ಬಸ್ ಹತ್ತುವಾಗ ಕಾಲು ಜಾರಿ ಬಿದ್ದು ಚಕ್ರಕ್ಕೆ ಸಿಲುಕಿ ಸಾರಿಗೆ ಸಿಬ್ಬಂದಿ ದುರ್ಮರಣ!

By Ravi Janekal  |  First Published Jan 18, 2024, 10:36 PM IST

ಬಸ್ ಹತ್ತುವ ವೇಳೆ ಆಯಾತಪ್ಪಿ ಚಕ್ರಕ್ಕೆ ಸಿಲುಕಿ ಸಾರಿಗೆ ಇಲಾಖೆ ಸಿಬ್ಬಂದಿಯೋರ್ವ ದುರ್ಮರಣಕ್ಕೀಡಾದ ಘಟನೆ ಬಾಗಲಕೋಟೆ ಜಿಲ್ಲೆಯ ನವನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ. ಗದ್ದೆಪ್ಪ (50) ಮೃತ ದುರ್ದೈವಿ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೌಜಗನೂರು ಗ್ರಾಮದವರಾದ ಗದ್ದೆಪ್ಪ ಸಾರಿಗೆ ಇಲಾಖೆಯ ಕಡೂರ ಡಿಪೋದಲ್ಲಿ ಕೆಲಸ ಮಾಡುತ್ತಿದ್ದರು.


ಬಾಗಲಕೋಟೆ (ಜ.18): ಬಸ್ ಹತ್ತುವ ವೇಳೆ ಆಯಾತಪ್ಪಿ ಚಕ್ರಕ್ಕೆ ಸಿಲುಕಿ ಸಾರಿಗೆ ಇಲಾಖೆ ಸಿಬ್ಬಂದಿಯೋರ್ವ ದುರ್ಮರಣಕ್ಕೀಡಾದ ಘಟನೆ ಬಾಗಲಕೋಟೆ ಜಿಲ್ಲೆಯ ನವನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ.

ಗದ್ದೆಪ್ಪ (50) ಮೃತ ದುರ್ದೈವಿ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೌಜಗನೂರು ಗ್ರಾಮದವರಾದ ಗದ್ದೆಪ್ಪ ಸಾರಿಗೆ ಇಲಾಖೆಯ ಕಡೂರ ಡಿಪೋದಲ್ಲಿ ಕೆಲಸ ಮಾಡುತ್ತಿದ್ದರು. ಇಳಕಲ್ ಕಡೆಗೆ ತೆರಳುತ್ತಿದ್ದ ಬಸ್ ಹತ್ತುವ ವೇಳೆ ನಡೆದ ದುರ್ಘಟನೆ. ಚಲಿಸುತ್ತಿದ್ದ ಬಸ್ ಹತ್ತಿದ್ದರಿಂದ ಆಯಾತಪ್ಪಿ ಕೆಳಗೆ ಬಿದ್ದಿರುವ ಗದ್ದೆಪ್ಪ. ದೇಹದ ಮೇಲೆ ಬಸ್ಸಿನ ಚಕ್ರ ಹರಿದು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. 

Latest Videos

undefined

ಸ್ಥಳಕ್ಕೆ ನವನಗರ ಟ್ರಾಫಿಕ್ ಪೋಲಿಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು ಬಳಿಕ ಅಪಘಾತ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು.

ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಅಮಾನವೀಯ ಘಟನೆ: ಶವದ ಮೇಲೆ ಚಲಿಸಿದ ಸರಣಿ ವಾಹನಗಳು: ರಸ್ತೆಗಂಟಿದ ಮೃತದೇಹ 

ಎರಡು ವಾಹನಗಳು ಮುಖಾಮುಖಿ ಡಿಕ್ಕಿ ಇಬ್ಬರ ಸಾವು

ಕುಶಾಲನಗರ: ಎರಡು ವಾಹನಗಳು ಮುಖಮುಖಿ ಡಿಕ್ಕಿಯಾಗಿದ್ದು ಇಬ್ಬರು ಮೃತಪಟ್ಟು ಮೂರು ಮಂದಿ ಗಾಯಗೊಂಡ ಘಟನೆ ಮಂಗಳವಾರ ಸಂಜೆ ಕುಶಾಲನಗರ ಮಡಿಕೇರಿ ಹೆದ್ದಾರಿ ಆನೆಕಾಡು ಬಳಿ ನಡೆದಿದೆ. ಮಾರುತಿ ಓಮ್ನಿ ಕಾರು ಮತ್ತು ಬೊಲೆರೋ ಜೀಪ್ ನಡುವೆ ಮುಖಾಮುಖಿ ಡಿಕ್ಕಿ ಆದ ಹಿನ್ನೆಲೆಯಲ್ಲಿ ಮಾರುತಿ ವಾಹನದಲ್ಲಿದ್ದ ಬಸವನಹಳ್ಳಿ ಸಮೀಪ ಹೇರೂರು ರಸ್ತೆಯ ನಿವಾಸಿ ನಿವೃತ್ತ ಸೈನಿಕ ಅಪ್ಪಂಡೇರಂಡ ದೇವಯ್ಯ (48) ಮತ್ತು ಪುತ್ರಿ ನ್ಯಾನ್ಸಿ ದೇವಯ್ಯ (3) ಮೃತರು.

ಕಾಲೇಜಿಗೆ ಹೋಗುತ್ತಿದ್ದ ಯುವತಿ ಮೇಲೆ ಹರಿದ ಲಾರಿ, ಪಿಯು ವಿದ್ಯಾರ್ಥಿನಿ ಸಾವು!

ಮಡಿಕೇರಿ ಕಡೆಗೆ ತೆರಳುತ್ತಿದ್ದ ಬೊಲೆರೋ ಜೀಪ್‌ನ ಚಾಲಕ ಸಮೀಪದ ಚೆಣಕಲ್ ಕಾವಲ್ ನಿವಾಸಿ ಅರುಣ, ಮತ್ತು ಮಹಿಳೆಯರಾದ ನೀಲಮ್ಮ ಜಯಲಕ್ಷ್ಮಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಗಾಯಾಳುಗಳನ್ನು ಕುಶಾಲನಗರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮೈಸೂರಿಗೆ ಸಾಗಿಸಲಾಗಿದೆ.

ಸ್ಥಳಕ್ಕೆ ಕುಶಾಲನಗರ ಸಂಚಾರಿ ಠಾಣೆಯ ಅಧಿಕಾರಿ ಚಂದ್ರಪ್ಪ ಮತ್ತು ಸಿಬ್ಬಂದಿ ಭೇಟಿ ನೀಡಿದ್ದು ಕುಶಾಲನಗರ ಸಂಚಾರಿ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

click me!