
ಕಳ್ಳ ಕಾರರು, ಖದೀಮರು, ಸುಳ್ಳುಗಾರರು, ಮೋಸಗಾರರು... ಇಂಥವರಿಗೆ ಇರುವಷ್ಟು ತಲೆ ಸಾಮಾನ್ಯ ಜನರಿಗೆ ಬರಲು ಸಾಧ್ಯವೇ ಇಲ್ಲ ಎನ್ನುವಂಥ ಹಲವಾರು ಘಟನೆಗಳನ್ನು ದಿನನಿತ್ಯವೂ ನೋಡುತ್ತಲೇ ಇರುತ್ತೇವೆ. ಸರ್ಕಾರಗಳಿಂದ ಯಾವುದೇ ಒಂದು ಯೋಜನೆ ಜಾರಿಗೆ ಬಂದ ತಕ್ಷಣ, ಅದನ್ನು ಕಳ್ಳಹಾದಿಯಲ್ಲಿ ಪಡೆಯುವುದು ಹೇಗೆ, ಸೈಬರ್ ವಂಚನೆ ಮೂಲಕ ಜನರಿಗೆ ಟೋಪಿ ಹಾಕುವುದು ಹೇಗೆ, ಕುಳಿತಲ್ಲಿಯೇ ಜನರ ಹಣವನ್ನು ತಮ್ಮ ಖಾತೆಗೆ ಬರಿಸಿಕೊಳ್ಳುವುದು ಹೇಗೆ... ಇಂಥ ಭಯಂಕರ ಪ್ಲ್ಯಾನ್ಗಳನ್ನು ಮಾಡುವುದನ್ನು ನೋಡಿದರೆ ಎಂಥವರಿಗೂ ಅಚ್ಚರಿಯಾಗದೇ ಇರದು. ಆಯಾ ಕ್ಷೇತ್ರಗಳ ತಜ್ಞರು ಚಾಪೆ ಕೆಳಗೆ ನುಸುಳಿದರೆ, ಇಂಥ ಖದೀಮರು ಒಂದು ಹೆಜ್ಜೆ ಮುಂದಕ್ಕೆ ಹೋಗಿ ರಂಗೋಲಿ ಕೆಳಗೆ ನುಸುಳುವಂಥ ಕೃತ್ಯ ಎಸಗುತ್ತಿರುವುದು ದಿನನಿತ್ಯವೂ ವರದಿಯಾಗುತ್ತಲೇ ಇರುತ್ತದೆ, ಲಕ್ಷಾಂತರ ರೂಪಾಯಿ ಹಣವನ್ನು ಕಳೆದುಕೊಂಡು ಗೋಳೋ ಅನ್ನುವ ಅದೆಷ್ಟೋ ಮಂದಿ ನಮ್ಮ ಕಣ್ಣೆದುರೇ ಇದ್ದಾರೆ.
ಅಂಥ ಖದೀಮರಲ್ಲಿ ಒಬ್ಬರು ವಿದೇಶಗಳಿಂದ ಕಳ್ಳಹಾದಿಯಲ್ಲಿ ಚಿನ್ನ, ವಜ್ರಗಳನ್ನು ಸಾಗಾಟ ಮಾಡುವವರು. ಭಾರತದ ಕಾನೂನಿನ ಪ್ರಕಾರ, ವಿದೇಶಗಳಿಂದ ಕೆಲವೊಂದು ವಸ್ತುಗಳನ್ನು ತರುವುದು ನಿಷೇಧ. ಅದಕ್ಕೆ ಹಲವಾರು ರೀತಿಯ ಕಾರಣಗಳು ಇವೆ. ಇದೇ ಕಾರಣಕ್ಕೆ ವಿಮಾನ ನಿಲ್ದಾಣಗಳಲ್ಲಿ ಕಸ್ಟಮ್ಸ್ನವರು ಇಂಥ ಖದೀಮರನ್ನು ಅರೆಸ್ಟ್ ಮಾಡಿರುವ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಹಾಗೆಂದು ಖದೀಮರು ಸುಮ್ಮನೇ ಇರುವುದಿಲ್ಲ. ಗುದದ್ವಾರ ಸೇರಿದಂತೆ ಎಲ್ಲೆಲ್ಲಿ ಬೇಕೋ ಎಲ್ಲಾ ಕಡೆ ಅಮೂಲ್ಯ ವಸ್ತುಗಳನ್ನು ಅಡಗಿಸಿಕೊಂಡು ಬರುತ್ತಾರೆ. ಕೂಲಿಂಗ್ ಗ್ಲಾಸ್ ಒಳಗೆ, ಸಾಕ್ಸ್ನಲ್ಲಿ, ಬೂಟ್ನಲ್ಲಿ, ಚೈನ್ನಲ್ಲಿ... ಅಡಗಿಸಿಕೊಳ್ಳುವುದು ಮೊದಲಿನಿಂದಲೂ ನಡೆದಿದೆ.
