* ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತ್ನಿ ಹತ್ಯೆ
* ಪತ್ನಿಯನ್ನು ಕೊಂದ ಪಾಪಿ ಪತಿ
* ತಾಯಿಯ ಕೊಲೆಗೆ ಸಾಥ್ ನೀಡಿದ ಮಗ
ಹಾಸನ, (ಮೇ.22): ತನ್ನ ಕಾಮದ ತೀಟೆಗೆ ಅಡ್ಡಿಯಾಗಿದ್ದಾರೆಂದು ಪತಿರಾಯ, ಅಗ್ನಿ ಸಾಕ್ಷಿಯಾಗಿ ಕಟ್ಟಿಕೊಂಡ ಪತ್ನಿಯನ್ನೇ ಕೊಂದು ಹಾಕಿದ್ದಾನೆ. ಮಗನ ಜೊತೆ ಸೇರಿಕೊಂಡು ಹತ್ಯೆ ಮಾಡಿದ್ದು, ಈ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಮರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸುಶೀಲಮ್ಮ (50) ಕೊಲೆಯಾದ ಮಹಿಳೆ. ಪತಿ ಮಂಜುನಾಥ್, ಮಗ ಮನೋಜ್ ಕೊಲೆ ಆರೋಪಿಗಳು. ಬಟ್ಟೆಯಿಂದ ಕತ್ತು ಬಿಗಿದು ಅಪ್ಪ-ಮಗ ಸೇರಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಮನೆಯ ಸಂಸಾರದ ಜಗಳ ಪತ್ನಿ ಕೊಲೆಯಲ್ಲಿ ಅಂತ್ಯಗೊಂಡಿದೆ.
ಪಕ್ಕದ ಮನೆ ಸ್ನೇಹಿತನೊಂದಿಗೆ ಲವ್ವಿಡವ್ವಿ, ಏಕಾಂತದಲ್ಲಿದ್ದಾಗ ಸಿಕ್ಕಿಬಿದ್ದ ಹೆಂಡ್ತಿ
ಸುಶೀಲಮ್ಮ, ಮಂಜುನಾಥ್ ಹಾಗೂ ಮನೋಜ್ ಒಂದೇ ಮನೆಯಲ್ಲಿ ಬೇರೆ-ಬೇರೆ ವಾಸವಿದ್ದರು. ಇಂದು(ಭಾನುವಾರ) ಪತಿ ಮಂಜುನಾಥ್ ಹಾಗೂ ಪುತ್ರ ಮನೋಜ್ ಟವೆಲ್ನಿಂದ ಕುತ್ತಿಗೆ ಬಿಗಿದು ಸುಶೀಲಮ್ಮನನ್ನು ಕೊಲೆ ಮಾಡಿದ್ದಾರೆ.
ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾಳೆಂದು ತಾಯಿಯನ್ನು ಕೊಂದಿದ್ದಾರೆಂದು ಮೃತಳ ಮಗಳು ಆರೋಪಿಸಿದ್ದಾಳೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಡ್ಯದಲ್ಲಿ ಕೊಲೆ, ಹಾಸನದಲ್ಲಿ ಸಿಕ್ಕಿತು ಡೆಡ್ ಬಾಡಿ
ಹಾಸನ: ಕಳೆದ ಭಾನುವಾರ ನಾಪತ್ತೆಯಾಗಿದ್ದ ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕಿನ, ನರಗಲು ಗ್ರಾಮದ ಮೋಹನ್ ಬರ್ಬರವಾಗಿ ಕೊಲೆಯಾಗಿದ್ದಾನೆ. ಕೊಲೆ (Murder) ಮಾಡಿದ ನಂತರ ಹಾಸನ (Hassan) ಜಿಲ್ಲೆ, ಹೊಳೆನರಸೀಪುರ ತಾಲ್ಲೂಕಿನ ಬಂಟರ ತಳಾಲು ಗ್ರಾಮದ ಹೊರಭಾಗದಲ್ಲಿರುವ ನಿರ್ಜನ ಪ್ರದೇಶದಲ್ಲಿ ಹೂತು ಹಾಕಿದ್ದಾರೆ.
ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ಅಧಿಕಾರಿಗಳು ಇತ್ತೀಚಿಗೆ ದಾಳಿ ನಡೆಸಿದ್ದರು. ಮೋಹನ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ ಎಂಬ ಅನುಮಾನದಿಂದ ರಾಜು, ಸಂದೀಪ್ ಎಂಬುವರ ಜೊತೆ ಸಂಬಂಧಿಕರು ಸೇರಿ ಮೋಹನ್‌ನನ್ನು ಕೊಲೆಗೈದಿದ್ದಾರೆ.
ಮೇ 15 ರಂದು ಜಮೀನು ಬಳಿಗೆ ಹೋಗಿ ಬರುವೆ ಎಂದು ಹೋದ ಮೋಹನ್ ದಿಢೀರ್ ನಾಪತ್ತೆಯಾಗಿದ್ದ. ಮನೆಗೆ ಬಾರದ ಹಿನ್ನಲೆಯಲ್ಲಿ ಪತ್ನಿ, ಸ್ನೇಹಿತರು ಸಾಕಷ್ಟು ಹುಡುಕಾಟ ನಡೆಸಿದ್ದರು. ಮೈನಿಂಗ್ ಬಳಿ ಹೋಗಿ ರಾಜುವನ್ನು ಕೂಡ ಪ್ರಶ್ನಿಸಿದ್ದರು. ಎಲ್ಲಿ ಹುಡುಕಿದರು ಮೋಹನ್ ಪತ್ತೆಯಾಗದ ಕಾರಣ ಬಿಂಡಿಗನವಿಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈಗ ಬಂಧಿತರಾಗಿರುವವರ ಮೇಲೆಯೇ ಅನುಮಾನ ವ್ಯಕ್ತಪಡಿಸಿ, ಇವರನ್ನು ಬಂಧಿಸಿ ವಿಚಾರಣೆ ನಡೆಸಿ ಎಂದು ಮನವಿ ಮಾಡಿದ್ದರು. ಆದರೆ ಪೊಲೀಸರು ಈ ಬಗ್ಗೆ ಆಸಕ್ತಿ ತೋರಲಿಲ್ಲ, ತನಿಖೆಗೂ ಮುಂದಾಗಲಿಲ್ಲ ಎಂದು ಮೃತನ ಕಡೆಯವರು ಆರೋಪಿಸಿದ್ದಾರೆ.