* 42 ಲಕ್ಷ ಮೌಲ್ಯದ 14 ಕೇಜಿ ತೂಕದ 2 ದಂತ ವಶ
* ಅರಣ್ಯ ಪ್ರದೇಶದಲ್ಲಿ ಹೊಂಚು ಹಾಕಿ ಕುಳಿತುಕೊಳ್ಳುತ್ತಿದ್ದ ಆರೋಪಿಗಳು
* ದಂತ ದೋಚುವುದರಲ್ಲಿ ಕುಖ್ಯಾತರಾಗಿದ್ದರು ದಂತಚೋರರು
ಆನೇಕಲ್(ಫೆ.25): ಕಾಡಿನಲ್ಲಿ(Forest) ಒಂಟಿ ಸಲಗಗಳ ಕೊಂದು, ಅವುಗಳ ದೇಹ ಕೊಳೆತ ನಂತರ ಅದರ ದಂತಗಳನ್ನು ಬೇರ್ಪಡಿಸಿ ಮಾರಾಟ ಮಾಡುತ್ತಿದ್ದ ಖತರ್ನಾಕ್ ದಂತ ಚೋರರ ತಂಡವನ್ನು ಹೆಬ್ಬಗೋಡಿ ಪೊಲೀಸರು(Police) ಮಾಲು ಸಹಿತ ಬಂಧಿಸಿ(Arrest) ಜೈಲಿಗಟ್ಟಿದ್ದಾರೆ.
ತುಮಿಳುನಾಡಿನ(Tamil Nadu) ಬಾಗಲೂರಿನ ಸಯ್ಯದ್ ರಫೀಕ್ ಅ. ಮಹಬೂಬ್ ಪಾಷ, ಸೂಳಗಿರಿ ತಾಲೂಕಿನ ಹನುಮಂತಪುರದ ಹರೀಶ(22), ಮುಗಳೂರಿನ ತ್ಯಾಗರಾಜು(32), ದೊಡ್ಡ ಬೂದುಕೋಟೆಯ ಎಂ.ಮಣಿ(32), ನಾಗರಸಮ್ಮಪಟ್ಟಿಯ ಮಣಿಕಂಠ(33), ಕುಪ್ಪಚ್ಚಿಪಾರೈ ವಾಸಿ ಪೆರಿಯಾನ್ ಅ. ಗಣಪತಿ (31), ಬೆಟ್ಟಮುಗ್ಗಲಾ ಗ್ರಾಮ ವಾಸಿ ಪವನ್‌ರಾಜ್(43), ಮುಕ್ಕನ್ ಕರೈ ವಾಸಿ ಬಸವರಾಜು ಅ. ಪಸುವರಾಜು(38) ಬಂಧಿತರು. ಆರೋಪಿಗಳಿಂದ ಅಂದಾಜು 42 ಲಕ್ಷ ಮೌಲ್ಯದ 14 ಕೆ.ಜಿ. ತೂಕವುಳ್ಳ 2 ದಂತಗಳನ್ನು(Elephant Ivory) ವಶಪಡಿಸಿಕೊಳ್ಳಲಾಗಿದೆ ಎಂದು ಇನ್‌ಸ್ಪೆಕ್ಟರ್ ಜಗದೀಶ್ ತಿಳಿಸಿದರು.
