Bengaluru Crime: ಆಂಧ್ರದಿಂದ ಬಂದು ಬೆಂಗ್ಳೂರಲ್ಲಿ ಮನೆಗಳವು ಮಾಡುತ್ತಿದ್ದವ ಅರೆಸ್ಟ್‌

Kannadaprabha News   | Asianet News
Published : Feb 25, 2022, 05:26 AM IST
Bengaluru Crime: ಆಂಧ್ರದಿಂದ ಬಂದು ಬೆಂಗ್ಳೂರಲ್ಲಿ ಮನೆಗಳವು ಮಾಡುತ್ತಿದ್ದವ ಅರೆಸ್ಟ್‌

ಸಾರಾಂಶ

*   ಚಂದ್ರಾಲೇಔಟ್‌ ಠಾಣೆ ಪೊಲೀಸರ ಬಲೆಗೆ ಬಿದ್ದ ಖದೀಮ *   ಮನೆಗೆ ನುಗ್ಗಿ ಚಿನ್ನಾಭರಣ ದೋಚುತ್ತಿದ್ದ ಆರೋಪಿ *   ಬಾತ್ಮೀದಾರರ ನೀಡಿದ ಮಾಹಿತಿ ಮೇರೆಗೆ ಪೊಲೀಸರ ಕಾರ್ಯಾಚರಣೆ  

ಬೆಂಗಳೂರು(ಫೆ.25):  ಬೀಗ ಹಾಕದೆ ಮನೆಯವರು ಹೊರ ಹೋಗಿದ್ದ ವೇಳೆ ಆ ಮನೆಗಳಿಗೆ ನುಗ್ಗಿ ಚಿನ್ನಾಭರಣ ದೋಚುತ್ತಿದ್ದ ಲಾಡ್ಜ್‌ ಕೆಲಸಗಾರನೊಬ್ಬ ಚಂದ್ರಾಲೇಔಟ್‌ ಠಾಣೆ ಪೊಲೀಸರ(Police) ಬಲೆಗೆ ಬಿದ್ದಿದ್ದಾನೆ.

ಆಂಧ್ರಪ್ರದೇಶದ(Andhra Pradesh) ಚಿತ್ತೂರು ಜಿಲ್ಲೆಯ ಶಾಂತಪುರದ ಸತೀಶ್‌ ಬಂಧಿತನಾಗಿದ್ದು(Arrest), ಆರೋಪಿಯಿಂದ(Accused) 8.71 ಲಕ್ಷ ಮೌಲ್ಯದ ಚಿನ್ನಾಭರಣ(Gold) ಹಾಗೂ 47,500 ರು. ನಗದು ಜಪ್ತಿ ಮಾಡಲಾಗಿದೆ. ಕೆಲ ದಿನಗಳಿಂದ ನಿರಂತರವಾಗಿ ಚಂದ್ರಾಲೇಔಟ್‌ ಹಾಗೂ ಅನ್ನಪೂರ್ಣೇಶ್ವರಿ ನಗರ ವ್ಯಾಪ್ತಿಯಲ್ಲಿ ಮನೆಗಳಲ್ಲಿ ಕಳ್ಳತನವಾಗಿದ್ದವು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸರು, ಬಾತ್ಮೀದಾರರ ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದಾಗ ಆರೋಪಿ ಬಂಧಿತನಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Mandya: ಅಂಗನವಾಡಿ ಕಳ್ಳತನಕ್ಕೆ ಬಂದವ ಅಡುಗೆ ಮಾಡಿ-ತಿಂದು, ಕಥೆ, ಕವನ ಬರೆದಿಟ್ಟು ಹೋದ!

ಆಂಧ್ರಪ್ರದೇಶದ ಸತೀಶ್‌, ತಿರುಪತಿಯ ಲಾಡ್ಜ್‌ವೊಂದರಲ್ಲಿ ಕೆಲಸದಲ್ಲಿದ್ದ. ಮೋಜು ಮಸ್ತಿ ಜೀವನದ ವ್ಯಾಮೋಹಕ್ಕೆ ಬಿದ್ದ ಆತ, ನಗರಕ್ಕೆ ಬಂದು ಕಳ್ಳತನ ಎಸಗಿ ಪರಾರಿಯಾಗುತ್ತಿದ್ದ. ಜನವಸತಿ ಪ್ರದೇಶ ಕಡೆ ಅಡ್ಡಾಡಿ ಬೀಗ ಹಾಕದೆ ಮನೆಯವರು ಹೊರ ಹೋಗಿರುವುದನ್ನು ಗಮನಿಸಿ ಆರೋಪಿ ಕಳ್ಳತನ(Theft) ಕೃತ್ಯ ಎಸಗುತ್ತಿದ್ದ. ಕೆಲ ತಿಂಗಳ ಹಿಂದೆ ಚಂದ್ರಾಲೇಔಟ್‌ ಸಮೀಪ ಕಾರಿನ ಗಾಜಿನ ಒಡೆದು ಹಾಕಿ ಕಾರಿನಲ್ಲಿದ್ದ .2.5 ಲಕ್ಷ ಹಣ ಹಾಗೂ ಚಿನ್ನಾಭರಣವನ್ನು ಸಹ ಆತ ದೋಚಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮನೆಗಳವು ಮಾಡಿದ್ದ ಆರೋಪಿಗಳ ಬಂಧನ

