ಮ್ಯಾಟ್ರಿಮೊನಿಯಲ್ಲಿ ನೋಡಿ ಮದ್ವೆಯಾದ ಗಂಡ, ಗಾಂಜಾ ನಶೆಯಲ್ಲಿ ಸ್ನೇಹಿತನೊಂದಿಗೆ ಹೆಂಡ್ತಿ ಹಂಚಿಕೊಂಡ

By Sathish Kumar KH  |  First Published Jun 29, 2023, 6:46 PM IST

ಮ್ಯಾಟ್ರಿಮೊನಿಯಲ್ಲಿ ನೋಡಿ ಪರಿಚಯವಾಗಿ ಪ್ರೀತಿಸಿ ಮದುವೆಯಾದ ಗಂಡ, ಗಾಂಜಾ ಅಮಲಿನಲ್ಲಿ ಸ್ನೇಹಿತರೊಂದಿಗೆ ಪತ್ನಿಯನ್ನು ಮಲಗಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.


ಬೆಂಗಳೂರು (ಜೂ.29): ಆಂಧ್ರಪ್ರದೇಶದಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಓದಿ ಐಟಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಹುಡುಗನ್ನ ಮ್ಯಾಟ್ರಿಮೊನಿಯಲ್ಲಿ ನೋಡಿ, ಪರಸ್ಪರ ಪ್ರೀತಿಸಿ ಮದುವೆಯಾದ ಯುವತಿ ಪಡಬಾರದ ಕಷ್ಟ ಅನುಭವಿಸುತ್ತಿದ್ದಾಳೆ. ತಾನು ಗಾಂಜಾ ಸೇವಿಸಿ ಕಿರುಕುಳ ನೀಡಿದ್ದಲ್ಲದೇ, ತನ್ನ ಸ್ನೇಹಿತರೊಂದಿಗೂ ಮಲಗಿ ಸುಖ ಕೊಡುವಂತೆ ಒತ್ತಾಯಿಸಿದ್ದಾನೆ.

ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹೇಳುತ್ತಾರೆ. ಇನ್ನು ಮದುವೆ ಆಗುವಾಗ ಜೀವನಪೂರ್ತಿ ಕಷ್ಟ ಸುಖದಲ್ಲಿ ಭಾಗಿಯಾಗುತ್ತೇನೆಂದು ತಾಳಿ ಕಟ್ಟಿದ ಗಂಡನೇ ಕಷ್ಟವನ್ನು ಕೊಟ್ಟರೆ ಹೇಗಿರುತ್ತದೆ. ಅದರಲ್ಲಿಯೂ ಗಂಡನೊಂದಿಗೆ ದೇಹ ಹಂಚಿಕೊಳ್ಳಬೇಕಾದವಳು, ಗಂಡನ ಸ್ನೇಹಿತರೊಂದಿಗೆ ಹಾಸಿಗೆ ಹಂಚಿಕೊಳ್ಳಬೇಕೆಂದರೆ ಎಂತಹ ದಯನೀಯ ಸ್ಥಿತಿ ಇರಬೇಡ. ಇದರಿಂದ ತಪ್ಪಿಸಿಕೊಂಡು ಬಂದ ನವ ವಿವಾಹಿತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಇಷ್ಟಾದರೂ ಬುದ್ಧಿ ಕಲಿಯದ ಪತಿರಾಯ ಕೇಸ್‌ ವಾಪಸ್‌ ಪಡೆಯಲು ಬೆದರಿಕೆ ಹಾಕುತ್ತಿದ್ದಾನೆ.

Tap to resize

Latest Videos

ಕಾರವಾರದ ಉದ್ಯಮಿ ಕುಟುಂಬ ಆತ್ಮಹತ್ಯೆ: ತಂದೆ ನೇಣಿಗೆ ಶರಣು, ಸಮುದ್ರಕ್ಕೆ ಹಾರಿದ ತಾಯಿ-ಮಗ

ಸ್ನೇಹಿತರ ಜೊತೆಗೂಡಿ ಪತ್ನಿ ಮೇಲೆ ಅತ್ಯಾಚಾರಕ್ಕೆ ಯತ್ನ: ಬೆಂಗಳೂರಿನಲ್ಲಿ ಸ್ನೇಹಿತರ ಜೊತೆ ಸೇರಿ ಪತ್ನಿ ಆತ್ಯಾಚಾರಕ್ಕೆ ಯತ್ನ ಮಾಡಿರುವ ಘಟನೆ ನಡೆದಿದೆ. ಪತಿಯ ಸ್ನೇಹಿತರು ಡ್ರಗ್ಸ್‌ ಮತ್ತು ಗಾಂಜಾ ಸೇವಿಸಿ ಆತನ ಮುಂದೆಯೇ ಪತ್ನಿಯನ್ನು ಅತ್ಯಾಚಾರಕ್ಕೆ ಎಳೆದಾಡಿದ್ದಾರೆ. ಸ್ನೇಹಿತರ ಜೊತೆ ಸೇರಿ ಪತ್ನಿಗೆ ಪತಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಎಂದು ಆಂಧ್ರಪ್ರದೇಶ ಕಾಕಿನಾಡ ಮೂಲದ ಪತಿಯ ವಿರುದ್ದ ದೂರು ದಾಖಲು ಆಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಸುಬ್ರಮಣ್ಯಪುರ ಠಾಣೆ ಪೊಲೀಸರು ಆರೋಪಿಗಳ ಸೆರೆಹಿಡಿದು ಜೈಲಿಗಟ್ಟಿದ್ದಾರೆ. ಮನೆಯಲ್ಲಿ ಗಾಂಜಾ ಸೇವಿಸಿ ಪತ್ನಿಯ ಮೇಲೆ ಪತಿಯ ಸ್ನೇಹಿತರಿಂದ ಆತ್ಯಾಚಾರಕ್ಕೆ ಯತ್ನ ನಡೆದಿದೆ. ಈ ವೇಳೆ ತಪ್ಪಿಸಿಕೊಂಡ ಬಂದ ಪತ್ನಿಯಿಂದ ದೂರು ದಾಖಲು ಮಾಡಿದ್ದಾಳೆ. ಇಷ್ಟಾದರೂ ಕೇಸ್ ವಾಪಸ್ಸು ಪಡೆಯಲು ಗಂಡನೇ ಹಣ ಕೊಟ್ಟು ಪೊಲೀಸರಿಂದ ಒತ್ತಡ ಹಾಕಿಸಿದ್ದಾರೆ. ಇದರಿಂದ ನೊಂದ ಮಹಿಳೆ ಪೊಲೀಸ್‌ ಸ್ಟೇಷನ್ ಮುಂದೆ ಪ್ರತಿಭಟನೆಗೆ ಮುಂದಾಗಿದ್ದಾಳೆ. 

