ಪೋಕ್ಸೋ ಪ್ರಕರಣದ ಆರೋಪಿಗೆ ಸಹಕರಿಸುವುದಾಗಿ, 1.87 ಲಕ್ಷ ರು. ಲಂಚ ಸ್ವೀಕರಿಸುತ್ತಿದ್ದಾಗ ಹಣ ಹಾಗೂ ಹಣಕ್ಕೆ ಖಾತರಿಯಾಗಿ ಪಡೆದಿದ್ದ ಸಹಿ ಮಾಡಿದ್ದ ಖಾಲಿ ಚೆಕ್ ಸಮೇತ ವಿಶೇಷ ಸರ್ಕಾರಿ ಅಭಿಯೋಜಕಿ ಲೋಕಾಯುಕ್ತ ಗಾಳಕ್ಕೆ ಸಿಕ್ಕಿ ಬಿದ್ದ ಘಟನೆ ನಗರದಲ್ಲಿ ಭಾನುವಾರ ನಡೆದಿದೆ.
ದಾವಣಗೆರೆ (ಫೆ.6) : ಪೋಕ್ಸೋ ಪ್ರಕರಣದ ಆರೋಪಿಗೆ ಸಹಕರಿಸುವುದಾಗಿ, 1.87 ಲಕ್ಷ ರು. ಲಂಚ ಸ್ವೀಕರಿಸುತ್ತಿದ್ದಾಗ ಹಣ ಹಾಗೂ ಹಣಕ್ಕೆ ಖಾತರಿಯಾಗಿ ಪಡೆದಿದ್ದ ಸಹಿ ಮಾಡಿದ್ದ ಖಾಲಿ ಚೆಕ್ ಸಮೇತ ವಿಶೇಷ ಸರ್ಕಾರಿ ಅಭಿಯೋಜಕಿ ಲೋಕಾಯುಕ್ತ ಗಾಳಕ್ಕೆ ಸಿಕ್ಕಿ ಬಿದ್ದ ಘಟನೆ ನಗರದಲ್ಲಿ ಭಾನುವಾರ ನಡೆದಿದೆ.
ಜಿಲ್ಲಾ ಪೋಕ್ಸೋ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕಿ ರೇಖಾ ಎಸ್.ಕೋಟೆಗೌಡರ್(Rekha S Kotegowdar) ಲೋಕಾಯುಕ್ತರಿಗೆ ಹಣ ಮತ್ತು ಸಹಿ ಮಾಡಿದ್ದ ಖಾಲಿ ಚೆಕ್ ಸಮೇತ ಸಿಕ್ಕಿ ಬಿದ್ದ ಆರೋಪಿ. ಪೋಕ್ಸೋ ಪ್ರಕರಣದ ಆರೋಪಿಗೆ ಸಹಾಯ ಮಾಡಲು ವಿಶೇಷ ಸರ್ಕಾರಿ ಅಭಿಯೋಜಕಿ ರೇಖಾ ಕೋಟೆಗೌಡರ್ 3 ಲಕ್ಷ ರು.ಗೆ ಬೇಡಿಕೆ ಇಟ್ಟಿದ್ದರು ಎಂದು ದೂರಲಾಗಿದೆ.
undefined
Kodagu: ಲಾರಿ ಚಾಲಕನಿಂದ ಲಂಚ ಸ್ವೀಕಾರ ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸಪ್ಪ
ದಾವಣಗೆರೆ ತಾಲೂಕು ಕಿತ್ತೂರು ಗ್ರಾಮದ ಜಿ.ಟಿ.ಮದನ್ ಕುಮಾರ ಕಿತ್ತೂರು(GT Madankumar kittur) ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ಅಪರಾಧದಡಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಆರೋಪಿ ಮದನಕುಮಾರನಿಗೆ ಸಹಾಯ ಮಾಡುವುದಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ರೇಖಾ ಕೋಟೆಗೌಡರ 3 ಲಕ್ಷ ರು.ಗೆ ಬೇಡಿಕೆ ಇಟ್ಟಿದ್ದು, 1.13 ಲಕ್ಷ ರು.ಮುಂಚೆಯೇ ಪಡೆದಿದ್ದರು. ಆರೋಪಿ ಮದನಕುಮಾರ ಪ್ರಕರಣದಲ್ಲಿ ಸಹಾಯ ಮಾಡಲು ಕæೂಡಬೇಕಾಗಿದ್ದ ಬಾಕಿ 1.87 ಲಕ್ಷ ರು.ಗೆ ಖಾತರಿಗಾಗಿ ಆತನಿಂದ ಕರ್ನಾಟಕ ಬ್ಯಾಂಕ್‌ಗೆ ಸೇರಿದ ಸಹಿ ಮಾಡಿದ ಖಾಲಿ ಚೆಕ್ ಪಡೆದಿದ್ದರು. ಲಂಚದ ಹಣ ನೀಡಲು ಇಷ್ಟವಿಲ್ಲದ್ದರಿಂದ ಆರೋಪಿ ಮದನ್ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ.
