ಮುಂಬೈನಿಂದ ಬಂದು ಅತ್ತೆಯನ್ನು ಕೊಂದ ಪಾಪಿ ಅಳಿಯ..!

By Suvarna News  |  First Published Jun 4, 2022, 10:04 PM IST

* ಮುಂಬೈನಿಂದ ಬಂದು ಅತ್ತೆಯನ್ನು ಕೊಂದ ಪಾಪಿ ಅಳಿಯ..!
* ಕೊಲೆ ಮಾಡಿ ಮನೆಯ ಹಿಂಬಾಗಿಲಿನಿಂದ ಪರಾರಿ
* ಯಾದಗಿರಿ ನಗರದ ಚಟಾನ್ ಗಲ್ಲಿಲ್ಲಿ ನಡೆದ ಘಟನೆ


ಯಾದಗಿರಿ, (ಜೂನ್.04): ಆ ಅಳಿಯ ದೂರದ ಮಹಾರಾಷ್ಟ್ರದ ಮುಂಬೈನಿಂದ ಅತ್ತೆ ಮನೆಗೆ ಎಂಟ್ರಿಕೊಟ್ಟಿದ್ದ, ಅಳಿಯ ಬಂದಿದ್ದಾನೆಂದು ತಿಳಿದು ಅತ್ತೆ ಹಾಗೂ ಆಕೆಯ ಕುಟುಂಬಸ್ಥರು‌ ಸಂತೋಷವಾಗಿದ್ದರು. ಆದರೆ, ಆ ಕಿರಾತಕ ಅಳಿಯ ಮಾಡಿದ್ದು ಮನೆ ಹಾಳು ಕೆಲಸ. ಅತ್ತೆ ಜೊತೆ ಜಗಳವಾಡಿ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಯಾದಗಿರಿ ನಗರದಲ್ಲಿ ಈ ಘಟನೆ ಜರುಗಿದ್ದು,ಜನ‌ ಬೆಚ್ಚಿಬಿದ್ದಿದ್ದಾರೆ.

ಅಳಿಯ ರಫೀಕ್ ಹತ್ಯೆ ಮಾಡಿದ ಪಾಪಿ ಅಳಿಯ. ಯಾದಗಿರಿ ನಗರದ ಚಟಾನ್ ಗಲ್ಲಿಯ ನಿವಾಸಿ ರಶೀದಾ ಬೇಗಂ ಮೃತಪಟ್ಟ ಅತ್ತೆ. ಬೆಳಿಗ್ಗೆ ಎದ್ದು ಎಂದಿನಂತೆ ರಶೀದಾ ಬೇಗಂ ಬೀಡಿ ಕಟ್ಟುವ ಕಾಯಕದಲ್ಲಿ ತೊಡಗಿದ್ದಳು. ಯಾದಗಿರಿ ನಗರದ ಚಟಾನ್ ಗಲ್ಲಿಯ ನಿವಾಸಿ ರಶೀದಾ ಬೇಗಂ ಬೀಡಿ ಕಟ್ಟುವ ಕೆಲಸ ಮಾಡಿ ಜೀವನ ನಡೆಸುತ್ತಿದ್ದಳು. ರಶೀದಾ ಬೇಗಂ ಎರಡು ಮದುವೆಯಾಗಿದ್ದಳು. ಮೊದಲನೇ ಪತಿ ನಿಶಾರ್ ಅಹ್ಮದ್ ನಿಧನ ಹೊಂದಿದ್ದ, ಬಳಿಕ ಮಗಳು ಸಮ್ರಿನ್ ಗೆ 8 ವರ್ಷದ ಹಿಂದೆ ಮಹಾರಾಷ್ಟ್ರದ ಮುಂಬೈನ ರಫೀಕ್ ಜೊತೆ ವಿವಾಹ ಮಾಡಲಾಗಿತ್ತು.

Tap to resize

Latest Videos

undefined

 ಕಳೆದ 2020 ರಿಂದ ಸಿಮ್ರಾನ್ ಹಾಗೂ ರಫೀಕ್ ನಡುವೆ ಕೌಟುಂಬಿಕ ಕಲಹ ಶುರುವಾಗಿತ್ತು. ಮುಂಬೈನಲ್ಲಿ ಮೊಬೈಲ್ ದುರಸ್ತಿ ಕಾರ್ಯ ಮಾಡುವ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದನು. ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಆದ್ರೆ ಬೆಳಿಗ್ಗೆಯೇ ಮುಂಬೈಯಿಂದ ಯಾದಗಿರಿಗೆ ಬಂದ ಕಿರಾತಕ ಅಳಿಯ ಮಹ್ಮದ್ ರಫೀಕ್ ತಾಯಿಯಂತಿರುವ ಅತ್ತೆಯನ್ನು ಚಾಕುವಿನಿಂದ https://kannada.asianetnews.com/crime/wife-and-her-relatives-attacked-husband-at-chikkodi-in-belagavi-gvd-rcyocv ಕೊಲೆಗೈದಿದ್ದಾನೆ.

ಡಿವೋರ್ಸ್‌ ಕೇಳಿದ್ದಕ್ಕೆ ಗಂಡ, ಅತ್ತೆ ಮೇಲೆ ಹೆಂಡತಿ ಮತ್ತು ಸಂಬಂಧಿಕರಿಂದ ಮಾರಣಾಂತಿಕ ಹಲ್ಲೆ!

