ಅನ್ಯಕೋಮಿನ ವ್ಯಕ್ತಿ ಮದುವೆಯಾಗಿದ್ದ ಮಹಿಳೆ ಸೇರಿ, ಒಂದೇ ಕುಟುಂಬದ ಮೂವರು ಶವವಾಗಿ ಪತ್ತೆ!

By Sathish Kumar KH  |  First Published May 28, 2024, 12:10 PM IST

ಅನ್ಯಕೋಮಿನ ವ್ಯಕ್ತಿಯನ್ನು ಮದುವೆಯಾಗಿ ಹಿಂದೂ ಧರ್ಮದಂತೆಯೇ ಕುಟುಂಬ ಸಾಗಿಸುತ್ತಿದ್ದ ಮಹಿಳೆ ವಸಂತಾ ಆಕೆತ ತಾಯಿ ಹಾಗೂ 5 ವರ್ಷದ ಮಗ ಸೇರಿ ಮೂವರು ವಾಸದ ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿದ್ದಾರೆ.


ಕೊಪ್ಪಳ (ಮೇ 28): ಕಳೆದ ಎರಡು ವರ್ಷದ ಹಿಂದೆ ಅನ್ಯಕೋಮಿನ ವ್ಯಕ್ತಿಯನ್ನು ಮದುವೆಯಾಗಿ ಹಿಂದೂ ಧರ್ಮದಂತೆಯೇ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಮಹಿಳೆ ವಸಂತಾ ಸೇರಿದಂತೆ ಅವರ ವೃದ್ಧ ತಾಯಿ ಹಾಗೂ ಆಕೆಯ 5 ವರ್ಷದ ಮಗ ಸೇರಿ ಮೂವರು ವಾಸದ ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿದ್ದಾರೆ.

ಕೊಪ್ಪಳ ಜಿಲ್ಲೆಯ ಹೊಸಲಿಂಗಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಮನೆಯಲ್ಲಿ ಮೂವರ ಶವಗಳು ಅನುಮಾನಾಸ್ಪದವಾಗಿ ಪತ್ತೆಯಾಗಿವೆ. ಮೃತರನ್ನು ತಾಯಿ ರಾಜೇಶ್ವರಿ (50), ಮಗಳು ವಸಂತಾ (28) ಹಾಗೂ ಮೊಮ್ಮಗ ಸಾಯಿ ಧರ್ಮತೇಜ (05) ಎಂದು ಗುರುತಿಸಲಾಗಿದೆ. ಈ ಮೂವರ ಸಾವಿಗ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಮುನಿರಾಬಾದ್ ಪೊಲೀಸರ ಬೇಟಿ ಪರೀಶಿಲನೆ ಮಾಡಿದ್ದಾರೆ. ಜೊತತೆಗೆ ಸ್ಥಳಕ್ಕೆ ವಿಧಿವಿಜ್ಞಾನ ತಂಡ ಬೇಟಿ ಪರೀಶಿಲನೆ ಮಾಡುತ್ತಿದೆ.

Latest Videos

undefined

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 85 ಕೋಟಿ ರೂ. ಅವ್ಯವಹಾರ; ಸಚಿವರ ಹೆಸರು ಬರೆದಿಟ್ಟು ಅಧಿಕಾರಿ ಆತ್ಮಹತ್ಯೆ

ಮೃತ ಮಹಿಳೆ ವಸಂತಾ ಅವರನ್ನು ಆಂಧ್ರಪ್ರದೇಶದ ರಾಜ್ಯದ ನಂದ್ಯಾಲದ ವ್ಯಕ್ತಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ, ಕಳೆದ ಎರಡು ವರ್ಷಗಳ ಹಿಂದೆ ವಸಂತಾ ತನ್ನ ಪತಿಯನ್ನು ತೊರೆದು ತಮ್ಮ ತಾಯಿ ತವರುಮನೆ ಕೊಪ್ಪಳದ ಲಿಂಗಾಪುರಕ್ಕೆ ಬಂದು ನೆಲೆಸಿದ್ದಳು. ಜೊತೆಗೆ, ಕೆಲವು ದಿನಗಳಿಂದೀಚೆಗೆ ಅನ್ಯ ಧರ್ಮಿಯನೊಬ್ಬನ ಜೊತೆಗೆ ಮದುವೆಯಾಗಿದ್ದಳು. ಆದರೆ, ಇದ್ದಕ್ಕಿಂದ್ದಂತೆ ಮನೆಯಲ್ಲಿ ಮೂವರ ಸಾವು ಪ್ರಕರಣ ಸಂಭವಿಸಿದೆ. ಮೂವರನ್ನು ಯಾರೋ ಕಿಡಿಗೇಡಿಗಳು ಕೊಲೆ ಮಾಡಿ ಪರಾರಿಯಾಗಿರೋ ಶಂಕೆಯಿದೆ.

