Kodagu: ಗಂಡ, ಮಕ್ಕಳಿಗೆ ಗೊತ್ತಾಗದಂತೆ ಹಣ ಉಳಿಸಿಲು ಹೋಗಿ ವಂಚನೆಗೆ ಒಳಗಾದ ಮಹಿಳೆಯರು: ದೂರು ಸಲ್ಲಿಕೆ

By Govindaraj S  |  First Published Sep 9, 2024, 8:56 PM IST

ಕೂಲಿ, ನಾಲಿ ಮಾಡುವ ಈ ಮಹಿಳೆಯರು ಹೇಗಾದರೂ ಮಾಡಿ ನಮ್ಮ ಗಂಡ, ಮಕ್ಕಳಿಗೆ ತಿಳಿಯದಂತೆ ನಾವು ಒಂದಿಷ್ಟು ಹಣ ಉಳಿಸಬೇಕು ಅಂತ ಮಹಿಳೆಯರೊಬ್ಬರ ಬಳಿ ಚೀಟಿ ಹಾಕಿದ್ದರು. ಚೀಟಿ ವ್ಯವಹಾರ ನಡೆಸುತ್ತಿದ್ದ ಮಹಿಳೆ 20 ಮಹಿಳೆರಿಗೆ 2 ರಿಂದ 7 ಲಕ್ಷದವರಿಗೆ ಹಣ ಹಾಕಿಸಿ ಚೀಟಿಂಗ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 


ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಸೆ.09): ಕೂಲಿ, ನಾಲಿ ಮಾಡುವ ಈ ಮಹಿಳೆಯರು ಹೇಗಾದರೂ ಮಾಡಿ ನಮ್ಮ ಗಂಡ, ಮಕ್ಕಳಿಗೆ ತಿಳಿಯದಂತೆ ನಾವು ಒಂದಿಷ್ಟು ಹಣ ಉಳಿಸಬೇಕು ಅಂತ ಮಹಿಳೆಯರೊಬ್ಬರ ಬಳಿ ಚೀಟಿ ಹಾಕಿದ್ದರು. ಚೀಟಿ ವ್ಯವಹಾರ ನಡೆಸುತ್ತಿದ್ದ ಮಹಿಳೆ 20 ಮಹಿಳೆರಿಗೆ 2 ರಿಂದ 7 ಲಕ್ಷದವರಿಗೆ ಹಣ ಹಾಕಿಸಿ ಚೀಟಿಂಗ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಚೀಟಿ ವ್ಯವಹಾರ ಮುಗಿದು ಒಂದು ವರ್ಷವಾದರೂ ಇಂದಿಗೂ ಹಣ ನೀಡದೆ ಚೀಟಿಂಗ್ ಮಾಡಿದ್ದಾರೆ ಎಂದು ಮಹಿಳೆಯರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹೌದು ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮದ ಅನಿತಾ ಎಂಬುವರು ಕಳೆದ ಹಲವು ವರ್ಷಗಳಿಂದ ಚೀಟಿ ವ್ಯವಹಾರ ನಡೆಸುತ್ತಿದ್ದರಂತೆ. 

Tap to resize

Latest Videos

ಕೂಲಿ, ನಾಲಿ ಮಾಡುತ್ತಿರುವ ಈ ಮಹಿಳೆಯರು ತಮ್ಮ ಗಂಡ ಮತ್ತು ಮಕ್ಕಳಿಗೆ ತಿಳಿಯದಂತೆ ಒಂದಿಷ್ಟು ಹಣ ಉಳಿಸೋಣ ಎಂದು ತಿಂಗಳಿಗೆ 15 ಸಾವಿರದಂತೆ ಈ ಮಹಿಳೆಯ ಬಳಿ ಚೀಟಿ ಹಾಕಿದ್ದಾರೆ. ಚೀಟಿ ವ್ಯವಹಾರ ಮುಗಿದು ವರ್ಷವಾದರೂ ಮಹಿಳೆಯರಿಗೆ ಚೀಟಿ ನಡೆಸುತ್ತಿದ್ದ ಅನಿತಾ ಎಂಬಾಕೆ ಹಣವನ್ನೇ ನೀಡಿಲ್ಲ ಎನ್ನಲಾಗಿದೆ. 20 ಮಹಿಳೆಯರಲ್ಲಿ ಕೆಲವರಿಗೆ 2 ಲಕ್ಷ ಕೊಡಬೇಕಿದ್ದರೆ, ಇನ್ನು ಕೆಲವರಿಗೆ 4 ಲಕ್ಷ ಕೊಡಬೇಕಾಗಿದೆಯಂತೆ. ಮತ್ತೆ ಕೆಲವರಿಗೆ 7 ಲಕ್ಷದವರೆಗೆ ಹಣ ಕೊಡಬೇಕಂತೆ. ಒಂದು ವರ್ಷದಿಂದ ತಮ್ಮ ಹಣವನ್ನು ಹಿಂದಿರುಗಿಸುವಂತೆ ಎಷ್ಟೇ ಕೇಳಿದರೂ ಅನಿತಾ ಎಂಬ ಮಹಿಳೆ ಹಣ ನೀಡುತ್ತಿಲ್ಲವಂತೆ. 

