ಅಪ್ರಾಪ್ತ ಬಾಲಕಿಯ ಫೋಟೊ ಮಾರ್ಫ್ ಮಾಡಿ ಹರಿಬಿಡ್ತಿದ್ದ ಯುವಕನ ಬಂಧನ!

By Ravi JanekalFirst Published May 28, 2024, 10:31 PM IST
Highlights

ಯುವತಿ ಫೋಟೊ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದ ಯುವಕನೋರ್ವನನ್ನ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಮೇ.28): ಯುವತಿ ಫೋಟೊ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದ ಯುವಕನೋರ್ವನನ್ನ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಅಪ್ರಾಪ್ತ ಬಾಲಕಿಯರನ್ನ ಟಾರ್ಗೆಟ್ ಮಾಡುತ್ತಿದ್ದ ಆರೋಪಿ. ಮೂರು ಮೊಬೈಲ್ ಬಳಕೆ ಮಾಡುತ್ತಿದ್ದ ಕ್ರಿಮಿನಲ್, ಮೂರು ಮೊಬೈಲ್‌ಗಳನ್ನು ಬಳಸಿಕೊಂಡು ಹಲವು ಅಕೌಂಟ್ ತೆರೆದು ಕೃತ್ಯ. ಇನ್ಸ್‌ಟಾಗ್ರಾಮ್‌ನಲ್ಲಿ ಅಕೌಂಟ್ ತೆರೆದು ಬಾಲಕಿಯರ ಫೋಟೊಗಳನ್ನ ಮಾರ್ಫ್ ಮಾಡಿ ಹರಿಬಿಡುತ್ತಿದ್ದ. ಇತ್ತೀಚೆಗೆ 15 ವರ್ಷದ ಬಾಲಕಿಯೊಬ್ಬಳ ಫೋಟೊ ಮಾರ್ಫ್ ಮಾಡಿದ್ದ ಆರೋಪಿ. ಮಾರ್ಫ್ ಮಾಡಿದ್ದ ವಿಚಾರ ಬಾಲಕಿಯ ಪೋಷಕರ ಗಮನಕ್ಕೆ ಬಂದಿತ್ತು. ಈ ಬಗ್ಗೆ ಈಶಾನ್ಯ ಸೈಬರ್ ಪೊಲೀಸ್‌ ಠಾಣೆಗೆ ದೂರು ನೀಡಿದ್ದ ಪೋಷಕರು.

Latest Videos

ವಿವಾಹಿತ ಪ್ರಿಯತಮೆ ಬಾಗಿಲು ತೆರೆಯದ್ದಕ್ಕೆ ಆ್ಯಸಿಡ್ ಎರಚಿದ ಕಿರಾತಕ!

ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ. ಯುವಕನ ಜೊತೆಗೆ ಇನ್ನಿಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ಸಹ ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಯಿಂದ ಮೂರು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿ ವಿರುದ್ಧ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಮೂರು ಮೊಬೈಲ್ ಬಳಸಿ ಇನ್ನಷ್ಟು ಕೃತ್ಯ ಎಸಗಿರುವ ಬಗ್ಗೆ ಅನುಮಾನವಿದೆ ಈ ಹಿನ್ನೆಲೆ ಮೊಬೈಲ್ ಪರಿಶೀಲನೆ ನಡೆಸಿರುವ ಪೊಲೀಸರು.

ಸೈಬರ್ ದಾಳಿಕೋರರಿಗೆ ಭಾರತವೇ ಟಾರ್ಗೆಟ್, ಆಗ್ನೇಯ ಏಷ್ಯಾದಲ್ಲಿ ಒಟ್ಟು 1,775 ಕೋಟಿ ರೂ ವಂಚನೆ!

ಇನ್ಸ್‌ಟಾಗ್ರಾಮ್ ನಲ್ಲಿ ಚಿಕ್ಕಮಕ್ಕಳ ಹೆಸರಿನ ಅಕೌಂಟ್ ತೆಗೆಯಲು ಪೋಷಕರೇ ಅನುಮತಿ ನೀಡುತ್ತಿರುವುದು ದುರಂತ. ಹೀಗೆ ಮುಂದಾಗುವ ದುಷ್ಪಾರಿಣಾಮಗಳ  ಬಗ್ಗೆ ಯೋಚಿಸದೇ ಅಪ್ರಾಪ್ತ ಬಾಲಕಿಯರು ಫೋಟೊ ವಿಡಿಯೋ ಖಾಸಗಿ ಕ್ಷಣಗಳನ್ನು ಲೈಕ್ ಕಾಮೆಂಟ್‌ಗೋಸ್ಕರ್ ಅಪ್ಲೋಡ್ ಮಾಡುತ್ತಿರುವುದು ಗೀಳಾಗಿದೆ ಇದನ್ನೇ ಬಂಡಾವಳ ಮಾಡಿಕೊಂಡ ಕ್ರಿಮಿನಲ್ ಗಳು ಫೋಟೊಗಳನ್ನ ಮಾರ್ಫ್ ಮಾಡುವ ಮೂಲಕ ಬ್ಲಾಕ್‌ಮೇಲ್, ಅತ್ಯಾಚಾರದಂತ ಕೃತ್ಯಕ್ಕೂ ಮುಂದಾಗುತ್ತಿದ್ದಾರೆ. ಅಪ್ರಾಪ್ತ ಮಕ್ಕಳ ಕೈಗೆ ಮೊಬೈಲ್ ಕೊಡುವುದು ಸೋಷಿಯಲ್ ಮೀಡಿಯಾದಲ್ಲಿ ಫೋಟೊ ವಿಡಿಯೋ ಹಂಚಿಕೊಳ್ಳುವ ಬಗ್ಗೆ ಎಚ್ಚರಿಕೆಯಿಂದಿರಬೇಕಾಗಿದೆ.

click me!