ಕಾರಿನಲ್ಲೇ ಪ್ರೇಮಿಗಳ ಆತ್ಮಹತ್ಯೆ ಪ್ರಕಣಕ್ಕೆ ಟ್ವಿಸ್ಟ್, ಸಾವಿಗೆ ಕಾರಣ ಬಯಲು

Published : May 22, 2022, 03:03 PM ISTUpdated : May 22, 2022, 05:40 PM IST
ಕಾರಿನಲ್ಲೇ  ಪ್ರೇಮಿಗಳ ಆತ್ಮಹತ್ಯೆ ಪ್ರಕಣಕ್ಕೆ ಟ್ವಿಸ್ಟ್, ಸಾವಿಗೆ ಕಾರಣ  ಬಯಲು

ಸಾರಾಂಶ

* ಕಾರಿನಲ್ಲೇ  ಪ್ರೇಮಿಗಳ ಆತ್ಮಹತ್ಯೆ ಪ್ರಕಣಕ್ಕೆ ಟ್ವಿಸ್ಟ್ * ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರೇಮಿಗಳು * ಮನೆಗೆ ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು 

ಉಡುಪಿ, (ಮೇ.22): ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಂಗಳೂರು ಮೂಲದ ಪ್ರೇಮಿಗಳು ಕಾರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

"

ಬೆಂಗಳೂರಿನ ಹೆಬ್ಬಾಳದ ಯಶವಂತ್ ಯಾದವ್ (23) ಮತ್ತು ಜ್ಯೋತಿ (23) ಆತ್ಮಹತ್ಯೆ ಮಾಡಿಕೊಂಡಿರುವ ಪ್ರೇಮಿಗಳು. ಇವರ ಮದುವೆ ಮನೆಯವರು ವಿರೋಧಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಿನ್ನೆ(ಶನಿವಾರ) ಮದುವೆ ಮಾಡಿಕೊಂಡ ನಂತರ ಮನೆಗೆ ಕರೆ ಮಾಡಿದ್ದಾರೆ. ಆದ್ರೆ, ಮನೆಯವರು ನಿರಾಕರಣೆ ಹಿನ್ನೆಲೆ ಆತಂಕಕ್ಕೊಳಗಾಗಿದ್ದ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಯಶವಂತ್ KA- 04 JX 0263 ನಂಬರಿನ ಬೈಕ್‌ನಲ್ಲಿ ಯುವತಿಯನ್ನು ಬೆಂಗಳೂರಿನಿಂದ ಮಂಗಳೂರಿಗೆ ಕರೆದುಕೊಂಡು ಹೋಗಿದ್ದಾನೆ. ನಂತರ ಮಂಗಳೂರಿನ ದೇವಸ್ಥಾನ ಒಂದರಲ್ಲಿ ಮದುವೆಯಾಗಿದ್ದಾರೆ. ಮದುವೆಯಾಗಿ ಪೋಟೋಗಳನ್ನ ಕುಟುಂಬಸ್ತರಿಗೆ ಕಳುಹಿಸಿದ್ದಾರೆ.  ಇದಕ್ಕೆ ಕುಟುಂಬಸ್ಥರು ನಿರಾಕರಿಸಿದ್ದಾರೆ.  ಈ ಹಿನ್ನೆಲೆ ಸಂಜೆ ವೇಳೆಗೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದ ಯುವ ದಂಪತಿಗಳು, ಸೆಲ್ಪ್ ಡ್ರೈವ್ ನಲ್ಲಿ ಕಾರ್ ರೆಂಟ್ ಗೆ ಪಡೆದಿದ್ದರು. ಹಾಗೇ ಬಾಟೆಲ್ ನಲ್ಲಿ ಪೆಟ್ರೋಲ್ ತೆಗೆದುಕೊಂಡು ಮಧ್ಯ ರಾತ್ರಿವರೆಗೂ ಸುತ್ತಾಡಿ  ಬಳಿಕ ತಡ ರಾತ್ರಿ 2 ಗಂಟೆಗೆ ಕುಟುಂಬಸ್ಥರಿಗೆ ಮೆಸೇಜ್ ಮಾಡಿದ್ದಾರೆ.

"

Udupi: ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಯುವ ಜೋಡಿ ಆತ್ಮಹತ್ಯೆ..?

ನಾವು ಬ್ಯಾಡ್ ಡಿಷಿಷನ್ ತಗೆದುಕೊಂಡಿದ್ದೇವೆ. ನಿನ್ನಮ್ಮನ್ನೂ ಬಿಡಲು ಸಾಧ್ಯವಿಲ್ಲ(ಕುಟುಂಬಸ್ಥರನ್ನ) ಪ್ರೀತಿಸಿದವರನ್ನೂ ಬಿಡಲು ಸಾಧ್ಯವಿಲ್ಲ.. ಹೀಗಾಗಿ ನಾವು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೇವೆ. ನಮ್ಮನ್ನ ಕ್ಷಮಿಸಿಬಿಡಿ ಎಂದು ಮೆಸೇಜ್ ಮಾಡಿದ್ದಾರೆ. 

