್ಷ ರು. ಪಡೆದ. ಮರುದಿನ (ಭಾನುವಾರ) ನಾನು ಶೂಟಿಂಗ್ ಸಲುವಾಗಿ ಮೈಸೂರಿಗೆ ತೆರಳಿದೆ. ಮಾಡಿದ ಬಳಿಕ ದರ್ಶನ್ ಶೆಡ್‌ ಗೇಟ್ ಬಳಿ ಚಿತ್ರದುರ್ಗದ ಅಭಿಮಾನಿಗಳ ಜತೆಗೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ ಬಳಿಕ ನಾನು ಮತ್ತು ವಿನಯ್ ಮನೆಗೆ ತೆರಳುವಾಗ ಶೆಡ್ ಗೇಟ್ ಬಳಿ ಕಾರು ಹತ್ತಲು ಬಂದೆವು. ಆಗ ಚಿತ್ರದುರ್ಗದ ಹುಡುಗರು ಗೇಟ್ ಬಳಿ ನಿಂತಿದ್ದರು. ಅಣ್ಣಾ ಒಂದು ಫೋಟೋ ಎಂದು ಕೇಳಿ ದರು. ಬಳಕ ಅವರ ಜತೆಗೆ ಒಂದು ನಾನು ಮತ್ತು ವಿನಯ್ ಹೊರಟು ಹೋದೆವು ಎಂದು ದರ್ಶನ್ ತನಿಖಾಧಿ ಕಾರಿ ಎದುರು ಹೇಳಿಕೆ ನೀಡಿದ್ದಾರೆ. - ನನಗೆ ಕರೆ ಮಾಡಿ ನೀವೇನೂ ಟೆನ್ಸನ್ ತಗೋಬೇಡಿ. ಕೆಲಸಕ್ಕೆ ಹೋಗಿ ಎಂದು ನಾಗರಾಜ ಹಾಗೂ ಪ್ರದೂಷ್ ಹೇಳಿದರು. ಅಂತೆಯೇ ನಾನು ಮೈಸೂರಿಗೆ ಹೋದೆ. ಇದಾದ ಸೋಮವಾರ ರಾತ್ರಿ ಸುಮಾರು 9 ಗಂಟೆಗೆ ನಾನು ಮೈಸೂರಿನಲ್ಲಿ ಹೋಟೆಲ್ ನಲ್ಲಿದ್ದಾಗ ಪ್ರದೂಷ್, ನಾಗರಾಜು ಹಾಗೂ ವಿನಯ್ ಭೇಟಿಯಾದರು. ಆಗ ನನಗೆ ರೇಣುಕಾಸ್ವಾಮಿಗೆ ಧನರಾಜ್ ಕರೆಂಟ್ ಶಾಕ್ ನೀಡಿದ್ದು ಹಾಗೂ ಪವನ್ ಹಲ್ಲೆ ಮಾಡಿದ್ದು, ನಂದೀಶನು ರೇಣುಕಾಸ್ವಾಮಿಯನ್ನು ಎತ್ತಿ ಕುಕ್ಕಿದಬಗ್ಗೆ ತಿಳಿಸಿದರು. ನಾವೇಯಾರಿಗಾದರೂ ಹಣ ನೀಡಿ, ಫಿಕ್ಸ್ ಮಾಡುತ್ತೇವೆ ಎಂದು ಹೇಳಿ ದರು. ಮರುದಿನ ಹೋಟೆಲ್‌ಗೆ ಬಂದು ಪೊಲೀಸರು ನನ್ನನ್ನು ಕರೆದುಕೊಂಡು ಬಂದರು.

