ಪಾಪ ಆ ತಾಯಿ ತನ್ನ ಮಗನಿಗೆ ಊಟಕ್ಕೆ ಅಡುಗೆ ಮಾಡಿ ಕೊಡಲು ಮಗನ ಮನೆಗೆ ಹೋಗಿದ್ದಳು ಇಬ್ಬರು ಸೇರಿ ಊಟವನ್ನ ಮಾಡಿದ್ದಾರೆ, ಇಬ್ಬರಿಗೂ ಆಸ್ತಿ ವಿಚಾರಕ್ಕೆ ಜಗಳವಾಗುತ್ತೆ ಪರಿಸ್ತಿತಿ ವಿಕೋಪಕ್ಕೆ ಹೋಗಿ ಮಗನೇ ತಾಯಿಯನ್ನ ಮಾರಕಾಸ್ತ್ರಗಳಿಂದ ಕೊಲೆ ಮಾಡಿ ತಾನೂ ಕೂಡಾ ನೇಣಿಗೆ ಶರಣಾಗಿದ್ದಾನೆ.
ವರದಿ : ಪರಮೇಶ ಅಗಂಡಿ ಏಷ್ಯಾನೆಟ್ ಸುವರ್ಣನ್ಯೂಸ್ ಧಾರವಾಡ
ಧಾರವಾಡ (ಮಾ.3) : ಪಾಪ ಆ ತಾಯಿ ತನ್ನ ಮಗನಿಗೆ ಊಟಕ್ಕೆ ಅಡುಗೆ ಮಾಡಿ ಕೊಡಲು ಮಗನ ಮನೆಗೆ ಹೋಗಿದ್ದಳು ಇಬ್ಬರು ಸೇರಿ ಊಟವನ್ನ ಮಾಡಿದ್ದಾರೆ, ಇಬ್ಬರಿಗೂ ಆಸ್ತಿ ವಿಚಾರಕ್ಕೆ ಜಗಳವಾಗುತ್ತೆ ಪರಿಸ್ತಿತಿ ವಿಕೋಪಕ್ಕೆ ಹೋಗಿ ಮಗನೇ ತಾಯಿಯನ್ನ ಮಾರಕಾಸ್ತ್ರಗಳಿಂದ ಕೊಲೆ ಮಾಡಿ ತಾನೂ ಕೂಡಾ ನೇಣಿಗೆ ಶರಣಾಗಿದ್ದಾನೆ.
ಹೀಗೆ ರಕ್ತದ ಮಡುವಿನಲ್ಲಿ ಮಲಗುವ ವೃದ್ದೆ ಮತ್ತೊಂದಡೆ ನೇಣಿಗೆ ಶರಣಾದ ಮಗ, ಎಲ್ಲೆಂದರಲ್ಲಿ ಗೋಡೆಗಳಿಗೆ ಚಿಮ್ಮಿರುವ ರಕ್ತದ ಕಲೆಗಳು ಈ ದೃಶ್ಯಗಳು ಕಂಡು ಬಂದಿದ್ದು ಧಾರವಾಡ ಹೊಸ ಯಲ್ಲಾಪೂರದ ಶುಕ್ರವಾರಪೇಟೆಯ ಉಡುಪಿ ಓಣಿಯಲ್ಲಿ ನಡೆದ ಕೊಲೆ. ತಾಯಿ ಶಾರದಾ ಭಜಂತ್ರಿಯನ್ನ ಮಗ ರಾಜೇಶ್ ಭಜಂತ್ರಿ. ಆತ ತನ್ನ ಮನೆಯಲ್ಲಿ ವಾಸವಾಗಿದ್ದ ತನ್ನ ಪತ್ನಿಯನ್ನ ತವರು ಮನೆಗೆ ಕಳುಹಿಸಿಕ್ಕೊಟ್ಟಿದ್ದ ಅಷ್ಟಕ್ಕೂ ಅವಳ ಪತ್ನಿಯ ಮೇಲೆ ಸಂಶಯದಿಂದ ಜಗಳವಾಡಿಕ್ಕೊಂಡು ಪತ್ನಿಯನ್ನ ತವರು ಮನೆಗೆ ಕಳಸಿದ್ದ. ಆದರೆ ನಿನ್ನೆ ರಾತ್ರಿ ತನ್ನ ತಾಯಿಗೆ ನನಗೆ ಅಡುಗೆ ಮಾಡಿ ಕೊಡು ಎಂದು ಕರೆಸಿಕೊಂಡಿದ್ದಾನೆ. ಇಬ್ಬರು ಸೇರಿ ಊಟ ಮಾಡಿದ್ದಾರೆ ಬಳಿಕ ರಾಜೇಶ ಭಜಂತ್ರಿ ತನ್ನ ತಾಯಿಗೆ ತಾಯಿಯ ಪೆನ್ಶನ್ ಹಣ ಕೊಡುವಂತೆ ಮತ್ತು ಜಾಗೆಯ ವಿಚಾರಕ್ಕೆ ಜಗಳವಾಡುತ್ತಾನೆ. ಪರಿಸ್ಥಿತಿ ಕೈ ಮೀರಿ ತಾಯಿಯನ್ನ ರಾಡ್ ನಿಂದ ಹೊಡೆದು ಕೊಲೆ ಮಾಡುತ್ತಾನೆ. ಇನ್ನು ಬಳಿಕ ತಾಯಿ ತೀರಿ ಹೋಗಿದ್ದಾಳೆ ಎಂಬ ಭಯದಿಂದ ತಾನೂ ಕೂಡಾ ನೇಣಿಗೆ ಶರಣಾಗಿದ್ದಾನೆ.