ಬೆಂಗಳೂರು:  ಇತ್ತೀಚಿಗೆ ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕಿಯೊಬ್ಬರ ಮನೆ ಬೀಗ ಮುರಿದು ಚಿನ್ನಾಭರಣ ದೋಚಿದ್ದ ಇಬ್ಬರನ್ನು ವಿಜಯನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಜಾಲಹಳ್ಳಿಯ ಮಂಜುನಾಥ್‌ ಹಾಗೂ ಆಸ್ಟಿನ್‌ ಟೌನ್‌ನ ಜಾನ್‌ ಮೇಲ್ವಿನ್‌ ಬಂಧಿತ. ಆರೋಪಿಗಳಿಂದ 16 ಲಕ್ಷ ರು. ಮೌಲ್ಯದ 360 ಗ್ರಾಂ ಚಿನ್ನಾಭರಣ, ಎರಡು ಸ್ಕೂಟರ್‌ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಹಂಪಿನಗರದಲ್ಲಿ ನೆಲೆಸಿರುವ ಜಿಲ್ಲಾಧಿಕಾರಿಗಳ ಕಚೇರಿಯ ಎಫ್‌ಡಿಎ ಶೋಭಾ ಅವರ ಮನೆಯ ಬೀಗ ಮುರಿದು ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸಿಸಿಟಿವಿ(CCTV) ಕ್ಯಾಮೆರಾ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಆರೋಪಿಗಳ ಬಂಧನದಿಂದ ಕೆಂಗೇರಿ, ಆಡುಗೋಡಿ ಹಾಗೂ ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಂಜುನಾಥ್‌ ಹಾಗೂ ಜಾನ್‌ ವೃತ್ತಿಪರ ಕಳ್ಳರಾಗಿದ್ದು, ಈ ಇಬ್ಬರ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಜನ ವಸತಿ ಪ್ರದೇಶದ ಕಡೆ ಬೆಳಗ್ಗೆ ವೇಳೆ ಸಂಚರಿಸುತ್ತಿದ್ದ ಆರೋಪಿಗಳು, ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕನ್ನ ಹಾಕುತ್ತಿದ್ದರು. ಅದೇ ರೀತಿ ಹಂಪಿ ನಗರದಲ್ಲಿ ಶೋಭಾ ಅವರ ಮನೆಯ ಬೀಗ ಮುರಿದು ಚಿನ್ನಾಭರಣ ದೋಚಿದ್ದರು.

ಮನೆ ಮಾಲೀಕರ ಕಟ್ಟಿಹಾಕಿ 88 ಲಕ್ಷ ದೋಚಿದರು!

ಬೆಂಗಳೂರು:  ಖಾಸಗಿ ಲೆಕ್ಕ ಪರಿಶೋಧಕರ ಪತ್ನಿಯೊಬ್ಬರ ಕೈ-ಕಾಲು ಕಟ್ಟಿಹಾಕಿ ಅವರ ಮನೆಗೆಲಸದಾಳುಗಳು ಸುಮಾರು 88 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಕಮಲಾ ನಗರದಲ್ಲಿ ನಡೆದಿದೆ.
ಕಮಲಾನಗರದ ನಿವಾಸಿ ವಾಗೇಶ್ವರಿ ಗುರುಕುಮಾರ್‌ ಚೌಕಿಮಠ್‌ ಅವರು ಹಲ್ಲೆಗೆ ತುತ್ತಾಗಿದ್ದು, ಮನೆಯಲ್ಲಿ ಮಂಗಳವಾರ ವಾಗೇಶ್ವರಿ ಒಬ್ಬರೇ ಇದ್ದಾಗ ಈ ಕೃತ್ಯ ನಡೆದಿದೆ. ಈ ಕೃತ್ಯ ಎಸಗಿ ಪರಾರಿಯಾಗಿರುವ ನೇಪಾಳ ಮೂಲದ ಅನು, ಆಕೆಯ ಪತಿ ರಾಜೇಂದ್ರ ಹಾಗೂ ಮೂವರು ಸಹಚರರ ಪತ್ತೆಗೆ ಬಸವೇಶ್ವರ ನಗರ ಪೊಲೀಸರು ಬಲೆ ಬೀಸಿದ್ದಾರೆ.

