ಆರೋಪಿ ಶರ್ಮಾ ಮಾತನ್ನು ನಂಬಿ ಮೇಘನಾ ಅವರು ಹಂತ ಹಂತವಾಗಿ 12,67,700 ರು. ಅವನು ತಿಳಿಸಿದ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ. ನಂತರ ಅವರು ಮೋಸ ಹೋಗಿರುವುದು ಅರಿವಾಗಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಕಲಬುರಗಿ(ಜು.15): ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು 30 ಲಕ್ಷ ರು. ಆಸೆಗೆ ಬಿದ್ದು 12,67,700 ರು. ಕಳೆದುಕೊಂಡು ಕಂಗಾಲಾಗಿದ್ದಾರೆ. ಇಲ್ಲಿನ ವಿದ್ಯಾನಗರದ ಕುಮಾರಿ ಮೇಘನಾ ತಂದೆ ಸುಂದ್ರೇಶ ಗೌಡ್ರು (31) ಹಣ ಕಳೆದುಕೊಂಡು ಕಂಗಾಲಾಗಿರುವ ಶಿಕ್ಷಕಿ.
ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಮೇಘನಾ ತಮ್ಮ ತಾಯಿ ಜೊತೆಗೆ ವಿದ್ಯಾನಗರದಲ್ಲಿ ವಾಸಿಸುತ್ತಿದ್ದು, ಆಕಾಶ್ ಶರ್ಮಾ ಎಂಬಾತ ಅವರ ಮೊಬೈಲ್‌ಗೆ ಕರೆ ಮಾಡಿ ಹಿಂದಿ ಭಾಷೆಯಲ್ಲಿ ಮಾತನಾಡುತ್ತ ನಿಮ್ಮ ಸಿಮ್ ಕಾರ್ಡ್ ನಂಬರ್ ಲಕ್ಕಿ ಡಿಪ್‌ನಲ್ಲಿ ಆಯ್ಕೆಯಾಗಿದ್ದು, ಕೆಬಿಸಿಯಿಂದ ಕೌನ್ ಬನೇಗಾ ಕರಡೋಪತಿಯಲ್ಲಿ ನೀವು ಹಣ ಸ್ವೀಕರಿಸಬೇಕು ಎಂದಿದ್ದಾನೆ. ಆಗ ಮೇಘನಾ ಅವರು ಈ ಬಗ್ಗೆ ವಿಚಾರಮಾಡಿ ತಿಳಿಸುವುದಾಗಿ ಹೇಳಿದರೂ ಆಕಾಶ್ ಶರ್ಮಾ ದಿನಾಲು ಫೋನ್ ಮಾಡಿ ಲಕ್ಕಿ ಡಿಪ್ ಲಾಟರಿ ಮೊತ್ತ 30 ಲಕ್ಷ ಪಡೆದುಕೊಳ್ಳಬೇಕು. ಅದಕ್ಕಾಗಿ ನೀವು ಸದ್ಯ 8,200 ರು. ಬ್ಯಾಂಕ್ ಖಾತೆಗೆ ಜಮಾ ಮಾಡಿದರೆ ಕೆಬಿಸಿಯಿಂದ 30 ಲಕ್ಷ ರು. ವರ್ಗಾವಣೆ ಮಾಡಲಾಗುವುದು ಎಂದು ನಂಬಿಸಿದ್ದಾನೆ.
undefined
ಕಲಬುರಗಿಯಲ್ಲಿ ಕೊಲೆ ಯತ್ನ: ಇಬ್ಬರು ಅರೆಸ್ಟ್
ಶರ್ಮಾ ಮಾತನ್ನು ನಂಬಿ ಮೇಘನಾ ಅವರು ಹಂತ ಹಂತವಾಗಿ 12,67,700 ರು. ಅವನು ತಿಳಿಸಿದ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ. ನಂತರ ಅವರು ಮೋಸ ಹೋಗಿರುವುದು ಅರಿವಾಗಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ನಂಬಿಸಿ ಮೋಸ ಮಾಡಿರುವ ಆಕಾಶ್ ಶರ್ಮಾ ಎಂಬಾತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಕೋರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸಿಇಎನ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.