ದರ್ಶನ್‌ ತಪ್ಪೊಪ್ಪಿಗೆ 

10 ವರ್ಷದಿಂದ ಪವಿತ್ರಾ ಜತೆ ಲಿವ್‌ ಇನ್‌

ಕಳೆದ ವರ್ಷಗಳಿಂದ ಪವಿತ್ರಾಗೌಡಳ ಜತೆ ಲಿವ್ ಇನ್‌ ರಿಲೇಷನ್‌ನಲ್ಲಿದ್ದು, ಆರ್‌.ಆರ್‌.ನಗರದ ನನ್ನ ಮನೆಯಿಂದ ಒಂದೂವರೆ ಕಿ.ಮೀ. ದೂರದಲ್ಲಿ ನೆಲೆಸಿದ್ದಾಳೆ. ನನ್ನ ಹಾಗೂ ಪವಿತ್ರಾ ಮನೆಯಲ್ಲಿ ಪವನ್ ಕೆಲಸ ಮಾಡುತ್ತಿದ್ದ ಎಂದು ದರ್ಶನ್‌ ಹೇಳಿದ್ದಾರೆ. 

ನನ್ನ ಮೊಬೈಲ್‌ ಯಾರೋ ಕೊಟ್ಟ ಗಿಫ್ಟ್‌

ನಾನು ಬಳಸುತ್ತಿರುವ ಐ-ಫೋನ್ ಪ್ರೋಮ್ಯಾಕ್ಸ್ 15 ಮೊಬೈಲನ್ನು ಸುಮಾರು 7-9 ತಿಂಗಳ ಹಿಂದೆ ಬೆಂಗಳೂರಿನಲ್ಲಿ ಯಾರೋ ಸ್ನೇಹಿತರು ಗಿಫ್ಟ್ ನೀಡಿದ್ದರು. ಯಾರು ಎಂದು ನನಗೆ ಸರಿಯಾಗಿ ನೆನಪಿಲ್ಲ... ನಾನು ಈ ಹಿಂದೆ ಪಟ್ಟಣಗೆರೆಯಲ್ಲಿರುವ ಜಯಣ್ಣ ಅವರ ಶೆಡ್‌ಗೆ ಎರಡು ಬಾರಿ ತೆರಳಿದ್ದೆ. ಒಮ್ಮೆ ಕ್ರಾಂತಿ ಸಿನಿಮಾದ ಶೂಟಿಂಗ್‌ಗಾಗಿ ಹಾಗೂ ಇದೇ ಚಿತ್ರದ ರಿಹರ್ಸಲ್‌ ಟೈಮ್‌ನಲ್ಲಿ ಇಂಟ‌ರ್‌ವ್ಯೂ ವೇಳೆ ಹೋಗಿದ್ದೆ ಎಂದು ದರ್ಶನ್‌ ಹೇಳಿದ್ದಾರೆ.
ನಾನು ದಿನನಿತ್ಯ ಮನೆಯಿಂದ ಹೊರಗೆ ಹೋಗಬೇಕಾದರೆ, ನಮ್ಮ ಮನೆಯ ಹತ್ತಿರದ ಬಿಬಿಎಂಪಿ ಆಫೀಸ್ ಹಿಂದೆ ಇರುವ ವೆಂಕಟೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕಾರ್ ನಿಲ್ಲಿಸಿ ಕಾರ್‌ನಲ್ಲಿ ಕುಳಿತುಕೊಂಡೇ ನಮಸ್ಕಾರ ಮಾಡಿ ಹೊರಡುತ್ತೇನೆ ಎಂದೂ ತಿಳಿಸಿದ್ದಾರೆ.

