ಚಿಕ್ಕಮಗಳೂರು : ಬೈಕ್‌ ವೀಲಿಂಗ್ ಮಾಡುತ್ತಿದ್ದವರ ಬಂಧನ

By Suvarna News  |  First Published Jun 26, 2022, 9:52 PM IST

* ರಾಷ್ಟ್ರೀಯ ಹೆದ್ದಾರಿಯ ನಡು ರಸ್ತೆಯಲ್ಲಿ ಬೈಕ್ ವೀಲ್ಹಿಂಗ್, 
* ಐದು ಬೈಕ್‌ಗಳಲ್ಲಿ ವೀಲಿಂಗ್ ಮಾಡುತ್ತಿದ್ದವರನ್ನ ಹಿಡಿದ ಪೊಲೀಸ್ರು 
* ಚಿಕ್ಕಮಗಳೂರು ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ವೀಲಿಂಗ್
* ಐದು ಬೈಕ್‌ಗಳಲ್ಲಿ 10 ಯುವಕ ವೀಲಿಂಗ್


ಚಿಕ್ಕಮಗಳೂರು, (ಜೂನ್.26): ಟ್ರಾಫಿಕ್ ನಿಯಮ ಪಾಲಿಸದೇ ಬೈಕ್‌ನಲ್ಲಿ ಶೋಕಿ ಮಾಡುವ ಪುಂಡರಿಗೆ ಕಾಫಿನಾಡಿನಲ್ಲಿ ಪೊಲೀಸರು ಚುರುಕು ಮುಟ್ಟಿಸಿದ್ದಾರೆ. ರಸ್ತೆಯಲ್ಲಿ ವೀಲಿಂಗ್ ಮಾಡಲು ಹೋಗಿ ಎಷ್ಟೋ ಯುವಕರು ತಮ್ಮ ಪ್ರಾಣ ಕಳೆದುಕೊಂಡಿರುವ ದೃಶ್ಯಗಳು ನಮ್ಮ ಕಣ್ಣ ಮುಂದೆ ಜರುಗಿದರೂ ಕೂಡ ಯುವ ಜನತೆ ಇನ್ನೂ ಎಚ್ಚೆತ್ತುಕೊಂಡಿರುವಂತೆ ಕಾಣುತ್ತಿಲ್ಲ. ಚಿಕ್ಕಮಗಳೂರು _ಕಡೂರು ರಾಷ್ಟ್ರೀಯ ಹೆದ್ದಾರಿಯ ನಡು ರಸ್ತೆಯಲ್ಲಿ  ಯುವಕರು ಬೈಕ್ ವೀಲಿಂಗ್ ಮಾಡಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಐದು ಬೈಕ್‌ಗಳಲ್ಲಿ 10 ಯುವಕರು ವೀಲಿಂಗ್
ಚಿಕ್ಕಮಗಳೂರು ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ವೀಲಿಂಗ್ ಮಾಡಿದ್ದ ಐದು ಬೈಕ್‌ಗಳನ್ನ ಸಖರಾಯಪಟ್ಟಣ ಪೊಲೀಸರು ಸೀಜ್ ಮಾಡಿದ್ದಾರೆ. ನಗರದ ಮಧ್ಯಾಹ್ನ 12 ಗಂಟೆಗೆ ಐದು ಬೈಕ್‌ಗಳಲ್ಲಿ 10 ಯುವಕರು ನಡುರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡಿದ್ದಾರೆ. ಆ ಬೈಕ್‌ಗಳು ಚಿಕ್ಕಮಗಳೂರು ನಗರ ದಾಟಿ ಕಡೂರು ತಾಲೂಕಿನ ಸಖರಾಯಪಟ್ಟಣ ಠಾಣಾ ವ್ಯಾಪ್ತಿಗೆ ಹೋಗುವಷ್ಟರಲ್ಲಿ ಸಖರಾಯಪಟ್ಟಣ ಪೊಲೀಸರು ಹಿಡಿದು ಸೀಜ್ ಮಾಡಿದ್ದಾರೆ. ಚಿಕ್ಕಮಗಳೂರು ನಗರದ ದಂಟರಮಕ್ಕಿ ಕೆರೆ ಏರಿ, ಎಐಟಿ ವೃತ್ತ ಹಾಗೂ ಜಿಲ್ಲಾ ಪಂಚಾಯಿತಿ ರಸ್ತೆಯಲ್ಲಿ ಯುವಕರು ರೇಸ್‌ನಲ್ಲಿ ವೀಲಿಂಗ್ ಮಾಡಿದ್ದರು. 

