ಮೊಬೈಲ್ ಹೆಚ್ಚು ಬಳಸಬೇಡ ಓದುವ ಕಡೆ ಗಮನ ಕೊಡು ಎಂದಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ!

By Ravi Janekal  |  First Published Aug 20, 2024, 4:13 PM IST

ಮೊಬೈಲ್ ಹೆಚ್ಚು ಬಳಸಬೇಡ ಓದು ಕಡೆ ಗಮನ ಕೊಡು ಎಂದು ಪೋಷಕರು ಬುದ್ಧಿ ಹೇಳಿದ್ದಕ್ಕೆ ಮನನೊಂದು ವಿದ್ಯಾರ್ಥಿಯೋರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಉಡುಪಿ ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಉಡುಪಿ (ಆ.20): ಮೊಬೈಲ್ ಹೆಚ್ಚು ಬಳಸಬೇಡ ಓದು ಕಡೆ ಗಮನ ಕೊಡು ಎಂದು ಪೋಷಕರು ಬುದ್ಧಿ ಹೇಳಿದ್ದಕ್ಕೆ ಮನನೊಂದು ವಿದ್ಯಾರ್ಥಿಯೋರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಉಡುಪಿ ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರಥಮೇಶ್(16), ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ, ಹಿರಿಯಡ್ಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿ. ಓದುವ ಕಡೆ ಗಮನ ಹರಿಸದೇ ಮೊಬೈಲ್‌ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದ ಮೃತ ವಿದ್ಯಾರ್ಥಿ. ಮಗ ಅಭ್ಯಾಸದಲ್ಲಿ ತೊಡಗದೆ ಮೊಬೈಲ್‌ನಲ್ಲೇ ಇರುವುದು ಗಮನಿಸಿದ್ದಾರೆ.  ಭವಿಷ್ಯ ಹಾಳಾಗಬಾರದು ಓದುವ ಕಡೆ ಗಮನ ಕೊಡು, ಮೊಬೈಲ್ ಬಳಕೆ ಕಡಿಮೆ ಮಾಡು ಎಂದು ಪೋಷಕರು ಬುದ್ಧಿಮಾತು ಹೇಳಿದ್ದಾರೆ. ಇಷ್ಟಕ್ಕೇ ಮನನೊಂದು ಆತ್ಮಹತ್ಯೆ ದಾರಿ ತುಳಿದಿರುವ ವಿದ್ಯಾರ್ಥಿ. 

Latest Videos

undefined

ಸಹಶಿಕ್ಷಕಿಯನ್ನ ಮಂಚಕ್ಕೆ ಕರೆದಿದ್ದ ಕಾಮುಕ ಶಿಕ್ಷಕ ಮೆಹಬೂಬ್ ಅಲಿ ಅಮಾನತು

ನಿನ್ನೆ ಕಾಲೇಜಿಗೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದ ಪ್ರಥಮೇಶ್ ಬಳಿಕ ಕಾಲೇಜಿಗೂ ಹೋಗದೇ, ಮನೆಗೆ ಬಾರದೇ ನಾಪತ್ತೆಯಾಗಿದ್ದ. ಪೋಷಕರು ಸುತ್ತಮುತ್ತ ಹುಡುಕಾಡಿದ್ದಾರೆ. ಮೃತ ವಿದ್ಯಾರ್ಥಿಯ ಗೆಳೆಯರನ್ನೂ ವಿಚಾರಿಸಿದ್ದಾರೆ. ಆದರೆ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಇಂದು ಕಾಲೇಜು ಹಿಂಬದಿ ಜನವಸತಿ ಇಲ್ಲದ ಬಾವಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ಮಗನ ಶವ ಕಂಡು ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತು. ಪೋಷಕರು ಬುದ್ಧಿ ಹೇಳಿದ್ದೇ ತಪ್ಪಾಯ್ತಾ?  ವಿದ್ಯಾರ್ಥಿ ಆತ್ಮಹತ್ಯೆ ಘಟನೆ ಬಳಿಕ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡ ಹಿರಿಯಡ್ಕ ಪೊಲೀಸರು.

click me!