ಆನ್‌ಲೈನ್ ಗೇಮ್‌ನಿಂದ ಕಳ್ಕೊಂಡ ಹಣ ಹಿಂದಿರುಗಿಸಲು ತಾಯಿಯನ್ನೇ ಕೊಂದ ಮಗ!
ಇಂದು ಬೆಳ್ ಬೆಳಗ್ಗೆ ಎರಡನೇಯ ಮಗ ತಾಯಿ ಯಾಕೆ ಮನೆಗೆ ಬಂದಿಲ್ಲ ಎಂದು ಇವತ್ತು ರಾಜೇಶನ ಮನೆಗೆ ಹೋಗಿ ಡೋರ್ ಓಪನ್ ಮಾಡಿದಾಗ ಇಬ್ಬರು ಸಾವನ್ನಪ್ಪಿದ್ದು ಕಂಡು ಗಾಬರಿಯಾಗಿ ಸ್ಥಳಿಯ ಶಹರ ಪೋಲಿಸರಿಗೆ ಮಾಹಿತಿಯನ್ನ ಮುಟ್ಟಿಸಿದ್ದಾನೆ. ಸ್ಥಳಕ್ಕೆ ಬಂದ ಧಾರವಾಡ ಶಹರ ಪೋಲಿಸರು ಘಟನಾ ಸ್ಥಳಕ್ಕೆ ಬೇಟಿ ನೀಡಿ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ. ಇನ್ನೊಂದಡೆ ಡಿಸಿಪಿ ಅವರು ಬೇಟಿ ನೋಡಿ ಮಾಹಿತಿಯನ್ನ ಪಡೆದುಕ್ಕೊಂಡು ರಾಜೇಶನ ಸಹೋದರ ಕೊಟ್ಡ ದೂರಿನನ್ವಯ ಪೋಲಿಸರು ತನಿಖೆ ಮಾಡುತ್ತವೆ ಎಂದು ಹೇಳಿದ್ದಾರೆ. ಈ ಘಟನೆಯನ್ನ ನೋಡಿ ಆ ಉಡುಪಿ ಕಾಲೋನಿಯ ಜನರು ಮಮ್ಮಲ ಮರಗುತ್ತಿದ್ದಾರೆ.
ಮದ್ವೆಯಾಗಲು ಹುಡುಗಿ ಹುಡುಕದ್ದಕ್ಕೆ ಸಿಟ್ಟು; ತಾಯಿಯನ್ನೇ ಕೊಂದು ಕಾಲು ಕತ್ತರಿಸಿದ ಮಗ!
ಒಟ್ಟಿನಲ್ಲಿ ಒಂದು ನಿಮಿಷದ ಕೋಪ ತನ್ನತಾಯಿಯನ್ನ ಬಲಿ ತೆಗೆದುಕ್ಕೊಂಡಿದೆ.. ಇನ್ನೊಂದಡೆ ತಾನೂ ಭಯಬೀತನಾಗಿ ತನ್ನ ಪ್ರಾಣವನ್ನ ತಾನೆ ಕಳೆದುಕ್ಕೊಂಡಿದ್ದಾನೆ..ಜೊತೆಗೆ ಸದ್ಯ ಈ ಸಾವನ್ನ ನೋಡಿ ಇಡಿ ಉಡುಪಿ ಕಾಲೋನಿಯ ಜನರು ಕನ್ನಿರು ಇಡುತ್ತಿದ್ದಾರೆ ಆಸ್ತಿಗಾಗಿ ತನ್ನ ತಾಯಿಯನ್ನ ಕೊಲೆ ಮಾಡಿ ತಾನೂ ನೇಣಿಗೆ ಶರಣಾಗಿದ್ದು ದುರದೃಷ್ಟಕರ ಸಂಗತಿ.