Bengaluru Crime: ಬೈಕ್‌ ಕದ್ದು ಬರೀ 5000ಗೆ ಮಾರಾಟ ಮಾಡ್ತಿದ್ದ ಖತರ್ನಾಕ್‌ ಕಳ್ಳನ ಸೆರೆ

ಎರಡು ತಿಂಗಳಿಂದ ವಾಗೇಶ್ವರಿ ಅವರ ಮನೆಯಲ್ಲಿ ಅನು ದಂಪತಿ ಕೆಲಸಕ್ಕಿದ್ದು, ಮಾಲೀಕರ ಮನೆಯ ಔಟ್‌ ಹೌಸ್‌ನಲ್ಲಿ ನೆಲೆಸಿದ್ದರು. ಬೆಳಗ್ಗೆ ವಾಗೇಶ್ವರಿ ದಂಪತಿ ದೇವಾಲಯಕ್ಕೆ ತೆರಳಿದರೆ, ಅವರ ಪುತ್ರ ಕಾಲೇಜಿಗೆ ಹೋಗಿದ್ದ. ಆ ವೇಳೆ ಮನೆಯ ಕೀಯನ್ನು ಸೆಕ್ಯೂರಿಟಿ ಗಾರ್ಡ್‌ಗೆ(Security Guard) ಕೊಟ್ಟು ವಾಗೇಶ್ವರಿ ತೆರಳಿದ್ದರು. ಆಗ ಕೀ ಪಡೆದ ಅನು, ತನ್ನ ಪತಿ ಮತ್ತು ಸಹಚರರ ಜತೆ ಸೇರಿ ಮನೆಯೊಳಗೆ ಹೋಗಿ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣವನ್ನು ಗಂಟು ಕಟ್ಟುತ್ತಿದ್ದರು. ಅದೇ ಹೊತ್ತಿಗೆ ವಾಗೇಶ್ವರಿ ಮನೆಗೆ ಮರಳಿದ್ದಾರೆ. 

ದೇವಾಲಯದಿಂದ ಪತಿಯನ್ನು ಕಚೇರಿಗೆ ಬಿಟ್ಟು ಅವರೊಬ್ಬರೇ ಮನೆಗೆ ಬಂದಿದ್ದರು. ಅನಿರೀಕ್ಷಿತವಾಗಿ ಮನೆಯೊಡತಿ ಆಗಮನದಿಂದ ಆತಂಕಗೊಂಡ ಅನು, ತಕ್ಷಣವೇ ತನ್ನ ಸಹಚರರಿಗೆ ಅವಿತುಕೊಳ್ಳುವಂತೆ ಹೇಳಿದ್ದಾಳೆ. ಏಳೆಂಟು ಬಾರಿ ಬೆಲ್‌ ಮಾಡಿದರೂ ಬಾಗಿಲು ತೆರೆಯದ ಅನು, ಬಳಿಕ ಬಾಗಿಲು ತೆರೆದಿದ್ದಾಳೆ. ಮನೆಗೆಲಸದವಳ ದುಷ್ಕೃತ್ಯ ಅರಿಯದೆ ಒಳ ಬಂದ ವಾಗೇಶ್ವರಿ ಅವರನ್ನು ಕೂಡಲೇ ಆರೋಪಿಗಳು ಬಾಯಿ ಮುಚ್ಚಿ ಆಕೆಯನ್ನು ಕೊಠಡಿಗೆ ಎಳೆದೊಯ್ದಿದ್ದಾರೆ. ನಂತರ ಆಕೆಯ ಬಾಯಿಗೆ ಬಟ್ಟೆತುರುಕಿ ಕೈ-ಕಾಲು ಕಟ್ಟಿಹಾಕಿದ ಆರೋಪಿಗಳು, ಲಾಕರ್‌ ಕೀ ತೆಗೆದು ಚಿನ್ನಾಭರಣ ದೋಚಿ ಕಾಲ್ಕಿತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?