ದುಬೈನಲ್ಲಿ ತಮ್ಮ ಹೆಚ್ಚಿನ ಸಂಬಳದ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಕೆಲಸ ತೊರೆದು ಬಿಹಾರದ ಮುಜಾಫರ್‌ಪುರಕ್ಕೆ ಬಂದಿದ್ದಾನೆ. ಯಾಕೆಂದರೆ ಆತನ ಗರ್ಲ್‌ಫ್ರೆಂಡ್ ಅಲ್ಲಿದ್ದಾಳೆ. ಆಕೆ ನೈಟ್‌ಕ್ಲಬ್‌ನಲ್ಲಿ ಡ್ಯಾನ್ಸರ್ ಆಗಿದ್ದು, ಅವಳನ್ನು ಮೆಚ್ಚಿಸಲು ಅಲ್ಲಿ ವಾಸ ಮಾಡುತ್ತಿದ್ದ. ಆದರೀಗ ಜೈಲುಪಾಲಾಗಿದ್ದಾನೆ. ಕೆಲಸವಿಲ್ಲದ ಕಾರಣ ಕಳ್ಳತನದ ಹಾದಿ ಹಿಡಿದಿದ್ದು, ಸಿಕ್ಕಿಬಿದ್ದು ಜೈಲು ಪಾಲಾಗಿದ್ದಾನೆ.
ಪಾಟ್ನಾ (ಏಪ್ರಿಲ್ 20, 2023): ದುನಿಯಾ ಚಿತ್ರದ ಪ್ರೀತಿ ಮಾಯೆ ಹುಷಾರು, ಕಣ್ಣೀರು ಮಾರೋ ಬಜಾರ್ ಅಅನ್ನೋ ಹಾಡನ್ನು ಕೇಳಿರ್ತೀರಾ ಅಲ್ವ. ಹೀಗೆ, ಈ ಪ್ರೀತಿಗೆ ಯಾರ್ಯಾರನ್ನೋ ಹೇಗೇಗೋ ಬದಲಾಯಿಸೋ ಶಕ್ತಿ ಇದೆ ನೋಡಿ. ಇದ್ಯಾಕಪ್ಪಾ ಪ್ರೀತಿ ವಿಚಾರ ಅಂತೀರಾ.. ಇಲ್ಲೊಬ್ಬ ಭಾರತೀಯ ಮೂಲದ ಐಐಟಿ-ಮದ್ರಾಸ್ ಕೆಮಿಕಲ್ ಎಂಜಿನಿಯರಿಂಗ್ ಪದವೀಧರ ದುಬೈನಲ್ಲಿ ಹೆಚ್ಚಿನ ಸಂಬಳದ ಎಂಎನ್‌ಸಿ ಕೆಲಸ ಬಿಟ್ಟು ತವರು ದೇಶಕ್ಕೆ ಬಂದಿದ್ದಾನೆ. ಭಾರತಕ್ಕೆ ಬಂದಿರೋದೇನೋ ಸರಿ. ಆದರೀಗ ಜೈಲು ಪಾಲಾಗಿದ್ದಾನೆ ನೊಡಿ. ಇದೂ ಕೂಡ ಪ್ರೀತಿಗಾಗಿಯೇ.
ಹೌದು, ದುಬೈನಲ್ಲಿ ತಮ್ಮ ಹೆಚ್ಚಿನ ಸಂಬಳದ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಕೆಲಸ ತೊರೆದು ಬಿಹಾರದ ಮುಜಾಫರ್‌ಪುರಕ್ಕೆ ಬಂದಿದ್ದಾನೆ. ಯಾಕೆಂದರೆ ಆತನ ಗರ್ಲ್‌ಫ್ರೆಂಡ್ ಅಲ್ಲಿದ್ದಾಳೆ. ಆಕೆ ನೈಟ್‌ಕ್ಲಬ್‌ನಲ್ಲಿ ಡ್ಯಾನ್ಸರ್ ಆಗಿದ್ದು, ಅವಳನ್ನು ಮೆಚ್ಚಿಸಲು ಅಲ್ಲಿ ವಾಸ ಮಾಡುತ್ತಿದ್ದ. ಆದರೀಗ ಜೈಲುಪಾಲಾಗಿದ್ದಾನೆ. ಕೆಲಸವಿಲ್ಲದ ಕಾರಣ ಕಳ್ಳತನದ ಹಾದಿ ಹಿಡಿದಿದ್ದು, ಸಿಕ್ಕಿಬಿದ್ದು ಜೈಲು ಪಾಲಾಗಿದ್ದಾನೆ.
