Theft Cases: ಸಾಲ ತೀರಿಸಲು ಕೆಲಸಕ್ಕಿದ್ದ ಅಂಗಡಿಯಲೇ ಕದ್ದ ಭೂಪ..!

Kannadaprabha News   | Asianet News
Published : Feb 05, 2022, 04:33 AM IST
Theft Cases: ಸಾಲ ತೀರಿಸಲು ಕೆಲಸಕ್ಕಿದ್ದ ಅಂಗಡಿಯಲೇ ಕದ್ದ ಭೂಪ..!

ಸಾರಾಂಶ

*  ಎಲೆಕ್ಟ್ರಿಕಲ್ಸ್‌ ಅಂಗಡಿಯಲ್ಲಿ ಹಣ ಕದ್ದು ರಾಜಸ್ಥಾನಕ್ಕೆ ಪರಾರಿ ಆಗಿದ್ದ ಆರೋಪಿ *  ಕುದುರೆ ರೇಸ್‌, ಕ್ರಿಕೆಟ್‌ ಬೆಟ್ಟಿಂಗ್‌ ಹುಚ್ಚು *  ಹಣ ಕಳೆದುಕೊಂಡು ಕಳ್ಳತನಕ್ಕಿಳಿದ  

ಬೆಂಗಳೂರು(ಫೆ.05): ನಗರದ ಎಲೆಕ್ಟ್ರಿಕಲ್ಸ್‌ ಅಂಗಡಿಯಲ್ಲಿ 30 ಲಕ್ಷ ದೋಚಿ ಪರಾರಿಯಾಗಿದ್ದ ಆರೋಪಿಯನ್ನು(Accused) ಸಿಟಿ ಮಾರ್ಕೆಟ್‌ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ. ರಾಜಸ್ಥಾನ(Rajasthan) ಮೂಲದ ಗಣೇಶ್‌ ವರ್ಮಾ(30) ಬಂಧಿತ(Arrest). ಆರೋಪಿಯು ಡಿ.21ರಂದು ತಾನು ಕೆಲಸ ಮಾಡುವ ಬಿವಿಕೆ ಅಯ್ಯಂಗಾರ್‌ ರಸ್ತೆಯ ಜಯಚಂದ್ರ ಮಾಲಿಕತ್ವದ ‘ಮುರುಧರ್‌ ಎಲೆಕ್ಟ್ರಿಕಲ್ಸ್‌’ ಅಂಗಡಿಯಲ್ಲಿ 30 ಲಕ್ಷ ದೋಚಿ ಪರಾರಿಯಾಗಿದ್ದ. ದಾಖಲಾಗಿದ್ದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ .27 ಲಕ್ಷ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುರುಧರ್‌ ಎಲೆಕ್ಟ್ರಿಕಲ್ಸ್‌ ಅಂಡಿಯಲ್ಲಿ ಆರೋಪಿ ಗಣೇಶ್‌ ವರ್ಮಾ, ನವೀನ್‌, ಸಾಗರ್‌, ಮಲ್ಲಿಕಾರ್ಜುನ್‌ ಕೆಲಸ ಮಾಡುತ್ತಿದ್ದರು. ಡಿ.21ರಂದು ಕೆಲಸಗಾರರಾದ ನವೀನ್‌, ಸಾಗರ್‌ ಮತ್ತು ಮಲ್ಲಿಕಾರ್ಜುನ್‌ ಎಲೆಕ್ಟ್ರಿಕಲ್ಸ್‌ ಐಟಮ್‌ಗಳನ್ನು ಡೆಲಿವರಿ ನೀಡಲು ತೆರಳಿದ್ದರು. ಮಾಲಿಕ ಜಯಚಂದ್ರ ಮಧ್ಯಾಹ್ನ 12.30ರ ಸುಮಾರಿಗೆ ಕಾರ್ಯ ನಿಮಿತ್ತ ಹೊರಗೆ ಹೋಗುವಾಗ ಗಣೇಶ್‌ ವರ್ಮಾನಿಗೆ ಅಂಗಡಿ ನೋಡಿಕೊಳ್ಳುವಂತೆ ತಿಳಿಸಿದ್ದರು. ಮಧ್ಯಾಹ್ನ 3.15ಕ್ಕೆ ಜಯಚಂದ್ರ ವಾಪಸ್‌ ಆಗಿದ್ದರು. ಈ ವೇಳೆ ಆರೋಪಿ ಗಣೇಶ್‌ ವರ್ಮಾ ಅಂಗಡಿಯಲ್ಲೇ ಇದ್ದ. ಕೆಲ ಹೊತ್ತಿನ ಬಳಿಕ ವೈಯಕ್ತಿಕ ಕೆಲಸ ನಿಮಿತ್ತ ಕೆಲ ಕಾಲ ಹೊರಗೆ ಹೋಗಿ ಬರುವುದಾಗಿ ಹೇಳಿ ಅಂಗಡಿಯಿಂದ ಹೊರಟ್ಟಿದ್ದ.