ಸಬ್ ಇನ್ಸ್‌ಪೆಕ್ಟರ್‌ರಿಂದಲೇ ಮಹಿಳಾ ಪೇದೆಗೆ ಲೈಂಗಿಕ ಕಿರುಕುಳ: ಮತ್ತೊಂದೆಡೆ ಬಾಗಿಣ ನೀಡಿ ಸೋದರತ್ವ ಭಾವನೆ

ಇದರಿಂದ ಬೇಸತ್ತ ಮಹಿಳೆಯರು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿಪರ್ಯಾಸವೆಂದರೆ ದೂರು ನೀಡಿ ಒಂದು ತಿಂಗಳಾದರೂ ಇದುವರೆಗೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಅಂತ ರಂಜಿತಾ ದೂರಿದ್ದಾರೆ. ಪೊಲೀಸರಿಂದ ನ್ಯಾಯ ಸಿಗುತ್ತೆ ಎಂದುಕೊಂಡರೆ ಅವರಿಂದಲೂ ನ್ಯಾಯ ದೊರೆಯುತ್ತಿಲ್ಲ ಎಂದು ಮಹಿಳೆಯರು ತಮ್ಮ ಅಳಲು ತೋಡಿಕೊಂಡಿದ್ದಾರೆ. ನಾನು ಕೂಲಿ ಕೆಲಸ ಮಾಡಿ ಒಂದಷ್ಟು ಹಣ ಉಳಿತಾಯ ಮಾಡಲು ಅನಿತಾ ಬಳಿ ಚೀಟಿ ಹಾಕುತ್ತಿದ್ದೆ. 

ಪ್ರತೀ ತಿಂಗಳು ಒಂದನೇ ತಾರೀಖಿನಂದು ಐದು ಸಾವಿರ ಮತ್ತು ಐದನೇ ತಾರೀಖಿನಂದು 10 ಸಾವಿರದಂತೆ ಎರಡು ಚೀಟಿಗಳನ್ನು ಹಾಕುತ್ತಿದ್ದೆ. ಒಟ್ಟಿನಲ್ಲಿ ಪ್ರತೀ ತಿಂಗಳು 15 ಸಾವಿರ ಚೀಟಿ ಕಟ್ಟುಕಟ್ಟುತ್ತಿದ್ದೆ. ಹೀಗಾಗಿ ನಾಲ್ಕು ಲಕ್ಷ ರೂಪಾಯಿ ಕಟ್ಟಿ ಎರಡು ವರ್ಷಗಳು ಕಳೆದಿವೆ. ನನ್ನ ಗಂಡನಿಗೆ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಿಸಿದ್ದೆ. ಆಗಲೂ ಚೀಟಿಗೆ ಹಾಕಿದ್ದ ನನ್ನ ಹಣ ಕೊಡುವಂತೆ ಅಂಗಲಾಚಿದೆ, ಆದರೂ ಹಣ ನೀಡಿಲ್ಲ. ಕೇಳಿದರೆ ನಿನಗೆ ಯಾಕೆ ಹಣಬೇಕು ವಯಸ್ಸಾಗಿದೆಯಲ್ಲ ಸತ್ತುಹೋಗು ಎಂದು ಅನಿತಾ ಧಮ್ಕಿ ಹಾಕುತ್ತಿದ್ದಾಳೆ ಅಂತ ಸರೋಜಮ್ಮ ಹೇಳಿದ್ದಾರೆ. 

RRR ನಂತರ ಬಾಲಯ್ಯ-ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಮಲ್ಟಿಸ್ಟಾರರ್ ಸಿನಿಮಾ: ಸಂಗೀತ ನಿರ್ದೇಶಕ ಥಮನ್!

ನನಗೆ ರಾಜಕೀಯ ಮುಖಂಡರ ನಂಟಿದೆ, ನಿಮಗೆ ಏನು ಮಾಡಬೇಕು ಎನ್ನುವುದು ನನಗೆ ಗೊತ್ತಿಲ್ಲ. ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾಳೆ ಅಂತ ಜಾನಕಿ ಹೇಳಿದ್ದಾರೆ. ಹೀಗೆ ಒಂದೆರಡಲ್ಲ, ಗ್ರಾಮದ 20 ಕ್ಕೂ ಹೆಚ್ಚು ಮಹಿಳೆಯರಿಗೆ ಇದೇ ರೀತಿ ಅನಿತಾ ಎಂಬಾಕೆ ಮೋಸ ಮಾಡಿದ್ದಾಳೆ ಅಂತ ಹಲವು ಮಹಿಳೆಯರು ಸೇರಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಏನೇ ಆಗಲಿ ತಮ್ಮ ಗಂಡ, ಮಕ್ಕಳಿಗೆ ತಿಳಿಯದಂತೆ ಒಂದಷ್ಟು ಹಣ ಉಳಿಸಲು ಹೋಗಿ ಲಕ್ಷ, ಲಕ್ಷ ಹಣವನ್ನು ಕಳೆದುಕೊಂಡ ಮಹಿಳೆಯರು ದಿಕ್ಕು ತೋಚದೆ ಕಂಗಾಲಾಗಿದ್ದಾರೆ.

click me!