ಆತ ಕಳೆದ 10 ವರ್ಷದ ಹಿಂದೆ ಮದುವೆಯಾಗಿತ್ತು. ಅವರಿಬ್ಬರ ಸಂಸಾರಕ್ಕೆ ಸಾಕ್ಷಿಯಾಗಿ ಇಬ್ಬರೂ ಮಕ್ಕಳು ಇದ್ದಾರೆ. ಆದರೆ 5 ವರ್ಷದ ಹಿಂದೆ ಅವರಿಬ್ಬರ ಸಂಸಾರದಲ್ಲಿ ಬಿರುಕು ಉಂಟಾಗಿ ಅವನ ಹೆಂಡತಿ ಮನೆ ಬಿಟ್ಟು ಹೋಗಿದ್ದಳು.
ವರದಿ: ಮುಷ್ತಾಕ್ ಪೀರಜಾದೇ, ಏಷ್ಯಾನೆಟ್ ಸುವರ್ಣನ್ಯೂಸ್
ಚಿಕ್ಕೋಡಿ (ಜೂ.04): ಆತ ಕಳೆದ 10 ವರ್ಷದ ಹಿಂದೆ ಮದುವೆಯಾಗಿತ್ತು. ಅವರಿಬ್ಬರ ಸಂಸಾರಕ್ಕೆ ಸಾಕ್ಷಿಯಾಗಿ ಇಬ್ಬರೂ ಮಕ್ಕಳು ಇದ್ದಾರೆ. ಆದರೆ 5 ವರ್ಷದ ಹಿಂದೆ ಅವರಿಬ್ಬರ ಸಂಸಾರದಲ್ಲಿ ಬಿರುಕು ಉಂಟಾಗಿ ಅವನ ಹೆಂಡತಿ ಮನೆ ಬಿಟ್ಟು ಹೋಗಿದ್ದಳು. ಗಲಾಟೆಯಾಗಿ ತವರು ಮನೆಯವರು ಹಲ್ಲೆ ಮಾಡಿದ್ದರು. ಹೀಗಾಗಿ ಹೆಂಡತಿ ಬೇಡವೇಂದು ಗಂಡ ಕೋರ್ಟ್ ಮೆಟ್ಟಿಲು ಹತ್ತಿದ್ದ. ಎರಡು ಬಾರಿ ಕೋರ್ಟ್‌ನಲ್ಲಿ ಆತನ ಪರ ಸಾಕ್ಷಿಯಾಗಿತ್ತು. ಈಗ ಮತ್ತೆ ಕೋರ್ಟ್‌ಗೆ ಹಾಜರಾಗಬೇಕಿತ್ತು. ಹಾಗಾಗಿ ಸಾಕ್ಷಿ ಆತನ ಪರವಾಗಿ ಕೇಸ್ ಗೆಲ್ಲುತ್ತಾನೆ ಅಂತ ಹೆಂಡತಿ ಏನು ಮಾಡಿದ್ದಾಳೆ ಗೊತ್ತಾ. ಆ ಕುರಿತ ಒಂದು ವರದಿ ಇಲ್ಲಿದೆ ನೋಡಿ.
ಹೀಗೆ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿರುವ ಈತನ ಹೆಸರು ಗಜಾನನ ಶಿರಗಣ್ಣವರ್ ಅಂತ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ವಡ್ರಾಳ ಗ್ರಾಮದ ನಿವಾಸಿ ಕಳೆದ 10 ವರ್ಷದ ಹಿಂದೆ ಅದೇ ಗ್ರಾಮದ ಗ್ರಾಮದ ರುಕ್ಮಿಣಿ ಎನ್ನುವವಳ ಜೊತೆ ಮದುವೆಯಾಗಿದ್ದ ಗಜಾನನ. ಇವರಿಬ್ಬರ ಸಂಸಾರಕ್ಕೆ ಸಾಕ್ಷಿಯಾಗಿ ಇಬ್ಬರು ಮಕ್ಕಳು ಕೂಡ ಇದ್ದಾರೆ. ಕಳೆದ ಐದು ವರ್ಷದ ಹಿಂದೆ ಈತನ ಸಂಸಾರದಲ್ಲಿ ಕಲಹ ಉಂಟಾಗಿ ಗಂಡ ಬೇಡವೆಂದು ಈತನ ಹೆಂಡತಿ ರುಕ್ಮಿಣಿ ದೂರವಾಗಿದ್ದಳು. ಇಂದು ಅದೇ ಹೆಂಡತಿ ತನ್ನ ಸಂಬಂಧಿಕರೊಂದಿಗೆ ಬಂದು ಗಂಡ ಹಾಗೂ ಅತ್ತೆಯ ಮೇಲೆ ಕುಡಗೋಲಿನಿಂದ ಆತನ ಕಾಲು ತಲೆ ಸೇರಿದಂತೆ ಎದೆಯ ಮೇಲೆ ಕಲ್ಲು ಎತ್ತಿಹಾಕಿ ಮರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
Belagavi; ಪತ್ನಿ ಸೀಮಂತಕ್ಕೆ ಬಂದಿದ್ದ ಯೋಧ ಅಪಘಾತದಲ್ಲಿ ದುರ್ಮರಣ!