ದಾವಣಗೆರೆ ಪಿಜೆ ಬಡಾವಣೆಯ ತನ್ನ ನಿವಾಸದಲ್ಲಿ 1.87 ಲಕ್ಷ ರು. ಪಡೆಯುತ್ತಿದ್ದಾಗ ವಿಶೇಷ ಸರ್ಕಾರಿ ಅಭಿಯೋಜಕಿ ರೇಖಾ ಕೋಟೆಗೌಡರ್ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಜಿಲ್ಲಾ ಸತ್ರ ಹಾಗೂ ವಿಶೇಷ ನ್ಯಾಯಾಲಯ(ಪೋಕ್ಸೋ), ಮಕ್ಕಳ ಸ್ನೇಹಿ ನ್ಯಾಯಾಲಯದ ಎಸ್‌ಪಿಪಿ ಆಗಿದ್ದ ರೇಖಾ ಕೋಟೆಗೌಡರ್ ಕೌಟುಂಬಿಕ ನ್ಯಾಯಾಲಯದಲ್ಲಿ ಸರ್ಕಾರಿ ವಕೀಲರಾಗಿದ್ದರು. ಆರೋಪಿ ಎಸ್‌ಪಿಪಿ ರೇಖಾರಿಗೆ ಮದನ್ ನೀಡಿದ್ದ ಖಾಲಿ ಚೆಕ್ ಸಮೇತ ಬಂಧಿಸಿದ ಲೋಕಾಯುಕ್ತ ಪೊಲೀಸರು ಮಕ್ಕಳ ಸ್ನೇಹಿ ನ್ಯಾಯಾಲಯದಲ್ಲಿ ಪರಿಶೀಲನೆ ನಡೆಸಿದ್ದಾರೆ.
Chikkamagaluru: ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಸರ್ವೇಯರ್
ಪ್ರಕರಣ ದಾಖಲಿಸಿದ ಲೋಕಾಯುಕ್ತ ಪೊಲೀಸರು ಭಾನುವಾರ ಬೆಳಿಗ್ಗೆ ವಿಶೇಷ ಸರ್ಕಾರಿ ಅಭಿಯೋಜಕಿ ರೇಖಾ ಖಾಲಿ ಚೆಕ್ ಹಾಗೂ 1.87 ಲಕ್ಷ ರು. ನಗದು ಸಮೇತ ಬಂಧಿಸಿದ್ದಾರೆ. ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪುರೆ ಮಾರ್ಗದರ್ಶನದಲ್ಲಿ ಪೊಲೀಸ ಇನ್ಸಪೆಕ್ಟರ್‌ಗಳಾದ ಎನ್.ಎಚ್.ಆಂಜನೇಯ, ಎಚ್.ಎಸ್.ರಾಷ್ಟ್ರಪತಿ ನೇತೃತ್ವದಲ್ಲಿ ಸಿಬ್ಬಂದಿಯಾದ ಸಿಎಚ್‌ಸಿ ಎಸ್.ಎಂ.ವೀರೇಶಯ್ಯ, ಎನ್.ಆರ್.ಚಂದ್ರಶೇಖರ, ವಿ.ಎಚ್.ಆಂಜನೇಯ, ಸಿಪಿಸಿ ಮುಜೀಬ್ ಖಾನ್, ಡಿ.ಬಸವರಾಜ, ಎಪಿಸಿ ಸಿ.ಎಸ್. ಬಸವರಾಜ, ಪಿ.ಮೋಹನಕುಮಾರ, ಕೋಟಿನಾಯ್ಕ, ಮಹಿಳಾ ಸಿಬ್ಬಂದಿಯಾದ ಆಶಾ, ಜಂಷಿದಾಖಾನಂರನ್ನು ಒಳಗೊಂಡ ತಂಡವು ಯಶಸ್ವಿ ಟ್ರ್ಯಾಪ್ ಕಾರ್ಯಾಚರಣೆ ನಡೆಸಿ, ಹಣ, ಚೆಕ್ ಸಮೇತ ಆರೋಪಿ ಎಸ್‌ಪಿಪಿ ರೇಖಾ ಕೋಟೆಗೌಡರ್‌ಗೆ ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದೆ.