ಹೆಣ್ಣಿನ ವೇಷಧರಿಸಿ ಭಿಕ್ಷಾಟನೆ ಮಾಡಿ ಸಂಪಾದಿಸಿದ ಹಣದಲ್ಲೇ ಸ್ವಂತ ಮನೆಯನ್ನು ಚೇತನ್ ನಿರ್ಮಿಸಿದ್ದ ಎಂಬ ಸಂಗತಿ ಬಾಗಲಗುಂಟೆ ಠಾಣೆ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರು (ಜು.16): ಹೆಣ್ಣಿನ ವೇಷಧರಿಸಿ ಭಿಕ್ಷಾಟನೆ ಮಾಡಿ ಸಂಪಾದಿಸಿದ ಹಣದಲ್ಲೇ ಸ್ವಂತ ಮನೆಯನ್ನು ಚೇತನ್ ನಿರ್ಮಿಸಿದ್ದ ಎಂಬ ಸಂಗತಿ ಬಾಗಲಗುಂಟೆ ಠಾಣೆ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ತುಮಕೂರು ರಸ್ತೆಯ ಮಂಜುನಾಥ ನಗರದಲ್ಲಿ ಮೆಟ್ರೋ ಕಾಮಗಾರಿ ಸಮೀಪ ಅಕ್ರಮವಾಗಿ ತಾತ್ಕಾಲಿಕ ಶೆಡ್ ನಿರ್ಮಿಸಿ ಅಕ್ರಮ ಚಟುವಟಕೆಗಳನ್ನು ನಡೆಸುತ್ತಿದ್ದ ಆರೋಪಿ ಚೇತನ್ ಮೇಲೆ ಸಾರ್ವಜನಿಕರು ಗಲಾಟೆ ಮಾಡಿದ್ದರು. ಆಗ ಆತನನ್ನು ಬಂಧಿಸಿದ ಪೊಲೀಸರಿಗೆ ವಿಚಾರಣೆ ವೇಳೆ ಆತನ ಮತ್ತೊಂದು ಮುಖ ಅನಾವರಣಗೊಂಡಿದೆ.
ತನ್ನ ಪತ್ನಿ ಹಾಗೂ ಮಕ್ಕಳ ಜತೆ ನೆಲೆಸಿದ್ದ ಚೇತನ್, ಮಂಜುನಾಥನಗರದಲ್ಲಿ ಬಾಡಿಗೆ ರೂಂ ಮಾಡಿಕೊಂಡಿದ್ದ. ಆ ಕೊಠಡಿಯಲ್ಲೇ ವೇಷ ಬದಲಿಸಿ ಅಕ್ರಮ ಚಟುವಟಿಕೆಗಳಲ್ಲಿ ಆರೋಪಿ ತೊಡಗುತ್ತಿದ್ದ. ಕಳೆದ ನಾಲ್ಕೈದು ವರ್ಷಗಳಿಂದ ಯಾವುದೇ ಕೆಲಸಕ್ಕೆ ಹೋಗದೆ ನಿತ್ಯ ಹೆಣ್ಣಿನ ವೇಷ ಧರಿಸಿ ಮಂಗಳಮುಖಿಯರ ಜತೆ ಸೇರಿ ಸುಮಾರು ನಾಲ್ಕೈದು ಕಡೆ ಭಿಕ್ಷಾಟನೆ ಮಾಡುತ್ತಿದ್ದ. ಹೀಗೆ ಸಂಪಾದಿಸಿದ ಹಣದಲ್ಲಿ ಮನೆಯನ್ನು ಸಹ ನಿರ್ಮಿಸಿ ಆತ ಮೋಜಿನ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ನನಗೆ ಸಹಕರಿಸು ಎಂದು ಸ್ಟಾಪ್ ನರ್ಸ್ಗೆ ಕಿರುಕುಳ: ಸರ್ಕಾರಿ ವೈದ್ಯನ ವಿರುದ್ಧ ಪ್ರಕರಣ ದಾಖಲು
ಮಂಜುನಾಥನಗರದಲ್ಲಿ ಬಿಎಂಆರ್‌ಸಿಎಲ್ ನಿರ್ಮಿಸುತ್ತಿರುವ ಮೆಟ್ರೋ ಕಾಮಗಾರಿ ಸಮೀಪ ಅಕ್ರಮವಾಗಿ ಶೆಡ್ ನಿರ್ಮಿಸಿ ಅದನ್ನು ತನ್ನದೆಂದು ಚೇತನ್ ಹೇಳಿಕೊಂಡಿದ್ದ. ಈ ಶೆಡ್‌ನಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಲು ಆತ ಬಳಸಿಕೊಳ್ಳುತ್ತಿದ್ದ ಆತನ ವಿರುದ್ಧ ಗುರುವಾರ ಸಾರ್ವಜನಿಕರು ಗಲಾಟೆ ಮಾಡಿದ್ದರು. ಆಗ ಮಹಿಳೆಯರ ಜತೆ ಆರೋಪಿ ಅನುಚಿತವಾಗಿ ವರ್ತಿಸಿದ್ದ. ಈ ಬಗ್ಗೆ ಸ್ಥಳೀಯರು ನೀಡಿದ ದೂರಿನ ಮೇರೆಗೆ ಚೇತನ್‌ನನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದರು.
ಮಹಿಳೆ ಕೊಲೆ, ಬಂಧನ: ಇತ್ತೀಚೆಗೆ ಇಲ್ಲಿನ ಕೆ.ಕೆ. ನಗರದಲ್ಲಿ ನಡೆದ ವಿಜಯಲಕ್ಷ್ಮೀ ಗಂಡ ಮಲಕಯ್ಯ ಮಠ (44) ಎಂಬ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಸಬ್ ಅರ್ಬನ್ ಪೊಲೀಸರು ಬಂಧಿಸಿದ್ದಾರೆ. ಸಿಂದಗಿ (ಬಿ) ಗ್ರಾಮದ ರೇವಣಸಿದ್ದಯ್ಯ ಕುಪೇಂದ್ರಯ್ಯ ಮಠ (35), ಸಿದ್ರಾಮಯ್ಯ ಕುಪೇಂದ್ರಯ್ಯ ಮಠ (26) ಮತ್ತು ಬಿದ್ದಾಪುರ ಕಾಲೋನಿಯ ಮಡೆಪ್ಪ ಅಲಿಯಾಸ್ ಮಳೇಂದ್ರ ಶ್ರೀಶೈಲ ಮಠ (38) ಎಂಬುವವರನ್ನು ಬಂಧಿಸಿ 1 ತಲವಾರ, 2 ಚಾಕು, ಆಟೋ, ಬೈಕ್ ಮತ್ತು 3 ಮೊಬೈಲ್ ಜಪ್ತಿ ಮಾಡಿದ್ದಾರೆ. ಜು.11 ರಂದು ಬೆಳಿಗ್ಗೆ 10.30ರ ಸುಮಾರಿಗೆ ಆರೋಪಿಗಳು ವಿಜಯಲಕ್ಷ್ಮೀ ಅವರನ್ನು ತಲವಾರ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಅಲ್ಲದೆ, ಅವರ ಮಕ್ಕಳ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿ ಬೈಕ್ ಮತ್ತು ಆಟೋದಲ್ಲಿ ಪರಾರಿಯಾಗಿದ್ದರು.
ಲಂಚಕ್ಕೆ ಬೇಡಿಕೆ: ಲೋಕಾಯುಕ್ತ ಟ್ರ್ಯಾಪ್‌ಗೆ ಫುಡ್ ಇನ್ಸ್‌ಪೆಕ್ಟರ್
ಈ ಸಂಬಂಧ ಮೃತಳ ಪುತ್ರ ಮಹಾದೇವ ಮಲಕಯ್ಯ ಮಠ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಉಪ ಪೊಲೀಸ್ ಆಯುಕ್ತರಾದ ಅಡ್ಡೂರು ಶ್ರೀನಿವಾಸಲು ಐ.ಎ.ಚಂದ್ರಪ್ಪ, ಸಬ್ ಅರ್ಬನ್ ಉಪ ವಿಭಾಗದ ಎಸಿಪಿ ಗೀತಾ ಬೇನಾಳ ಅವರ ಮಾರ್ಗಶರ್‍ನದಲ್ಲಿ ಪಿಐ ರಮೇಶ ಕಾಂಬಳೆ ಅವ ನೇತೃತ್ವದಲ್ಲಿ ಪಿಎಸ್‌ಐಗಳಾದ ಕವಿತಾ ಚವ್ಹಾಣ, ಹುಸೇನ್ ಸಾಬ, ಸಲಿಮೋದ್ದೀ, ಎಎಸಐಗಳಾದ ನಾಗರಾಜ, ಪುಂಡಲಿಕ, ಸಿಬ್ಬಂದಿಗಳಾದ ಮಲ್ಲಿಕಾರ್ಜುನ, ನಾಗೇಂದ್ರ, ಪ್ರಕಾಶ, ಪ್ರಶಾಂತ, ಅನೀಲ, ಶಿವರಾಜ ಮತ್ತು ಅನಿಲ ಅವರನ್ನೊಳಗೊಂಡ ಪ್ರತ್ಯೇಕ ತಂಡ ರಚಿಸಲಾಗಿತ್ತು. ಈ ತಂಟಿಗಳು ತನಿಖೆ ನಡೆಸಿ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ.