ಜೈಲಲ್ಲಿದ್ದ ಮಗನಿಗೆ ಬಟ್ಟೆ ಬ್ಯಾಗ್ ನೀಡಲು ಬಂದ ಅಮ್ಮನೂ ಕಂಬಿ ಹಿಂದೆ

Published : Jun 17, 2022, 07:41 PM ISTUpdated : Jun 17, 2022, 08:05 PM IST
ಜೈಲಲ್ಲಿದ್ದ ಮಗನಿಗೆ ಬಟ್ಟೆ ಬ್ಯಾಗ್ ನೀಡಲು ಬಂದ ಅಮ್ಮನೂ ಕಂಬಿ ಹಿಂದೆ

ಸಾರಾಂಶ

* ಜೈಲಿನಲ್ಲಿದ್ದ ಮಗನಿಗೆ ಬಟ್ಟೆ ಬ್ಯಾಗ್ ನೀಡುವಾಗ ಪತ್ತೆಯಾಯ್ತು ಡ್ರಗ್ಸ್ * ಮಗನ ಜತೆ ಸೆರಮನೆ ಸೇರಿದ ತಾಯಿ * ಪರ್ವೀನ್ ತಾಜ್ ಬಂಧಿತ ಮಹಿಳೆ

ಬೆಂಗಳೂರು, (ಜೂನ್. 17):   ತಾಯಿ ತನ್ನ ಮನಗ ಚೆನ್ನಗಿರಬೇಕು. ಯಾವುದೇ ಕೆಟ್ಟ ಚಟಗಳಿಗೆ ಬಲಿಯಾಗಬಾರದು ಅಂದಿಕೊಂಡಿರುತ್ತಾಳೆ.ಆದ್ರೆ, ಇಲ್ಲೋರ್ವ ತಾಯಿ ಮಗನಿಗೆ ಡ್ರಗ್ಸ್ ಕೊಡಲು ಹೋಗಿ ಜೈಲು ಸೇರಿದ್ದಾಳೆ.

ಹೌದು... ಜೈಲು ಹಕ್ಕಿಯಾಗಿರುವ ಮಗನಿಗೆ ಭೇಟಿಯಾಗುವ ನೆಪದಲ್ಲಿ ಮಾದಕ ವಸ್ತುವಾದ ಹ್ಯಾಶಿಷ್ ಆಯಿಲ್ ನೀಡಲು ಯತ್ನಿಸಿದ್ದ ತಾಯಿಯನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಪರ್ವೀನ್ ತಾಜ್ ಬಂಧಿತ ಮಹಿಳೆ.  

ಈಕೆಯ ಮಗ ಮೊಹಮ್ಮದ್ ಬಿಲಾಲ್ ಎಂಬಾತ  ರಾಬರಿ ಸೇರಿದಂತೆ 11 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಹೀಗಾಗಿ ಕೋಣನಕುಂಟೆ ಪೊಲೀಸರು ಬಿಲಾನ್ ನನ್ನ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದರು. ತಾಯಿ-ಮಗ ಶಿಕಾರಿಪಾಳ್ಯದಲ್ಲಿ ವಾಸವಾಗಿದ್ದರು‌. ಮಗನನ್ನ ನೋಡಲು ಆಗಾಗ ಪರ್ವೀನ್ ಜೈಲಿಗೆ ಬರುತ್ತಿದ್ದಳು. ಆದರೆ ಕಳೆದ ಜೂನ್ 13ರಂದು ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದ ಈಕೆ ಮಗನಿಗೆ ಬಟ್ಟೆ ಕೊಡುವ ನೆಪದಲ್ಲಿ ಊಟದ ಬಾಕ್ಸ್ ನಲ್ಲಿ 5 ಲಕ್ಷ ಮೌಲ್ಯದ ಹ್ಯಾಶಿಷ್ ಆಯಿಲ್ ತಂದಿದ್ದಳು. 

ಡ್ರಗ್ಸ್‌ ಕೇಸಲ್ಲಿ ಜೈಲು ಸೇರಿದ ಪತಿಗೆ ಬೇಲ್‌ ಕೊಡಿಸಲು ಮಾದಕವಸ್ತು ಮಾರಾಟಕ್ಕಿಳಿದ ಪತ್ನಿ!

ಜೈಲು ಸಿಬ್ಬಂದಿ ಈಕೆಯನ್ನು ಪರಿಶೀಲಿಸಿದ ವೇಳೆ  ಮಾದಕ ವಸ್ತು ಪತ್ತೆಯಾಗಿತ್ತು. ತಕ್ಷಣ ಜೈಲು ಸಿಬ್ಬಂದಿ ಪರಪ್ಪನ ಅಗ್ರಹಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿ ಪರ್ವೀನ್ ತಾಜ್ ಹಾಗೂ ಮಗ ಬಿಲಾಲ್ ಮೇಲೆ ಕೇಸ್ ದಾಖಲಿಸಿರುವ ಪರಪ್ಪನ ಅಗ್ರಹಾರ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ನನಗೆ ಯಾರೋ ಪೋನ್ ಮಾಡಿ ಜೈಲಿನಲ್ಲಿರುವ ವ್ಯಕ್ತಿಗೆ ಮಗನ ಮುಖಾಂತರ ಬಟ್ಟೆ‌ಯ ಬ್ಯಾಗ್ ನೀಡಬೇಕೆಂದು ಎಂದು ಪೋನ್‌ ಮಾಡಿದ್ದರು.‌ ಇದರಂತೆ ನಾನು ಬ್ಯಾಗ್ ನೀಡಲು ಒಪ್ಪಿಕೊಂಡೆ.. ಬ್ಯಾಗ್ ನಲ್ಲಿ ಡ್ರಗ್ಸ್ ಇರುವುದು ಗೊತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾಳೆ.‌‌ ಈಕೆ‌ ಹೇಳಿಕೆ ಮೇರೆಗೆ ಪೋನ್‌ ಬಂದಿದ್ದ ಮೊಬೈಲ್‌‌ ನಂಬರ್ ಆಧರಿಸಿ ಪೊಲೀಸರು ತನಿಖೆ‌‌ ನಡೆಸುತ್ತಿದ್ದಾರೆ..