'ಭೂತ'ದ ಹೆಸ್ರು ಸಂಜು ಅಲ್ಲ ಸಲೀಂ: ಗರ್ಭಿಣಿಯಾದ ರೀಲ್ಸ್ ರಾಣಿಯ ಭಯಾನಕ ಅಂತ್ಯ
ಸುಲಭದಲ್ಲಿ ಸಿಕ್ಕಿಬೀಳುತ್ತಾರೆ ಎನ್ನುವ ಕಾರಣಕ್ಕೆ ಯಾವ ಹಂತಕ್ಕೆ ಹೋಗುತ್ತಾರೆ ಎಂದರೆ, ದೇಹಕ್ಕೆ ಸರ್ಜರಿ ಮಾಡಿಸಿ ಅದರ ಒಳಗೆ ಅಡಗಿಸಿ ಆಮೇಲೆ ಹೊಲಿಗೆ ಹಾಕಿಸಿಕೊಂಡು ಬಂದು ಸಿಕ್ಕಿಬಿದ್ದವರೂ ಇದ್ದಾರೆ. ಗುದದ್ವಾರದಲ್ಲಿ ಚಿನ್ನವನ್ನು ತಂದು ಕಸ್ಟಮ್ಸ್ ಅಧಿಕಾರಿಗಳಿಂದ ತಗ್ಲಾಕ್ಕೊಂಡವರಿಗೆ ಲೆಕ್ಕವೇ ಇಲ್ಲ. ಇದು ಒಂದೆಡೆಯಾದರೆ, ಇನ್ನು ಕೆಲವು ಸಂದರ್ಭದಲ್ಲಿ ಐಟಿ ಅಧಿಕಾರಗಳ ಕಣ್ಣಿಗೆ ಬೀಳಬಾರದು ಎನ್ನುವ ಕಾರಣಕ್ಕೆ ಮನೆಯ ಶೌಚಾಲಯ, ಗೋಡೆ, ನೆಲದ ಅಡಿಗೆ, ಮರದ ಒಳಗೆ... ಹೀಗೆ ಹಲವು ಮಾರ್ಗಗಳನ್ನು ಅನುಸರಿಸಲಾಗುತ್ತದೆ. ಹಲವರು ಸಿಕ್ಕಿಬಿದ್ದರೆ, ಕೆಲವರು ಬಚಾವ್ಆಗುತ್ತಾರೋ ಗೊತ್ತಿಲ್ಲ, ಒಟ್ಟಿನಲ್ಲಿ ಇಂಥ ಘಟನೆಗಳು ಮಾತ್ರ ನಡೆಯುತ್ತಲೇ ಇರುತ್ತವೆ.
ಇದೀಗ ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಪ್ಯಾಂಟ್ ಜಿಪ್ ಒಳಗೆ, ಲೇಡೀಸ್ ಅಂಡರ್ವೇರ್ ಒಳಗೆ, ಮರದ ಪೊಟರೆಯಲ್ಲಿ ಶೌಚಾಲಯದ ಒಳಗೆ, ಶೂಸ್ನಲ್ಲಿ ಖಾನೆ ತೆರೆದು, ಗೋಡೆ ಕೊರೆದು ಟೈಲ್ಸ್ನಲ್ಲಿ... ಹೀಗೆ ಖದೀಮರು ಎಲ್ಲೆಲ್ಲಿ ಅಮೂಲ್ಯ ವಸ್ತುಗಳನ್ನು ಅಡಗಿಸಿಕೊಳ್ಳುತ್ತಾರೆ ಎನ್ನುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದರೆ ಸುಸ್ತಾಗಿ ಹೋಗೋದಂತೂ ನಿಜ. ಅದರಲ್ಲಿಯೂ ವಜ್ರದ ಉಂಗುರವನ್ನು ಅಂಡರ್ವೇರ್ನಲ್ಲಿ ಅಡಗಿಸಿಕೊಂಡಿರುವುದಕ್ಕೆ ಸಾಕಷ್ಟು ಮಂದಿ ಕಮೆಂಟ್ ಮಾಡಿದ್ದಾರೆ. ಇದರ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದ್ದಾರೆ. ಅದೇ ಇನ್ನೊಂದೆಡೆ, ಬ್ರೆಡ್ ಒಳಗೆ ಆಭರಣ ಇಟ್ಟಿರುವುದು ಕೂಡ ಅಬ್ಬಾ ಎನ್ನಿಸುವಂತಿದೆ. ಅಪ್ಪಿತಪ್ಪಿ ಬ್ರೆಡ್ ತಿಂದರೆ ದೇವರೇ ಗತಿ ಎನ್ನುತ್ತಿದ್ದಾರೆ. ಇನ್ನು ಕೆಲವರು ಈ ವಿಡಿಯೋ, ಹೇಗೆ ಅಡಗಿಸಿಕೊಳ್ಳುವುದು ಎಂದು ಟ್ರೇನಿಂಗ್ ಕೊಡುವಂತಿದೆ ಎನ್ನುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