ಸೌಂದರ್ಯ ಜಗದೀಶ್‌ರಿಂದ 1.75 ಕೋಟಿ ರು. ಸಾಲ

ನನಗೆ 10 ವರ್ಷಗಳಿಂದ ಜೆಟ್ ಲ್ಯಾಗ್‌ ಪಬ್‌ ಮಾಲಿಕ ಸೌಂದರ್ಯ ಜಗದೀಶ್ ಪರಿಚಿತರು. ಈ ಸ್ನೇಹದಲ್ಲೇ 2018ರಲ್ಲಿ ಮನೆ ಖರೀದಿಸುವ ಸಲುವಾಗಿ ಪವಿತ್ರಾಗೌಡಳಿಗೆ ಜಗದೀಶ್ ಅವರಿಂದ 1.75 ಕೋಟಿ ರು. ಸಾಲ ಕೊಡಿಸಿದ್ದೆ. ಈ ಹಣಕಾಸು ವ್ಯವಹಾರ ಬ್ಯಾಂಕ್ ಮೂಲಕವೇ ನಡೆದಿತ್ತು. ಎರಡು ವರ್ಷಗಳ ಹಿಂದೆ ಜಗದೀಶ್ ಅವರಿಗೆ ನಾನು ಸಿನಿಮಾದಲ್ಲಿ ಸಂಪಾದಿಸಿದ್ದ ಹಣದಲ್ಲಿ ಸಾಲ ತೀರಿಸಿದ್ದೆ ಎಂದು ದರ್ಶನ್ ಹೇಳಿದ್ದಾರೆ.

ಸಾಕ್ಷ್ಯನಾಶಕ್ಕೆ 38 ಲಕ್ಷ ರು. ಸಾಲ ಮಾಡಿದ್ದೆ

ನಾನು ಭಾನುವಾರ ಸಂಜೆ 4 ಗಂಟೆಗೆ ಚಿತ್ರೀಕರಣ ಸಲುವಾಗಿ ಮೈಸೂರಿಗೆ ತೆರಳಿದ್ದೆ. ಆ ವೇಳೆ ಸಾಕ್ಷ್ಯ ನಾಶ ಸಲುವಾಗಿ ಮನೆಯಲ್ಲಿದ್ದ 3 ಲಕ್ಷ ರು.ಗಳನ್ನು ಬ್ಯಾಗ್‌ನಲ್ಲಿಟ್ಟು ತೆಗೆದುಕೊಂಡು ಹೋಗಿದ್ದೆ. ನನ್ನ ಬಂಧನದ ಬಳಿಕ ಆ ಹಣವನ್ನು ನನ್ನ ಪತ್ನಿಗೆ ಕಾಸ್ಟ್ಯೂಮ್ಸ್ ಅಸಿಸ್ಟೆಂಟ್ ರಾಜು ತಲುಪಿಸಿದ್ದ. ಇನ್ನು ಸಾಕ್ಷ್ಯನಾಶ ಸಲುವಾಗಿ ನನಗೆ ಪರಿಚಯವಿರುವ ಮೋಹನ್ ಅವರಿಂದ 38 ಲಕ್ಷ ರು. ಸಾಲ ಪಡೆದಿದ್ದೆ ಎಂದು ದರ್ಶನ್‌ ಹೇಳಿದ್ದಾರೆ.

ಫಾರ್ಮ್ ಹೌಸ್‌ಗೆ 10 ಲಕ್ಷ ರು. ಖರ್ಚು

ನನ್ನ ಎಲ್ಲಾ ಹಣಕಾಸಿನ ವ್ಯವಹಾರಗಳನ್ನು ನಾನೇ ನೋಡಿಕೊಳ್ಳುತ್ತೇನೆ. ಪ್ರತಿ ತಿಂಗಳು ಮೈಸೂರಿನಲ್ಲಿರುವ ಫಾರ್ಮ್ ಹೌಸ್ ನಿರ್ವಹಣೆಗೆ ಸುಮಾರು 10-12 ಲಕ್ಷ ರು. ಹಾಗೂ ರಾಜರಾಜೇಶ್ವರಿ ನಗರದಲ್ಲಿರುವ ಮನೆಯ ನಿರ್ವಹಣೆಗೆ ಸುಮಾರು 3.5 ಲಕ್ಷ ರು. ಖರ್ಚಾಗುತ್ತದೆ ಎಂದು ದರ್ಶನ್ ತಿಳಿಸಿದ್ದಾರೆ.