ಮೆಸೇಜ್‌ ನಂತರ ಕುಟುಂಬಸ್ಥರಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಳದಿಂದ ಲೋಕೇಶನ್ ಕೂಡಾ ಶೇರಿ ಮಾಡಿದ್ದಾರೆ ನಂತರ ಕಾರಿನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆ ಸಂಬಂಧ ಕಾರಿನ ನಂಬರ್ ಪಡೆದು ಪರಿಶೀಲನೆ ನಡೆಸಿದ ಬ್ರಹ್ಮಾವರ ಪೊಲೀಸರು, ಬಾಡಿಗೆ ಪಡೆದಿರುವುದು ಮಾಹಿತಿ ಲಭ್ಯವಾಗಿದೆ. ಬಾಡಿಗೆ ಕಾರು ಪಡೆಯುವಾಗ ಪ್ರೇಮಿಗಳು ನೀಡಿದ್ದ ದಾಖಲೆಗಳ ಆಧಾರದ ಮೇಲೆ ಬ್ರಹ್ಮಾವರ ಪೊಲೀಸರು, ಹೆಬ್ಬಾಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೋಷಕರಿಂದ ನಾಪತ್ತೆ ದೂರು
ಮೇ 18ರಂದು ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಯಶವಂತ್ ಯಾದವ್ ಟ್ಯಾಲಿ ಕ್ಲಾಸ್‍ಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಬೈಕ್ ತೆಗೆದುಕೊಂಡು ಹೊರಬಂದಿದ್ದು, ರಾತ್ರಿಯಾದರೂ ಮನೆಗೆ ಹಿಂದಿರುಗಿಲ್ಲ. ಯಶವಂತ್ ಪೋಷಕರು ಗಾಬರಿಯಾಗಿ ಸ್ನೇಹಿತರನ್ನು ವಿಚಾರಿಸಿದರೂ ಸುಳಿವು ಸಿಕ್ಕಿರಲಿಲ್ಲ. ಹಾಗಾಗಿ ಹೆಬ್ಬಾಳ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದರು.

ಮೇ 19ರಂದು ಜ್ಯೋತಿ ಮನೆ ಬಿಟ್ಟು ಹೋಗಿದ್ದು, ಅಂದು ರಾತ್ರಿಯಾದರೂ ಮನೆಗೆ ಬಾರದಿದ್ದರಿಂದ ಆಕೆಯ ಪೋಷಕರು ಎಲ್ಲ ಕಡೆ ಹುಡುಕಾಡಿ ನಂತರ ಹೆಬ್ಬಾಳ ಪೋಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದರು. ಎರಡೂ ಕುಟುಂಬಸ್ಥರಿಂದ ದೂರು ದಾಖಲಿಸಿಕೊಂಡಿದ್ದ ಪೋಲೀಸರು ಇಬ್ಬರ ಹುಡುಕಾಟದಲ್ಲಿ ತೊಡಗಿದ್ದರು.

ಮನೆಬಿಟ್ಟು ಹೊರಬಂದಿದ್ದ ಇವರಿಬ್ಬರೂ ಮಂಗಳೂರಿಗೆ ಹೋಗಿದ್ದು, ಹಸೇನ್ ಎಂಬುವವರಿಂದ ಸ್ವಿಫ್ಟ್ ಕಾರನ್ನು ಬಾಡಿಗೆಗೆ ಪಡೆದುಕೊಂಡು ಉಡುಪಿಗೆ ಬಂದಿದ್ದಾರೆ. ಇಂದು (ಭಾನುವಾರ) ಮುಂಜಾನೆ ಉಡುಪಿ ಜಿಲ್ಲೆ ಮಂದಾರ್ತಿ ಸಮೀಪದ ಹೆಗ್ಗುಂಜೆ ಬಳಿ ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಜಾನೆ 3 ಗಂಟೆ ಸುಮಾರಿನಲ್ಲಿ ಹೊತ್ತಿ ಉರಿಯುತ್ತಿದ್ದ ಕಾರನ್ನು ಗಮನಿಸಿದ ಸ್ಥಳೀಯರು ತಕ್ಷಣ ನೆರೆಹೊರೆಯವರ ಸಹಾಯದಿಂದ ಬೆಂಕಿ ನಂದಿಸಿದ್ದಾರೆ.

ಕಾರು ಭಾಗಶಃ ಸುಟ್ಟು ಹೋಗಿದೆ. ನಂತರ ಸ್ಥಳೀಯರು ಕಾರಿನೊಳಗೆ ನೋಡಿದಾಗ ಇಬ್ಬರ ಶವಗಳು ಪತ್ತೆಯಾಗಿವೆ. ತಕ್ಷಣ ಪೋಲೀಸರಿಗೆ ವಿಷಯ ತಿಳಿಸಿದ್ದಾರೆ. ಬ್ರಹ್ಮಾವರ ಠಾಣೆ ಪೋಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಮೃತಪಟ್ಟಿರುವುದು ಬೆಂಗಳೂರಿನ ನಿವಾಸಿಗಳು ಎಂಬುದನ್ನು ಪತ್ತೆಹಚ್ಚಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇಶದ ಮೊದಲ ಸರಣಿ ಹಂತಕಿ, ಬೆಂಗಳೂರಿನ ಮಲ್ಲಿಕಾ ಕೊಲೆಗಾತಿಯಾಗಿದ್ದು ಯಾಕೆ? ಅವಳಿಗ್ಯಾಕೆ ಆ ಬಿರುದು?
ಲೈಕ್​ಗೋಸ್ಕರ್ ಒಂದು​ ಜೀವವನ್ನೇ ತೆಗೆದಳಾ ಈ ಮುಸ್ತಫಾ? ದೀಪಕ್​ ಸಾವಿನ ಹಿಂದಿರೋ ರಹಸ್ಯವೇನು? ನಿಜವೇನು?