ಡ್ರಗ್ಸ್‌ ಮಾರಾಟ ಪ್ರಕರಣದಲ್ಲಿ ಜೈಲು ಸೇರಿರುವ ತನ್ನ ಪತಿ ಬಿಡಿಸಲು ತಾನೂ ಕೂಡ ಡ್ರಗ್ಸ್‌ ದಂಧೆಗಿಳಿದಿದ್ದ ವಿದೇಶಿ ಮಹಿಳೆಯೊಬ್ಬಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Bengaluru Drug Racket: ಉಡ್ತಾ ಬೆಂಗಳೂರು ಆಗ್ತಿದ್ಯಾ ಸಿಲಿಕಾನ್ ಸಿಟಿ? ಕೇವಲ 15 ದಿನದಲ್ಲಿ 150 ಡ್ರಗ್ಸ್‌ ಕೇಸ್‌

ಮಹದೇವಪುರದ ನಿವಾಸಿ ಫಾತಿಮಾ ಒಮೇರಿ ಬಂಧಿತಳಾಗಿದ್ದು, ಆರೋಪಿಯಿಂದ .1.5 ಲಕ್ಷ ಮೌಲ್ಯದ 13 ಗ್ರಾಂ ಎಂಡಿ ಕ್ರಿಸ್ಟೆಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಮ್ಮನಹಳ್ಳಿ ರಸ್ತೆ ಜಲವಾಯು ವಿಹಾರದ ಸಮೀಪದ ಡ್ರಗ್‌್ಸ ಮಾರಾಟಕ್ಕೆ ಬುಧವಾರ ಯತ್ನಿಸಿದ್ದಾಗ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಬೆಂಗಳೂರು ಸೇರಿದಂತೆ ದೇಶಾದ್ಯಂತ ನಿತ್ಯ ಅಸಂಖ್ಯಾತ ಮಂದಿ ಡ್ರಗ್ಸ್‌ ಪ್ರಕರಣಗಳಲ್ಲಿ ಸಿಕ್ಕಿಬೀಳುತ್ತಲೇ ಇದ್ದಾರೆ.  ಸದ್ಯ ಬೆಂಗಳೂರಿನಲ್ಲಿ ದಾಖಲಾಗುತ್ತಿರುವ ಕೇಸುಗಳ ಸಂಖ್ಯೆ ಚೆಚ್ಚಿಬೀಳಿಸುವಂತಿದೆ.  ಪಬ್, ಕ್ಲಬ್, ಲೇಟ್ ನೈಟ್ ಪಾರ್ಟಿ, ಕಾಲೇಜಿನಲ್ಲಿ ಡ್ರಗ್ಸ್ ದಂಧೆ ಎಗ್ಗಿಲ್ಲದೆ ನಡೀಯುತ್ತಿದ್ದು, ನಗರದಲ್ಲಿ ನಡೆಯುವ ಬಹುತೇಕ ಹೈಎಂಡ್ ಪಾರ್ಟಿಗಳು ಡ್ರಗ್ ಪಾರ್ಟಿಗಳಾಗುತ್ತಿವೆ (Drug Party). 

ದಿನವೊಂದಕ್ಕೆ 10-15 ಡ್ರಗ್ ಕೇಸ್ ದಾಖಲಾಗುತ್ತಿವೆ. ಜೂನ್ 1 ರಿಂದ 15ರ ವರೆಗೆ‌ ಬರೋಬ್ಬರಿ 130 ಕೇಸ್ ದಾಖಲಾಗಿವೆ.  ಡ್ರಗ್ಸ್ ಪೆಡ್ಲರ್‌ಗಳು ಹಾಗೂ ಡ್ರಗ್ ಸೇವಿಸುವವರೂ ಕೂಡ ಪೊಲೀಸರು ಬಲೆಗೆ ಬೀಳುತಿದ್ದಾರೆ.  ಜೂನ್ 15 ನೇ ತಾರೀಖಿನೊಂದು ಒಂದೇ ದಿ‌ನ 12 ಎನ್‌ಡಿಪಿಎಸ್ (Narcotic Drugs and Psychotropic Substances Act) ಕೇಸ್ ದಾಖಲಾಗಿವೆ. ಹೀಗಾಗಿ ಸಿಲಿಕಾನ್ ಸಿಟಿ ಇದೀಗ ಡ್ರಗ್ಸ್ ದಂಧೆಯ ಹಾಟ್ ಸಿಟಿಯಾಗಿರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!