Bank Theft Case: ಸಾಲ ತೀರಿಸಲು ಬ್ಯಾಂಕಿಗೇ ಕನ್ನ ಹಾಕಿದ್ದ ಖದೀಮನ ಬಂಧನ

ಬಳಿಕ ಮಾಲಿಕ ಜಯಚಂದ್ರ ಅವರು ಗಲ್ಲಪೆಟ್ಟಿಗೆಯಲ್ಲಿದ್ದ ಹಣವನ್ನು(Money) ಲೆಕ್ಕ ಹಾಕಿದಾಗ .30 ಲಕ್ಷ ವ್ಯತ್ಯಾಸ ಇರುವುದು ಕಂಡು ಬಂದಿದೆ. ಕೂಡಲೇ ಗಣೇಶ್‌ ವರ್ಮಾಗೆ ಕರೆ ಮಾಡಿದ್ದು, ಮೊಬೈಲ್‌ ಸ್ವಿಚ್‌ಆಫ್‌ ಬಂದಿದೆ. ಅನುಮಾನಗೊಂಡು ಆರೋಪಿ ಉಳಿದುಕೊಂಡಿದ್ದ ಮಲ್ಲೇಶ್ವರದ ಮನೆಗೆ ತೆರಳಿ ವಿಚಾರಿಸಿದಾಗ ಮನೆ ಖಾಲಿ ಮಾಡಿಕೊಂಡು ಆರೋಪಿ ಹೋಗಿರುವ ವಿಚಾರ ಗೊತ್ತಾಗಿದೆ. ಬಳಿಕ ಮಾಲಿಕ ಜಯಚಂದ್ರ ಅವರು ಠಾಣೆಗೆ ಬಂದು ಗಣೇಶ್‌ ವರ್ಮಾ ವಿರುದ್ಧ ದೂರು(Complaint) ನೀಡಿದ್ದರು.

