
ನಟ ಸೈಫ್ ಅಲಿ ಖಾನ್ ಮೇಲಿನ ದಾಳಿ ಪ್ರಕರಣದ ಕುರಿತು ಹಲವಾರು ಅಪ್ಡೇಟ್ಸ್ಗಳು ಹೊರಬರುತ್ತಲೇ ಇವೆ. ಬಾಂಗ್ಲಾದೇಶದ ಪ್ರಜೆಯಾಗಿರುವ ಆರೋಪಿ ಮೊಹಮ್ಮದ್ ಶೆಹಜಾದ್ ಇದಾಗಲೇ ಅರೆಸ್ಟ್ ಆಗಿದ್ದಾನೆ. ಈತನಿಗೆ ತಾನು ಬಾಲಿವುಡ್ ತಾರೆಯ ಮನೆಗೆ ಪ್ರವೇಶಿಸುತ್ತಿದ್ದೇನೆ ಎಂಬುದು ತಿಳಿದಿರಲಿಲ್ಲ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಇದಾಗಲೇ ತಿಳಿಸಿದ್ದಾರೆ. ಶಂಕಿತನ ಉದ್ದೇಶ ದರೋಡೆ, ಉದ್ದೇಶಿತ ದಾಳಿಯಾಗಿರಲಿಲ್ಲ ಎಂದಿದ್ದಾರೆ. ಅದೇನೇ ಇದ್ದರೂ ಸದ್ಯ ಆರೋಪಿ ಮೊಹಮ್ಮದ್ ಶೆಹಜಾದ್ ಸಿಕ್ಕಿಬಿದ್ದಿರುವ ಹಿಂದೆ ಪರೋಟಾದ ಕಥೆಯಿದೆ. ಇಂಥ ಅಪರಾಧಿಕ ಘಟನೆಗಳು ಸೆಲೆಬ್ರಿಟಿಗಳಿಗೆ ನಡೆದರೆ, ಸಹಜವಾಗಿಯೇ ಪೊಲೀಸ್ ಇಲಾಖೆಗಳು ಕ್ಷಿಪ್ರ ಕಾರ್ಯಾಚರಣೆಯಲ್ಲಿ ತೊಡಗುತ್ತವೆ. ಅದೇ ರೀತಿ, ಸೈಫ್ ಅಲಿ ಖಾನ್ ಪ್ರಕರಣದಲ್ಲಿಯೂ ಆಗಿದ್ದು, ಶೀಘ್ರದಲ್ಲಿಯೇ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಿನ್ನೆ ಮೊಹಮ್ಮದ್ ಶೆಹಜಾದ್ ಬಂಧಿತನಾಗಿದ್ದಾನೆ. ಸೈಫ್ ಅಲಿ ಮನೆಯಲ್ಲಿ ಈತ ಯಾವುದೇ ಮಾಸ್ಕ್ ಇಲ್ಲದೇ ನೇರಾನೇರ ಮುಖವನ್ನು ತೋರಿಸಿದ್ದರಿಂದ ಈತನ ಪತ್ತೆ ಹಚ್ಚುವುದು ಸ್ವಲ್ಪ ಸುಲಭವೇ ಆಗಿತ್ತು. ಅದರ ಹೊರತಾಗಿಯೂ ಪೊಲೀಸರು ತುರ್ತು ಕಾರ್ಯಾಚರಣೆ ನಡೆಸಿದ ಪೊಲೀಸರು, ಆತನನ್ನು ಶೀಘ್ರದಲ್ಲಿಯೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕಾಗಿ, 600 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಯಿತು, 300 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.
ಇವೆಲ್ಲವುಗಳಿಗಿಂತಲೂ ಮುಖ್ಯವಾದ ವಿಷಯವೊಂದಿದೆ. ಅದೇನೆಂದರೆ, ಈತನನ್ನು ಪತ್ತೆ ಹಚ್ಚುವಲ್ಲಿ ಸಹಕರಿಸಿದ್ದು ಪರೋಟಾ ಮತ್ತು ನೀರಿನ ಬಾಟಲ್. ನಟ ಸೈಫ್ ಅವರ ನಿವಾಸದ ಸಿಸಿಟಿವಿ ದೃಶ್ಯಾವಳಿಯಲ್ಲಿ ನಟನ ಮನೆಯಿಂದ ಪರಾರಿಯಾಗಿ ತುರ್ತು ನಿರ್ಗಮನ ಮೆಟ್ಟಿಲುಗಳ ಕೆಳಗೆ ಓಡುತ್ತಿರುವುದನ್ನು ಪತ್ತೆಹಚ್ಚಿದ ನಂತರ, ನಟನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಸುಲಭದಲ್ಲಿ ಗುರುತಿಗೆ ಸಿಕ್ಕ. ಅಲ್ಲಿ ಸಿಕ್ಕ ಚೆಹರೆಯನ್ನು ಪಡೆದು ನಗರದಾದ್ಯಂತ ಆತನ ಪತ್ತೆಗೆ ಕಾರ್ಯಾಚರಣೆ ನಡೆಎಸಲಾಯಿತು. ಅವನು ದ್ವಿಚಕ್ರ ವಾಹನದಿಂದ ಇಳಿಯುತ್ತಿರುವುದು ಕಂಡುಬಂತು. ಆಗ ಅದರ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ವಾಹನವನ್ನು ಕೂಡ ಪತ್ತೆಹಚ್ಚಲಾಯಿತು.
