ಬೆಳಗಾವಿ: ಹಿಂದೂ ಬುದ್ಧಿಮಾಂದ್ಯೆ ಯುವತಿ ಮೇಲೆ ಅನ್ಯಕೋಮಿನ ವ್ಯಕ್ತಿಯಿಂದ ಅತ್ಯಾಚಾರಕ್ಕೆ ಯತ್ನ

By Girish Goudar  |  First Published Jul 17, 2024, 7:54 PM IST

ವ್ಯಕ್ತಿಯನ್ನು ಹಿಡಿದು ಥಳಿಸಿರುವ ಯುವತಿಯ ಚಿಕ್ಕಪ್ಪ, ಬಳಿಕ ಪ್ರಜ್ಞೆ ತಪ್ಪಿ ಬಿದ್ದು ನಾಟಕವಾಡಿದ್ದಾನೆ ಆರೋಪಿ. ಈ ವೇಳೆ ಯುವತಿಯ ಚಿಕ್ಕಪ್ಪನ‌ ಕೈಯಿಂದ ಸಿನಿಮೀಯ ರೀತಿಯಲ್ಲಿ ಆರೋಪಿ ಪರಾರಿಯಾಗಿದ್ದಾನೆ. 
 


ಬೆಳಗಾವಿ(ಜು.17):  ಬೆಳಗಾವಿಯಲ್ಲಿ ಮತ್ತೊಂದು ನಾಗರಿಕ ಸಮಾಜ ತಲೆತಗ್ಗಿಸುವ ಅಮಾನವೀಯ ಘಟನೆ ನಡೆದಿದೆ. ಹೌದು, ಹಿಂದೂ ಬುದ್ಧಿಮಾಂದ್ಯೆ ಯುವತಿ ಮೇಲೆ ಅನ್ಯಕೋಮಿನ ವ್ಯಕ್ತಿಯಿಂದ ಅತ್ಯಾಚಾರಕ್ಕೆ ಯತ್ನ ನಡೆದಿದೆ. ಬೆಳಗಾವಿ ತಾಲೂಕಿನ ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

ಪೋಷಕರು ಜಮೀನಿಗೆ ಹೋಗಿದ್ದ ವೇಳೆ ಸಮಯ ಸಾಧಿಸಿದ ಕಾಮುಕ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.  ಮನೆಯಲ್ಲಿ ಯಾರೂ ಇಲ್ಲದಾಗ ಯುವತಿ ಬಟ್ಟೆ ಬಿಚ್ಚಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಕಾಮುಕ. ಯುವತಿ ಶಬ್ಧ ಮಾಡಿದಾಗ ತಕ್ಷಣವೇ ಯುವತಿಯ ಚಿಕ್ಕಪ್ಪ ಮನೆ ಒಳಗೆ ಹೋಗಿದ್ದಾರೆ. 

Tap to resize

Latest Videos

undefined

ಮಗುವೆಂದೂ ನೋಡದೇ ಪೈಶಾಚಿಕ ಕೃತ್ಯ: 4 ವರ್ಷದ ಬಾಲಕಿಯ ಅತ್ಯಾಚಾರವೆಸಗಿ ಕೊಲೆ

ವ್ಯಕ್ತಿಯನ್ನು ಹಿಡಿದು ಥಳಿಸಿರುವ ಯುವತಿಯ ಚಿಕ್ಕಪ್ಪ, ಬಳಿಕ ಪ್ರಜ್ಞೆ ತಪ್ಪಿ ಬಿದ್ದು ನಾಟಕವಾಡಿದ್ದಾನೆ ಆರೋಪಿ. ಈ ವೇಳೆ ಯುವತಿಯ ಚಿಕ್ಕಪ್ಪನ‌ ಕೈಯಿಂದ ಸಿನಿಮೀಯ ರೀತಿಯಲ್ಲಿ ಆರೋಪಿ ಪರಾರಿಯಾಗಿದ್ದಾನೆ. 
ತಕ್ಷಣವೇ ಯುವತಿ ಜೊತೆಗೆ ಪೋಷಕರು, ಸಂಬಂಧಿಗಳು ಕಾಕತಿ ಠಾಣೆಗೆ ಆಗಮಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ಘಟನೆ ಬಳಿಕ ಬೆಳಗಾವಿ ಗ್ರಾಮೀಣ ಠಾಣೆಯ ಪೊಲೀಸರು ಅಲರ್ಟ್ ಆಗಿದ್ದು, ವಿಶೇಷ ತಂಡ ರಚನೆ ಮಾಡಿ ಶೋಧ ಕಾರ್ಯ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ. 

ಬೆಳಗಾವಿಯ ಕಾಕತಿ ಠಾಣೆಗೆ ಡಿಸಿಪಿ ಸ್ನೇಹಾ ಭೇಟಿ ನೀಡಿದ್ದು ಸಂತ್ರಸ್ತೆಯ ವಿಚಾರಣೆ ನಡೆಸಿದ್ದಾರೆ. ಆರೋಪಿ ವಿರುದ್ಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

‌ಪೊಲೀಸರು ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಿದ್ದಾರೆ. ವೈದ್ಯಕೀಯ ಪರೀಕ್ಷೆ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ ಪೊಲೀಸರು. ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದು ಮತ್ತಷ್ಟು ವಿಚಾರಣೆ ನಡೆಸಲಿದ್ದಾರೆ ಪೊಲೀಸರು. 

click me!