ಕಂಡಕ್ಟರ್ ಎದೆ, ಪ್ರೈವೇಟ್ ಪಾರ್ಟ್ ಟಚ್ ಮಾಡಿದ; ಬಸ್‌ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ

Published : Jul 17, 2024, 01:00 PM IST
ಕಂಡಕ್ಟರ್ ಎದೆ, ಪ್ರೈವೇಟ್ ಪಾರ್ಟ್ ಟಚ್ ಮಾಡಿದ; ಬಸ್‌ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ

ಸಾರಾಂಶ

ಸೋಶಿಯಲ್ ಮೀಡಿಯಾದಲ್ಲಿ ಕಂಡಕ್ಟರ್ ಫೋಟೋ ಮತ್ತು ಟಿಕೆಟ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ.

ಹೈದರಾಬಾದ್: ಸರ್ಕಾರಿ ಬಸ್‌ನಲ್ಲಿ (Telangana State Road Transport Corporation) ಅನುಭವಿಸಿದ ಲೈಂಗಿಕ ಕಿರುಕುಳದ (Sexual Harassment) ಬಗ್ಗೆ ಮಹಿಳೆಯೊಬ್ಬರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ತೆಲಂಗಾಣದ (Telangana) ಸರ್ಕಾರಿ ಬಸ್‌  ನಲ್ಲಿ ಮಹಿಳೆ (Woman Passenger) ಮನಿಕೊಂಡದಿಂದ ಹಿಮಾಯತ್ ನಗರಕ್ಕೆ ತೆರಳುತ್ತಿದ್ದರು. ಬಸ್‌ ನಲ್ಲಿ ಕಂಡಕ್ಟರ್ (Ticket Collector) ತನ್ನ ಎದೆ ಮತ್ತು ಪ್ರೈವೇಟ್ ಪಾರ್ಟ್ (Chest And Private Part) ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಂಡಕ್ಟರ್ ಫೋಟೋ ಮತ್ತು ಟಿಕೆಟ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ.

ಆಶಾ ಕಾರ್ಯಕರ್ತೆಯರ ಟ್ಯಾಬ್ ಕದ್ದ ಆಂಬುಲೆನ್ಸ್ ಚಾಲಕ: ಇತ್ತ ಏಳು ಡ್ರಗ್ಸ್ ದಂಧೆಕೋರರ ಸೆರೆ

21 ವರ್ಷದ ಮಹಿಳೆ  65M/123 ಮೆಹಧಿಪಟ್ಟಣಂ ಬಸ್‌ ಹತ್ತಿದ್ದಾರೆ. ಬಸ್ ಪ್ರಯಾಣಿಕರಿಂದ ತುಂಬಿತ್ತು. ಜನಸಂದಣಿ ಬಸ್‌ನಲ್ಲಿದ್ದ ಕಂಡಕ್ಟರ್ ಲೈಂಗಿಕ ದೌರ್ಜನ್ಯ ನೀಡಿದ್ದಾನೆ. ಮುಂದೆ ಯಾವುದೇ ಮಹಿಳೆ ದೌರ್ಜನ್ಯದಿಂದ ಒಳಗಾಗಬಾರದು ಎಂದು ಧ್ವನಿ ಎತ್ತುತ್ತಿದ್ದೇನೆ.  65M/123 ಬಸ್ ಪ್ರಯಾಣಿಕರಿಂದ ತುಂಬಿರೋದನ್ನು ತನ್ನ ಲಾಭಕ್ಕೆ ಕಂಡಕ್ಟರ್ ಬಳಸಿಕೊಂಡಿದ್ದಾರೆ. ಆತ ಎದೆ ಮತ್ತು ಪ್ರೈವೇಟ್ ಪಾರ್ಟ್ ಟಚ್ ಮಾಡುತ್ತಿದ್ದಂತೆ ನಾನು ಜೋರಾಗಿ ಕಿರುಚಿಕೊಂಡೆ. ತೆಲಂಗಾಣ ಸಾರಿಗೆ ಸಂಸ್ಥೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮಹಿಳೆ ಮನವಿ ಮಾಡಿದ್ದಾರೆ. ಈ ಟ್ವೀಟ್‌ನನ್ನು ಸಿಎಂ ರೇವಂತ್ ರೆಡ್ಡಿಯವರಿಗೂ ಟ್ಯಾಗ್ ಮಾಡಲಾಗಿದೆ. 

ಮಹಿಳೆಯ ಟ್ವೀಟ್‌ಗೆ ತೆಲಂಗಾಣ ಸಾರಿಗೆ ಸಂಸ್ಥೆಯ ಎಂಡಿ ಪ್ರತಿಕ್ರಿಯೆ ನೀಡಿದ್ದಾರೆ. ನಿಮಗೆ ಉಂಟಾದ ಅನಾನುಕೂಲತೆಗೆ ಕ್ಷಮೆ ಕೇಳುತ್ತೇವೆ. ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆಯನ್ನು ನೀಡಿದ್ದಾರೆ. ಜುಲೈ 15ರಂದು ಈ ಘಟನೆ ನಡೆದಿದೆ.

ಸೌದೀಲಿ ಕಷ್ಟಕ್ಕೆ ಸಿಲುಕಿದವನ ರಕ್ಷಣೆ: ನೌಕರಿ ನಂಬಿ ಹೋಗಿದ್ದ ರಾಮನಗರದ ಯುವಕ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!