
ಬೆಂಗಳೂರು (ಜೂ.30) : ಮನೆಯಲ್ಲಿ ಒಂಟಿಯಾಗಿದ್ದಾಗ ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಕಿಡಿಗೇಡಿಯೊಬ್ಬನನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೊಟ್ಟಿಗೆಪಾಳ್ಯ ಸಮೀಪದ ಶ್ರೀಗಂಧ ಕಾವಲು ನಿವಾಸಿ ಇಬ್ರಾಹಿಂ ಬಾಷಾ ಬಂಧಿತನಾಗಿದ್ದು, ನಾಲ್ಕು ದಿನಗಳ ಹಿಂದೆ ಕೊಟ್ಟಿಗೆಪಾಳ್ಯ ಸಮೀಪ ನೆಲೆಸಿರುವ ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಆಗ ಆಕೆ ಪ್ರತಿರೋಧ ತೋರಿದ್ದರಿಂದ ಹಲ್ಲೆ ನಡೆಸಿ ಆರೋಪಿ ಪರಾರಿಯಾಗಿದ್ದ. ಈ ಬಗ್ಗೆ ಸಂತ್ರಸ್ತೆ ತಾಯಿ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
63 ವರ್ಷದ ಸ್ವಾಮೀಜಿಯಿಂದ 15 ವರ್ಷದ ಬಾಲಕಿಯ ಅತ್ಯಾಚಾರ, ಚೈನ್‌ನಿಂದ ಕಟ್ಟಿ ರೂಮ್‌ನಲ್ಲಿ ಇರಿಸಿದ್ದ!
ಹಲವು ದಿನಗಳಿಂದ ನಗರದಲ್ಲಿ ತಮಿಳುನಾಡು ಮೂಲದ ಇಬ್ರಾಹಿಂ ನೆಲೆಸಿದ್ದು, ‘ಡಿ’ ಗ್ರೂಪ್ ಲೇಔಟ್‌ನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಆತ ಗಾರೆ ಕೆಲಸಗಾರನಾಗಿದ್ದ. ತನ್ನ ತಾಯಿ ಜತೆ ಬುದ್ಧಿಮಾಂದ್ಯಯುವತಿ ನೆಲೆಸಿದ್ದು, ಮನೆಗೆಲಸ ಮಾಡಿಕೊಂಡು ಆಕೆಯ ತಾಯಿ ಜೀವನ ಸಾಗಿಸುತ್ತಿದ್ದಾಳೆ. ಕೆಲಸಕ್ಕೆ ಹೋಗುವಾಗ ಮಗಳನ್ನು ಮನೆಯಲ್ಲಿ ಬಿಟ್ಟು ಹೋಗುತ್ತಿದ್ದರು. ಆಗಾಗ್ಗೆ ಮನೆಗೆ ಬಂದು ಅವಳ ಯೋಗಕ್ಷೇಮ ವಿಚಾರಿಸುತ್ತಿದ್ದರು.
ಅದೇ ಪ್ರದೇಶದಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಕಾರಣ ಯುವತಿಯನ್ನು ಆರೋಪಿ ನೋಡಿದ್ದ. ಎಂದಿನಂತೆ ಜೂ.22ರಂದು ಸಂತ್ರಸ್ತೆ ತಾಯಿ ಕೆಲಸಕ್ಕೆ ತೆರಳಿದ್ದಳು. ಆಗ ಮನೆಯಲ್ಲಿ ಸಂತ್ರಸ್ತೆ ಏಕಾಂಗಿಯಾಗಿರುವುದನ್ನು ಖಚಿತಪಡಿಸಿಕೊಂಡು ಆರೋಪಿ ನುಗ್ಗಿ ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾಗ ಸಂತ್ರಸ್ತೆ ಬಲವಾಗಿ ವಿರೋಧಿಸಿದ್ದಾಳೆ. ಇದರಿಂದ ಕೆರಳಿ ಆಕೆ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
Bengaluru Rape: ಕಾಶ್ಮೀರದ ಇಬ್ಬರು ಯುವತಿಯರ ಮೇಲೆ ಅತ್ಯಾಚಾರ ಯತ್ನ: ಪಾರ್ಟಿ ಕೊಡಿಸೋ ನೆಪದಲ್ಲಿ ಕುಕೃತ್ಯ
ಕೆಲ ಹೊತ್ತಿನ ಮನೆಗೆ ಮರಳಿದ ತಾಯಿ ಬಳಿ ಸಂತ್ರಸ್ತೆ ನೋವು ತೋಡಿಕೊಂಡಿದ್ದಳು. ಕೂಡಲೇ ಪೊಲೀಸರಿಗೆ ಆಕೆಯ ಕುಟುಂಬದವರು ದೂರು ನೀಡಿದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಕೃತ್ಯ ನಡೆದ ನಾಲ್ಕು ದಿನಗಳ ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