ಅಲ್ಲದೇ ವಯಸ್ಸಾದ ಆತನ ತಾಯಿ ಬಸವ್ವನ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಇನ್ನೂ ಐದು ವರ್ಷದ ಹಿಂದೆ ಗಂಡನಿಂದ ದೂರವಾದ ಸಂದರ್ಭದಲ್ಲೂ ಜಗಳವಾಗಿ ಗಜಾನಂದ ಪತ್ನಿ ರುಕ್ಮಿಣಿ ಹಾಗೇ ಹೋಗಿರಲಿಲ್ಲ ಆ ವೇಳೆ ತನ್ನ ತವರು ಮನೆಯವರನ್ನ ಕರೆದುಕೊಂಡು ಬಂದು ಮಾರಣಾಂತಿಕ ಹಲ್ಲೆ ನಡೆಸಿ ಗಜಾನಂದ ಕೈ ಕಾಲು ಮುರಿದಿದ್ದರು. ಅಲ್ಲದೇ ಆತನ ಕಾಲಿನಲ್ಲಿ ಈಗಾಗಲೇ ರಾಡ್ ಕೂಡ ಇದೆ. ಹೀಗಾಗಿ ಹೆಂಡತಿ ಬೇಡವೆಂದು ಗಜಾನಂದ ಡಿವೋರ್ಸ್‌ಗಾಗಿ ಚಿಕ್ಕೋಡಿ ಕೋರ್ಟ್‌ನಲ್ಲಿ ಕೇಸ್ ವಿಚಾರಣೆ ಕೂಡ ನಡೆಯುತ್ತಿತ್ತು. ಕೋರ್ಟ್‌ನ ವಿಚಾರಣೆಯಲ್ಲಿ ಎರಡು ಬಾರಿ ಸಾಕ್ಷಿ ಕೂಡ ಈತನ ಪರವಾಗಿಯಾಗಿತ್ತು.
ಇನ್ನೂ ಮೂರನೇ ಬಾರಿಗೆ ಮತ್ತೆ ಬರೋ ಬುಧವಾರ ನ್ಯಾಯಾಲಕ್ಕೆ ಹಾಜರಾದರೆ ಅವನ ಪರವಾಗಿ ಸಾಕ್ಷಿಯಾಗಿ ಡಿವೊರ್ಸ್ ಸಿಗುತ್ತೆ ಇದರಿಂದ ನನಗೆ ನನ್ನ ಗಂಡನ ಮನೆ ಕಡೆಯಿಂದ ಎನು ಸಿಗೋದಿಲ್ಲ, ಆತ ಬರೋ ಬುಧವಾರ ಕೋರ್ಟ್‌ಗೆ ಹಾಜರಾಗಬಾರದು ಅನ್ನೋ ಕಾರಣಕ್ಕೆ ಗಜಾನನ ಹೆಂಡತಿ ರುಕ್ಮಿಣಿ ಸೇರಿ ಸಂಬಂಧಿಕರಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಇನ್ನೂ ಹಲ್ಲೆಯಿಂದ ತೀವ್ರ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಗಜಾನನ ಹಾಗೂ ಆತನ ತಾಯಿ ಬಸವ್ವಗೆ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಹಂತದ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
Belagavi; RCF ಕಂಪನಿಯ 900 ಚೀಲ ರಸಗೊಬ್ಬರ ಕದ್ದಿದ್ದವರು ಅರೆಸ್ಟ್
ಒಟ್ಟಿನಲ್ಲಿ ಗಂಡ ಕೋರ್ಟ್‌ಗೆ ಹಾಜರಾದರೆ ಸಾಕ್ಷಿ ಅವನ ಪರವಾಗಿ ಆಗಿ ಡಿವೋರ್ಸ್ ಸಿಗುತ್ತೆ ಇದರಿಂದ ತನಗೆ ಆತನ ಆಸ್ತಿಯಲ್ಲಿ ಏನು ಪಾಲು ಸಿಗುವುದಿಲ್ಲ ಅನ್ನೋ ಕಾರಣಕ್ಕೆ ತನ್ನ ಸಂಬಂಧಿಕರೊಂದಿಗೆ ಬಂದು ಗಂಡ ಮತ್ತು ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ. ಇನ್ನೂ ಘಟನೆ ಕುರಿತಂತೆ ಗಜಾನನ ಹೆಂಡತಿ ರುಕ್ಮೀಣಿ ಸೇರಿ ಮೂವರ ಮೇಲೆ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಹಲ್ಲೆ ಮಾಡಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.