ಕಲ​ಬು​ರ​ಗಿ: ಯುವಕನ ಕೊಲೆ, ಇಬ್ಬರ ಬಂಧನ

By Kannadaprabha News  |  First Published Jun 9, 2023, 10:45 PM IST

ಜೂ.5 ರಂದು ರಾತ್ರಿ 10ರ ಸುಮಾರಿಗೆ ಕ್ಷುಲ್ಲಕ ಕಾರಣಕ್ಕೆ ಬಿಲಾಲಾಬಾದ್ನ ಬಾಬಾಖಾನ್‌ ಅಲಿಯಾಸ್‌ ಉಮೇರಖಾನ್‌ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಕಲ​ಬು​ರ​ಗಿ(ಜೂ.09):  ಇಲ್ಲಿನ ಆಜಾದಪುರ ರಸ್ತೆಯ ಹುಂಡೇಕಾರ ಕಾಲೋನಿ ಹತ್ತಿರ ಜೂ.5ರಂದು ರಾತ್ರಿ 10ರ ಸುಮಾರಿಗೆ ಕ್ಷುಲ್ಲಕ ಕಾರಣಕ್ಕೆ ನಡೆದ ಬಿಲಾಲಾಬಾದ್ನ ಬಾಬಾಖಾನ್‌ ಅಲಿಯಾಸ್‌ ಉಮೇರಖಾನ್‌ (25) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹುಂಡೇಕಾರ ಕಾಲೋನಿಯ ಮೊಹಮ್ಮದ್‌ ಅಲ್ಲಾಬಕ್ಷ ಅಲಿ ಅಲಿಯಾಸ್‌ ಸೈಫನ್‌ (23) ಮತ್ತು ಮೊಹಮ್ಮದ್‌ ಮಕದೂಮ್‌ ಅಲಿ (20) ಬಂಧಿತ ಆರೋಪಿಗಳು. ಜೂ.5 ರಂದು ರಾತ್ರಿ 10ರ ಸುಮಾರಿಗೆ ಕ್ಷುಲ್ಲಕ ಕಾರಣಕ್ಕೆ ಬಿಲಾಲಾಬಾದ್ನ ಬಾಬಾಖಾನ್‌ ಅಲಿಯಾಸ್‌ ಉಮೇರಖಾನ್‌ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Tap to resize

Latest Videos

undefined

Bengaluru: ಉಬರ್‌, ರ್ಯಾಪಿಡೋ ಇನ್‌ಸೆಂಟಿವ್‌ಗೆ ಕನ್ನ ಹಾಕಿದ ಮೂವರ ಬಂಧನ

ನಗರ ಉಪ ಪೊಲೀಸ್‌ ಆಯುಕ್ತರಾದ ಅಡ್ಡೂರು ಶ್ರೀನಿವಾಸಲು, ಐ.ಎ.ಚಂದ್ರಪ್ಪ, ಸಬ್‌ ಅರ್ಬನ್‌ ಉಪ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರಾದ ಗೀತಾ ಬೇನಾಳ ಅವರ ಮಾರ್ಗದರ್ಶನದಲ್ಲಿ ವಿಶ್ವವಿದ್ಯಾಲಯ ಪೊಲೀಸ್‌ ಠಾಣೆ ಇನ್ಸಪೆಕ್ಟರ್‌ ಸತೀಶ ಕಣಿಮೇಶ್ವರ, ಸಿಬ್ಬಂದಿಗಳಾದ ರಾಜು ಟಾಕಳೆ, ಪ್ರಭಾಕರ, ಮಂಜುನಾಥ, ಈರಣ್ಣ, ಕಿಶೋರ, ವಿಶ್ವನಾಥ ಅವರನ್ನೊಳಗೊಂಡ ತಂಡ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

click me!