ಪ್ರೇಯಸಿ ಊರಿಗೆ ತೆರಳಿ ಯುವಕ ಆತ್ಮಹತ್ಯೆ: ಬೆಂಗ್ಳೂರಿನ ಪ್ರೀತಿ ಸೊರಬದಲ್ಲಿ ಅಂತ್ಯ

By Suvarna News  |  First Published Jun 26, 2022, 10:11 PM IST

* ಪ್ರೀತಿಯಲ್ಲಿ ಮೋಸ ಹೋಗಿದಕ್ಕೆ ಯುವಕನೊಬ್ಬ ಆತ್ಮಹತ್ಯೆ
* ಪ್ರೇಯಸಿ ಊರಿಗೆ ಹೋಗಿ ಸುಸೈಡ್ ಮಾಡಿಕೊಂಡ ಪಾಗಲ್ ಪ್ರೇಮಿ
* ಯುವಕ ರೆಕಾರ್ಡ್‌ ಮಾಡಿರುವ‌ ಸೆಲ್ಫಿ ವಿಡಿಯೋ ವೈರಲ್ 


ಶಿವಮೊಗ್ಗ, (ಜೂನ್.26): ಪ್ರೀತಿಯಲ್ಲಿ ಮೋಸ ಹೋಗಿದಕ್ಕೆ ಯುವಕನೊಬ್ಬ ಮನನೊಂದು ಸೆಲ್ಫಿ ವಿಡಿಯೋ ಮಾಡಿಟ್ಟು  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೊರಬದಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಅರಸಿಕೆರೆಯ ನಿವಾಸಿ ದಿಲೀಪ್ ಮೃತ ಯುವಕ. ಕೆಲ‌ ವರ್ಷಗಳಿಂದ ದಿಲೀಪ್​ ಕುಟುಂಬ ಬೆಂಗಳೂರಿನಲ್ಲಿ ವಾಸವಿದೆ. ದಿಲೀಪ್ ಮತ್ತು ಕುಟುಂಬಸ್ಥರು ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದರು. ಅದೇ ಗಾರ್ಮೆಂಟ್ಸ್​ನಲ್ಲಿ ಸೊರಬ ತಾಲ್ಲೂಕಿನ ಬೆಟ್ಟದಕೂರ್ಲಿ ಗ್ರಾಮದ ಯುವತಿಯ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿತ್ತು.

Tap to resize

Latest Videos

ಹೀಗೆ ದಿಲೀಪ್ ಮತ್ತು ಯುವತಿ ಇಬ್ಬರು ಸಹ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.  ನಂತರ ಯುವತಿ ಪ್ರೀತಿ ಮಾಡೋದಕ್ಕೆ ನಿರಾಕರಿಸಿದ್ದಾಳೆ. ಅಲ್ಲದೆ, ದಿಲೀಪ್‌ನಿಂದ ಅಂತರ ಕಾಯ್ದುಕೊಂಡಿದ್ದಾಳೆ. ಇದರಿಂದ ಮನನೊಂದು ದಿಲೀಪ್​  ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾನೆ.

ದಾವಣಗೆರೆ: ಅತ್ಯಾಚಾರವೆಸಗಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಕಾಮುಕ ಆರೆಸ್ಟ್‌

ಯುವತಿ ವಾಸವಿರುವ ಸೊರಬ ತಾಲ್ಲೂಕಿನ ಬೆಟ್ಟದಕೂರ್ಲಿ ಗ್ರಾಮಕ್ಕೆ ತೆರಳಿ, ಅಲ್ಲಿನ ಕೆರೆ ಏರಿ ಮೇಲೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಿಯರು ಆಕಸ್ಮಿಕವಾಗಿ ದಿಲೀಪ್​ ಬಿದ್ದಿರುವುದನ್ನು ನೋಡಿದ್ದಾರೆ. ಪಕ್ಕದಲ್ಲೇ ವಿಷದ ಬಾಟಲಿಯನ್ನು ನೋಡಿ ತಕ್ಷಣ ದಿಲೀಪ್​ನನ್ನು ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ, ಅಷ್ಟೊತ್ತಿಗೆ ದಿಲೀಪ್ ಜೀವ ಹೋಗಿದೆ. 

ಸದ್ಯ ಯುವಕ ರೆಕಾರ್ಡ್‌ ಮಾಡಿರುವ‌ ಸೆಲ್ಫಿ ವಿಡಿಯೋ ವೈರಲ್ ಆಗಿದೆ. ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

click me!