ಅಡಕೆ ಕೊಯ್ಯುವಾಗ ವಿದ್ಯುತ್‌ ಪ್ರವಹಿಸಿ ಯುವಕ ಸಾವು

By Kannadaprabha News  |  First Published Jun 10, 2023, 4:44 AM IST

ಅಡಕೆ ಮರದಿಂದ ಅಡಕೆ ತೆಗೆಯುತ್ತಿದ್ದ ವೇಳೆ ವಿದ್ಯುತ್‌ ಪ್ರವಹಿಸಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಮಲಾಯಿಬೆಟ್ಟು ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.


ಬಂಟ್ವಾಳ (ಜೂ.10): ಅಡಕೆ ಮರದಿಂದ ಅಡಕೆ ತೆಗೆಯುತ್ತಿದ್ದ ವೇಳೆ ವಿದ್ಯುತ್‌ ಪ್ರವಹಿಸಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಮಲಾಯಿಬೆಟ್ಟು ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಬೋಳಿಯಾರು ಗ್ರಾಮದ ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಶಾಫಿ ಮೃತಪಟ್ಟದುರ್ದೈವಿ.

Tap to resize

Latest Videos

ಸಜೀಪ ಮುನ್ನೂರು ಗ್ರಾಮದ ಮೂಸಬ್ಬ ಎಂಬವರ ತೋಟದಲ್ಲಿ ಅಡಕೆ ಕೀಳುವ ವೇಳೆ ಈ ದುರ್ಘಟನೆ ನಡೆದಿದೆ. ಶಾಫಿ ಅವರು ಕಳೆದ ಅನೇಕ ವರ್ಷಗಳಿಂದ ಅಡಕೆ ವ್ಯವಹಾರ ನಡೆಸುತ್ತಿದ್ದರು. ವರ್ಷಂಪ್ರತಿ ಅಡಕೆಯನ್ನು ಗಿಡದಿಂದಲೇ ಕ್ರಯಕ್ಕೆ ಪಡೆದು ಅ ಬಳಿಕ ಅಡಕೆ ಕೀಳುವುದನ್ನು ಇವರು ಮಾಡುತ್ತಾ ಬಂದಿದ್ದರು. ಈ ವರ್ಷ ಅಡಕೆ ಕೀಳಲು ಸಾವಿರಾರು ರು. ನೀಡಿ ಹೊಸ ಪೈಬರ್‌ ಸಲಕೆಯನ್ನು ಖರೀದಿ ಮಾಡಿದ್ದರು. ಇಂದು ಅದೇ ಹೊಸ ಸಲಕೆಯಲ್ಲಿ ಮಲಾಯಿಬೆಟ್ಟುವಿನ ತೋಟದಲ್ಲಿ ಅಡಕೆ ಕೀಳುವ ವೇಳೆ ಶಾಫಿ ಅವರ ಕೈಯಿಂದ ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಹಾದು ಹೋಗಿರುವ ಎಲ….ಟಿ.ವಯರ್‌ಗೆ ತಾಗಿದೆ. ಪೈಬಲ್‌ ಸಲಕೆಯಲ್ಲಿ ಅಡಕೆ ಕೀಳಲು ಅಳವಡಿಸಿದ ಕಬ್ಬಿಣದ ಕತ್ತಿಯ ಮೂಲಕ ವಿದ್ಯುತ್‌ ಹರಿದು ಶಾಫಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಶಾರ್ಟ್ ಸರ್ಕ್ಯೂಟ್‌ನಿಂದ ಮಂಗ ಸಾವು: ಟೋಪಿ, ಟವೆಲ್, ಶರ್ಟ್ ಪ್ಯಾಂಟ್ ತೊಡಿಸಿ ಪೂಜೆ ಮಾಡಿದ ಗ್ರಾಮಸ್ಥರು !