ಕದ್ದ ಹಣದಲ್ಲಿ ಸಾಲ ತೀರಿಸಿದ್ದ

ಆರೋಪಿ ಗಣೇಶ್‌ ವರ್ಮಾಗೆ ಕುದುರೆ ರೇಸ್‌ ಹಾಗೂ ಕ್ರಿಕೆಟ್‌ ಬೆಟ್ಟಿಂಗ್‌ ಹುಚ್ಚಿತ್ತು. ತನ್ನ ಬಳಿ ಇದ್ದ ಹಣವನ್ನು ರೇಸ್‌, ಬೆಟ್ಟಿಂಗ್‌ಗೆ ಕಟ್ಟಿಕಳೆದುಕೊಂಡಿದ್ದ. ಬಳಿಕ ನಗರದಲ್ಲಿ ಕೆಲವರ ಬಳಿ ಸಾಲ ಮಾಡಿ ಬೆಟ್ಟಿಂಗ್‌ ಆಡಿ ಸಾಲಗಾರನಾಗಿದ್ದ. ಹೀಗಾಗಿ ಆರೋಪಿಯು ತಾನು ಕೆಲಸ ಮಾಡುವ ಮುರುಧರ್‌ ಎಲೆಕ್ಟ್ರಿಕಲ್ಸ್‌ ಅಂಗಡಿಯಲ್ಲಿ ಯಾರೂ ಇಲ್ಲದ ವೇಳೆ .30 ಲಕ್ಷ ಕದ್ದು ಪರಾರಿಯಾಗಿದ್ದ. ನಗರದಲ್ಲಿ ಸಾಲ ತೀರಿಸಿ ಬಳಿಕ ಉಳಿದ ಹಣದೊಂದಿಗೆ ರಾಜಸ್ಥಾನಕ್ಕೆ ಪರಾರಿಯಾಗಿದ್ದ. ಆರೋಪಿಯ ಜಾಡು ಹಿಡಿದು ಸಿಟಿ ಮಾರ್ಕೆಟ್‌ ಠಾಣೆ ಪೊಲೀಸರ ಒಂದು ತಂಡ ರಾಜಸ್ಥಾನಕ್ಕೆ ತೆರಳಿ ಆತನನ್ನು ಬಂಧಿಸಿ ನಗರಕ್ಕೆ ಕರೆ ತಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Davanagere: 6 ಫೈಟರ್ ಕೋಳಿ ಕದ್ದೊಯ್ದ ಕಳ್ಳರು: ಕೈಚಳಕ ಸಿಸಿಟಿವಿಯಲ್ಲಿ ಸೆರೆ

ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ: ಬೈಕ್‌ ಕದ್ದು ಪತ್ನಿ, ಸಂಬಂಧಿಕರಿಗೆ ಗಿಫ್ಟ್‌ ಕೊಡ್ತಿದ್ದ ಭೂಪ..!

ಬೆಂಗಳೂರು: ನಕಲಿ ಕೀ ಬಳಸಿ ದ್ವಿಚಕ್ರ ವಾಹನ ಕದ್ದು ಹೆಂಡತಿ ಸೇರಿದಂತೆ ಸಂಬಂಧಿ​ಕ​ರಿಗೆ ಉಡು​ಗೊರೆ(Gift) ನೀಡಿದ್ದ ಚಾಲಾಕಿ ಚೋರನನ್ನು ರಾಜಾಜಿನಗರ ಠಾಣೆ ಪೊಲೀಸರು(Police) ಬಂಧಿಸಿದ ಘಟನೆ ಜ.23 ರಂದು ನಡೆದಿತ್ತು. 

ರಾಜಾಜಿನಗರದ ಭರತ್‌(32) ಬಂ​ಧಿತ(Arrest). ಆರೋಪಿಯಿಂದ(Accused) ಏಳು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿತ್ತು. ರಾಜಾಜಿನಗರ ನಿವಾಸಿ ನರೇಶ್‌ಎಂಬುವವರು ಜ.16ರಂದು ರಾತ್ರಿ 10 ಗಂಟೆಗೆ ತಮ್ಮ ಮನೆ ಮುಂದೆ ದ್ವಿಚಕ್ರ ವಾಹನ ನಿಲುಗಡೆ ಮಾಡಿದ್ದರು. ಮಾರನೇ ದಿನ ಎದ್ದು ನೋಡಿದಾಗ ದ್ವಿಚಕ್ರ ವಾಹನ ಇರಲಿಲ್ಲ. ಈ ಸಂಬಂಧ ನೀಡಿದ್ದ ದೂರಿನ ಮೇರೆಗೆ ಸಿಸಿಟಿವಿ(CCTV) ಕ್ಯಾಮರಾ ದೃಶ್ಯಾವಳಿ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!