ಮ್ಯಾಟ್ರಿಮೊನಿಯಲ್ಲಿ ನೋಡಿ ಮದುವೆಯಾದ ಗಂಡ:  ಇನ್ನು ಆರೋಪಿಯನ್ನು ಕಾಕಿನಾಡ ಮೂಲದ ಅಖಿಲೇಷ್ ಧರ್ಮರಾಜ್ ಎಂದು ಹೇಳಲಾಗುತ್ತಿದೆ. ಇಬ್ಬರೂ ಐಟಿ ಕಂಪನಿ ಉದ್ಯೋಗಿಗಳು. ಬೆಂಗಳೂರಿನ ವಸಂತಪುರದ ನಿವಾಸಿ ಮ್ಯಾಟ್ರಿಮೋನಿಯಲ್ಲಿ ಅಖಿಲೇಶ್‌ನನ್ನು ನೋಡಿ, ಪರಸ್ಪರ ಮಾತನಾಡಿಕೊಂಡು ಪ್ರೀತಿಸಿದ್ದಾರೆ. ನಂತರ, ಇಬ್ಬರ ಮನೆಯವರನ್ನೂ ಒಪ್ಪಿಸಿ 2019ರಲ್ಲಿ ಮದುವೆಯಾಗಿದ್ದಾರೆ. ಸದ್ಯ ಹೆಚ್ ಎಸ್ ಆರ್ ಲೇಔಟ್ ನಲ್ಲಿ ದಂಪತಿ ವಾಸವಿದ್ದರು. ಆರಂಭದಲ್ಲಿ ಚೆನ್ನಾಗಿದ್ದ ಗಂಡ ಬರಬರುತ್ತಾ ಸ್ನೇಹಿತರೊಂದಿಗೆ ಸೇರಿ ಮನೆಗೆ ಗಾಂಜಾ ತಂದು ಸೇವನೆ ಮಾಡ್ತಿದ್ದನು. ಮತ್ತಿನಲ್ಲಿ ನಿತ್ಯ ಕಿರುಕುಳ ನೀಡುತ್ತಿದ್ದನು. ಹಾಸಿಗೆಯಲ್ಲಿ ಮೈ-ಕೈ ಎಲ್ಲ ಪರಚುತ್ತಾ ಸಿಗರೇಟ್‌ನಿಂದ ಸುಟ್ಟು ಹಾಕಿದ್ದಾನೆ. 

ಬೆಂಗಳೂರು: ಮಾಲಿಕನ ಸಿಗಲಿಲ್ಲವೆಂದು ಮ್ಯಾನೇಜರ್‌ ಅಪಹರಿಸಿದ್ದವರ ಸೆರೆ

ಪೊಲೀಸ್‌ ಠಾಣೆಯ ದೂರು ವಾಪಸ್‌ ಪಡೆವಂತೆ ಬೆದರಿಕೆ:  ಇಷ್ಟಕ್ಕೆ ಈತನ ಕಿರುಕುಳ ಕೊನೆಗೊಂಡಿಲ್ಲ. ಕೊನೆಗೆ ಸ್ನೇಹಿತರ ಮನೆಗೆ ಕರೆತಂದು ಗಾಂಜಾ ಪಾರ್ಟಿ ಮಾಡಿದ್ದಾನೆ. ಈ ವೇಳೆ ಆತನ ಸ್ನೇಹಿತರು ಟೆಕ್ಕಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದಾರೆ. ಆಗ ಮನೆಯಿಂದ ತಪ್ಪಿಸಿಕೊಂಡ ಬಂದ ಪತ್ನಿಗೆ ವಾಪಸ್‌ ಬರುವಂತೆ ಒತ್ತಾಯ ಮಾಡಿದ್ದಾರೆ. ಜೊತೆಗೆ, ಈ ವಿಷಯ ಹೊರಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈಗ ನೊಂದು ಮಹಿಳೆ ದೂರು ಕೊಟ್ಟರೂ ಪೊಲೀಸರು ಆರೋಪಿಗಳನ್ನು ಬಂಧಿಸಿರಲಿಲ್ಲ. ಆದರೆ, ಮಹಿಳೆ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಆರಂಭಿಸಿದಾಗ ಆರೋಪಿಗಳನ್ನು ಪೊಲೀಸರು ಬಂಧಿಸಿ ಕರೆತಂದಿದ್ದಾರೆ.

click me!