ಕಾರಿನಿಂದಲೇ ದೇವರಿಗೆ ನಿತ್ಯ ನಮಸ್ಕರಿಸುತ್ತೇನೆ 

ನಾನು ದಿನನಿತ್ಯ ಮನೆಯಿಂದ ಹೊರಗೆ ಹೋಗಬೇಕಾದರೆ, ನಮ್ಮ ಮನೆಯ ಹತ್ತಿರದ ಬಿಬಿಎಂಪಿ ಆಫೀಸ್ ಹಿಂದೆ ಇರುವ ವೆಂಕಟೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕಾರ್‌ನಿಲ್ಲಿಸಿ ಕಾರ್‌ನಲ್ಲಿ ಕುಳಿತುಕೊಂಡೇ ನಮಸ್ಕಾರ ಮಾಡಿ ಹೊರಡುತ್ತೇನೆ. 

ಪಟ್ಟಣಗೆರೆ ಶೆಡ್‌ಗೆ ಈ ಹಿಂದೆ 2 ಬಾರಿಯಷ್ಟೇ ಹೋಗಿದ್ದೆ : 

ಹಿಂದೆ ಪಟ್ಟಣಗೆರೆಯಲ್ಲಿರುವ ಜಯಣ್ಣ ಅವರ ಶೆಡ್‌ಗೆ ಎರಡು ಬಾರಿ ತೆರಳಿದ್ದೆ. ಒಮ್ಮೆ ಕ್ರಾಂತಿ ಸಿನಿಮಾದ ಶೂಟಿಂಗ್‌ಗಾಗಿ ಹಾಗೂ ಅದೇ ಚಿತ್ರದ ರಿಹರ್ಸಲ್ ಟೈಮ್‌ನಲ್ಲಿ ಇಂಟ‌ವ್ಯೂ ವೇಳೆ ಹೋಗಿದ್ದೆ. 

ಐ-ಫೋನ್ ಮೊಬೈಲ್ ನನಗೆ ಸ್ನೇಹಿತರಿಂದ ಗಿಫ್ಟ್ ಬಂದಿತ್ತು 

ನಾನು ಬಳಸುತ್ತಿರುವ ಐ-ಫೋನ್ ಫೋಮ್ಯಾಕ್ಸ್ 15 ಮೊಬೈಲನ್ನು ಸುಮಾರು 7-9 ತಿಂಗಳ ಹಿಂದೆ ಬೆಂಗಳೂರಲ್ಲಿ ಯಾರೋ ಸ್ನೇಹಿತರು ಗಿಫ್ಟ್ ನೀಡಿದ್ದರು. ಯಾರೆಂದು ನನಗೆ ನೆನಪಿಲ್ಲ.

ಪವಿತ್ರಾ ತಪ್ಪೊಪ್ಪಿಗೆ 

ರೇಣುಕಾಸ್ವಾಮಿಗೆ ಚಪ್ಪಲಿಯಲ್ಲಿ ಹೊಡೆದೆ, 

ಸಾಯಿಸಿಬಿಡಿ ಎಂದೆ ರೇಣುಕಾಸ್ವಾಮಿಯ ತಲೆ, ಎದೆಯ ಮೇಲೆ ದರ್ಶನ್, ನಾಗರಾಜ, ಪವನ್, ನಂದೀಶ್ ಮನಸೋ ಇಚ್ಛೆ ಹೊಡೆದರು. ನಾನು ಆತನಿಗೆ ಚಪ್ಪಲಿಯಿಂದ ಕಪಾಳಕ್ಕೆ ಹೊಡೆದು, ಬಿಡಬೇಡಿ ಸಾಯಿಸಿ ಎಂದು ಅಲ್ಲಿದ್ದವರಿಗೆ ಹೇಳಿದಾಗ ಎಲ್ಲರೂ ಸೇರಿ ಆತನಿಗೆ ಹಲ್ಲೆ ಮಾಡಲು ಶುರು ಮಾಡಿದರು. ಆ ವೇಳೆ ನನ್ನನ್ನು ದರ್ಶನ್ ಮನೆಗೆ ಕಳುಹಿಸಿದರು. 