undefined
Bengaluru: ವೃದ್ಧೆಯ ಕೈ-ಕಾಲು ಕಟ್ಟಿ ಒಡವೆ ದೋಚಿದ್ದವ ಅರೆಸ್ಟ್
ಆರೋಪಿಗಳೆಲ್ಲ ತುಮಿಳುನಾಡಿನ ಕಾಡಂಚಿನ ಗ್ರಾಮಗಳಲ್ಲಿ ವಾಸಿಸುತ್ತಿದ್ದರು. ತಮಿಳುನಾಡಿನ ಡೆಂಕಣಿಕೋಟೆ ಸರಹದ್ದಿನ ಬೆಟ್ಟಮುಗಲಾಳ ಅರಣ್ಯ ಪ್ರದೇಶದಲ್ಲಿ ಹೊಂಚು ಹಾಕಿ ಕುಳಿತು ಒಂಟಿ ಸಲಗಗಳನ್ನೇ ಗುರಿಯಾಗಿಸಿ ಸಾಯಿಸಿ ದಂತ ದೋಚುವುದರಲ್ಲಿ ಕುಖ್ಯಾತರಾಗಿದ್ದರು. ದ್ವಿಚಕ್ರ ವಾಹನದಲ್ಲಿ ದಂತಗಳನ್ನು ಮಾರಾಟ ಮಾಡಲು ಹೆಬ್ಬಗೋಡಿ ಠಾಣಾ ವ್ಯಾಪ್ತಿಯ ಡಿ.ಮಾರ್ಟ್ ಬಳಿ ಬಂದಿದ್ದರು. ಖಚಿತ ಮಾಹಿತಿ ಮೇರೆಗೆ ರಫೀಕ್ ಮತ್ತು ಹರೀಶ್‌ನನ್ನು ಬಂಧಿಸಲಾಯಿತು. ಬಳಿಕ ಅವರು ನೀಡಿದ ಮಾಹಿತಿ ಆಧರಿಸಿ ಇನ್ನುಳಿದ 6 ಮಂದಿಯನ್ನು ಬಂಧಿಸಲಾಯಿತು ಎಂದು ಮಾಹಿತಿ ನೀಡಿದರು.
ವ್ಯಾಪಾರಿಗಳ ಸೋಗಲ್ಲಿ ಅಕ್ಕಸಾಲಿಗರಿಗೆ ವಂಚಿಸಿದ್ದವರ ಸೆರೆ
ಬೆಂಗಳೂರು: ಚಿನ್ನಾಭರಣ(Gold) ವ್ಯಾಪಾರಿಗಳ ಸೋಗಿನಲ್ಲಿ ಒಡವೆ ಖರೀದಿಸುವುದಾಗಿ ನಂಬಿಸಿ ತಮ್ಮ ಅಂಗಡಿಗೆ ಕರೆಸಿಕೊಂಡು ಅಕ್ಕಸಾಲಿಗರೊಬ್ಬರಿಂದ ಆಭರಣ ಪಡೆದು ವಂಚಿಸಿ ಪರಾರಿಯಾಗಿದ್ದ ಮೂವರು ಚಾಲಾಕಿ ಖದೀಮರು ಮಾಗಡಿ ರಸ್ತೆ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಚಿಕ್ಕಬಳ್ಳಾಪುರ(Chikkaballapur) ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲ್ಲಿಪುರ ಗ್ರಾಮದ ಸೈಯದ್ ಉಜ್ಜೂರ್ ಹೈದರ್, ಫರ್ಹಾನ್ ಅಬ್ಬಾಸ್ ಹಾಗೂ ಸೈಯದ್ ಮುತ್ತಾಜ್ ಬಂಧಿತರು. ಆರೋಪಿಗಳಿಂದ(Accused) .15 ಲಕ್ಷ ಮೌಲ್ಯದ 316 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಕಾಟನ್‌ಪೇಟೆಯ ಮಂಡಲ್ ಎಂಬುವರಿಗೆ ಆರೋಪಿಗಳು ವಂಚಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಇನ್ಸ್‌ಪೆಕ್ಟರ್ ಜಿ.ಟಿ.ಶ್ರೀನಿವಾಸ್ ನೇತೃತ್ವದ ತಂಡವು, ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Robbery Case: ಗೋಡೆ ಕೊರೆದು 1 ಕೇಜಿ ಚಿನ್ನ ದೋಚಿ ಪರಾರಿ
