ಬೆಂಗಳೂರು: ಡ್ರಾಪ್‌ ನೆಪದಲ್ಲಿ ಅತ್ಯಾಚಾರ ಪ್ರಕರಣ, ಯುವತಿ ವಿರುದ್ಧವೇ ಎಫ್ಐಆರ್ ದಾಖಲು!

By Gowthami K  |  First Published Aug 20, 2024, 11:50 AM IST

ಬೆಂಗಳೂರಿನಲ್ಲಿ ಡ್ರಾಪ್‌ ನೆಪದಲ್ಲಿ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಘಟನೆಯಲ್ಲಿ ಯುವತಿ ಮೇಲೆಯೇ ಪ್ರಕರಣ ದಾಖಲಾಗಿದೆ.  ಪ್ರಕರಣವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.


ಬೆಂಗಳೂರು (ಆ.20): ಸಿಲಿಕಾನ್ ಸಿಟಿಯಲ್ಲಿ ಡ್ರಾಪ್‌ ಕೊಡುವ ನೆಪದಲ್ಲಿ 21 ವರ್ಷದ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬೆತ್ತಲೆಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದ ಘಟನೆ ಸಂಬಂಧ ಇದೀಗ ಯುವತಿ ಮೇಲೆಯೇ ಪ್ರಕರಣ ದಾಖಲಾಗಿದೆ.

ಹೆಚ್ ಎಸ್ ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣ ಸಂಬಂಧ ಸಂತ್ರಸ್ಥ ಯುವತಿಗೆ  ಇದೀಗ ಸಂಕಷ್ಟ ಎದುರಾಗಿದೆ. ಸಂತ್ರಸ್ಥೆ ಯುವತಿಯ ವಿರುದ್ಧವೇ ಎಫ್ಐಆರ್ ದಾಖಲಾಗಿದ್ದು, ಆಟೋ ಡ್ರೈವರ್ ಒಬ್ಬರು ನೀಡಿರೋ ದೂರಿನ ಮೇಲೆ ಎಫ್ಐಆರ್ ದಾಖಲಾಗಿದೆ. ಸದ್ಯ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. 

Tap to resize

Latest Videos

ಟೀ ಅಂಗಡಿಯಲ್ಲಿ ಕೆಲಸದಲ್ಲಿದ್ದ ಯುವಕನಿಗೆ ಇಂಜೆಕ್ಷನ್ ನೀಡಿ ಲಿಂಗ ಪರಿವರ್ತಿಸಿ ಭಿಕ್ಷಾಟನೆಗೆ ದೂಡಿದ ಮಂಗಳಮುಖಿಯರು!

ಆಟೋ ಚಾಲಕ ದೂರು ನೀಡಿರೋದ್ಯಾಕೆ?
ಶನಿವಾರ ತಡರಾತ್ರಿ ಕೋರಮಂಗಲದ ಪಬ್‌ವೊಂದರಲ್ಲಿ ಸ್ನೇಹಿತರೊಂದಿಗೆ ವೀಕೆಂಡ್‌ ಪಾರ್ಟಿ ಮಗಿಸಿ ಭಾನುವಾರ 1.30 ಮಧ್ಯರಾತ್ರಿ ಸ್ನೇಹಿತನ ಜತೆಗೆ ಕಾರಿನಲ್ಲಿ ಮನೆಗೆ ವಾಪಸ್‌ ಹೋಗುವಾಗ, ಕೋರಮಂಗಲದ ಫೋರಂ ಮಾಲ್‌ ಬಳಿ ಕಾರು, ಆಟೋರಿಕ್ಷಾಗೆ ಡಿಕ್ಕಿಯಾಗಿ ಅಪಘಾತವಾಗಿದೆ. 

 ಕಂಠಪೂರ್ತಿ ಕುಡಿದಿದ್ದ ಯುವತಿ ಗೆಳೆಯನ ಜೊತೆ  ತಾನೇ ಕಾರು ಚಾಲನೆ ಮಾಡಿಕೊಂಡು ಹೋಗಿದ್ದಳು ಈ ವೇಳೆ ನಶೆಯಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಓಡಿಸಿ ಟಾನಿಕ್ ಸಮೀಪದ ಮಂಗಳ ಜಂಕ್ಷನ್ ಬಳಿ ಸೈಡಿಗೆ ನಿಲ್ಲಿಸಿದ್ದ ಆಟೋಗಳಿಗೆ ಡಿಕ್ಕಿ ಹೊಡೆದಿದ್ದಾಳೆ. ಎರಡು ಆಟೋಗಳಿಗೆ ಡಿಕ್ಕಿ ಹೊಡೆದು ಫೋರಂ ಮಾಲ್ ಕಡೆ ತೆರಳಿದ್ದಾಳೆ. 

