ನಿಗದಿತ ಅವಧಿ ಮೀರಿದ ಬೂಸ್ಟ್ ಹಿಡಿದಿದ್ದ ಮಕ್ಕಳು ಪದಾರ್ಥಗಳು ಹಾಗೂ ಆಹಾರ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಅಂಗಡಿಯೊಂದರ ಮೇಲೆ ದಾಳಿ ನಡೆಸಿ ವ್ಯಾಪಾರಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಜು.22) : ನಿಗದಿತ ಅವಧಿ ಮೀರಿದ ಬೂಸ್ಟ್ ಹಿಡಿದಿದ್ದ ಮಕ್ಕಳು ಪದಾರ್ಥಗಳು ಹಾಗೂ ಆಹಾರ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಅಂಗಡಿಯೊಂದರ ಮೇಲೆ ದಾಳಿ ನಡೆಸಿ ವ್ಯಾಪಾರಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಡಿ.ಜೆ.ಹಳ್ಳಿಯ ಸಿದ್ದಿಕ್ ಪಾಷ ಬಂಧಿತನಾಗಿದ್ದು, ಆರೋಪಿಯಿಂದ .50 ಲಕ್ಷ ಮೌಲ್ಯದ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ. ಕೆ.ಜಿ.ಹಳ್ಳಿಯ ಶ್ಯಾಂಪುರ ಮುಖ್ಯ ರಸ್ತೆಯಲ್ಲಿ ಅಂಗಡಿ ಹೊಂದಿರುವ ಪಾಷ, ಅವಧಿ ಮೀರಿದ ಆಹಾರ ಉತ್ಪನ್ನಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತು. ಈ ಸುಳಿವು ಆಧರಿಸಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.
ನಿಶಾ ವಂಚನೆ ಪುರಾಣ ಮತ್ತಷ್ಟು ಬಯಲು: ಹಣ ಕೊಟ್ಟವರಿಗೆ ರಾಜಕಾರಣಿಗಳ ಹೆಸರಲ್ಲಿ ಬೆದರಿಕೆ..?
ವ್ಯಾಪಾರಕ್ಕೆ ಬಾಲ ಕಾರ್ಮಿಕರ ಬಳಕೆ
ಹಲವು ವರ್ಷಗಳಿಂದ ಶಾಂಪುರ ಮುಖ್ಯರಸ್ತೆಯಲ್ಲಿ ಪಾಷ ಅಂಗಡಿ ಇಟ್ಟಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಸಮೀಪ ವೆರ್‌ಹೌಸ್‌ನಲ್ಲಿ ಅವಧಿ ಮೀರಿ ದಿನ ಬಳಕೆಯ ದಿನಸಿ ಪದಾರ್ಥಗಳು, ಆಹಾರ ಉತ್ಪನ್ನಗಳು, ತಂಪು ಪಾನೀಯಗಳು, ಶಿಶು ಆಹಾರ, ನ್ಯಾಪ್ ಕಿನ್, ಅಡುಗೆಗೆ ಬಳಸುವ ಎಣ್ಣೆ, ಸೌಂದರ್ಯ ವರ್ಧಕ ಹಾಗೂ ಬಿಸ್ಕೇಟ್‌ಗಳು ಸೇರಿದಂತೆ ಇತರೆ ವಸ್ತುಗಳನ್ನು ನಿಗದಿತ ಬೆಲೆಗಿಂತ ಶೇ.10ರಷ್ಟುಕಡಿಮೆ ದರದಲ್ಲಿ ಆತ ಖರೀದಿಸುತ್ತಿದ್ದ. ಬಳಿಕ ಅವುಗಳನ್ನು ಜನರ ಆರೋಗ್ಯದ ದುಷ್ಪರಿಣಾಮ ಬೀರುತ್ತದೆ ಎಂದು ತಿಳಿದಿದ್ದರೂ ಮಾರಿದ್ದಾನೆ.
ಇನ್ನು ಶಿಲೀಂದ್ರವಾಗಿರುವ (ಫಂಗಸ್) ಪದಾರ್ಥಗಳನ್ನು ನಿರಾಂತಕವಾಗಿ ಕಡಿಮೆ ಬೆಲೆಗೆ ಮಾರುತ್ತಿದ್ದ. ಕಡಿಮೆ ಬೆಲೆ ಬಗ್ಗೆ ಗ್ರಾಹಕರು ಕೇಳಿದಾಗ ಆ ಸಾಮಗ್ರಿಗಳನ್ನು ಉಗ್ರಾಣದಿಂದ ತರುವುದರಿಂದ ಕಡಿಮೆ ಬೆಲೆ ದೊರೆಯುವುದಾಗಿ ನೆಪ ಹೇಳಿ ವಂಚಿಸುತ್ತಿದ್ದ. ಇನ್ನು ಅಂಗಡಿಯಲ್ಲಿ ಮಾರಾಟಕ್ಕೆ ಕಾನೂನು ಬಾಹಿರವಾಗಿ ಬಾಲ ಕಾರ್ಮಿಕರನ್ನು ಪಾಷ ಬಳಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
Bengaluru crime: ಸಾಲ ವಾಪಸ್ ಕೊಡದ್ದಕ್ಕೆ ಸ್ನೇಹಿತರ ಕಿಡ್ನಾಪ್!
ಹೋಟೆಲ್‌ಗಳಿಗೆ ಮಕ್ಕಳ ಬೂಸ್ಟ್ ಹಿಡಿದ ಆಹಾರ
ಪಾಷ ಅಂಗಡಿಯಲ್ಲಿದ್ದ ಮಕ್ಕಳ ಹಾಗೂ ಶಿಶು ಪದಾರ್ಥಗಳು ಕೂಡ ಅವಧಿ ಮೀರಿದ್ದು ಪತ್ತೆಯಾಗಿವೆ. ಇವುಗಳನ್ನು ಕೆಲ ಹೋಟೆಲ್‌ಗಳಿಗೆ ಪೂರೈಸಿರುವುದಾಗಿ ವಿಚಾರಣೆ ವೇಳೆ ಆತ ಬಾಯ್ಬಿಟ್ಟಿದ್ದಾನೆ. ಆ ಹೋಟೆಲ್‌ಗಳಲ್ಲಿ ಸಿಹಿ ತಯಾರಿಕೆಗೆ ಅವಧಿ ಮೀರಿದ ಮಕ್ಕಳ ಆಹಾರ ಬಳಕೆಯಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸುವಾಗ ಅವುಗಳ ಮಾರಾಟಕ್ಕೆ ನಿಗದಿತ ಅವಧಿಯನು್ನ (ಎಕ್ಸ್‌ಪೈರಿ ಡೇಟ್) ಗ್ರಾಹಕರು ಗಮನಿಸಬೇಕು. ಅವಧಿ ಮೀರಿದ ವಸ್ತುಗಳು ಮಾರಾಟ ಮಾಡುತ್ತಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ.
-ಸಿಸಿಬಿ ಅಧಿಕಾರಿಗಳು