ಇದನ್ನು ಓದಿ: ಉನ್ನಾವೋ ಗ್ಯಾಂಗ್‌ರೇಪ್ ಕೇಸ್ ಆರೋಪಿಗಳಿಗೆ ಜಾಮೀನು: ಸಂತ್ರಸ್ತೆ ಮನೆಗೆ ಬೆಂಕಿ ಹಚ್ಚಿ ಆಕ್ರೋಶ
ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಮೂಲದ ಹೇಮಂತ್ ಕುಮಾರ್ ರಘು ಎಂಬಾತನನ್ನು ಈ ವಾರ ಮೂವರು ಸಹಚರರೊಂದಿಗೆ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯೊಬ್ಬರಿಂದ 2.2 ಲಕ್ಷ ರೂ. ಕಳ್ಳತನ ಮಾಡಿದ ಆರೋಪದ ಮೇಲೆ ಜೈಲು ಶಿಕ್ಷೆಯಾಗಿದೆ. ಆರೋಪಿಗಳಿಂದ ಸ್ವಲ್ಪ ಪ್ರಮಾಣದ ನಗದು, ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಎರಡು ಕದ್ದ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೇಮಂತ್ ಕುಮಾರ್ ರಘು ವಿಚಾರಣೆ ವೇಳೆ ಆತನ ಈ ಹಿಂದಿನ ಜೀವನದ ಸತ್ಯ ಬಯಲಾಗಿದೆ. ಎಂಎನ್‌ಸಿ ಎಂಜಿನಿಯರ್ ಆಗಿದ್ದ ಈತ, ದುಬೈನಲ್ಲಿ ಹೈಫೈ ಲೈಫ್ ನಡೆಸುತ್ತಿದ್ದ. ಅಲ್ಲಿಂದ ಬಿಹಾರಕ್ಕೆ ಬಂದು ಕಳ್ಳತನದ ಹಾದಿ ಹಿಡಿದಿದ್ದು ಹೇಗೆ ಎಂಬುದು ಬಹಿರಂಗವಾಗಿದೆ. ಡ್ಯಾನ್ಸರ್ ಭೇಟಿಯಾದ ಬಳಿಕ ಆಕೆಯ ಬಲೆಗೆ ಬಿದ್ದು ಈ ರೀತಿ ಬದಲಾಗಿದ್ದಾನೆ.