ಎರಡು ಆಟೋಗಳು ಜಖಂ ಆಗಿದ್ದು ಫಾಲೋ ಮಾಡಿ ಪ್ರಶ್ನಿಸಿದ್ದಾಗ ಆಟೋ ಡ್ರೈವರ್ ಜೊತೆ ಜಗಳ ಮಾಡಿಕೊಂಡಿದ್ದಾಳೆ. ಈ ವೇಳೆ ಆಕೆ ಸ್ನೇಹಿತ ಚಾಲಕರ ಜೊತೆ ವಾದ ಮಾಡುವಾಗ  ಪೊಲೀಸರು ಬಂದರೆಂದು ಹೋಗಿದ್ದಾಳೆ , ಅಷ್ಟರಲ್ಲಿ ಆಕೆ ಸ್ನೇಹಿತ ಕಾರು ಬಿಟ್ಟು ಯುವತಿಯನ್ನ ಹುಡುಕೋಕೆ ಹೋಗಿದ್ದ. ಈ ವೇಳೆ ಇಬ್ಬರೂ ಒಬ್ಬರಿಗೊಬ್ಬರು ಬೇರೆ ಬೇರೆ ಕಡೆಯಾಗಿದ್ದಾರೆ. ಅದೇ ಮಾರ್ಗದಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನ ಸವಾರನ ತಡೆದು ಡ್ರಾಪ್‌ ಕೇಳಿದ್ದಳು. ಬಳಿಕ ಆತ ಸುಮಾರು 2 ಕಿ.ಮೀ. ವರೆಗೆ ಡ್ರಾಪ್ ನೀಡಿ ತೆರಳಿದ್ದ, ಅದಾದ ಬಳಿಕ ಮತ್ತೊಬ್ಬ  ಅಪರಿಚಿತ ವ್ಯಕ್ತಿಯಿಂದ ಡ್ರಾಪ್ ಕೇಳಿ ಹೋಗಿದ್ದ ಯುವತಿ ಮೇಲೆ ಅತ್ಯಾಚಾರ ಯತ್ನ ನಡೆದಿದೆ.

ಕ್ಷೌರಿಕನಿಂದ ಕೊಲೆ, 50 ರೂ ಇದ್ದಿದ್ದರೆ ದಲಿತ ಜೀವ ಉಳಿಯುತ್ತಿತ್ತು, ಹಮಾಲಿ ಮಾಡಿ ಮನೆಗೆ ಆಸರೆಯಾಗಿದ್ದವ ಕೊಲೆಯಾದ!

ಸದ್ಯ ಯುವತಿಯ ವಿರುದ್ಧ ಆಡುಗೋಡಿ ಸಂಚಾರಿ ಠಾಣೆಯಲ್ಲಿ ಅಜಾಗರೂಕತೆ ಮತ್ತು ಅತಿಯಾದ ಚಾಲನೆ ಆರೋಪದಡಿ ಪ್ರಕರಣ ದಾಖಲಾಗಿದ್ದು, ಆಟೋ ಚಾಲಕ ಅಜಾಜ್ ನೀಡಿದ ದೂರಿನ ಮೇಲೆ ಎಫ್‌ಐಆರ್ ಆಗಿದೆ. ಯುವತಿ ಚೇತರಿಕೆಗೊಳ್ತಿದ್ದಂತೆಯೆ ಕೇಸ್ ಸಂಬಂಧ ವಿಚಾರಣೆ ನಡೆಯಲಿದೆ.