ದಿನ ಅಂಗಡಿ ತೆರೆದು ಗಾಳ:
ಆರೋಪಿಗಳು, ವ್ಯಾಪಾರಿಗಳ ಸೋಗಿನಲ್ಲಿ ಅಕ್ಕಸಾಲಿಗರಿಗೆ ವಂಚಿಸಿ ಒಡವೆ ದೋಚುವ ಸಂಚು ರೂಪಿಸಿದ್ದರು. ಅಂತೆಯೇ ಮೆಜೆಸ್ಟಿಕ್‌ಗೆ ಬಂದು ಲಾಡ್ಜ್‌ನಲ್ಲಿ ವಾಸ್ತವ್ಯ ಹೂಡಿದ ಆರೋಪಿಗಳು, ಮೊದಲು ರಾಜಾಜಿನಗರದ ಭಾಷ್ಯಂ ವೃತ್ತ ಸಮೀಪ ಅಂಗಡಿ ಬಾಡಿಗೆ ಪಡೆದಿದ್ದರು. ಆನಂತರ ಕಾಟನ್‌ಪೇಟೆಗೆ ತೆರಳಿ ಅಕ್ಕಸಾಲಿಗ ಮಂಡಲ್ ಅವರನ್ನು ಭೇಟಿಯಾದ ಹೈದರ್, ಅಬ್ಬಾಸ್ ಹಾಗೂ ಮುತ್ತಾಜ್, ತಾವು ಹೊಸದಾಗಿ ಆಭರಣ ಅಂಗಡಿ ಆರಂಭಿಸಿದ್ದು. ನಮಗೆ ಐದು ನೆಕ್ಲಸ್‌ಗಳನ್ನು ಮಾಡಿಕೊಡುವಂತೆ ಹೇಳಿ ಆರ್ಡರ್ ಕೊಟ್ಟಿದ್ದರು. ನೆಕ್ಲಸ್‌ಗಳ ತಯಾರಿಸಿದ ಬಳಿಕ ಮಂಡಲ್, ಭಾಷ್ಯಂ ವೃತ್ತದಲ್ಲಿದ್ದ ಆರೋಪಿಗಳ ಮಳಿಗೆಗೆ ಬಂದಿದ್ದಾರೆ. ಆಗ ಆ ಒಡವೆಗಳನ್ನು ಪರಿಶೀಲಿಸಿ ಬರುವುದಾಗಿ ಅಬ್ಬಾಸ್, ಮಂಡಲ್ ಅವರಿಂದ ನೆಕ್ಲೆಸ್ ಪಡೆದು ಹೊರ ಹೋಗಿದ್ದಾನೆ. ಇದಾದ ನಂತರ ಗೆಳೆಯನನ್ನು ಕರೆತರುವುದಾಗಿ ಹೇಳಿ ಮತ್ತಿಬ್ಬರು ಕಾಲ್ಕಿತ್ತಿದ್ದರು.
ಎಷ್ಟು ಹೊತ್ತಾದರೂ ಆರೋಪಿಗಳು ಬಾರದೆ ಹೋದಾಗ ಅನುಮಾನಗೊಂಡ ಮಂಡಲ್, ಆರೋಪಿಗಳಿಗೆ ಕರೆ ಮಾಡಿದ್ದಾರೆ. ಅಷ್ಟರಲ್ಲಿ ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಕೊನೆಗೆ ತಾವು ಮೋಸ ಹೋಗಿರುವುದು ಅರಿತ ಮಂಡಲ್, ತಕ್ಷಣವೇ ಮಾಗಡಿ ರಸ್ತೆ ಠಾಣೆ ಪೊಲೀಸರಿಗೆ ದೂರು ನೀಡಿದರು. ಅಂತೆಯೇ ತನಿಖೆ ನಡೆಸಿದ ಪೊಲೀಸರು, ಅಂತಿಮವಾಗಿ ಒಬ್ಬೊಬ್ಬರಾಗಿ ವಂಚಕರನ್ನು ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.