ಹೆಂಡತಿ ಸಿಮ್ರಾನ್ ಗೆ ಕಿರುಕುಳ
ರಫೀಕ್ ನಿತ್ಯವೂ ಮದ್ಯ ಸೇವಿಸುವ ಚಟ ಹಾಕಿಕೊಂಡಿದ್ದನು ಕುಡಿತ ಚಟಕ್ಕಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದನು. ಈ ವೇಳೆ ಸಾಲದ ಹಣ ತೀರಿಸಬೇಕು. ಸಾಲಗಾರರು ಕಾಟ ಕೊಡುತ್ತಿದ್ದು ಸಾಲಗಾರರ ಹತ್ತಿರ ಹೋಗಿ ಮಲಗು ಎಂದು ಹೆಂಡತಿಗೆ ಗಂಡ ರಫೀಕ್  ಪೀಡಿಸುತ್ತಿದ್ದನು. ಇದರಿಂದ ಕೋಪಗೊಂಡ ಪತ್ನಿ ಕಳೆದ ಒಂದು ವರ್ಷದ ಹಿಂದೆ ಪತಿಯನ್ನು ಬಿಟ್ಟು ಬಂದಿದ್ದಳು. ಹಿರಿಯರು ನ್ಯಾಯ ಪಂಚಾಯತ್ ಮಾಡಿದ ನಂತರ ವಾಪಸ್ ಗಂಡನ ಹತ್ತಿರ ತೆರಳಿದಳು. ಆದರೆ, ಪತಿರಾಯ ಪತ್ನಿಗೆ ಕಿರುಕುಳ ಕೊಡುವದನ್ನು ಬಿಟ್ಟಿರಲಿಲ್ಲ. 

ಕಳೆದ 20 ದಿನಗಳ ಹಿಂದೆ ದಂಪತಿಗಳ ನಡುವೆ ಜಗಳವಾಗಿದ್ದು, ಸಾಲಗಾರರ ಹತ್ತಿರ ನಾನು ಹೋಗಿ ಯಾಕೆ ಮಲಗಲಿ ಎಂದು ಪತಿ ನಡೆ ವಿರುದ್ಧ ಆಕ್ರೋಶಗೊಂಡು ಜಗಳ ಮಾಡಿಕೊಂಡು 20 ದಿನಗಳ ಹಿಂದೆ ವಾಪಸ್ ತಮ್ಮ ಊರಾದ ಯಾದಗಿರಿಗೆ ಬಂದಿದ್ದಳು. ಸಿಮ್ರಾನ್ ಯಾದಗಿರಿಗೆ ಆಗಮಿಸಿ ತನ್ನ ತಾಯಿ ಮುಂದೆ ನೋವು ತೊಡಿಕೊಳ್ಳುತ್ತಾಳೆ. ಹೆಂಡತಿ ಯಾದಗಿರಿಗೆ ತೆರಳಿದ್ದನ್ನು ಅರಿತ ಗಂಡ ರಫೀಕ್ ಪತ್ನಿ ಜೊತೆ ದೂರವಾಣಿ ಮೂಲಕ ಬೇದರಿಸುತ್ತಾನೆ ಈ ವೇಳೆ ಜೀವ ಬೇದರಿಕೆ ಹಾಕುತ್ತಾನಂತೆ. ಗಂಡ ಬರುವ ಮಾಹಿತಿ ಅರಿತು ಸಿಮ್ರಾನ್ ತಮ್ಮ ಸಂಬಂಧಿಗಳ ಊರಿಗೆ ತೆರಳುತ್ತಾಳೆ. ಮುಂಬೈನಿಂದ ಕೊಲೆ ಮಾಡುವ ಉದ್ದೇಶದಿಂದ ರಫೀಕ್ ಟ್ರೈನ್ ಮೂಲಕ ಆಗಮಿಸಿದನು. ಪತ್ನಿ ಇರುವ ಮಾಹಿತಿ ಅರಿತು ಯಾದಗಿರಿ ನಗರದ ಚಟಾನ್ ಗಲ್ಲಿಯಲ್ಲಿರುವ ಅತ್ತೆ ಮನೆಯಾದ ರಶೀದಾ ಬೇಗಂ ಅವರ ಮನೆಗೆ ಚಾಕು ತೆಗೆದುಕೊಂಡು ಹೋಗುತ್ತಾನೆ. ಈ ವೇಳೆ ಹೆಂಡತಿಗೆ ನನ್ನ ಹತ್ತಿರ  ಯಾಕೆ ಕಳುಹಿಸಿಲ್ಲ‌ ಸಾಲ ಕಟ್ಟಲು ಹಣ ಯಾಕೆ ನೀಡಿಲ್ಲವೆಂದು ಅತ್ತೆ ಜೊತೆ ಜಗಳ ಮಾಡಿದ್ದಾನೆ.

ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ಅತ್ತೆಯ ಹೊಟ್ಟೆಗೆ ನಾಲ್ಕು ಬಾರಿ ಚಾಕು ಚುಚ್ಚಿ ಹಿಂಬಾಗಿಲಿನ ಮೂಲಕ ಎಸ್ಕೇಪ್ ಆಗಿದ್ದಾನೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಹಾಗೂ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

click me!