ನಿರ್ಮಾಪಕರ ಮಾತು ಕೇಳಿ ಸೈಫ್ಗೆ ನಿದ್ದೆ ಮಾತ್ರೆ ಕೊಡ್ತಿದ್ದ ಸೈಫ್ ಪತ್ನಿ ಅಮೃತಾ ಸಿಂಗ್! ಕಾರಣ ರಿವೀಲ್...
ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ವರ್ಲಿ ಕೋಲಿವಾಡಾದಲ್ಲಿರುವ ಬಾಡಿಗೆ ಮನೆಗೆ ತೆರಳಿದರು, ಮತ್ತು ಶೆಹಜಾದ್ ಅಲ್ಲಿ ಇತರ ಮೂವರೊಂದಿಗೆ ವಾಸಿಸುತ್ತಿದ್ದಾರೆ ಎಂದು ಪೊಲೀಸರು ಕಂಡುಕೊಂಡರು. ಫ್ಲಾಟ್‌ಮೇಟ್‌ಗಳಿಂದ ಪೊಲೀಸರು ಆತನ ಹೆಸರು ಮತ್ತು ಫೋನ್ ಸಂಖ್ಯೆಯನ್ನು ಕಂಡುಕೊಂಡರು ಮತ್ತು ಅದನ್ನು ಬಳಸಿಕೊಂಡು ಆತನನ್ನು ಮತ್ತಷ್ಟು ಪತ್ತೆಹಚ್ಚಿದರು. ಇದಕ್ಕೆ ನೆರವಾಗಿದ್ದು ಪರೋಟಾ ಮತ್ತು ನೀರಿನ ಬಾಟಲ್. ಏಕೆಂದರೆ, ಈಗ ಯುಪಿಐ ಬಳಸಿ, ಶೆಹಜಾದ್ ವರ್ಲಿಯ ಸೆಂಚುರಿ ಮಿಲ್ ಬಳಿಯ ಮಾರಾಟಗಾರರಿಂದ ಪರೋಟಾ ಮತ್ತು ನೀರಿನ ಬಾಟಲಿ ಖರೀದಿಸಿದ್ದ. ಇದರ ಆಧಾರದ ಮೇಲೆ ಫೋನ್ ಸಂಖ್ಯೆ ಹುಡುಕುವುದು ಸುಲಭವಾಯಿತು. ಆರೋಪಿಯ ಫೋನ್ ಸಂಖ್ಯೆ ಮತ್ತು ಇತರ ವಿವರ ಪಡೆದಾಗ, ಆತ ನಗರದ ಕಾರ್ಮಿಕ ಶಿಬಿರದ ಬಳಿ ದಟ್ಟವಾದ ಪೊದೆಗಳ ನಡುವೆ ಮಲಗಿದ್ದುದು ತಿಳಿಯಿತು.
ಪೊಲೀಸರು ತನ್ನ ಬಳಿಗೆ ಬರುವುದನ್ನು ಕಂಡಾಗ ಶೆಹಜಾದ್ ಓಡಿಹೋದ. ಕೊನೆಗೂ ಆತನನ್ನು ಅರೆಸ್ಟ್ ಮಾಡಿರುವ ಪೊಲೀಸರು, ನಿನ್ನೆ ಬಂಧಿಸಿ ಸ್ಥಳೀಯ ಬಾಂದ್ರಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈಗ ಆತನನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇದಾಗಲೇ ಈತ ವರ್ಲಿ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾಗ ಮತ್ತೊಂದು ದರೋಡೆಯಲ್ಲಿ ಭಾಗಿಯಾಗಿದ್ದ ಎನ್ನುವುದು ತಿಳಿದಿದೆ. ದ್ದಾನೆ ವಜ್ರದ ಉಂಗುರ ಕದ್ದ ಆರೋಪ ಇದೆ. ಆದ್ದರಿಂದ ಆತನನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ನಂತರ ಆತ ಥಾಣೆಯಲ್ಲಿರುವ ರೆಸ್ಟೋರೆಂಟ್‌ನಲ್ಲಿ ಎರಡು ತಿಂಗಳು ಕೆಲಸ ಮಾಡಿದ್ದ. ಆತನ ಒಪ್ಪಂದವು ಡಿಸೆಂಬರ್ 2024 ರಲ್ಲಿ ಕೊನೆಗೊಂಡಿತ್ತು. ಈತ ಬಾಂಗ್ಲಾದೇಶಿ ಪ್ರಜೆಯಾಗಿದ್ದು, ಕಳೆದ ಕೆಲವು ತಿಂಗಳುಗಳಿಂದ ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ, ಆರೋಪಿಯು 7 ವರ್ಷಗಳಿಗೂ ಹೆಚ್ಚು ಕಾಲ ಭಾರತದಲ್ಲಿ ವಾಸಿಸುತ್ತಿದ್ದಾನೆ ಮತ್ತು ಕೆಲಸ ಮಾಡುತ್ತಿದ್ದಾನೆ ಮತ್ತು ಅವನಿಗೆ ನಗರದಲ್ಲಿ ಒಂದು ಕುಟುಂಬವೂ ಇದೆ ಎಂದು ಆತನ ವಕೀಲರು ಹೇಳಿದರು.
ಪ್ಲೀಸ್ ಕ್ಷಮಿಸಿ, ಸೈಫ್ ಇರಿತದ ವಿಷ್ಯದಲ್ಲಿ ದೊಡ್ಡ ತಪ್ಪು ಮಾಡಿದೆ: ಅಂಗಲಾಚಿ ಕ್ಷಮೆ ಕೋರಿದ ನಟಿ ಊರ್ವಶಿ ರೌಟೇಲಾ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