
ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ. ಇದೇ ಕಾರಣಕ್ಕೆ ಇಂದು ಸೈಬರ್ ಕ್ರೈಂ ಹೆಚ್ಚಾಗುತ್ತಿದೆ. ಸೈಬರ್ ಕ್ರೈಂ ಬಗ್ಗೆ ಜನರಿಗೆ ಜಾಗೃತಿ ಉಂಟಾಗುತ್ತಿದ್ದಂತೆಯೇ, ಹೊಸ ಹೊಸ ಅಪರಾಧಗಳನ್ನು ಹುಡುಕುತ್ತಲೇ ಇರುತ್ತಾರೆ ಕ್ರಿಮಿನಲ್ಸ್. ಎಸ್ಎಂಎಸ್ ಮೂಲಕ ಇಲ್ಲವೇ ವಾಟ್ಸ್ಆ್ಯಪ್ ಮೂಲಕ ಲಿಂಕ್ ಕಳಿಸಿ, ಅದನ್ನು ಒತ್ತುವಂತೆ ಪ್ರೇರೇಪಿಸುವುದು, ನಿಮ್ಮ ಹಣ ಡಬಲ್ ಆಗತ್ತೆ ಎಂದು ಆಮಿಷ ಒಡ್ಡುವುದು, ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿದೆ- ಈ ಲಿಂಕ್ ಓಪನ್ ಮಾಡಿ ಅನ್ನೋದು ಸೇರಿದಂತೆ ಹಲವು ವಿಧದ ಸೈಬರ್ ಕ್ರೈಂಗಳು ದಿನನಿತ್ಯ ವರದಿಯಾಗುತ್ತಲೇ ಇರುತ್ತವೆ. ಇದಕ್ಕೆ ವೆಲ್ ಎಜುಕೇಟೆಡ್ ಎಂದು ಎನ್ನಿಸಿಕೊಂಡಿರುವ ವರ್ಗವೇ ಲಕ್ಷ ಲಕ್ಷ ರೂಪಾಯಿ ಕಳೆದುಕೊಳ್ಳುತ್ತಿರುವುದು ವಿಚಿತ್ರವಾದರೂ ಸತ್ಯ.
ಆದರೆ, ಈಗ ಅವೆಲ್ಲಕ್ಕಿಂತ ಭಿನ್ನವಾಗಿ ಇನ್ನೊಂದು ಸೈಬರ್ ಕ್ರೈಂ ಶುರುವಾಗಿದೆ. ಇದರಲ್ಲಿ ನಿಮಗೆ ಒಂದು ಫೋನ್ ಬರುತ್ತದೆ. ಮೇಡಂ/ಸರ್ ನಾನು ಮೆಡಿಕಲ್ ಷಾಪ್ಗೋ, ಅಂಗಡಿಗೋ ಅಥವಾ ಇನ್ನೆಲ್ಲೋ ಒಂದು ಜಾಗ ಹೇಳಿ, ಅವರ ಮೊಬೈಲ್ ನಂಬರ್ಗೆ ಕಳುಹಿಸುವ ದುಡ್ಡನ್ನು ಮಿಸ್ಟೆಕ್ ಆಗಿ ನಿಮಗೆ ಕಳುಹಿಸಿಬಿಟ್ಟಿದ್ದೇನೆ. ಬೇಕಿದ್ದರೆ ನಿಮಗೆ ಮೆಸೇಜ್ ಬಂದಿರತ್ತೆ ನೋಡಿ, ದಯವಿಟ್ಟು ನನ್ನ ಈ ನಂಬರ್ಗೆ ವಾಪಸ್ ಅಮೌಂಟ್ ಹಾಕುತ್ತೀರಾ ಎಂದುಪ್ರಶ್ನಿಸುತ್ತಾರೆ.
ಆಗ ನೀವು ಬುದ್ಧಿವಂತರಾಗಿದ್ದರೆ, ಇದು ಫೇಕ್ ಕಾಲ್ ಎನ್ನಿಸುತ್ತದೆ. ಆದರೆ ಅಕೌಂಟ್ಗೆ ದುಡ್ಡು ಬಂದಿರುವ SMS ನೋಡಿದ್ರೆ ಅಲ್ಲಿ ಇರುವವರ ನಿಜ ಹೇಳ್ತಾ ಇದ್ದಾನೋ, ಇಲ್ಲವೋ ಎನ್ನೋದು ತಿಳಿಯತ್ತಲ್ಲ ಎಂದು ನಾನು ಅತಿ ಬುದ್ಧಿವಂತೆ ಎಂದುಕೊಂಡು ನೀವು SMS ನೋಡಿದ್ರೆ ನಿಜವಾಗಿಯೂ ನಿಮ್ಮ ಅಕೌಂಟ್ಗೆ ಅಷ್ಟು ಹಣ ಕ್ರೆಡಿಟ್ ಆಗಿರೋ ಎಸ್ಎಂಎಸ್ ಬಂದಿರುತ್ತದೆ. ಒಂದು ವೇಳೆ ನೀವು ಅಯ್ಯೋ ಪಾಪ, ಅವನು ಹೇಳ್ತಿರೋದು ನಿಜ ಎಂದುಕೊಂಡು ದುಡ್ಡು ಹಾಕಲು ಹೋದ್ರೆ ನಿಮ್ಮಷ್ಟು ಮೂರ್ಖರು ಮತ್ತೊಬ್ಬರಿಲ್ಲ.
ಯಾಕೆ ಅಂತಿರಾ? ಎಸ್ಎಂಎಸ್ ಬಂದಿರುವ ನಂಬರ್ ಒಮ್ಮೆ ಚೆಕ್ ಮಾಡಿಕೊಳ್ಳಿ. ಬ್ಯಾಂಕ್ನಿಂದ ಅಥವಾ ಯಾವುದೇ ಸರ್ಕಾರಿ ಸಂಸ್ಥೆಗಳಿಂದ ಎಸ್ಎಂಎಸ್ ಬಂದರೆ ಅಲ್ಲಿ ಮೊಬೈಲ್ ನಂಬರ್ ಇರುವುದಿಲ್ಲ. ಬದಲಿಗೆ ಅದರದ್ದೇ ಆದ ಕೋಡ್ ಇರುತ್ತದೆ. ಉದಾಹರಣೆಗೆ ಎಸ್ಬಿಐ ನಿಂದ ಬಂದಿದ್ದರೆ, AX-SBYONO ಎಂದೋ ಕೆನರಾ ಬ್ಯಾಂಕ್ನಿಂದ ಬಂದಿದ್ದರೆ CB-CANBNK, AX-CANBNK .. ಹೀಗೆ ಒಂದೊಂದು ರೀತಿ ಇರುತ್ತದೆ. ಆದರೆ ಯಾವುದೇ ಕಾರಣಕ್ಕೂ ಮೊಬೈಲ್ ನಂಬರ್ ಅಲ್ಲಿ ಬಂದಿದೆ ಎಂದರೆ ಅದು ಫ್ರಾಡ್ ಎಂದೇ ಅರ್ಥ. ಅವರು ಕಳುಹಿಸುವ ಎಸ್ಎಂಎಸ್, ಥೇಟ್ ಬ್ಯಾಂಕ್ನಿಂದ ಕಳುಹಿಸುವ ಎಸ್ಎಂಎಸ್ ರೀತಿಯೇ ಇದ್ದರೂ, ಬಂದ ನಂಬರ್ ಮೊಬೈಲ್ ನಂಬರ್ ಆಗಿದ್ದರೆ ಅದು ಮೋಸ ಎಂದೇ ಅರ್ಥ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