Karnataka Crimes: ಮನೆ ಮೇಲೆ ಆಟ ಆಡುವಾಗ ಜಗಳ; ಚಾಕು ಇರಿತಕ್ಕೆ ಬಾಲಕ ಸಾವು!

By Ravi Janekal  |  First Published Jul 4, 2023, 6:51 AM IST

ಕ್ಷುಲ್ಲಕ ಕಾರಣಕ್ಕೆ ನಡುರಸ್ತೆಯಲ್ಲೇ ಯುವಕನಿಗೆ ಚಾಕು ಇರಿದ ಘಟನೆ ನಗರದ ಇಕ್ಬಾಲ್ ಕಾಲೋನಿಯಲ್ಲಿ ನಡೆದಿದೆ.


ಕಲಬುರಗಿ (ಜು.4): ಕ್ಷುಲ್ಲಕ ಕಾರಣಕ್ಕೆ ನಡುರಸ್ತೆಯಲ್ಲೇ ಯುವಕನಿಗೆ ಚಾಕು ಇರಿದ ಘಟನೆ ನಗರದ ಇಕ್ಬಾಲ್ ಕಾಲೋನಿಯಲ್ಲಿ ನಡೆದಿದೆ.

ಮೊಹಮ್ಮದ್ ಹಸನ್(22) ದುಷ್ಕರ್ಮಿಯಿಂದ ಚಾಕು ಇರಿತಕ್ಕೊಳಗಾದ ಯುವಕ. ಸ್ನೇಹಿತರೊಂದಿಗೆ ಹೋಟೆಲ್‌ನಲ್ಲಿ ಟೀ ಕುಡಿಯಲು ಹೋಗಿದ್ದ ಯುವಕ. ಈ ವೇಳೆ ಜೊತೆಗಿದ್ದ ಸ್ನೇಹಿತರೊಂದಿಗೆ ಸಣ್ಣ ವಿಷಯಕ್ಕೆ ಜಗಳ ಆಗಿದೆ. ಮಾತಿಗೆ ಮಾತು ಬೆಳೆದು ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಜತೆಗಿದ್ದ ಸ್ನೇಹಿತನೇ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.

Tap to resize

Latest Videos

ಚಾಕು ಇರಿತಕ್ಕೊಳಗಾದ ಯುವಕ ಗಂಭೀರ ಗಾಯಗೊಂಡು ಕುಸಿದು ಬಿದ್ದಿದ್ದಾನೆ. ಬಳಿಕ ಗಾಯಗೊಂಡ ಯುವಕನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಸಿಸಿಟಿವಿ ಕ್ಯಾಮೆರಾ, ಮೊಬೈಲ್ ನಲ್ಲಿ ಸೆರೆಹಿಡಿಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್ ಆಗಿದೆ. ಈ ಘಟನೆ ಸಂಬಂದ ಆರ್‌ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಹಣ ಡಬಲ್ ಮಾಡ್ತೀನಿ ಅಂತ ಬಂದ್ರೆ ಹುಷಾರ್..!: ದುಡ್ಡು ಕೊಟ್ಟ ಲೇಡಿಯನ್ನೇ ಕಿಡ್ನ್ಯಾಪ್ ಮಾಡಿಬಿಟ್ರು..!

ಅಪ್ರಾಪ್ತ ಬಾಲಕರ ನಡುವೆ ಜಗಳ ಕೊಲೆಯಲ್ಲಿ ಅಂತ್ಯ!

ಮೈಸೂರು: ಆಟ ಆಡುವಾಗ ಅಪ್ರಾಪ್ತ ಬಾಲಕರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಬಾಲಕನಿಗೆ ಚಾಕು ಇರಿದು ಹತ್ಯೆ ಮಾಡಿರುವ ಘಟನೆ ಮೈಸೂರಿನ ಕಬರಸ್ತಾನ ಜಂಕ್ಷನ್‌ನಲ್ಲಿ ನಡೆದಿದೆ.

ಫರಾನ್ ಷರೀಫ್(16) ಕೊಲೆಯಾದ ಬಾಲಕ.  ಮನೆ ಮೇಲೆ ಆಟವಾಡುತ್ತಿದ್ದ ಬಾಲಕರು. ಈ ವೇಳೆ ವೇಳೆ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಇನ್ನೊಬ್ಬ ಬಾಲಕ ಅಲ್ಲೇ ಇದ್ದ ಚಾಕು ತಂದು ಬಾಲಕನಿಗೆ ಇರಿದು ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿದ ಬಾಲಕ 15 ವರ್ಷದವನಾಗಿದ್ದಾನೆ. ಚಾಕು ಇರಿತಕ್ಕೊಳಗಾದ ಬಾಲಕ ತೀವ್ರ ರಕ್ತಸ್ರಾವದಿಂದ ಕುಸಿದಿದ್ದಾನೆ. ಈ ವೇಳೆ ಪೋಷಕರು ಘಟನೆ ಕಂಡು ಬೆಚ್ಚಿಬಿದ್ದಿದ್ದಾರೆ. ತಕ್ಷಣ ಗಾಯಗೊಂಡ ಬಾಲಕನನ್ನು ಕೆಆರ್ ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಕೊಲೆಗಾರ ಬಾಲಕನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು. ಈ ಘಟನೆ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!