Tap to resize

Latest Videos

ನಿಮಗೇ ಗೊತ್ತಿಲ್ಲದಂತೆ ನಿಮ್ಮ ಕಾರ್ಡ್ ಅವನ ಕೈ ಸೇರುತ್ತೆ, ಕೃತ್ಯ ಪತ್ತೆ ಮಾಡಿದ ಕೇಂದ್ರ ಮಾಜಿ ಸಚಿವೆ ತಮ್ಮ

ನಡು ರಸ್ತೆಯಲ್ಲಿ ವೀಲಿಂಗ್ 
ನಡು ರಸ್ತೆಯಲ್ಲಿ ಯುವಕರು ರೈಡ್ ಮಾಡುತ್ತಿದ್ದ ಬೈಕ್ಗಳ ವೇಗ ಹಾಗೂ ಅಬ್ಬರ ಕಂಡ ಇತರೆ ವಾಹನಗಳ ಸವಾರರು ಆತಂಕದಿಂದ ತಮ್ಮ ವಾಹನಗಳನ್ನ ರಸ್ತೆ ಬದಿಗೆ ನಿಲ್ಲಿಸಿಕೊಂಡು ಅವರು ಹೋದ ಮೇಲೆ ಹೋಗಿದ್ದಾರೆ. ಯುವಕರು ಈ ಬೈಕ್ ವೀಲಿಂಗ್ ದೃಶ್ಯವನ್ನ ಸ್ಥಳಿಯ ವಾಹನ ಸವಾರರು ರೆಕಾರ್ಡ್ ಮಾಡಿದ್ದರು. ನಡು ಮಧ್ಯಾಹ್ನ ರಸ್ತೆ ಮಧ್ಯೆಯೇ ಈ ರೀತಿ ಬೈಕ್ ವೀಲಿಂಗ್ ಮಾಡುವುದನ್ನ ಕಂಡು ಸಾರ್ವಜನಿಕರು ಇವರಿಗೆ ಯಾರ ಭಯವೂ ಇಲ್ಲ. ಹೇಳೋರು-ಕೇಳೋರು ಯಾರಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು. 

ಯುವಕರ ಇಂತಹಾ ಮೋಜು-ಮಸ್ತಿನ ಹುಚ್ಚಾಟದಿಂದ ಯಾರಿಗಾದರೂ ಡಿಕ್ಕಿಯೊಡೆದರೆ ಏನಾಗಬಹುದು ಎಂದು ಗಾಬರಿಯಾಗಿದ್ದರು. ಬೇರೆಯವರಿಗೆ ತೊಂದರೆಯಾಗುವುದರ ಜೊತೆ ವೀಲಿಂಗ್ ಮಾಡುವಾಗ ಬೈಕಿನಲ್ಲಿ ಬಿದ್ದರೆ ಅವರಿಗೂ ಕೈಕಾಲು ಮುರಿದು ಹೋದರೆ ಹೇಗೆ ಎಂದು ಜನರೇ ಆತಂಕಕ್ಕೀಡಾಗಿದ್ದಾರು. ಆದರೆ, ಕೂಡಲೇ ಪೊಲೀಸರು ಅವರನ್ನ ಬಂಧಿಸಿ ಗಾಡಿಗಳನ್ನ ಸೀಜ್ ಮಾಡಿದ್ದರಿಂದ ಸ್ಥಳಿಯರು ಪೊಲೀಸ್ ಇಲಾಖೆಗೂ ಭೇಷ್ ಎಂದಿದ್ದಾರೆ.ಠಾಣೆಯಲ್ಲಿ  ಬೈಕ್ ವೀಲಿಂಗ್ ಮಾಡಬಾರದೆಂದು ಯುವಕರಿಗೆ ಪೊಲೀಸರು ಹೇಳಿದ ಬುದ್ಧಿವಾದ ಹೇಳಿದ್ದಾರೆ. ಇದರು ಎಷ್ಟರಮಟ್ಟಿಗೆ ಯುವರಿಕೆ ಅರ್ಥವಾಯಿತು ಎಂಬುದು ಮಾತ್ರ ಗೊತ್ತಿಲ್ಲ. ಆದರೆ ಬೈಕ್ ಸೀಜ್ ಮಾಡುವ ಮೂಲಕ ಪೊಲೀಸರು  ಎಚ್ಚರಿಕೆಯಂತೂ ನೀಡಿದ್ದಾರೆ.

click me!