ಪತ್ನಿ ಜೊತೆ ದರ್ಶನ್ ದುಬೈಗೆ ಹೋಗಿದ್ದಕ್ಕೆ ನಾನು ಜಗಳವಾಡಿದ್ದೆ 

ಕಳೆದ ಮೇನಲ್ಲಿ ನನಗೆ ತಿಳಿಸದೆ ವಿಜಯಲಕ್ಷ್ಮೀ ಜತೆ ದುಬೈಗೆ ತೆರಳಿ ವಿವಾಹ ವಾರ್ಷಿಕೋತ್ಸವನ್ನು ದರ್ಶನ್ ಆಚರಿಸಿಕೊಂಡಿದ್ದರು. ಈ ಬಗ್ಗೆ ದರ್ಶನ್ ಜತೆ ಜಗಳ ಮಾಡಿಕೊಂಡು ಮಾತು ನಿಲ್ಲಿಸಿದ್ದೆ. 

ದರ್ಶನ್ ನನಗೆ ₹1.5 ಕೋಟಿ ಮೌಲ್ಯದ ಬಂಗಲೆ ಕೊಡಿಸಿದ್ದರು 

ಹತ್ತು ವರ್ಷಗಳ ಹಿಂದೆ ಬುಲ್ ಬುಲ್ ಸಿನಿಮಾ ಆಡಿಷನ್‌ಗೆ ಹೋದಾಗ ನನಗೆ ದರ್ಶನ್ ಪರಿಚಯವಾಗಿ ಬಳಿಕ ಆತ್ಮೀಯತೆ ಮೂಡಿತು. 2018ರಲ್ಲಿ ನನಗೆ 1.5 ಕೋಟಿ ರು. ಮೌಲ್ಯದ ಮನೆಯನ್ನು ದರ್ಶನ್ ಕೊಡಿಸಿದ್ದರು. ಅಂದಿನಿಂದ ಒಟ್ಟಿಗೆ ಸಂಸಾರ ಮಾಡುತ್ತಿದ್ದೇವೆ. 13 ವರ್ಷದ ಮಗಳು ಹಾಗೂ ದರ್ಶನ್ ಜತೆ ವಾಸವಾಗಿದ್ದೇನೆ. 

ದರ್ಶನ್‌ ಮೇಲಿನ 10 ಗಂಭೀರ ಆರೋಪಗಳು ಸಾಬೀತಾದರೆ ಎಷ್ಟು ವರ್ಷ ಜೈಲು ಶಿಕ್ಷೆ?

ಚೆನ್ನಾಗಿ ಬಾರಿಸುವ ಆಸೆ ಇತ್ತು 

ರೇಣುಕಾಸ್ವಾಮಿ ನನಗೆ ಕರೆ ಮಾಡಿ ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ. ಈ ವಿಷಯವನ್ನು ವಿನಯ್‌ ನಾನು ಮತ್ತು ಪವನ್ ತಿಳಿಸಿದೆವು. ವಿನಯ್ ಮೂಲಕ ದರ್ಶನ್‌ಗೆ ಗೊತ್ತಾಯಿತು. ಆತನನ್ನು ಕರೆತಂದು ಚೆನ್ನಾಗಿ ಬಾರಿಸಿ ಒಂದು ಗತಿ ಕಾಣಿಸೋಣ ಅಂದುಕೊಂಡಿದ್ದೆವು.

ಕಿಡ್ನಾಪ್‌ಗೆ ದರ್ಶನ್ ಸಲಹೆ 

ನನಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದವನನ್ನು ಪತ್ತೆಹಚ್ಚಿ ತರಲು ತಮ್ಮ ಅಭಿಮಾನಿಗಳ ಸಂಘವನ್ನು ಬಳಸಿಕೊಳ್ಳುವಂತೆ ದರ್ಶನ್ ಹೇಳಿದರು. ಕೊನೆಗೆ ಪಟ್ಟಣಗೆರೆ ಶೆಡ್‌ಗೆ ಅಭಿಮಾನಿಗಳ ಸಂಘದ ಮೂಲಕವೇ ರೇಣುಕಾಸ್ವಾಮಿಯನ್ನು ಅಪಹರಿಸಿ ಕರೆತಂದಿದ್ದರು.

click me!