ಇನ್ನು ಅತ್ಯಾಚಾರ ಯತ್ನ ಸಂಬಂಧ ದ್ವಿಚಕ್ರ ವಾಹನ ಸವಾರನನ್ನು ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಡುಗೋಡಿಯ ಎಸ್‌.ಆರ್‌.ನಗರ ನಿವಾಸಿ ಮುಖೇಶ್ವರನ್‌(24) ಬಂಧಿತ. ಭಾನುವಾರ ಮಧ್ಯರಾತ್ರಿ ಸುಮಾರು 1.30ಕ್ಕೆ ಡ್ರಾಪ್‌ ಕೇಳಿದ ಯುವತಿಯನ್ನು ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಎಚ್‌ಎಸ್‌ಆರ್‌ ಲೇಔಟ್‌ 7ನೇ ಸೆಕ್ಟರ್‌ನ ರಾಜೀವ್‌ ಗಾಂಧಿನಗರದ ಹೊಸೂರು ಮುಖ್ಯರಸ್ತೆಯ ಗಿರಿಯಾಸ್‌ ಶೋ ರೂಮ್‌ ಹಿಂಭಾಗದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದ್ದ ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆ ಆಧರಿಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿ ಮುಖೇಶ್ವರನ್‌ ತಮಿಳುನಾಡು ಮೂಲದವನು. ಕಳೆದ 21 ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾನೆ. ವೃತ್ತಿಯಲ್ಲಿ ಡ್ಯಾನ್ಸ್‌ ಕೋರಿಯೋಗ್ರಾಫರ್‌ ಆಗಿರುವ ಮುಖೇಶ್ವರನ್‌, ಭಾನುವಾರ ರಾತ್ರಿ ಕೋರಮಂಗಲದಲ್ಲಿ ಸ್ನೇಹಿತರ ಜತೆಗೆ ಮದ್ಯದ ಪಾರ್ಟಿ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ಕಡೆಗೆ ತೆರಳುತ್ತಿದ್ದ. ಈ ವೇಳೆ ಮಾರ್ಗ ಮಧ್ಯೆ ಯುವತಿ ಡ್ರಾಪ್‌ ಕೇಳಿದ್ದಾಳೆ. ಬಳಿಕ ಬೈಕ್‌ನಲ್ಲಿ ಕೂರಿಸಿಕೊಂಡು ಹೊರಟ ಆರೋಪಿಯು ಹೊಸೂರು ಮುಖ್ಯರಸ್ತೆಯಲ್ಲಿ ಮಾರ್ಗ ಬದಲಿಸಿದ್ದಾನೆ.

ಎಚ್ಚೆತ್ತ ಸಂತ್ರಸ್ತೆಯು ತನ್ನ ಮೊಬೈಲ್‌ನಲ್ಲಿ ಎಸ್‌ಒಎಸ್‌ ಬಟನ್‌ ಒತ್ತಿ ಸ್ನೇಹಿತರಿಗೆ ತುರ್ತು ಸಂದೇಶ ಹಾಗೂ ತನ್ನ ಲೈವ್‌ ಲೊಕೇಶನ್‌ ಕಳುಹಿಸಿದ್ದಾಳೆ. ಅಷ್ಟರಲ್ಲಿ ತುರ್ತು ಸಂದೇಶ, ಲೈವ್‌ ಲೊಕೇಶನ್‌ ಆಧರಿಸಿ ಯುವತಿಯ ಸ್ನೇಹಿತರು ಸ್ಥಳಕ್ಕೆ ಬಂದಿದ್ದಾರೆ. ಬೆತ್ತಲಾಗಿ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿದ್ದ ಯುವತಿಯನ್ನು ರಕ್ಷಿಸಿ ಕಾರಿನಲ್ಲಿ ಕೂರಿಸಿದ್ದಾರೆ. ಆರೋಪಿಯನ್ನು ಹಿಡಿಯಲು ಯತ್ನಿಸಿದಾಗ ತಪ್ಪಿಸಿಕೊಂಡಿದ್ದ, ಬಳಿಕ ಸ್ನೇಹಿತರು ಆಸಪತ್ರೆಗೆ ದಾಖಲಿಸಿದ್ದಾರೆ. ಸಂತ್ರಸ್ತೆ ನಾಗಲ್ಯಾಂಡ್‌ ಮೂಲದ ಆರ್ಮಿ ಅಧಿಕಾರಿ ಪುತ್ರಿ. ನಗರದ ಹೊರವಲಯದ ಚಂದಾಪುರದಲ್ಲಿ ನೆಲೆಸಿರುವ ಈಕೆ ಆನೇಕಲ್‌ನ ಖಾಸಗಿ ಕಾಲೇಜಿನಲ್ಲಿ ಬಿಬಿಎ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

click me!