ಇದನ್ನೂ ಓದಿ: Crime: ಮೃಗದಂತೆ ಹೆತ್ತ ತಾಯಿ ಮೇಲೆ ಅತ್ಯಾಚಾರ ಮಾಡಿದ ಪಾಪಿ: ಆತ್ಮಹತ್ಯೆ ಮಾಡಿಕೊಂಡ ಸಂತ್ರಸ್ತೆ
40 ವರ್ಷದ ವ್ಯಕ್ತಿ ತನ್ನ ಗೆಳತಿಗೆ ನೈಟ್‌ಕ್ಲಬ್ ಕೆಲಸವನ್ನು ತೊರೆಯುವಂತೆ ಹೇಳಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಅದಕ್ಕೆ ಪ್ರತಿಯಾಗಿ ಆತ ಬಿಹಾರ ಗರ್ಲ್‌ಫ್ರೆಂಡ್‌ನಲ್ಲಿರೋ ತವರು ಮನೆಗೆ ಹೋಗಲು ಒಪ್ಪಿಕೊಂಡರು. ಅಲ್ಲದೆ, 15 ವರ್ಷಗಳ ವೃತ್ತಿಜೀವನದಲ್ಲಿ ತಾನು ಉಳಿಸಿದ ಎಲ್ಲಾ ಹಣವನ್ನು ಖರ್ಚು ಮಾಡಿದ ನಂತರ, ರಘು ತನ್ನ ಗೆಳತಿಯನ್ನು ಸಂತೋಷವಾಗಿರಿಸಲು ಅಪರಾಧವನ್ನು ತನ್ನ ಹೊಸ ವೃತ್ತಿಯನ್ನಾಗಿ ಆರಿಸಿಕೊಂಡನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಿಹಾರದ ಮುಜಾಫರ್‌ಪುರ (ಪೂರ್ವ) ಡಿಎಸ್‌ಪಿ ಮನೋಜ್ ಪಾಂಡೆ ಅವರು ಜಿಲ್ಲೆಯಲ್ಲಿ ಕ್ರಿಮಿನಲ್‌ಗಳೊಂದಿಗೆ ಜಾಲವನ್ನು ನಿರ್ಮಿಸಿದ್ದಾರೆ ಮತ್ತು ನಿಖರವಾದ ಯೋಜನೆಯೊಂದಿಗೆ ಅವರ ಗುರಿಗಳನ್ನು ಆರಿಸಿಕೊಳ್ಳುತ್ತಾರೆ ಎಂದು ಬುಧವಾರ ಪೊಲೀಸರು ಹೇಳಿದ್ದಾರೆ. "ಅವನು ಸ್ಪಷ್ಟವಾಗಿ ವೃತ್ತಿಪರ ಕ್ರಿಮಿನಲ್ ಆಗಿ ಬದಲಾಗಿದ್ದಾನೆ ಮತ್ತು ಜಿಲ್ಲೆಯಾದ್ಯಂತ ಹಲವಾರು ಅಪರಾಧಗಳಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ’’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Crime: ರೇಪ್ ಮಾಡಿ ಮಹಿಳೆಗೆ ಬೆಂಕಿ ಹಚ್ಚಿದ ರಾಕ್ಷಸ: ಆಸ್ಪತ್ರೆಯಲ್ಲಿ ಬಲಿಯಾದ ಸಂತ್ರಸ್ತೆ
ಏಪ್ರಿಲ್ 11 ರಂದು ದಾಖಲಾದ ಲೂಟಿ ಪ್ರಕರಣವನ್ನು ಭೇದಿಸಲು ಕಣ್ಗಾವಲು ಮಾಡುವಾಗ ರಘು ಪೊಲೀಸರ ಬಲೆಗೆ ಬಿದ್ದಿದ್ದಾನೆ ಎಂದು ಬಿಹಾರದ ಮುಜಾಫರ್‌ಪುರ (ಪೂರ್ವ) ಡಿಎಸ್‌ಪಿ ಮನೋಜ್ ಪಾಂಡೆ ಹೇಳಿದರು. ತನಿಖಾ ತಂಡವು ಮಾಧೋಪುರದ ಇಟ್ಟಿಗೆ ಗೂಡುಗಳಲ್ಲಿ ಗ್ಯಾಂಗ್ ಅನ್ನು ಪತ್ತೆಹಚ್ಚಿದೆ. ಆ ಊರಿನ ಮಿಥನಪುರದಲ್ಲಿ ರಘು ಬಾಡಿಗೆದಾರನಾಗಿ ವಾಸವಾಗಿದ್ದ ಎಂದೂ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಹತ್ರಾಸ್ ಗ್ಯಾಂಗ್‌ರೇಪ್, ಕೊಲೆ ಕೇಸ್: ಮೂವರನ್ನು ಖುಲಾಸೆಗೊಳಿಸಿದ ಕೋರ್ಟ್; ಒಬ್ಬರು ಮಾತ್ರ ದೋಷಿ