 

ಸ್ಥಳಕ್ಕೆ ಸಜೀಪಮುನ್ನೂರು ಗ್ರಾಮಕರಣಿಕೆ ಸ್ವಾತಿ, ಮೆಸ್ಕಾಂನ ಅಧಿಕಾರಿಗಳು ಹಾಗೂ ಗ್ರಾಮಾಂತರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿದ್ಯುತ್‌ ತಗುಲಿ ನವಿಲು ಸಾವು

ಗುಳೇದಗುಡ್ಡ: ಆಕಸ್ಮಿಕವಾಗಿ ವಿದ್ಯುತ್‌ ತಗುಲಿ ರಾಷ್ಟ್ರೀಯ ಪಕ್ಷಿಯಾದ ನವಿಲು ಸಾವಿಗೀಡಾದ ಘಟನೆ ಕೋಟೆಕಲ್‌ ಗ್ರಾಮದಲ್ಲಿ ಗುರುವಾರ ನಡೆದಿದೆ. ಕೋಟೆಕಲ್‌ ಗ್ರಾಮದ ರಾಜ್ಯಹೆದ್ದಾರಿಯ ಪಕ್ಕದ ವಿದ್ಯುತ್‌ ಕಂಬದಲ್ಲಿನ ವಿದ್ಯುತ್‌ ಪರಿವರ್ತಕದ ಮೇಲೆ ಕುಳಿತಾಗ ನವಿಲಿಗೆ ವಿದ್ಯುತ್‌ ತಗುಲಿ ನವಿಲು ಸ್ಥಳದಲ್ಲಿಯೇ ಸಾವಿಗೀಡಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ವಿದ್ಯುತ್‌ ಸ್ಪರ್ಶದಿಂದ ತಕ್ಷಣ ನವಿಲು ನೆಲಕ್ಕುರುಳಿ ಬಿದ್ದಿತು. ತ್‌ಕ್ಷಣ ಸ್ಥಳದಲ್ಲಿದ್ದ ಜನರು ನವಿಲನ್ನು ಎತ್ತಿ ಬಂದು ಅದರ ಬಾಯಿಗೆ ನೀರು ಹಾಕಿ, ನವಿಲನ್ನು ಬದುಕಿಸಲು ಪ್ರಯತ್ನಿಸಿದರೂ ನವಿಲು ಬದುಕುಳಿಯಲಿಲ್ಲ. ವಿದ್ಯುತ್‌ ತಗುಲಿದ್ದರಿಂದ ನವಿಲಿನ ಹೊಟ್ಟೆಭಾಗ ಸುಟ್ಟು ಹೋಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಡಿಸಿ ಕಚೇರಿ ಚಾಲಕ ಆತ್ಮಹತ್ಯೆ

ಮಂಗಳೂರು: ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಬಾಲಕೃಷ್ಣ (59) ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರು ಈ ಹಿಂದೆ ಆರೋಗ್ಯ ಇಲಾಖೆಯಲ್ಲಿ ಚಾಲಕರಾಗಿದ್ದು, ಕೆಲವು ವರ್ಷಗಳಿಂದ ಹೆಚ್ಚುವರಿ ಜಿಲ್ಲಾಧಿಕಾರಿಗಳ ಕಾರಿನಲ್ಲಿ ಚಾಲಕರಾಗಿದ್ದರು. ಹೃದಯ ಹಾಗೂ ಕರುಳಿನ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಬಂಗ್ರಕೂಳೂರು ಮಾಲಾಡಿ ಕೋರ್ಚ್‌ ಬಳಿಯ ರಾಘವೇಂದ್ರ ನಿಲಯ ಎಂಬಲ್ಲಿ ವಾಸಿಸುತ್ತಿದ್ದರು. ಗುರುವಾರ ಬೆಳಗ್ಗೆ ಮಹಡಿಗೆ ಹೋದವರು ಸೀರೆಯಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಾಮರಾಜನಗರ: ಮದ್ಯದ ಜತೆ ವಿಷ ಸೇವಿಸಿ ಇಬ್ಬರು ಆತ್ಮೀಯ ಸ್ನೇಹಿತರು ಆತ್ಮಹತ್ಯೆಗೆ ಯತ್ನ, ಓರ್ವ ಸಾವು

ಪುತ್ರ ಚೇತನ್‌ ನೀಡಿದ ದೂರಿನಂತೆ ಕಾವೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

click me!