* ಅಪ್ಪನ ಕೆಲಸ ನನಗೆ ನೀಡಿಲ್ಲ ಎಂದು ಮಗ ಆತ್ಮಹತ್ಯೆಗೆ ಯತ್ನ
* ಬಹುದೇಶೀಯ ಕಂಪನಿಯ ಎದುರು ವಿಷ ಸೇವಿಸಿ ಆತ್ಮಹತ್ಯಗೆ ಯತ್ನ.
* ಕೆಲಸ ನೀಡಿಲ್ಲ ಎಂದರೇ ಕುಟುಂದವರೆಲ್ಲಾ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ.
ಕೋಲಾರ, (ಜೂನ್, 17): ಕೆಲಸ ನೀಡದಿದ್ದಕ್ಕೆ ಇಲ್ಲೊಬ್ಬ ಯುವಕ ಪ್ರತಿಷ್ಠಿತ ಬಹುದೇಶಿ ಕಂಪನಿಯ ಮುಂಭಾಗ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕೆಲಸ ನೀಡಲಿಲ್ಲಾ ಅಂದ್ರೆ ಕುಟುಂಬಸ್ಥರೆಲ್ಲಾ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕ್ತಿದ್ದಾನೆ. ಅದ್ಯಾಕೆ ಅನ್ನೋ ಕುತೂಹಲ ಮುಂದಿದೆ ನೋಡಿ.
ಕೋಲಾರ ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಬಹುದೇಶಿಯ ಕಂಪನಿಯ ಮುಂಭಾಗ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಾಡ೯ನ್ ಅಡ್ಮಿನ್ ಆಗಿ ಕೆಲಸ ಮಾಡ್ತಿದ್ದ ಮೋಟಪ್ಪ ಎಂಬುವವರು ಕಳೆದ ಡಿಸೆಂಬರ್ ನಲ್ಲಿ ಸಾವನಪ್ಪಿದ್ದರು. ಈ ಕಂಪನಿಗೆ ಮೋಟಪ್ಪನವರು ಜಾಗ ಮಾರಾಟ ಮಾಡಿರುತ್ತಾರೆ,ಇದರ ಗುರುತಾಗಿ ಈ ಬಹುದೇಶಿಯ ಕಂಪನಿಯವರು ಸಹ ಇವರಿಗೆ ಗಾಡ೯ನ್ ಅಡ್ಮಿನ್ ಆಗಿ ಕೆಲಸ ನೀಡಿರುತ್ತಾರೆ. ಆದ್ರೆ ಮೋಟಮ್ಮ ಆಕಸ್ಮಿಕವಾಗಿ ಸಾವನಪ್ಪಿರುವ ಹಿನ್ನಲೆ ಕುಟುಂಬಸ್ಥರು ಇದೀಗ ಆ ಕೆಲಸವನ್ನು ಹಿರಿಯ ಮಗ ಶಿವರಾಜ್ ಗೆ ನೀಡಿ ಎಂದು ಪಟ್ಟು ಹಿಡಿದಿದ್ದಾರೆ.
undefined
ಅದ್ರೆ, ಕಂಪನಿಯವರು ಆ ರೀತಿ ಕೆಲಸ ನೀಡೋದಕ್ಕೆ ಬರೋದಿಲ್ಲಾ ಎಂದು ಶಿವರಾಜ್ ಗೆ ಹೇಳಿ ಕಳುಹಿಸಿದ್ದಾರೆ. ಇದಕ್ಕೆ ಮನನೊಂದ ಶಿವರಾಜ್ ಕಂಪನಿಯ ಮೂರು ಜನರ ಹೆಸರನ್ನು ಡೆತ್ ನೋಟ್ ಬರೆದಿಟ್ಟು ಆವರಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಕಾಮಿ೯ಕರು ಕೂಡಲೇ ಅಂಬ್ಯುಲೆನ್ಸ್ ಕರೆಸಿ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಇದರಿಂದ ಶಿವರಾಜ್ ಪ್ರಾಣಾಪಾಯದಿಂದ ಪಾರಾಗಿfದು. ಚಿಕಿತ್ಸೆ ಪಡೆಯುತ್ತಿದ್ದಾರೆ. ಇಷ್ಟೆಲ್ಲಾ ಆದ್ರೂ ಸಹ ನನಗೆ ಕೆಲಸ ನೀಡೋದಿಲ್ಲಾ ಅಂದ್ರೆ ನಮ್ಮ ಕುಟುಂಬದ ಆರೂ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾನೆ.
ಇನ್ನು ಶಿವರಾಜ್ ಕೋಲಾರ ತಾಲೂಕಿನ ಅಪ್ಪಸಂದ್ರ ಗ್ರಾಮದ ನಿವಾಸಿ,ಮದವೆಯಾಗಿ ಇಬ್ಬರು ಮಕ್ಕಳು ಸಹ ಇದ್ದಾರೆ,ಕುಟುಂಬದ ನಿವ೯ಹಣೆಯನ್ನು ತಂದೆ ಮೋಟಪ್ಪ ನೋಡಿಕೊಂಡು ಬರುತ್ತಿದ್ದರು. ಆಕಸ್ಮಿಕವಾಗಿ ಮೋಟಪ್ಪ ಸಾವನಪ್ಪಿದ ಬಳಿಕ ಕುಟುಂಬ ನಿವ೯ಹಣೆ ಕಷ್ಟವಾಗುತ್ತಿದೆ. ಆಗಾಗಿ ಆ ಕೆಲಸ ನೀಡಿ,ಉಳುಮೆ ಮಾಡಿಕೊಂಡು ಜೀವನ ಮಾಡೋಣ ಅಂದ್ರೆ ಭೂಮಿಯನ್ನು ಮಾರಾಟ ಮಾಡಿದ್ದೇವೆ ಅನ್ನೋದು ಕುಟುಂಬಸ್ಥರ ಗೋಳಾಟ. ಸಾಕಷ್ಟು ಬಾರಿ ನಾವು ಮನವಿ ಮಾಡಿದ್ದೇವೆ ನೋಡೋಣ ಎಂದು ಈಗ ನಿನಗೆ ಕೆಲಸ ನೀಡೋದಕ್ಕೆ ಬರೋದಿಲ್ಲ ಎಂದು ಹೇಳ್ತಿದಾರೆ. ಈಗಾದ್ರೆ ನಾವು ಜೀವನಕ್ಕೆ ಏನು ಮಾಡೋದು ಅನ್ನೋದು ಕುಟುಂಬಸ್ಥರ ಅಳಲು.
ಒಟ್ಟಾರೆ ಇಲ್ಲಿ ಯಾರದು ತಪ್ಪು ಯಾರದು ಸರಿ ಅನ್ನೋದನ್ನ ಹೇಳೊದು ಕಷ್ಟ.ಒಂದೂ ಕಡೆ ಮಾನವಿಯತೆ ದೃಷ್ಟಿಯಿಂದ ಮೃತ ಮೋಟಪ್ಪರಿಗೆ ಕಂಪನಿ ಕೆಲಸ ನೀಡಿತ್ತು,ಆದ್ರೀಗ ಮಗನೂ ಅದೇ ಕೆಲಸ ಕೇಳ್ತಿದ್ಧಾನೆ.ಇಲ್ಲಿ ಯಾರ ವಿರುದ್ದ ಕ್ರಮ ಕೈಗೊಳ್ಳಬೇಕು ಅಂತ ಅಧಿಕಾರಿಗಳು ಸಹ ಗೊಂದಲದಲ್ಲಿದ್ದಾರೆ.