ವಸಂತಾ ಅವರ ಅಮ್ಮ ರಾಜೇಶ್ವರಿ ಅವರಿಗೆ ಇನ್ನೊಬ್ಬ ಮಗಳು ಪೋನ್ ಮಾಡಿದ್ದಾಳೆ. ಆದ್ರೆ ಪೋನ್ ರಸೀವ್ ಮಾಡಿರಲಿಲ್ಲ. ಜೊತೆಗೆ, ಒಂದು ದಿನವಾದರೂ ಬಾಗಿಲು ತಗೆದಿರಲಿಲ್ಲ. ಹೀಗಾಗಿ, ಇಂದು ಮುಂಜಾನೆ ಬಂದು ಪರಿಶೀಲನೆ ನಡೆಸಿದಾಗ ಸಾವಿನ ಬಗ್ಗೆ ಮಾಹಿತಿ ತಿಳಿದುಬಂದಿದೆ. ಅಜ್ಜಿ ಮತ್ತು ಮೊಮ್ಮಗನ ಶವ ಬೆಡ್ ರೂಮ್ ನಲ್ಲಿ ಪತ್ತೆಯಾಗಿದೆ. ಮಗಳ ಶವ ಕಿಚನ್ ನಲ್ಲಿ ಪತ್ತೆಯಾಗಿದೆ. ಆದರೆ, ಸಾವಿಗೆ ನಿಖರ ಕಾರಣವೇನು ಎಂಬುದು ತಿಿದುಬಂದಿಲ್ಲ. ಇದು ಸಹಜ ಸಾವೋ ಅಥವಾ ಕೊಲೆಯೋ ಎಂಬುದು ಮಾತ್ರ ತಿಳಿದುಬಂದಿಲ್ಲ.

Tumakuru Murder Case ಕೋಳಿಯಂತೆ ಹೆಂಡತಿ ಕತ್ತು ತುಂಡರಿಸಿ ಚರ್ಮ ಸುಲಿದ ಕ್ರೂರಿ ಪತಿ!

ಇನ್ನು ವಸಂತಾಳಿಗೆ ಆಂದ್ರಪ್ರದೇಶದ ನಂದ್ಯಾಲ ಗ್ರಾಮದ ವ್ಯಕ್ತಿ ಜೊತೆ ವಿವಾಹವಾಗಿತ್ತು. ಆದ್ರೆ ಎರಡು ವರ್ಷದ ಹಿಂದೆ ಪತಿಯಿಂದ ದೂರವಾಗಿದ್ದ ವಸಂತಾ ಹೊಸ‌‌ಲಿಂಗಾಪುರ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದಳು. ಹೊಸ‌‌ ಲಿಂಗಾಪುರ ಬಳಿ ಬೊಂಬೆ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು. ಆಗ ಇನ್ನೂ ಯೌವ್ವನವಿದ್ದರಿಂದ ಜೀವನಕ್ಕೆ ಒಬ್ಬ  ಪುರುಷನ ಆಧಾರವಿರಬೇಕು ಎಂಬ ದೃಷ್ಟಿಯಿಂದ ಅನ್ಯ ಧರ್ಮದ ವ್ಯಕ್ತಿಯನ್ನು ಮದುವೆ ಮಾಡಿಕೊಂಡಿದ್ದಳು. ಆದರೆ, ಹಿಂದೂ ಕುಟುಂಬದಂತೆಯೇ ಸಂಸಾರ ಸಾಗಿಸುತ್ತಿದ್ದರು.

click me!